ಅಸ್ಸಾಂನಲ್ಲಿ ಮುಸ್ಲಿಂ ಕುಟುಂಬಗಳ ಒಕ್ಕಲೆಬ್ಬಿಸುವಿಕೆ: ರಾಷ್ಟ್ರೀಯ ನಾಯಕರ ಮೌನ ಪ್ರಶ್ನಿಸಿದ ರೋಷನ್ ಬೇಗ್

Date:

ಅಸ್ಸಾಂನಲ್ಲಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿ, ಅವರನ್ನು ವಾಸಸ್ಥಳಗಳಿಂದ ಒಕ್ಕಲೆಬ್ಬಿಸುತ್ತಿರುವ ಘಟನೆಗಳ ಬಗ್ಗೆ ಕರ್ನಾಟಕದ ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಆರ್. ರೋಷನ್ ಬೇಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಪಾಲಾಗಿರುವ ಈ ಸಂದರ್ಭದಲ್ಲಿ ದೇಶದ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ರಾಷ್ಟ್ರೀಯ ನಾಯಕರು ವಹಿಸಿರುವ ಮೌನ ಅರ್ಥವಾಗದ ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ.

- Advertisement -

ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರ ಮತಗಳನ್ನು ಪಡೆಯಲು ಅವರ ಹಕ್ಕುಗಳು, ಅಭಿವೃದ್ಧಿ ಮತ್ತು ರಕ್ಷಣೆಯ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳು, ಈಗ ಅವರ ಬದುಕು ಸಂಕಷ್ಟಕ್ಕೆ ಸಿಲುಕಿದಾಗ ಏಕೆ ಮುಂದೆ ಬರುತ್ತಿಲ್ಲ ಎಂದು ರೋಷನ್ ಬೇಗ್ ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತರ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ಕೇವಲ ಚುನಾವಣಾ ವಿಷಯವಾಗಬಾರದು; ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನಬದ್ಧ ಹಕ್ಕುಗಳ ಬಗ್ಗೆ ಮಾತನಾಡುವ ನಾಯಕರು ಸಂತ್ರಸ್ತರ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಬದ್ಧತೆಯನ್ನು ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿರುಕು ಬಿಟ್ಟಿದ್ದ ‘ಕೈ’ ಕೋಟೆಗೆ ಒಗ್ಗಟ್ಟಿನ ಶಕ್ತಿ: ರಾಜಸ್ಥಾನ...

ಗೋವಿಂದ್ ಡೋಟಸರ ಮತ್ತು ಟೀಕಾರಾಮ್ ಜುಲ್ಲಿ ಅವರ ನಡುವಣ ಬಾಂಧವ್ಯ ಕೇವಲ ರಾಜಕೀಯ ಅನಿವಾರ್ಯತೆಯಲ್ಲ; ಅದು ಪರಸ್ಪರ ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳ ಸಮ್ಮಿಲನವಾಗಿದೆ. ಡೋಟಸರ ಅವರಲ್ಲಿರುವ ಆಕ್ರಮಣಕಾರಿ ಸಂಘಟನಾ ಶೈಲಿ, ಪ್ರಖರ...

ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ...

ಬಂಡೀಪುರ-ನಾಗರಹೊಳೆ ಅರಣ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡ; ಖಾಸಗಿ ಬಂಡವಾಳ, ಪ್ರವಾಸೋದ್ಯಮ ವಿಸ್ತರಣೆ ಮತ್ತು ಆದಿವಾಸಿಗಳ ಹಕ್ಕುಗಳ ನಡುವೆ ಸಂರಕ್ಷಣೆಯ ಮೂಲ ಆಶಯಕ್ಕೆ ಸವಾಲು. ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರವಿಲ್ಲ; ಅರಣ್ಯಗಳ ಮೇಲಿನ ನಿಯಂತ್ರಣ...

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ...

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ ಪೂರಕವಾದ ವ್ಯವಸ್ಥೆಯಲ್ಲ. ಅದು ಅವರ ವಾರ್ಷಿಕ ಆದಾಯ, ಕುಟುಂಬದ ನಿರ್ವಹಣೆ, ಕೃಷಿ ಸಾಲದ ಮರುಪಾವತಿ ಹಾಗೂ ಮುಂದಿನ ಬದುಕಿನ ಭರವಸೆಯಾಗಿದೆ....

ಇತ್ತೀಚಿನ ತಿಂಗಳುಗಳಲ್ಲಿ ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ನಡೆದ ತೆರವು ಕಾರ್ಯಾಚರಣೆಗಳು ಸಾವಿರಾರು ಜನರ ಬದುಕನ್ನು ಬೀದಿಗೆ ತಂದಿವೆ ಎಂದಿದ್ದಾರೆ. ಅಕ್ಟೋಬರ್ 18ರಂದು ನಾಗಾಂವ್, ಗೋಲಾಘಾಟ್ ಮತ್ತು ಹೊಜಾಯ್ ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಲಾಗಿದೆ. ನವೆಂಬರ್ 1ರಂದು ಧುಬ್ರಿ ಜಿಲ್ಲೆಯ ಆಲಂಗಂಜ್‌ನಲ್ಲಿ ಸುಮಾರು 640 ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಲಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅಲ್ಲದೆ, ನವೆಂಬರ್ 13ರಂದು ಲಖಿಂಪುರ ಜಿಲ್ಲೆಯ ಬೋಗಿನಾಡಿ ಪ್ರದೇಶದಲ್ಲಿ 132 ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಲಾಗಿದ್ದು, ಇವುಗಳಲ್ಲಿ ಕೆಲವು ಕುಟುಂಬಗಳು 1983ರ ಅಸ್ಸಾಂ ಹಿಂಸಾಚಾರದ ಬಳಿಕ ಅಲ್ಲಿ ನೆಲೆಸಿದ್ದವು ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ರವಾಹ, ಸವೆತ, ಒಕ್ಕಲೆಬ್ಬಿಸುವಿಕೆ: ಮುಸ್ಲಿಂ ರೈತರ ಮೇಲೆ ಅಸ್ಸಾಂ ಬಿಜೆಪಿ ಸರ್ಕಾರದ ಕ್ರೌರ್ಯ

ಸರ್ಕಾರಿ ಅಥವಾ ಅರಣ್ಯ ಭೂಮಿಯಲ್ಲಿನ ಅತಿಕ್ರಮಣ ತೆರವುಗೊಳಿಸುವುದು ಕಾನೂನಿನ ವ್ಯಾಪ್ತಿಯಲ್ಲಿದ್ದರೂ, ಅದು ಕಾನೂನುಬದ್ಧ ಪ್ರಕ್ರಿಯೆ, ಮಾನವೀಯ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳನ್ನು ಗೌರವಿಸಬೇಕು. ಪರ್ಯಾಯ ವಸತಿ ಕಲ್ಪಿಸದೆ, ಜೀವನೋಪಾಯ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸದೆ ಜನರನ್ನು ನಿರ್ಗತಿಕರನ್ನಾಗಿ ಮಾಡುವುದು ಗಂಭೀರ ಮಾನವೀಯ ಸಮಸ್ಯೆಯಾಗಿದೆ ಎಂದು ರೋಷನ್ ಬೇಗ್ ಅಭಿಪ್ರಾಯಪಟ್ಟಿದ್ದಾರೆ.

ಬಂಗಾಳಿ ಮೂಲದ ಮುಸ್ಲಿಮರನ್ನು (ಸ್ಥಳೀಯವಾಗಿ ‘ಮಿಯಾ’ ಎಂದು ಕರೆಯುವ ಸಮುದಾಯ) ಗುರಿಯಾಗಿಸಿಕೊಂಡು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ನೀಡಿರುವ ಹೇಳಿಕೆಗಳ ಬಗ್ಗೆಯೂ ಬೇಗ್ ಆತಂಕ ವ್ಯಕ್ತಪಡಿಸಿದ್ದಾರೆ.

ಜನವರಿ 2026ರಲ್ಲಿ ಈ ಸಮುದಾಯದವರಿಗೆ ತೊಂದರೆ ಉಂಟುಮಾಡುವ ಮೂಲಕ ಅವರು ಅಸ್ಸಾಂ ತೊರೆಯುವಂತಹ ಪರಿಸ್ಥಿತಿ ನಿರ್ಮಿಸಬೇಕು ಎಂಬರ್ಥದ ಹೇಳಿಕೆಗಳನ್ನು ಮುಖ್ಯಮಂತ್ರಿ ನೀಡಿದ್ದರು ಎಂದು ವರದಿಯಾಗಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನೀಡುವ ಇಂತಹ ಹೇಳಿಕೆಗಳು ಸಂವಿಧಾನದ ಸಮಾನತೆ ಮತ್ತು ಜಾತ್ಯತೀತ ಆಶಯಗಳಿಗೆ ವಿರುದ್ಧವಾದ ಸಂದೇಶ ರವಾನಿಸುತ್ತವೆ ಎಂದು ಹೇಳಿದ್ದಾರೆ.

ಮನೆ ಕಳೆದುಕೊಂಡ ಕುಟುಂಬಗಳ ಮಕ್ಕಳ ಶಿಕ್ಷಣ, ಮಹಿಳೆಯರ ಸುರಕ್ಷತೆ, ವೃದ್ಧರ ಆರೈಕೆ ಮತ್ತು ಅನಾರೋಗ್ಯ ಪೀಡಿತರ ಚಿಕಿತ್ಸೆಯ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಪ್ರಶ್ನಿಸಿರುವ ಅವರು, ಭೂ ವಿವಾದಗಳನ್ನು ದಾಖಲೆಗಳು ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಬಗೆಹರಿಸಬೇಕೇ ಹೊರತು, ಭಾಷೆ, ಧರ್ಮ ಅಥವಾ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಯಾವುದೇ ಸಮುದಾಯವನ್ನು ತಾರತಮ್ಯಕ್ಕೆ ಒಳಪಡಿಸುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಸ್ಸಾಂ | 1,500 ಮುಸ್ಲಿಂ ಕುಟುಂಬಗಳ ಮನೆ ಉರುಳಿಸಲು ಮುಂದಾದ ಸರ್ಕಾರ

ರಾಹುಲ್, ಅಖಿಲೇಶ್ ಅಸ್ಸಾಂಗೆ ಭೇಟಿ ನೀಡಲಿ: ರೋಷನ್ ಬೇಗ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಪ್ರಮುಖ ನಾಯಕರು ಅಸ್ಸಾಂಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬೇಕು ಎಂದು ರೋಷನ್ ಬೇಗ್ ಆಗ್ರಹಿಸಿದ್ದಾರೆ.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಈ ನಾಯಕರು ಅಸ್ಸಾಂ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇದರೊಂದಿಗೆ ಅಜಂ ಖಾನ್, ಅಸಾದುದ್ದೀನ್ ಓವೈಸಿ ಸೇರಿದಂತೆ ಇತರ ಮುಸ್ಲಿಂ ಮತ್ತು ಜಾತ್ಯತೀತ ನಾಯಕರೂ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ. ಕೇವಲ ಭೇಟಿ ನೀಡುವುದಷ್ಟೇ ಅಲ್ಲದೆ, ಸಂತ್ರಸ್ತರಿಗೆ ಕಾನೂನು ನೆರವು ಒದಗಿಸುವುದು, ಶಾಶ್ವತ ಪುನರ್ವಸತಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸುವುದು ರಾಷ್ಟ್ರೀಯ ನಾಯಕರ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ದೇಶದ ಮುಸ್ಲಿಂ ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಜಂಟಿ ನಿಯೋಗ ರಚಿಸಿ ಅಸ್ಸಾಂಗೆ ಭೇಟಿ ನೀಡಬೇಕು ಎಂದು ರೋಷನ್ ಬೇಗ್ ಕರೆ ನೀಡಿದ್ದಾರೆ. ಕೇವಲ ಸಭೆ, ನಿರ್ಣಯ ಮತ್ತು ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗದೆ, ಸಂತ್ರಸ್ತರ ನೈಜ ಪರಿಸ್ಥಿತಿಯನ್ನು ಅರಿತು ಅವರಿಗೆ ತಾತ್ಕಾಲಿಕ ವಸತಿ, ಆಹಾರ, ಔಷಧೋಪಚಾರ, ಮಕ್ಕಳ ಶಿಕ್ಷಣ ಮತ್ತು ಕಾನೂನು ನೆರವು ಒದಗಿಸಲು ನೇರವಾಗಿ ಕಾರ್ಯನಿರ್ವಹಿಸಬೇಕು. ರಾಜಕೀಯ ನಾಯಕರು, ಸಾಮಾಜಿಕ ಸಂಘಟನೆಗಳು, ಬುದ್ಧಿಜೀವಿಗಳು ಮತ್ತು ಹೋರಾಟಗಾರರು ಒಗ್ಗಟ್ಟಿನಿಂದ ಮುಂದಾದರೆ ಸಂತ್ರಸ್ತರ ಧ್ವನಿಗೆ ರಾಷ್ಟ್ರಮಟ್ಟದಲ್ಲಿ ಬಲ ದೊರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಮರಿಗೆ ರಾಜಕೀಯ ಪಕ್ಷಗಳಿಂದ ಕೇವಲ ಅನುಕಂಪದ ಮಾತುಗಳು ಬೇಕಿಲ್ಲ; ಅವರಿಗೆ ಹಕ್ಕುಗಳ ರಕ್ಷಣೆ, ಗೌರವಯುತ ಬದುಕು, ವಸತಿ, ಶಿಕ್ಷಣ, ಉದ್ಯೋಗ ಮತ್ತು ನ್ಯಾಯ ಬೇಕಾಗಿದೆ. ಅಸ್ಸಾಂನ ಬೆಳವಣಿಗೆಗಳನ್ನು ಕೇವಲ ಪ್ರಾದೇಶಿಕ ಸಮಸ್ಯೆಯಾಗಿ ನೋಡದೆ, ಸಂವಿಧಾನಬದ್ಧ ಸಮಾನತೆ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಸವಾಲಾಗಿ ಪರಿಗಣಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನ್ಯಾಯ ಮತ್ತು ಗೌರವಯುತ ಪುನರ್ವಸತಿ ದೊರೆಯುವವರೆಗೆ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದು ರೋಷನ್ ಬೇಗ್ ಒತ್ತಾಯಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ನಮ್ಮ ಸಂವಿಧಾನದಲ್ಲಿ ಸಮಾನತೆಯಿದೆ, ಅದನ್ನು ಉಳಿಸಿಕೊಳ್ಳಬೇಕು : ಎಂ  ಎಸ್.ಮಾದಯ್ಯ

ನಮ್ಮ ದೇಶದ ಸಂವಿಧಾನ ಬಹಳ ಶ್ರೇಷ್ಠವಾದದ್ದು. ಅದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಂವಿಧಾನದಲ್ಲಿ...

ನಾಳೆ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ: ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯ

ಜವಾಹರ ನವೋದಯ ವಿದ್ಯಾಲಯದ 2027–28ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ...

ಹವಾಮಾನ ವರದಿ: ನವೆಂಬರ್ 28ರವರೆಗೆ 8 ಜಿಲ್ಲೆಗಳಲ್ಲಿ ಮಳೆ; ಇಲಾಖೆ ಮುನ್ಸೂಚನೆ

ರಾಜ್ಯದ ಹವಾಮಾನದಲ್ಲಿ ತುಸು ಬದಲಾವಣೆಯಾಗಿದ್ದು, ಮುಂದಿನ 2 ದಿನಗಳ ಕಾಲ (ನವೆಂಬರ್...

ವಿಜಯಪುರ |ಮಹಿಳಾ ವಿವಿಯಲ್ಲಿ ಕನಕದಾಸ ಜಯಂತಿ ಆಚರಣೆ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠದ ವತಿಯಿಂದ...