1989ರ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಡಿ ಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗುತ್ತಿದ್ದು, ಶೀಘ್ರದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುತ್ತಾರೆಯೇ? ಎಂಬುದನ್ನು ಕಾಯ್ದು ನೋಡುತ್ತಿರುವ ಒಂದು ಲಕ್ಷ ಜನ ಪ್ರತಿನಿಧಿಗಳಾಗುವ ಹೆಬ್ಬಯಕೆಯಲ್ಲಿರುವ ಕಾರ್ಯಕರ್ತರಿಗೆ ಹಾಗೂ ಮೂರು ಕೋಟಿಗೂ ಅಧಿಕ ಮತದಾರ ಪ್ರಭುಗಳ ಬೇಡಿಕೆಯಾಗಿದೆ.
ಪ್ರತಿಯೊಬ್ಬ ಪ್ರಜೆ ಪ್ರಭುವಾಗಬೇಕು. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ ಆಡಳಿತ ದೇಶದ ಜನತೆ ವರ್ಗ, ಧರ್ಮ, ಜಾತಿ, ಭಾಷೆ, ಬಣ್ಣ, ಲಿಂಗ, ಪ್ರಾದೇಶಿಕತೆ ಹೀಗೆ ಯಾವುದೇ ಭಿನ್ನಭೇದವಿಲ್ಲದಂತೆ ಪ್ರತಿಯೊಬ್ಬ ಪ್ರಜೆ ಭಾಗವಹಿಸುವಿಕೆಯ ಮೂಲಕ ನಡೆಸುವ ಆಡಳಿತ. ಅಂತೆಯೇ ಇದೀಗ ರಾಜ್ಯದ ಮುಖ್ಯಮಂತ್ರಿಯಗಲಿರುವ ಡಿ ಕೆ ಶಿವಕುಮಾರ್ ಅವರು ಸ್ಥಳೀಯ ಸರ್ಕಾರಕ್ಕಾಗಿ ಪಂಚಾಯತ್ ಚುನಾವಣೆ ನಡೆಸುತ್ತಾರೆಯೇ? ಎಂಬುದು ರಾಜ್ಯದ ಜನರಲ್ಲಿ ಕುತೂಹಲವಾಗಿದೆ.
ಗ್ರಾಮ ಪಂಚಾಯತ್ ಗ್ರಾಮೀಣ, ಸ್ಥಳೀಯ ಸ್ವರಾಜ್ಯ ವ್ಯವಸ್ಥೆ ಸಾಂವಿಧಾನಿಕ ಆಡಳಿತ ಸಂಸ್ಥೆ ಗ್ರಾಮಗಳ ಅಭಿವೃದ್ಧಿ ಮೂಲಭೂತ ಸೌಲಭ್ಯಗಳು ಮತ್ತು ಸ್ಥಳೀಯ ಆಡಳಿತ ನೋಡಿಕೊಳ್ಳುತ್ತದೆ. ದಿ. ಅಬ್ದುಲ್ ನಜೀರ್ ಸಾಬ್ ಅವರು ʼಗ್ರಾಮ ಸಭೆʼಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ, ದಿಲ್ಲಿಯಲ್ಲಿರುವ ಪ್ರಧಾನಿ ಮಂಡಲ ಪಂಚಾಯತಿಯ ಅಧ್ಯಕ್ಷ ʼಪ್ರಧಾನʼ ಎಂದು ಕರೆಯುವ ಮೂಲಕ ದಿಲ್ಲಿಯ ಪ್ರಧಾನಿ ಹುದ್ದೆಯ ಗೌರವವನ್ನು ಹಳ್ಳಿಯ ಪ್ರಧಾನಿಗೆ ನೀಡಿದರು. ಜಿಲ್ಲಾ ಪರಿಷತ್ತಿನ ಅಧ್ಯಕ್ಷರನ್ನು ಜಿಲ್ಲೆಯ ಮುಖ್ಯಮಂತ್ರಿ ಎಂದು ಕರೆಯುವ ಮೂಲಕ ವಿಕೇಂದ್ರೀಕರಣದ ವಿರಾಟ ಸ್ವರೂಪವನ್ನು 1983ರಲ್ಲಿ ತೋರಿಸಿಕೊಟ್ಟಿದ್ದು ಇಂದು ಇತಿಹಾಸ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಸಮಾಜದ ಕನಸಿನಂತೆ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಜನರಿಗೆ ರಾಜಕೀಯ ಅಧಿಕಾರ ನೀಡಿದ್ದು 1992ರ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮಹಾತ್ಮ ಗಾಂಧಿ, ಬಸವಣ್ಣನವರ ಆಶಯಗಳಂತೆ ನಡೆದು ತೋರಿಸಿದ ಬಹುದೊಡ್ಡ ಇತಿಹಾಸದ ಮೈಲುಗಲ್ಲು.
1978ರ ತಾಲೂಕು ಬೋರ್ಡ್ನಿಂದ ರಾಜಕೀಯ ಪಯಣ ಪ್ರಾರಂಭಿಸಿ ಸುದೀರ್ಘ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನ ತರುವ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಮೂರು ಹಂತದ ಪಂಚಾಯತ್ ಚುನಾವಣೆ ನಡೆಸದೆ ಮುಖ್ಯಮಂತ್ರಿ ಸ್ಥಾನದಿಂದ ತೆರಳಿದ್ದು ಒಂದು ಕಪ್ಪು ಚುಕ್ಕೆ, ದಿ.ಅಬ್ದುಲ್ ನಜೀರ್ ಸಾಬರ ಒಡನಾಟ ಅವರನ್ನು ಕಾಡದೇ ಇರಲಾರದು.
ಇದನ್ನೂ ಓದಿದ್ದೀರಾ? ಸಮಸ್ಯೆಗೆ ಸ್ಪಂದಿಸುವ ಸ್ಥಳೀಯ ಸರ್ಕಾರವಿಲ್ಲ: ಮೂಲಸೌಕರ್ಯ ಮರೀಚಿಕೆ, ಸಿಗದ ಪಂಚಾಯತ್ ಯೋಜನೆ
1989ರ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಡಿ ಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗುತ್ತಿದ್ದು, ಶೀಘ್ರದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುತ್ತಾರೆಯೇ? ಎಂಬುದನ್ನು ಕಾಯ್ದು ನೋಡುತ್ತಿರುವ ಒಂದು ಲಕ್ಷ ಜನ ಪ್ರತಿನಿಧಿಗಳಾಗುವ ಹೆಬ್ಬಯಕೆಯಲ್ಲಿರುವ ಕಾರ್ಯಕರ್ತರಿಗೆ ಹಾಗೂ ಮೂರು ಕೋಟಿಗೂ ಅಧಿಕ ಮತದಾರ ಪ್ರಭುಗಳ ಬೇಡಿಕೆಯಾಗಿದೆ.

ಪ್ರದೀಪ ಚ ಪಾಟೀಲ್ ನಾಗರದಿನ್ನಿ
ಗ್ರಾಮ ಸ್ವರಾಜ್ಯ, ಕರ್ನಾಟಕ ರಾಜ್ಯ ಉಪಾಧ್ಯಕ್ಷರು



