ಸಂವಿಧಾನಕ್ಕೆ 77 – ಈಡೇರದ ಕನಸು…..

Date:

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ.

- Advertisement -

ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ “ಅಧಿಕಾರಭಾಗ್ಯ” ತನ್ನ ಜನ್ಮಸಿದ್ಧಹಕ್ಕೆಂದು “ಎದೆ ಎತ್ತರಿಸಿ ಜನಸಾಮಾನ್ಯ ನಡೆದಾಡುವುದು ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...

ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಡಾ. ವರ್ಗೀಸ್...

ಕುರಿಯನ್ ಅವರು ಕೇವಲ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿಯಲ್ಲ. ರೈತರಿಗೆ ಆರ್ಥಿಕ ಸ್ವಾವಲಂಬನೆ, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಜನರಿಗೆ ಬದುಕಿನ ಭದ್ರತೆ ಹಾಗೂ ದೇಶಕ್ಕೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ದೊರಕಿಸಿಕೊಟ್ಟ ದೂರದೃಷ್ಟಿಯ ನಾಯಕರು. ಭಾರತದ...

ಪಂಜಾಬ್ ಚುನಾವಣೆ | 6 ವರ್ಷಗಳ ಬಳಿಕ ಮತ್ತೆ...

2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ  ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ...

ಇದರ ಮಧ್ಯೆ ಕೋಟ್ಯಂತರ ಜನರಿಗೆ ಪ್ರತಿಭಟಿಸುವ, ಪ್ರಶ್ನಿಸುವ ಹಕ್ಕು ದಂಗೆಯಲ್ಲ, ಪಿತೂರಿಯಲ್ಲ ಎಂಬ ಅರಿವೇ ಇಲ್ಲದೆ ಇರುವವರು ಸಹ ಇದ್ದಾರೆ.

ಹೀಗಾಗಿಯೇ ನಮ್ಮಲ್ಲಿ ಸಾಕಷ್ಟು ಜನ ಜನಪ್ರತಿನಿಧಿಗಳು ನ್ಯಾಯಾಂಗಕ್ಕೆ, ನ್ಯಾಯಾಂಗ ನಿಂದನೆಗೂ ಹೆದರುವುದಿಲ್ಲ. ಕೆಲವು ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲು ಮುಂದಾಗುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಸಹ ಸಿಲುಕುವುದಿಲ್ಲ. ಅರೆ ನಗರ, ಹಳ್ಳಿಗಾಡುಗಳಲ್ಲಿ ಪಾಳೇಗಾರಿಕೆ ಆಳ್ವಿಕೆ ಇದೆಯೇ ಹೊರತು ಕಾನೂನಿನ ಆಳ್ವಿಕೆಯೇ ಇಲ್ಲವಾಗಿದೆ.

ಹೀಗಾಗಿ ನಾವಿಂದು ಸಂವಿಧಾನದ ಪ್ರಸ್ತಾವನೆಯನ್ನು ಅನುಭವಿಸಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇದನ್ನು ಅನುಮತಿಗಳ ಅನುಕ್ರಮದೊಂದಿಗೆ ಅನುಭವಿಸುವ ಸ್ಥಿತಿಯೂ ಇದೆ. ಹೀಗಿರುವಾಗ, ಅದ್ಹೇಗೆ ವ್ಯವಹರಿಸಲು ಸಾಧ್ಯ.

ಗಣರಾಜ್ಯವು ಸಮಾನ ಪೌರತ್ವದ ಭರವಸೆ ನೀಡುತ್ತದೆ. ಆದರೆ ವ್ಯವಸ್ತೆಯು ಷರತ್ತು ಬದ್ಧ ಪೌರತ್ವವನ್ನು ನೀಡುತ್ತಿದೆ. ಇದು ಸಹ ಸಮರ್ಥನೆಯ ವೇಷ ಧರಿಸಿ ಬರುತ್ತಿದೆ. ಆದರೂ ಇದನ್ನು ಸಹ ಪ್ರಗತಿ ಎಂದೇ ಭಾವಿಸುವಂತೆ ಮಾಡಲಾಗಿದೆ.

2025ರ ಡಿಸೆಂಬರ್ ಒಂದರಲ್ಲಿಯೇ ಯುಪಿಐ ಮೂಲಕ 27.97 ಲಕ್ಷ ಕೋಟಿ ಮೌಲ್ಯದ 21.6 ಶತಕೋಟಿ ವಹಿವಾಟುಗಳನ್ನು ಸಂಸ್ಕರಿಸಿದೆ. ದಿನಕ್ಕೆ ಸರಾಸರಿ 7೦೦ ದಶಲಕ್ಷ ವಹಿವಾಟುಗಳನ್ನು ನಡೆಸಿದೆ. ಹಾಗಂತ ಇದನ್ನು ತಂತ್ರಜ್ಞಾನದ ಬೆಳವಣಿಗೆ ಕಥೆ ಎನ್ನಲಾಗದಿದ್ದರೂ, ಅದೊಂದು ನಾಗರಿಕತೆಯ ಕಥೆ ಎನ್ನಲು ಅಡ್ಡಿ ಇಲ್ಲ.

ಗೊತ್ತಿರಲಿ, “ಸಂವಿಧಾನ” ಎಂಬುದು ವಕೀಲರ ದಾಖಲೆಯಲ್ಲ, ಇದೊಂದು ಬದುಕಿನ ವಾಹಕ ಹಾಗೆಯೇ ಯುಗದ ಚೈತನ್ಯ ಸಹ ಆಗಿದೆ. ಪ್ರತಿ ವರ್ಷ ನವೆಂಬರ್ 26ರಂದು ನಮ್ಮ ಪವಿತ್ರವಾದ “ಸಂವಿಧಾನ”ವನ್ನು ಅಳವಡಿಸಿಕೊಂಡ ನೆನಪಿಗಾಗಿ ದೇಶದ ಉದ್ದಗಲ “ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ. ಇದೇ ನೆನಪಿನಲ್ಲಿ 2023ರ ನವೆಂಬರ್ 26ರಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಏಳು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿ ಸ್ಥಾಪಿಸಲಾಗಿದೆ. ಇದು ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ “ಭಾತೃತ್ವ” ಭಾವನೆಯನ್ನು ಪ್ರತಿಧ್ವನಿಸುತ್ತದೆ. ಇದೀಗ ಅಂಚಿನಲ್ಲಿರುವ ಸಮುದಾಯದ ಒಳಗೊಳ್ಳುವಿಕೆಯನ್ನು ಇದು ಪ್ರದರ್ಶಿಸುತ್ತದೆ. ನಮ್ಮ ಸಂವಿಧಾನ ಒಂದು ದಾಖಲೆಯಾಗಿ ಜಗತ್ತಿನಾದ್ಯಂತ ಇರುವ ದೇಶಗಳಿಗೆ ಮಾರ್ಗದರ್ಶನ ತೋರುವ ದೀಪವಾಗಿದೆ. ಹೀಗಾಗಿ ನಮ್ಮಲ್ಲಿ ಸಮಾಜವನ್ನು ಮುನ್ನೆಡೆಸುವವರು, ಸಾಮಾಜಿಕ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರೂ ಸಂವಿಧಾನವನ್ನು ಅರಿತಿರಬೇಕು ನಾಗರಿಕ ಸಮಾಜದ ಸದಸ್ಯರು ಸಂವಿಧಾನವನ್ನು ಅರ್ಥ ಮಾಡಿಕೊಂಡರಷ್ಟೇ ಸಾಲದು. ತಮ್ಮ ಆಕಾಂಕ್ಷೆಗಳನ್ನು ಅಂತರ್ಗತಗೊಳಿಸಿಕೊಳ್ಳುವ ಒಂದು ಸಂಕೇತವನ್ನಾಗಿ ಕಾಣುವ ಅಗತ್ಯವಿದೆ.

ಇಂತಹ ಹೊತ್ತಲ್ಲಿ ವೈಭವೋಪೇತವಾಗಿ ಆಚರಿಸುವುದಕಷ್ಟೇ ಸೀಮಿತಗೊಳ್ಳದೆ ಸಾಂವಿಧಾನಿಕ ಬದ್ಧತೆಯ ಕುರಿತಾದ ಆತ್ಮ ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ.

ಅಂದು ನಮ್ಮ ದೇಶದ ಪಾಲಿಗೆ ವಸಾಹತುಶಾಹಿ ನೊಗವನ್ನು ಕಳಚುವುದಕ್ಕಿಂತ ಮಿಗಿಲಾಗಿದ್ದಿತ್ತು.

ತನ್ನ ಸಂವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಮ್ಮ ದೇಶ ತನ್ನನ್ನು ಗಣತಂತ್ರ ಎಂದು ಘೋಷಿಸಿಕೊಂಡು ಕಾನೂನು ಬದ್ಧವಾದ ಉದ್ದೇಶಿತ ಭರವಸೆಗಳನ್ನು ತನ್ನ ನಾಗರಿಕರಿಗೆ ನೀಡತೊಡಗಿತು. ದೇಶವಾಸಿಗಳ ದೈನಂದಿನ ಜೀವನವನ್ನು ರೂಪಾಂತರಿಸುವ ಮೂಲಕ ಸಾರ್ವಭೌಮತ್ವದಿಂದ ಸಮಾನತೆ ಹಾಗೂ ದೇಶ ವಿಭಜನೆಯ ಆಘಾತ ಸಹಿಸಿಕೊಂಡು ಮುನ್ನೆಡೆದು ಬಂದಿದೆ.

ಇಲ್ಲಿ ವಿಶೇಷವಾಗಿ ಸರ್ವರಿಗೂ ಸಮಾನವಾದ ಪೌರತ್ವ ನೀಡುವಿಕೆ ಗಣತಂತ್ರದ ಪ್ರಧಾನ ಉದ್ದೇಶ ಆಗಿತ್ತು.

ಆಂಗ್ಲರ ಆಳ್ವಿಕೆಯಲ್ಲಿ ನಮ್ಮವರೆಲ್ಲರೂ ಗ್ರೇಟ್ ಬ್ರಿಟನ್ ರಾಣಿಯ ಪ್ರಜೆಗಳಾಗಿದ್ದರು. ಆಡಳಿತ ಎಂಬುದು ಇದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿರಲಿಲ್ಲ. ರಾಜಕೀಯ ಹಕ್ಕುಗಳು, ಆಸ್ತಿ, ಶಿಕ್ಷಣ, ಲಿಂಗ ಹಾಗೂ ಜನಾಂಗವನ್ನು ಆಧರಿಸಿ ನೀಡಲಾಗುತ್ತಿತ್ತು. ಇಂತಹ ಪರಂಪರೆಯನ್ನು ಸಂವಿಧಾನ ನಿರಾಕರಿಸಿತು. ಸಂವಿಧಾನದ ಮೂರನೇ ಭಾಗದ ಮೂಲಭೂತ ಅಧ್ಯಾಯದಲ್ಲಿನ ಅನುಚ್ಛೇದ 14 ಕಾನೂನಿನ ಸರ್ವಭೌಮತ್ವದ ಮುಂದೆ ಎಲ್ಲರೂ ಸಮಾನರೆಂದು ಹೇಳಿತು.

ಅನುಚ್ಛೇದ 15, 16 ರಲ್ಲಿ ಧರ್ಮ, ಜಾತಿ, ಲಿಂಗ ಹಾಗೂ ಪ್ರದೇಶವನ್ನಾ ಧರಿಸಿ ಮಾಡುವ ತಾರತಮ್ಯವನ್ನು ನಿರ್ಬಂಧಿಸಿತು.

ಇನ್ನೂ ಆರಂಭದಲ್ಲಿಯೇ ಸಾರ್ವತ್ರಿಕ ವಯಸ್ಕ ಮತದಾನವನ್ನು ಅಳವಡಿಸಿಕೊಳ್ಳಲಾಯಿತು.

ಇದರಂತೆ ಪ್ರತಿಯೊಬ್ಬ ವಯಸ್ಕ ನಾಗರಿಕ ಸಹ ತನ್ನ ಜಾತಿ, ಧರ್ಮ, ಶಿಕ್ಷಣ, ಲಿಂಗ ಹೊರತುಪಡಿಸಿ ಮತ ಚಲಾಯಿಸಬಹುದಾಗಿತ್ತು. ಇದುವೇ “ಸಾಮಾಜಿಕ ಕ್ರಾಂತಿ”ಗೆ ಎಡೆ ಮಾಡಿಕೊಟ್ಟಿತು. ಅಂದರೆ “ರಾಜಕೀಯ ಸಮಾನತೆ” ಬಳಸಿ, ಬೇರೂರಿರುವ ಶ್ರೇಣೀಕೃತ ಸಮಾಜಕ್ಕೆ ಸವಾಲು ಒಡ್ಡುವುದಾಗಿತ್ತು. ಹಾಗೆಯೇ ಗಣತಂತ್ರ ಪ್ರಭುತ್ವದ ಅಧಿಕಾರವನ್ನು ಸಹ ಸೀಮಿತಗೊಳಿಸಿತು.

ಸಂವಿಧಾನದ ಮೂರನೇ ಭಾಗ ಮೂಲಭೂತ ಹಕ್ಕುಗಳನ್ನು ಒದಗಿಸುವ ಮೂಲಕ ಪ್ರಭುತ್ವದ ನಿರಂಕುಶ ಅಧಿಕಾರಕ್ಕೆ ಮಿತಿ ಹೇರಿತು. ಇದರಲ್ಲಿ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ, ಸಂಘ ಸ್ಥಾಪಿಸುವ, ಅಪರಾಧಿಕ ಕಾನೂನುಗಳಿಂದ ಸಂರಕ್ಷಣೆ ಪಡೆಯುವ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು ಒಳಗೊಂಡಿವೆ.

ಒಂದೊಮ್ಮೆ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲಿ ಪ್ರಜೆಗಳು ನೇರವಾಗಿ ಸುಪ್ರೀಂ ಕೋರ್ಟ್ ಕದ ಬಡಿಯುವ ಹಕ್ಕನ್ನು ಅನುಚ್ಛೇದ 32 ಒದಗಿಸಿಕೊಟ್ಟಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಇದನ್ನು ಸಂವಿಧಾನದ ಹೃದಯ ಹಾಗೂ ಆತ್ಮ ಎಂದು ಬಣ್ಣಿಸಿದ್ದಾರೆ. ಇದರ ಮೂಲಕ ದೇಶದ ಸಾಮಾನ್ಯ ಪ್ರಜೆಗೂ ಸಹ ಪ್ರಭುತ್ವವನ್ನು ಪ್ರಶ್ನಿಸುವ ಅವಕಾಶ ಸಿಕ್ಕಿದೆ. ಹೀಗಾಗಿ ಕಾನೂನನ್ನು ಸಹ ಪ್ರಶ್ನಿಸಬಹುದಾಗಿದೆ.

ಇದೇ ಬಗೆಯಲ್ಲಿ ಸಾಮಾಜಿಕ ಸಾಮರ್ಥ್ಯ ಕಾಪಾಡಿಕೊಂಡು ಹೋಗಲು ಪ್ರತಿಯೊಬ್ಬರು ಸಂವಿಧಾನದಲ್ಲಿರುವ ನೈತಿಕ, ತಾತ್ವಿಕ ಶಕ್ತಿ ಹಾಗೂ ಚೈತನ್ಯವನ್ನು ಅವಾಹಿಸಿಕೊಳ್ಳಬೇಕಿದೆ. ಸಮರ್ಥ ಆಡಳಿತ, ಸಮಾಜದ ವಿಕಸನಕ್ಕೆ ನೈಸರ್ಗಿಕ ನ್ಯಾಯದ ತತ್ವ, ನ್ಯಾಯಪರತೆ, ಉತ್ತಮ ಆತ್ಮಸಾಕ್ಷಿ ಅಗತ್ಯ ಪರಿಕರಗಳಾಗಿವೆ. ಹೀಗಾಗಿ ಸಮಾಜವನ್ನು ಋಜು ಮಾರ್ಗದಲ್ಲಿ ಮುಂದುವರಿಯುವಂತೆ ಎಲ್ಲರೂ ಕರ್ತವ್ಯ ನಿಷ್ಠರಾಗಬೇಕು. ಸಮಾಜದೊಳಗಿನ ಸೂಕ್ಷ್ಮ ವ್ಯತ್ಯಾನಗಳಿಗೆ ಸಂವಿಧಾನವನ್ನು ದೂಷಿಸಬಾರದು. ಶಾಸಕಾಂಗ ಅಲಸ್ಯಕೊಳಗಾಗಿ, ಕಾರ್ಯಾಂಗದ ನಿಷ್ಕ್ರಿಯತೆಗೊಳಗಾದರೆ ನ್ಯಾಯಾಂಗ ಅತಿಕ್ರಮಣ ಕಂಡು ಬಂದಾಗ ಕರ್ಮಚಾರಿಗಳು ಸಂವಿಧಾನದ ಅಗತ್ಯ ತತ್ವಗಳು ಹಾಗೂ ಮೌಲ್ಯಗಳನ್ನು ಪಾಲಿಸಬೇಕು.

ಈ ಲೇಖನ ಓದಿದ್ದೀರಾ?: ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ ಅಂದಿನ ಐತಿಹಾಸಿಕ ನಿಲುವುಗಳ ಅರಿವಿದೆಯೇ?

ಇನ್ನೂ ಸ್ವಾತಂತ್ರ್ಯ ಎಂಬುದು ಎಂದಿಗೂ ಕಾರ್ಯಾಂಗದ ಮರ್ಜಿಗೆ ಒಳಪಡುವುದಿಲ್ಲ. ಮುಖ್ಯವಾಗಿ ರಾಜಕೀಯ ಸ್ವಾತಂತ್ರ್ಯ ಹೊರತುಪಡಿಸಿ ಜನರ ಘನತೆಗೆ ಸಂವಿಧಾನ ಬದ್ಧವಾಗಿದೆ. ಯಾವ ಸಮಾಜದಲ್ಲಿ ಜಾತೀಯತೆ ತಾಂಡವ ಆಡುತ್ತಿದೆಯೋ, ಯಾವ ಸಮಾಜದಲ್ಲಿ ಜನರನ್ನು ಪಶುಗಳಂತೆ ದುಡಿಸಿಕೊಳ್ಳಲಾಗುತ್ತಿದೆಯೋ ಅಂತಹ ಸಮಾಜಕ್ಕೆ ಇಂತಹ ನಾಂವಿಧಾನಿಕ ಹಕ್ಕುಗಳು ಕಾಯಕಲ್ಪ ಕೊಟ್ಟಿತು. ಇದರೊಂದಿಗೆ ಸಂವಿಧಾನದ ಅನುಚ್ಛೇದ 17 ಅಸ್ಪೃಶ್ಯತೆಯನ್ನು ನಿಷೇಧಿಸಿತು. ಇದರಿಂದಾಗಿಯೇ ಅಸ್ಪೃಶ್ಯತೆ ಆಚರಣೆ ದಂಡನೀಯವಾಗಿದೆ. ಹಾಗೆಯೇ ಅನುಚ್ಛೇದ 23 ಬಿಕ್ಷಾಟನೆ ಸೇರಿದಂತೆ ಬಲವಂತದ ದುಡಿಮೆಯನ್ನು ನಿಷೇಧಿಸಿದೆ. ಅನುಚ್ಛೇದ 21 ಬದುಕುವ ಹಕ್ಕು ಹಾಗೂ ವ್ಯಕ್ತಿಗತ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದೆ. ನಂತರ ಇದನ್ನು ಸುಪ್ರೀಂಕೋರ್ಟ್ ಪುನರ್ ಅರ್ಥ ವಿವರಣೆ ಮಾಡುವ ಮೂಲಕ ಘನತೆ, ಜೀವನೋಪಾಯ, ಆರೋಗ್ಯ ಹಾಗೂ ಖಾಸಗೀತನದ ಸೇರ್ಪಡೆ ಮಾಡಿತು. ಇಂತಹ ನಿಬಂಧನೆಗಳು ಘನತೆಯನ್ನು ಖಾತ್ರಿಪಡಿಸುವ ಮೂಲಕ ದಿನನಿತ್ಯದ ಸಾಮಾಜಿಕ ಜೀವನವನ್ನು ಪುನರ್ ರೂಪಿಸಿದೆ. ಇಷ್ಟಕ್ಕೂ ಇಂತಹ ಘನತೆ ಒಂದು ಸವಲತ್ತು ಅಲ್ಲ. ಬದಲಿಗೆ ಸಂವಿಧಾನಿಕ ಹಕ್ಕಾಗಿದೆ. ಮಾನವ ಘನತೆಯೊಂದಿಗೆ ಸಂವಿಧಾನದ ಧರ್ಮ ನಿರಪೇಕ್ಷ ದರ್ಶನವನ್ನು ದೃಢಪಡಿಸಿದೆ. ಭಾರತದ ವೈವಿಧ್ಯಮಯ ಸಂಸ್ಕೃತಿಯ ತಳಹದಿಯಲ್ಲಿ ಭಾರತದ ಧಾರ್ಮಿಕ ಧೋರಣೆಯನ್ನು ಪುನ‌ರ್ ರೂಪಿಸಿದೆ.

ನಮ್ಮ ದೇಶ ಸದಾ “ನ್ಯಾಯ” ಹಾಗೂ “ಸಮಾನತೆ”ಯನ್ನು ಎತ್ತಿ ಹಿಡಿಯುತ್ತಿದೆ, ಜೊತೆಗೆ ನೀಡುವ ಎಲ್ಲಾ ತೀರ್ಪಿನಲ್ಲಿಯೂ ಸಾಂವಿಧಾನಿಕ ತತ್ವದಂತೆ ಸಾಗುತ್ತಿದೆ. ಒಂದು ಸ್ವತಂತ್ರ ದೇಶದ ಸಾಮಾಜಿಕ ಜೀವನ ಸಂವಿಧಾನದ ದಿನದ ಆಚರಣೆಯೊಂದಿಗೆ ಸಂಕೇತಿಸುತ್ತದೆ ಎಂಬುದು ಅಕ್ಷರಷಃ ಸತ್ಯ. ಸರ್ವೋಚ್ಚ ನ್ಯಾಯಾಲಯ ಕಳೆದ ಎಂಟು ದಶಕಗಳಿಂದ ಜನರ ನ್ಯಾಯಾಲಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ನ್ಯಾಯಾಲಯದ ತೀರ್ಪುಗಳಿಗ ಆನ್ ಲೈನ್ ನಲ್ಲಿ ಅದಷ್ಟು ಬೇಗ ಲಭ್ಯವಾಗುವಂತೆ ಮಾಡಬೇಕಿದೆ. ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಮತ್ತು ಮೆಷೀನ್ ಲರ್ನಿಂಗ್ ಇ ಸೇವಾ ಕೇಂದ್ರಗಳನ್ನು ಎಲ್ಲಾ ಬಗೆಯ ನ್ಯಾಯಾಲಯಗಳಲ್ಲಿ ಸ್ಥಾಪಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕಿದೆ.

ಇಷ್ಟಕ್ಕೂ ಸಂವಿಧಾನವನ್ನು ಧರ್ಮದ ಆಧಾರದ ಮೇಲೆ ದೇಶವನ್ನು ರೂಪಿಸಿಲ್ಲ. ಬದಲಿಗೆ ಸಾರ್ವಜನಿಕ ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಒತ್ತು ನೀಡಿ ರೂಪಿಸಿದೆ, ಹೀಗಾಗಿಯೇ ಪ್ರತಿಯೊಂದು ಧರ್ಮವನ್ನು ಸಮಾನ ಗೌರವದಿಂದ ಕಾಣಬೇಕಾಗುತ್ತದೆ, ಇದೇನೆ ಇರಲಿ ಸಮಾಜದಲ್ಲಿ ಹುದುಗಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹೋಗಲಾಡಿಸದೆ ರಾಜಕೀಯ ಸಮಾನತೆ ತರುತ್ತೇವೆ ಎಂಬುದು ಭಾಷಣಕ್ಕೆ ಸೀಮಿತವಾಗಿ ಉಳಿಯುತ್ತದೆ. ಸಂವಿಧಾನದ ಪ್ರಸ್ತಾವನೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಒದಗಿಸಿದರೆ, ರಾಜ್ಯ ನಿರ್ದೇಶಕ ತತ್ವಗಳು ಶಿಕ್ಷಣ, ಆರೋಗ್ಯ, ನ್ಯಾಯತವಾದ ವೇತನ ಹಾಗೂ ದುರ್ಬಲ ವರ್ಗಗಳಿಗೆ ರಕ್ಷಣೆ ಒದಗಿಸುವುದನ್ನು ಖಾತ್ರಿಪಡಿಸುತ್ತದೆ. ನಮ್ಮ ಆಡಳಿತಾಂಗ ಭೂ ಸುಧಾರಣೆ, ಶ್ರಮಿಕರ ಕಾನೂನು ಒಳಗೊಂಡಂತೆ ಸಕಾರಾತ್ಮಕ ಕ್ರಮಗಳನ್ನು ಹಾಗೂ ಜನಪರ ನೀತಿ ರೂಪಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ತನ್ನೊಂದಿಗೆ ಜೊತೆ ಜೊತೆಯಾಗಿ ಸಾಗುತ್ತಿರುವ ಅಸಮಾನತೆಯನ್ನು ಸಹಿಸುವುದಿಲ್ಲ. ಇದೇನೇ ಇರಲಿ ಸಮರೂಪತೆ ಇರದ ಏಕತೆಯ ಭರವಸೆ ಸಹ ಇಲ್ಲಿ ಅಷ್ಟೇ ಮುಖ್ಯವಾದ ವಿಚಾರ ಎಂಬುದನ್ನು ಮರೆಯಬಾರದು. ನಮ್ಮ ದೇಶ ಭಾಷೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಮಾನ್ಯತೆ ಮಾಡಿದೆ. ಹಾಗೆಯೇ ಅನುಚ್ಛೇದ 29 ಹಾಗೂ 30ರ ಅಡಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಲಾಗಿದೆ. ಇಂತಹ ಸಾಂವಿಧಾನಿಕ ಭರವಸೆಗಳನ್ನು ಪ್ರತಿ ವರ್ಷ ಸಂವಿಧಾನದ ದಿನದಂದು ಸ್ಮರಿಸುತ್ತೇವೆ. ಅದರಂತೆ ನಡೆಯುವುದನ್ನು ಮಾತ್ರ ಕಲಿಯುತ್ತಿಲ್ಲ, ಕಲಿಯಬೇಕಿದೆ. ಗಣರಾಜ್ಯೋತ್ಸವ ದೇಶದ ಸಂವಿಧಾನಿಕ ಬುನಾದಿ ನೆನಪಿಸುವ ದಿನ ಇಂದಾಗಿದೆ. ಸಂಭ್ರಮಾಚರಣೆಗೂ ಮುನ್ನ ದೇಶ ಲಿಖಿತ ಸಂವಿಧಾನದ ಮೂಲಕ ಕಾನೂನಿನ ಮುಂದೆ ಸಮಾನತೆ, ವೈಯಕ್ತಿಕ ಹಕ್ಕುಗಳು, ಘನತೆ, ಧರ್ಮ ನಿರಪೇಕ್ಷತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಇದು ಬದ್ಧವಾಗಿರುವುದನ್ನು ತೋರಿಸಬೇಕಿದೆ.

ಈ ಲೇಖನ ಓದಿದ್ದೀರಾ?: ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ

ಇನ್ನಿಂದು ನಗರ ಪ್ರದೇಶಗಳಲ್ಲಿ ಯಾರೊಬ್ಬರೂ ನೇರವಾಗಿ ಹಕ್ಕುಗಳನ್ನು ನಿರಾಕರಿಸುತ್ತಿಲ್ಲ ವಾದರೂ ಜನಪರ ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ. ನಮ್ಮಲ್ಲಿಂದು ಯಂತ್ರಗಳು ದೇಶವನ್ನು ಆಳಲು ಆರಂಭಿಸುತ್ತವೆ ಎಂಬುದೇ ಇಲ್ಲಿ ಸಮಸ್ಯೆಯಲ್ಲ. ಬದಲಿಗೆ ಯಂತ್ರಗಳು ದೇಶದ ಬಗ್ಗೆ ನಿರ್ಧರಿಸುತ್ತದೆ, ಹಾಗೆಯೇ ಅದು ಕೈಗೊಳ್ಳುವ ನಿರ್ಧಾರಕ್ಕೆ ಯಾರು ಬದ್ಧರಾಗದಿರುವುದೇ ಸಮಸ್ಯೆಯಾಗಿದೆ. ಇದಕ್ಕೊಂದು ಉದಾಹರಣೆ ಎಂದರೆ ಬ್ಯಾಂಕ್ ಸಾಲ ಕೊಡಲು ನಿರಾಕರಿಸುತ್ತದೆ. ಒಬ್ಬ ವಿದ್ಯಾರ್ಥಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯುವುದಿಲ್ಲ. ಜನಕಲ್ಯಾಣ ಯೋಜನೆಯನ್ನು ಕಾರಣವೇ ಇಲ್ಲದೆ ಸ್ಥಗಿತಗೊಳಿಸಲಾಗುತ್ತದೆ. ಸ್ಪಷ್ಟ ಕಾರಣ ನೀಡದೆ ಒಬ್ಬ ನಾಗರಿಕನನ್ನು ಅನರ್ಹ ಗೊಳಿಸಲಾಗುತ್ತದೆ. ಹೀಗೆ ಪ್ರತಿಯೊಂದು ನಿರ್ಧಾರವೂ ಸಣ್ಣದಾಗಿ ಕಾಣಿಸುತ್ತದೆ. ಪ್ರತಿಯೊಂದುಕ್ಕೂ ಒಂದೊಂದು ಸಬೂಬು ಇರುತ್ತದೆ. ಅದು ತಾಂತ್ರಿಕ ದೋಷ, ನೀತಿಯ ಮಿತಿ, ವ್ಯವಸ್ಥೆಯ ವರ್ತನೆ ಇವೆಲ್ಲವನ್ನೂ ಒಗ್ಗೂಡಿಸಿ ಕಂಡಾಗ ಹೊಸ ರಾಜಕೀಯ. ವ್ಯವಸ್ಥೆ ಕಾಣಿಸುತ್ತದೆ. ಹೀಗೆ ನಮ್ಮ ವ್ಯವಸ್ಥೆ ದೇಶವಾಸಿಗಳನ್ನು ಅಳುವುದಕ್ಕಿಂತ, ನಿರ್ವಹಿಸುವ ಕೆಲಸ ಮಾಡುತ್ತಿದೆ ಗೊತ್ತಿರಲಿ ನಿರ್ವಹಣೆ ಎಂದಿಗೂ ಪ್ರಜಾಪ್ರಭುತ್ವ ಆಗುವುದಿಲ್ಲ, ಇಷ್ಟಕ್ಕೂ ಪ್ರಜಾಪ್ರಭುತ್ವ ಎಂಬುದು ಗದ್ದಲದಿಂದ ಕೂಡಿರುತ್ತದೆ. ಕೆಲವೊಮ್ಮೆ ಕೋಪವನ್ನು ತರಿಸುತ್ತದೆ. ವಾದಗಳನ್ನು ಹುಟ್ಟುಹಾಕುತ್ತದೆ. ಇದು ಪ್ರಶ್ನಿಸುವ ಮತ್ತು ವಿರೋಧಿಸುವ ಅವಕಾಶವನ್ನು ನೀಡುತ್ತದೆ. ಹಾಗಂತ ಇದುವೇ ದೋಷವಲ್ಲ ನ್ಯಾಯಸಮ್ಮತತೆ ಬೇಡುವ ಬೆಲೆ ಇದಾಗಿದೆ. ನಮ್ಮ ವ್ಯವಸ್ಥೆ ಸಂಘರ್ಷವನ್ನು ದ್ವೇಷಿಸುತ್ತದೆ.

ಇದೇನೆ ಇರಲಿ, ನಮ್ಮದೇ ಸಂವಿಧಾನ ಇಂದು ಅಸ್ತಿತ್ವದಲ್ಲಿದೆ. ಇದು ಕೆಲಸ ಮಾಡುತ್ತಿದೆ ಎಂಬ ಸತ್ಯದೊಂದಿಗೆ ನಾವು ಸಂಭ್ರಮಿಸುತ್ತಿದ್ದೇವೆ. ನ್ಯಾಯಾಲಯಗಳು ಸಹ ಕಾನೂನು ಪ್ರಕ್ರಿಯೆಯನ್ನು ಸರಳಗೊಳಿಸಬೇಕಿದೆ. ನಮ್ಮ ಸಂವಿಧಾನ ನಿರ್ಮಾಪಕರುಗಳು “ಸ್ವಾತಂತ್ರ”, “ಸಮಾನತೆ” ಹಾಗೂ “ಭಾತೃತ್ವ”ಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದಾಗಿಯೇ ತಮ್ಮ ಹಕ್ಕುಗಳ ರಕ್ಷಣೆಗಾಗಿ ಜನ ನ್ಯಾಯಾಲಯಕ್ಕೆ ಧಾವಿಸುತ್ತಿದ್ದಾರೆ. ನಮ್ಮ ನ್ಯಾಯಾಂಗ ಸ್ವತಂತ್ರ ಕಾರ್ಯಾಚರಣೆ ಮಾಡುವುದರ ಬಗ್ಗೆ ನಮ್ಮ ಸಂವಿಧಾನ ನಿರ್ಮಾಪಕರು ಖಾತ್ರಿ ನೀಡಿದ್ದಾರೆ. ಅಲ್ಲದೆ ಸಂವಿಧಾನ ಕಾನೂನಿನ ನಿಯಮವನ್ನು ಎತ್ತಿ ಹಿಡಿದಿದೆ. ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸಿದೆ. ಸಮಾನತೆಯ ಹಕ್ಕುವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಪರಿಹಾರದ ಹಕ್ಕುಗಳ ಮೂಲಕ ನಾಗರಿಕರನ್ನು ಸಬಲೀಕರಿಸಿದೆ. ಯಾವುದೇ ಸರ್ವಾಧಿಕಾರ ಪ್ರಭುತ್ವದಿಂದ ಇಂತಹ ಉಲ್ಲಂಘನೆಯಾಗದೆ, ಪವಿತ್ರವಾಗಿಯೇ ಉಳಿಯುವಂತೆ ಹಕ್ಕುಗಳನ್ನು ನ್ಯಾಯ ಸಮ್ಮತಗೊಳಿಸಲಾಗಿದೆ. ಎಲ್ಲರನ್ನೂ ಒಳಗೊಳ್ಳುವ “ಸಾಮಾಜಿಕ ನ್ಯಾಯ” ಉತ್ತೇಜಿಸುವ ಹಾಗೂ ಆಚರಣೆಯ ಅಭಿವೃದ್ಧಿಗೆ ತಾನು ಕೊಡುಗೆ ನೀಡುವುದಾಗಿ ಸರ್ಕಾರದ ಇಲಾಖೆಗಳು ಖಾತ್ರಿಪಡಿಸುವ ಅಗತ್ಯವಿದೆ ಸಂವಿಧಾನ ಎಂಬುದು ಒಂದು ಯಂತ್ರದಂತೆ ಜೀವರಹಿತ ವಸ್ತು ಆದರೆ ಇದನ್ನು ನಿಯಂತ್ರಿಸುವುದರಿಂದ ಇದಕ್ಕೆ ಜೀವ ಬರುತ್ತದೆ. ನಮ್ಮಲ್ಲಿ ಕೋಮುವ್ಯತ್ಯಾಸ ಇಲ್ಲದೆ, ಜಾತಿ ವ್ಯತ್ಯಾಸವಿಲ್ಲದೆ, ಭಾಷೆ ವ್ಯತ್ಯಾಸವಿಲ್ಲದೆ, ಪ್ರಾಂತೀಯ ವ್ಯತ್ಯಾಸ ಕೂಡ ಇದೆ. ಹೀಗಾಗಿಂದು ಉತ್ತಮ ಚಾರಿತ್ರ್ಯ ಉಳ್ಳ ದಾರ್ಶನಿಕರು ಹಳ್ಳಿಯಿಂದ ದಿಲ್ಲಿವರೆಗೆ ದೇಶದ ಹಿತಾಸಕ್ತಿ ಬಲಿಕೊಡದವರ ಅಗತ್ಯ ಇದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಡಿಲಿಮಿಟೇಷನ್‌’ಗೆ ಕೇಂದ್ರದ ತಂತ್ರ: ‘ಮುಂಗಾರು ಅಧಿವೇಶನ’ ವಿಸ್ತರಣೆಗೆ ಕಸರತ್ತು?

ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಸಮಯದ ಅಭಾವದ ಹಿನ್ನೆಲೆಯಲ್ಲಿ, ಪ್ರತ್ಯೇಕ ಚಳಿಗಾಲದ...

ಕೋಲ್ಕತ್ತ ಪಾಲಿಕೆಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ: ವಿಪಕ್ಷಗಳ ಆಕ್ರೋಶ

ಪಶ್ಚಿಮ ಬಂಗಾಳದ ಕೋಲ್ಕತ್ತ ಮಹಾನಗರ ಪಾಲಿಕೆಯಲ್ಲಿ (ಕೆಎಂಸಿ) ಇತರ ರಾಷ್ಟ್ರೀಯ ನಾಯಕರ...

‘ವೋಟ್‌ಚೋರಿ’ ವಿರೋಧಿಸಿ ಇಂದು ದೇಶಾದ್ಯಂತ ಕಾಂಗ್ರೆಸ್ ‘ಸಂವಿಧಾನ ರಕ್ಷಾ ಪಾದಯಾತ್ರೆ’!

ಸಂವಿಧಾನ ದಿನವಾದ ಇಂದು (ನವೆಂಬರ್ 26) ದೇಶಾದ್ಯಂತ ಆಡಳಿತಾರೂಢ ಸರ್ಕಾರದ ವಿರುದ್ಧ...

ಕುಗ್ಗುತ್ತಿರುವ ಸಂಸತ್ ಕಲಾಪ: ಮೋದಿ ಸರ್ಕಾರದ ಅವಧಿಯಲ್ಲಿ ಕಡಿಮೆಯಾದ ಸದನದ ದಿನಗಳು

ಮುಂದಿನ ಸಂಸತ್ ಅಧಿವೇಶನವನ್ನು ಯಾವಾಗ ಕರೆಯಬೇಕು ಎಂಬ ಬಗ್ಗೆ ನರೇಂದ್ರ ಮೋದಿ...