‘ತಮ್ಮ ಅಭ್ಯರ್ಥಿ’ ಎಂದು ರೈಲಿನಿಂದ ಬಂದಿಳಿದಾತನಿಗೆ ಸನ್ಮಾನಿಸಿದ ಬಿಜೆಪಿ ಕಾರ್ಯಕರ್ತರು!

Date:

Advertisements

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದೆ. ‘ತಮ್ಮ ಅಭ್ಯರ್ಥಿ’ ಎಂದು ರೈಲಿನಿಂದ ಬಂದಿಳಿದ ಪಕ್ಷದ ಇನ್ನೋರ್ವ ವ್ಯಕ್ತಿಗೆ ಹೂಹಾರ ಹಾಕಿದ ಬಳಿಕ ಬಿಜೆಪಿ ಕಾರ್ಯಕರ್ತರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾನ್ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆಯುವ ವಿಚಾರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ನಡುವೆ ಭಾರೀ ಕಸರತ್ತು ಏರ್ಪಟ್ಟಿತ್ತು. ಈ ಪೈಪೋಟಿಯಲ್ಲಿ ಹೈಕಮಾಂಡ್‌ನ ಮನವೊಲಿಸಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ರಮೇಶ್ ಅವಸ್ಥಿ ಎನ್ನುವವರು ಯಶಸ್ವಿಯಾಗಿದ್ದರು.

ತಮ್ಮ ಹೆಸರು ಪ್ರಕಟವಾದ ಬೆನ್ನಲ್ಲೇ ದೆಹಲಿಯಲ್ಲಿದ್ದ ರಮೇಶ್ ಅವಸ್ಥಿ ಬುಧವಾರ ಕಾನ್ಪುರ ನಗರಕ್ಕೆ ಆಗಮಿಸಿದರು. ದೆಹಲಿಯಿಂದ ಶತಾಬ್ದಿ ಎಕ್ಸ್‌ಪ್ರೆಸ್ ಮೂಲಕ ಕಾನ್ಪುರ ಸೆಂಟ್ರಲ್ ಸ್ಟೇಷನ್‌ಗೆ ಆಗಮಿಸಿದ ರಮೇಶ್ ಅವಸ್ತಿ ಅವರನ್ನು ಸ್ವಾಗತಿಸಲು, ಹೂ ಹಾರಗಳನ್ನು ಹಿಡಿದುಕೊಂಡು ನೂರಾರು ಬಿಜೆಪಿ ಕಾರ್ಯಕರ್ತರು ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಪ್ರತಿನಿಧಿಗಳು ಕೂಡ ಸ್ಥಳದಲ್ಲಿದ್ದರು.

Advertisements

ರೈಲು ಸ್ಟೇಷನ್ ತಲುಪುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಯೋಗಿ-ಮೋದಿ ಜಿಂದಾಬಾದ್ ಮತ್ತು ರಮೇಶ್ ಅವಸ್ಥಿ ಜಿಂದಾಬದ್ ಹೆಸರಿನಲ್ಲಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ರೈಲು ನಿಂತಾಗ ಅಭ್ಯರ್ಥಿ ರಮೇಶ್ ಅವಸ್ಥಿ ಹೊರಬರುವ ಮೊದಲೇ ರಾಜ್ಯಸಭಾ ಸಂಸದ ಬಾಬೂರಾಮ್ ನಿಶಾದ್ ಹೊರಬಂದರು. ಈ ವೇಳೆ ಇವರೇ ‘ನಮ್ಮ ಅಭ್ಯರ್ಥಿ’ ಎಂದು ತಪ್ಪಾಗಿ ತಿಳಿದುಕೊಂಡ ಬಿಜೆಪಿ ಕಾರ್ಯಕರ್ತರು ಬಾಬೂರಾಮ್ ನಿಶಾದ್ ಅವರಿಗೆ ಹೂ-ಹಾರ, ಶಾಲು ಹಾಕಿ ಸನ್ಮಾನಿಸಿದ್ದಾರೆ.

ಈ ವೇಳೆ ಬಾಬೂರಾಮ್ ಅವರು, “ರಮೇಶ್ ಅವಸ್ಥಿ ಇನ್ನೂ ರೈಲೊಳಗೆ ಇದ್ದಾರೆ” ಎಂದು ತಿಳಿಸಲು ಪ್ರಯತ್ನಿಸಿದರಾದರೂ, ಕಾರ್ಯಕರ್ತರಿಗೆ ಅದು ಕೇಳಲಿಲ್ಲ. ಇದೇ ವೇಳೆ ರಮೇಶ್ ಅವಸ್ಥಿ ಅವರು ಹೊರ ಬರುವುದನ್ನು ಗಮನಿಸಿದ ಶಾಸ್ತ್ರಿನಗರ ಮತ್ತು ದಬೌಲಿಯ ಕಾರ್ಯಕರ್ತರು ಪೇಚಿಗೆ ಸಿಲುಕಿದರು. ಬಳಿಕ ಬಾಬೂರಾಮ್ ಅವರಿಗೆ ಹಾಕಿದ್ದ ಶಾಲು, ಹೂಹಾರಗಳನ್ನು ‘ತಮ್ಮ ನೈಜ ಅಭ್ಯರ್ಥಿ’ ರಮೇಶ್ ಅವಸ್ಥಿ ಅವರಿಗೆ ಹಾಕಿದ್ದಾರೆ.

babu lal and ramesh awasti
ರಮೇಶ್ ಅವಸ್ಥಿ ಹಾಗೂ ಬಾಬೂರಾಮ್ ನಿಶಾದ್(ಕನ್ನಡಕ ಹಾಕಿದವರು)

ಬಾಬೂರಾಮ್ ಅವರು ಉಡುಗೆ ಮತ್ತು ನೋಟದಲ್ಲಿ ರಮೇಶ್ ಅವಸ್ಥಿಯನ್ನೇ ಹೋಲುತ್ತಿದ್ದರಿಂದ ಬಿಜೆಪಿ ಕಾರ್ಯಕರ್ತರು ಈ ರೀತಿ ಪೇಚಿಗೆ ಸಿಲುಕಿ, ಮಾಧ್ಯಮಗಳ ಎದುರೇ ಮುಜುಗರಕ್ಕೊಳಗಾದರು. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಟ್ರೋಲಿಗರಿಗೆ ಆಹಾರವಾಗಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ‘ಅಲೆದಾಡುವ ಆತ್ಮ’ ನಿಮ್ಮನೆಂದಿಗೂ ಬಿಡದು: ಮೋದಿಗೆ ಶರದ್ ಪವಾರ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಮಾಡಿದ...

ಮೋದಿ ಸಂಪುಟದಲ್ಲಿ ಶಿಂದೆ, ಅಜಿತ್ ಬಣಕ್ಕಿಲ್ಲ ಸ್ಥಾನ; ಶಿವಸೇನೆ ಸಂಸದ ಅಸಮಾಧಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರಚನೆಯಾದ 24 ಗಂಟೆಗಳ...

Download Eedina App Android / iOS

X