ನಿಕೋಬಾರ್ ಅರಣ್ಯ ಹಕ್ಕು ವಿವಾದ: ಪ್ರಮಾಣಪತ್ರ ಸಲ್ಲಿಸಲು ಕೇಂದ್ರಕ್ಕೆ ಡಿ.10ರವರೆಗೆ ಗಡುವು

Date:

ಗ್ರೇಟ್ ನಿಕೋಬಾರ್ ಯೋಜನೆಗಾಗಿ 166 ಚದರ ಕಿಲೋಮೀಟರ್ ಅರಣ್ಯ ಭೂಮಿಯನ್ನು ವರ್ಗಾಯಿಸಲು ನಡೆಸಲಾದ ಅರಣ್ಯ ಹಕ್ಕುಗಳ ಕಾಯ್ದೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಹೆಚ್ಚುವರಿ ವಿವರ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್‌ನ ಪೋರ್ಟ್ ಬ್ಲೇರ್ ಸರ್ಕೀಟ್ ಪೀಠವು ಡಿಸೆಂಬರ್ 10ರವರೆಗೆ ಕಾಲಾವಕಾಶ ನೀಡಿದೆ. ಮಾಜಿ ನಾಗರಿಕ ಸೇವಾ ಅಧಿಕಾರಿ ಮೀನಾ ಗುಪ್ತಾ ಸಲ್ಲಿಸಿದ್ದ ಈ ಅರ್ಜಿ ಹಾಗೂ ಇದಕ್ಕೆ ಸಂಬಂಧಿಸಿದ ಇತರ ಎರಡು ಅರ್ಜಿಗಳ ಅಂತಿಮ ವಿಚಾರಣೆಯನ್ನು ಪೀಠವು ಜನವರಿಗೆ ಮುಂದೂಡಿದೆ.

- Advertisement -

ಮುಖ್ಯ ನ್ಯಾಯಮೂರ್ತಿ ರವೀಂದ್ರ ವಿಠಲರಾವ್ ಘುಗೆ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರನ್ನೊಳಗೊಂಡ ಪೀಠವು ಬುಧವಾರ ಈ ಆದೇಶ ನೀಡಿತು. ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಹಾಗೂ ಅರ್ಜಿದಾರರ ಪರ ವಕೀಲರ ವಾದವನ್ನು ಪೀಠ ಆಲಿಸಿತು. ಕೇಂದ್ರದ ಪರ ವಾದಿಸಿದ ಬ್ಯಾನರ್ಜಿ, ದ್ವೀಪ ಸಮೂಹಕ್ಕೆ 2006ರ ಅರಣ್ಯ ಹಕ್ಕುಗಳ ಕಾಯ್ದೆ ಅಲ್ಲ, ಬದಲಾಗಿ 1956ರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (ಮೂಲನಿವಾಸಿ ಬುಡಕಟ್ಟುಗಳ ರಕ್ಷಣೆ) ನಿಯಂತ್ರಣವು ಅನ್ವಯಿಸುತ್ತದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...

ಈ ನಿಲುವು ಹಿಂದಿನ ಎಲ್ಲ ಸರ್ಕಾರಗಳ ಅವಧಿಯಲ್ಲೂ ಸ್ಥಿರವಾಗಿದ್ದು, ಈ ಕುರಿತು ಅಧಿಕೃತ ಪತ್ರಗಳು ಮತ್ತು ಸಂಸತ್ತಿನ ಉತ್ತರಗಳಿವೆ ಎಂದು ಬ್ಯಾನರ್ಜಿ ಪ್ರತಿಪಾದಿಸಿದರು. ಈ ವಿಚಾರವಾಗಿ ಪೂರಕ ಪ್ರಮಾಣಪತ್ರ ಸಲ್ಲಿಸಲು ಡಿಸೆಂಬರ್ 10ರವರೆಗೆ ಸಮಯ ನೀಡಿದ ಪೀಠ, ಜನವರಿ ಎರಡನೇ ವಾರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಗಲಾಥಿಯಾ ಮತ್ತು ಕ್ಯಾಂಪ್‌ಬೆಲ್ ಬೇ ರಾಷ್ಟ್ರೀಯ ಉದ್ಯಾನಗಳ ಬಫರ್ ವಲಯ ಕಡಿತ ಪ್ರಶ್ನಿಸಿ ಗುಪ್ತಾ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣಾ ಯೋಗ್ಯತೆ ಕುರಿತು ಆಕ್ಷೇಪಣೆ ಸಲ್ಲಿಸಲು ಕೇಂದ್ರಕ್ಕೆ ಅವಕಾಶ ನೀಡಿದೆ.

ಈ ನಡುವೆ, ಅರ್ಜಿಗಳ ವಿಚಾರಣಾ ಯೋಗ್ಯತೆಯ ವಿಚಾರವನ್ನು ಹೈಕೋರ್ಟ್ ಸರ್ಕೀಟ್ ಪೀಠವು ಮೇ ತಿಂಗಳ ಆದೇಶದಲ್ಲೇ ಇತ್ಯರ್ಥಪಡಿಸಿ ವಿಚಾರಣೆಗೆ ಒಪ್ಪಿಗೆ ನೀಡಿತ್ತು ಎಂದು ಅರ್ಜಿದಾರರ ಪರ ವಕೀಲರು ಗಮನ ಸೆಳೆದರು. ಆ ಆದೇಶ ಪ್ರಶ್ನಿಸಿ ಕೇಂದ್ರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಅರ್ಜಿ ಪುರಸ್ಕರಿಸಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಆದಷ್ಟು ಶೀಘ್ರ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.

ಅರಣ್ಯ ಹಕ್ಕುಗಳ ಕಾಯ್ದೆಯಡಿ ನಡೆದ ಪ್ರಕ್ರಿಯೆಗಳ ಸಿಂಧುತ್ವವನ್ನು ಮೀನಾ ಗುಪ್ತಾ ಪ್ರಶ್ನಿಸಿದ್ದಾರೆ. ಯೋಜನೆಗೆ ಅರಣ್ಯ ಭೂಮಿ ನೀಡಲು ಸಮ್ಮತಿಸಿ 2022ರ ಆಗಸ್ಟ್‌ನಲ್ಲಿ ಮೂರು ಗ್ರಾಮ ಸಭೆಗಳು ಕೈಗೊಂಡ ನಿರ್ಣಯಗಳನ್ನು ಅವರು ಆಕ್ಷೇಪಿಸಿದ್ದಾರೆ. ಗ್ರಾಮ ಸಭೆ ನಿರ್ಣಯಗಳನ್ನು ಪರಿಶೀಲಿಸುವ ಉಪ-ವಿಭಾಗೀಯ ಮಟ್ಟದ ಸಮಿತಿಯ ರಚನೆ ಹಾಗೂ ಭೂಮಿ ವರ್ಗಾವಣೆಗಾಗಿ ನೀಡಲಾದ ಅರಣ್ಯ ಹಕ್ಕುಗಳ ದೃಢೀಕರಣ ಪ್ರಮಾಣಪತ್ರದ ಸಿಂಧುತ್ವವನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

₹92,000 ಕೋಟಿ ವೆಚ್ಚದ ಯೋಜನೆಯಡಿ ಸಮಗ್ರ ಟೌನ್‌ಶಿಪ್, ಗಲಾಥಿಯಾ ಕೊಲ್ಲಿಯಲ್ಲಿ ಟ್ರಾನ್ಸ್‌ಶಿಪ್‌ಮೆಂಟ್ ಕಂಟೇನರ್ ಬಂದರು, ಸೌರ ಮತ್ತು ಅನಿಲ ಆಧಾರಿತ ವಿದ್ಯುತ್ ಸ್ಥಾವರ ಹಾಗೂ ಸೇನಾ ಮತ್ತು ನಾಗರಿಕ ಬಳಕೆಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ಉದ್ದೇಶಿಸಿದೆ. ಇತ್ತೀಚಿನ ಕರಡು ಮಾಸ್ಟರ್ ಪ್ಲಾನ್ ಪ್ರಕಾರ, ಪ್ರವಾಸೋದ್ಯಮವನ್ನು ದ್ವೀಪದ ಬೆನ್ನೆಲುಬಾಗಿ ಬಿಂಬಿಸಲಾಗಿದ್ದು, ಸೇವಾ ವಲಯ ಮತ್ತು ಬಂದರು ಆಧಾರಿತ ಹಣಕಾಸು ಕೇಂದ್ರದ ಬೆಂಬಲದೊಂದಿಗೆ ಗ್ರೀನ್‌ಫೀಲ್ಡ್ ಕರಾವಳಿ ನಗರ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಡಿಲಿಮಿಟೇಷನ್’ ಮಸೂದೆ ಬೆಂಬಲಕ್ಕಾಗಿ ಸಂಸದರಿಗೆ ₹150 ಕೋಟಿ ಆಮಿಷ: ಸಂಜಯ್ ರಾವತ್ ಆರೋಪ

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಪಡೆಯಲು ಭಾರತೀಯ ಜನತಾ ಪಕ್ಷವು (ಬಿಜೆಪಿ)...

ರಾಜಕಾರಣದಲ್ಲಿ ಮುಂದೆ ಬರಬೇಕೆಂದಿದ್ದರೆ ಮೋದಿ ಜೊತೆ ನಿಲ್ಲುವಂತೆ ಪ್ರಣಬ್ ಮುಖರ್ಜಿ ಸಲಹೆ ನೀಡಿದ್ದರು: ಸುವೇಂದು ಅಧಿಕಾರಿ

ರಾಜಕಾರಣದಲ್ಲಿ ಮುಂದೆ ಬರಬೇಕೆಂದಿದ್ದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ನರೇಂದ್ರ ಮೋದಿ...

‘ಆಶಾ’ಗಳು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ: ಆರೋಗ್ಯ ಸಚಿವ ಯು.ಟಿ ಖಾದರ್

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು...