ಬೀದಿ ದೀಪ, ಕಸದ ನಿರ್ವಹಣೆ, ಕುಡಿಯುವ ನೀರು, ಶಾಲೆ-ಆರೋಗ್ಯ ಸಮಸ್ಯೆಗಳು ಬಗೆಹರಿಯದೇ ಉಳಿಯುತ್ತವೆ. ಜನರಲ್ಲಿ ಸರ್ಕಾರದ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ. ಚುನಾವಣೆ ಮುಂದೂಡಿಕೆಯಿಂದ ಜನರಲ್ಲಿ ನಿರಾಸೆ ಮತ್ತು ಅಸಮಾಧಾನ ಹೆಚ್ಚಾಗುತ್ತದೆ. ಪ್ರಜಾಪ್ರಭುತ್ವ ಬಲವಾಗಿರಬೇಕಾದರೆ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಸಮಯಕ್ಕೆ ನಡೆಸುವುದು ಸರ್ಕಾರದ ಅತ್ಯಂತ ಅಗತ್ಯವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಯದಿದ್ದರೆ ತಳ ಸಮುದಾಯದ ಜನರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ನೋಡುವುದಾದರೆ, ಜನರ ಸಮಸ್ಯೆಗೆ ಸ್ಪಂದಿಸುವ ಪ್ರತಿನಿಧಿಗಳ ಕೊರತೆ, ಗ್ರಾಮಸ್ಥರ ಸಮಸ್ಯೆಗಳನ್ನು ಕೇಳಿ ಸರ್ಕಾರದ ಮುಂದೆ ಇಡುವ ಚುನಾಯಿತ ಸದಸ್ಯರು ಇಲ್ಲದಂತಾಗುತ್ತದೆ. ಹಾಗಾಗಿ ಸ್ಥಳೀಯ ಸರ್ಕಾರಗಳ ಅನಿವಾರ್ಯತೆ ಅಗತ್ಯವಾಗಿದೆ.
ಅಭಿವೃದ್ಧಿ ಕಾಮಗಾರಿಗಳ ವಿಳಂಬವಾಗುತ್ತದೆ. ರಸ್ತೆ, ಕುಡಿಯುವ ನೀರು, ಕಾಲುವೆ, ವಿದ್ಯುತ್, ಸ್ವಚ್ಛತೆ ಮುಂತಾದ ಮೂಲಭೂತ ಕೆಲಸಗಳು ನಿಧಾನಗತಿಯಲ್ಲಿ ನಡೆಯುತ್ತವೆ. ಕಡು ಬಡಜನರಿಗೆ ಯೋಜನೆ ಸಿಗುವಲ್ಲಿ ತೊಂದರೆಯಾಗುತ್ತದೆ. ಮನೆ, ಪಿಂಚಣಿ, ಉದ್ಯೋಗ ಖಾತರಿ, SC/ST ವಿದ್ಯಾರ್ಥಿಗಳಿಗೆ ಸಿಗಬೇಕಾದ ಪ್ರೋತ್ಸಾಧನ ಮುಂತಾದ ಸರ್ಕಾರಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ.
ಜನರು ತಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕಿನಿಂದ ದೂರವಾಗುತ್ತಾರೆ. ಇದು ಸಂವಿಧಾನದ ಆತ್ಮಕ್ಕೆ ವಿರುದ್ಧ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ.
ಅಧಿಕಾರ ಕೆಲವರ ಕೈಯಲ್ಲಿ ಕೇಂದ್ರೀಕರಣವಾಗುವುದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಚುನಾಯಿತ ಆಡಳಿತ ಇಲ್ಲದಿದ್ದರೆ ಅಧಿಕಾರಿಗಳು ಅಥವಾ ಕೆಲವರು ಮಾತ್ರ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.
ಯುವಜನರು ಮತ್ತು ಮಹಿಳೆಯರಿಗೆ ಅವಕಾಶ ಕಡಿಮೆಯಾಗುತ್ತದೆ. ಪಂಚಾಯತಿ ಚುನಾವಣೆಯ ಮೂಲಕ ರಾಜಕೀಯ ಪ್ರವೇಶ ಪಡೆಯುವ ಯುವಜನರು ಹಾಗೂ ಮಹಿಳೆಯರಿಗೆ ಅವಕಾಶ ಸಿಗುವುದಿಲ್ಲ. ಗ್ರಾಮದ ಸ್ಥಳೀಯ ಸಮಸ್ಯೆಗಳು ಹೆಚ್ಚಾಗುತ್ತವೆ. ಮಹಿಳೆಯರು ಪ್ರಜಾಪ್ರಭುತ್ವದಿಂದ ಹಿಂದುಳಿಯುವಂತಾಗುತ್ತದೆ.
ಇದನ್ನೂ ಓದಿದ್ದೀರಾ? ಸ್ಥಳೀಯ ಸರ್ಕಾರಗಳ ಚುನಾವಣೆ: ಸರ್ಕಾರದ ನಡೆ ಬಸವಣ್ಣನ ಆಶಯಗಳಿಗೆ ವಿರೋಧವಲ್ಲವೇ?
ಬೀದಿ ದೀಪ, ಕಸದ ನಿರ್ವಹಣೆ, ಕುಡಿಯುವ ನೀರು, ಶಾಲೆ-ಆರೋಗ್ಯ ಸಮಸ್ಯೆಗಳು ಬಗೆಹರಿಯದೇ ಉಳಿಯುತ್ತವೆ. ಜನರಲ್ಲಿ ಸರ್ಕಾರದ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ. ಚುನಾವಣೆ ಮುಂದೂಡಿಕೆಯಿಂದ ಜನರಲ್ಲಿ ನಿರಾಸೆ ಮತ್ತು ಅಸಮಾಧಾನ ಹೆಚ್ಚಾಗುತ್ತದೆ. ಪ್ರಜಾಪ್ರಭುತ್ವ ಬಲವಾಗಿರಬೇಕಾದರೆ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಸಮಯಕ್ಕೆ ನಡೆಸುವುದು ಸರ್ಕಾರದ ಅತ್ಯಂತ ಅಗತ್ಯವಾಗಿದೆ.

ಕಾಶಿಂ ಕೆ ಎನ್
ನಾಗೇಶನಹಳ್ಳಿ ಯುವ ಸಾಮಾಜಿಕ ಹೋರಾಟಗಾರರು