ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಗಳ ಮೇಲೆ ದಾಳಿ ಸಲ್ಲದು: ಮುಖ್ಯ ನ್ಯಾ. ಸೂರ್ಯಕಾಂತ್

Date:

ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಮತ್ತು ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ ತಮಗೆ ಅನುಕೂಲಕರವಾಗಿಲ್ಲ ಎಂಬ ಕಾರಣಕ್ಕೆ ರಾಜಕೀಯ ಅಜೆಂಡಾ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಗಳ ಮೇಲೆ ದಾಳಿ ಮಾಡಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಪ್ರತಿಪಾದಿಸಿದ್ದಾರೆ.

- Advertisement -

ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳು, ನ್ಯಾಯಾಂಗದ ಜವಾಬ್ದಾರಿ ಮತ್ತು ನಾಗರಿಕರ ಹಕ್ಕುಗಳ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...

ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆಯೂ ಕಿವಿಮಾತು ಹೇಳಿದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಂಗವು ವಾದ-ವಿವಾದಗಳಿಗೆ ತೆರೆದುಕೊಂಡಿರಬೇಕು ಮತ್ತು ತನ್ನ ನಿರ್ಧಾರಗಳು ‘ತತ್ವಬದ್ಧ ತರ್ಕ’ದ ಮೇಲೆ ಆಧಾರಿತವಾಗಿರಬೇಕು ಎಂದು ಒತ್ತಿ ಹೇಳಿದರು. “ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ನ್ಯಾಯಾಂಗದ ಅಧಿಕಾರ ಅತ್ಯಗತ್ಯ ಅಂಶವಾಗಿದೆ. ಆದರೆ, ಆ ಅಧಿಕಾರದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ನಿರಂತರವಾಗಿ ಗಳಿಸಿಕೊಳ್ಳಬೇಕಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವು ದೌರ್ಬಲ್ಯವಲ್ಲ ಎಂದು ಸ್ಪಷ್ಟಪಡಿಸಿದ ಸಿಜೆಐ ಸೂರ್ಯ ಕಾಂತ್, “ಬಲಿಷ್ಠ ವಕೀಲರ ಬಳಗವು ಸವಾಲುಗಳನ್ನು ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರಬೇಕು. ಟೀಕೆಗಳು ಬಂದಾಗ ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ತನ್ನ ಅಧಿಕಾರಕ್ಕೆ ಎದುರಾದ ಸವಾಲು ಎಂದು ಭಾವಿಸದೆ, ನಾಗರಿಕರೊಂದಿಗೆ ಸಂವಾದ ನಡೆಸುವ ಸಾಮರ್ಥ್ಯ ಆತ್ಮವಿಶ್ವಾಸವಿರುವ ಸಂಸ್ಥೆಗೆ ಇರಬೇಕು. ಇಂತಹ ಸಂವಾದವು ಸಮಗ್ರತೆ ಮತ್ತು ಸಾಂವಿಧಾನಿಕ ಪ್ರಕ್ರಿಯೆಯ ಗೌರವದಿಂದ ಕೂಡಿರಬೇಕು ಎಂಬುದಷ್ಟೇ ಮುಖ್ಯ” ಎಂದರು.

ಸಂವಿಧಾನವು ಕೇವಲ ವಿಧಿಗಳ ಸಂಗ್ರಹವಾಗಿ ಸಾಮಾನ್ಯ ನಾಗರಿಕನಿಗೆ ಕಾಣಿಸುವುದಿಲ್ಲ, ಬದಲಿಗೆ ಅದು ದೈನಂದಿನ ಬದುಕಿನಲ್ಲಿ ಅನುಭವಕ್ಕೆ ಬರಬೇಕು ಎಂದು ಅವರು ಹೇಳಿದರು.

ಆಡಳಿತಾತ್ಮಕ ನಿರ್ಧಾರಗಳು ನ್ಯಾಯಯುತವಾಗಿದ್ದಾಗ, ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸಲ್ಪಟ್ಟಾಗ, ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಅವಕಾಶ ದೊರೆತಾಗ,

ಸಾರ್ವಜನಿಕ ಅಧಿಕಾರವು ನಿರಂಕುಶವಾಗದಂತೆ ತಡೆದಾಗ ಸಂವಿಧಾನ ನಿಜವಾದ ಅರ್ಥದಲ್ಲಿ ಜಾರಿಯಾಗುತ್ತದೆ.

ವಿಶೇಷವಾಗಿ, ಅತ್ಯಂತ ಬಡ ನಾಗರಿಕನಿಗೂ ತನ್ನ ದೂರಿಗೆ ನ್ಯಾಯಯುತ ವಿಚಾರಣೆ ದೊರೆಯುತ್ತದೆ ಎಂಬ ವಿಶ್ವಾಸದೊಂದಿಗೆ ಸಂಸ್ಥೆಯನ್ನು ಸಮೀಪಿಸಿದಾಗ ಸಂವಿಧಾನವು ಅತ್ಯಂತ ಅರ್ಥಪೂರ್ಣವಾಗಿ ಅನುಭವಕ್ಕೆ ಬರುತ್ತದೆ ಎಂದು ಸಿಜೆಐ ನುಡಿದರು.

ಅಸಾಧಾರಣ ರಾಜಕೀಯ ಅಥವಾ ಸಾಂಸ್ಥಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಾತ್ರವಲ್ಲದೆ, ಪ್ರತಿದಿನದ ಸಾಮಾನ್ಯ ಅಧಿಕಾರ ಚಲಾವಣೆಯಲ್ಲೂ ಸಂವಿಧಾನ ಪರೀಕ್ಷೆಗೆ ಒಳಗಾಗುತ್ತದೆ ಎಂದು ಅವರು ವಿವರಿಸಿದರು. ದುರ್ಬಲ ನಾಗರಿಕನನ್ನು ಅಧಿಕಾರಸ್ಥರು ನಡೆಸಿಕೊಳ್ಳುವ ರೀತಿ, ಸಂಸ್ಥೆಗಳು ತಮ್ಮ ಮಿತಿಗಳನ್ನು ಒಪ್ಪಿಕೊಳ್ಳುವ ಇಚ್ಛೆ ಮತ್ತು ತಪ್ಪುಗಳನ್ನು ತಿದ್ದಿಕೊಳ್ಳುವ ಸಿದ್ಧತೆ ಇವೆಲ್ಲವೂ ಸಾಂವಿಧಾನಿಕ ಬದ್ಧತೆಯ ಅಭಿವ್ಯಕ್ತಿಗಳಾಗಿವೆ. ಸಾಂವಿಧಾನಿಕ ಖಾತರಿಗಳು ದೈನಂದಿನ ವಾಸ್ತವವಾಗಿ ಬದಲಾಗುವುದು ಸಂಸ್ಥೆಗಳು ತಮಗೆ ವಹಿಸಿದ ಅಧಿಕಾರವನ್ನು ಹೇಗೆ ಬಳಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.

ಸಂವಿಧಾನ ದಿನದಂದು (ನವೆಂಬರ್ 26) ಮುಖ್ಯ ನ್ಯಾಯಮೂರ್ತಿಗಳ ಈ ಮಾತುಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಸಮತೋಲನದ ದೃಷ್ಟಿಯಿಂದ ಗಮನಾರ್ಹವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಸಾಂಸ್ಥಿಕ ಸ್ವಾಯತ್ತತೆ, ನ್ಯಾಯಾಂಗದ ವಿಮರ್ಶೆ ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲಿನ ಟೀಕೆಗಳ ಸ್ವರೂಪದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ‘ವಿಮರ್ಶೆ ಮತ್ತು ದಾಳಿ’ಗಳ ನಡುವಿನ ಸೂಕ್ಷ್ಮ ಗೆರೆಯನ್ನು ಸೂರ್ಯ ಕಾಂತ್ ಅವರು ಸ್ಪಷ್ಟಪಡಿಸಿದ್ದಾರೆ. ಟೀಕೆಗಳು ವ್ಯವಸ್ಥೆಯನ್ನು ಸದೃಢಗೊಳಿಸುವಂತಿರಬೇಕೇ ಹೊರತು, ವೈಯಕ್ತಿಕ ಅಥವಾ ರಾಜಕೀಯ ಲಾಭದ ಅಸ್ತ್ರಗಳಾಗಬಾರದು ಎಂಬ ಅವರ ನಿಲುವು ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯುತ್ತದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡದಲ್ಲಿ ಬಿಜೆಪಿ ಈವರೆಗೆ ಗೆಲ್ಲದಿರುವ ಆ 5 ಸೀಟುಗಳು ಯಾವುವು? ಕಾಂಗ್ರೆಸ್, ಬಿಎಸ್ಪಿ, ಪಕ್ಷೇತರರೇ ಇಲ್ಲಿ ಪ್ರಾಬಲ್ಯ

2027ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜನಾದೇಶ ಪಡೆಯುವ ಗುರಿಯೊಂದಿಗೆ ಬಿಜೆಪಿ...

ಹನಿಟ್ರ್ಯಾಪ್ ಆರೋಪಿ, BJP ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್‌

ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಮತ್ತು ಆಕೆಯ...

‘ಡಿಲಿಮಿಟೇಷನ್’ ಮಸೂದೆ ಬೆಂಬಲಕ್ಕಾಗಿ ಸಂಸದರಿಗೆ ₹150 ಕೋಟಿ ಆಮಿಷ: ಸಂಜಯ್ ರಾವತ್ ಆರೋಪ

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಪಡೆಯಲು ಭಾರತೀಯ ಜನತಾ ಪಕ್ಷವು (ಬಿಜೆಪಿ)...