ಬಿಹಾರ ಚುನಾವಣೆ | ಬಿಜೆಪಿ 1 ಕೋಟಿ ಉದ್ಯೋಗದ ಭರವಸೆ; 20 ವರ್ಷದಲ್ಲಿ ಆಗದ್ದು ಈಗ ಸಾಧ್ಯವೇ?

Date:

ಬಿಹಾರದಲ್ಲಿ 1 ಕೋಟಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುತ್ತೇವೆಂದು ಬಿಜೆಪಿ, ಅರ್ಥಾತ್‌ ಎನ್‌ಡಿಎ ಭರವಸೆ ನೀಡಿದೆ. ಅಂದಹಾಗೆ, ಬಿಹಾರದಲ್ಲಿ ಕಳೆದ 20 ವರ್ಷಗಳಿಂದ ನಿತೀಶ್‌ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವೇ ಬಹುತೇಕ ಆಡಳಿತ ನಡೆಸಿದೆ. ಈ 20 ವರ್ಷಗಳಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವು ಯುವಜನರಿಗೆ ಉದ್ಯೋಗ ಸೃಷ್ಟಿಸಲಿಲ್ಲ. ಉದ್ಯೋಗ ಕೊಡಲಿಲ್ಲ. ಇದೀಗ, 1 ಕೋಟಿ ಸರ್ಕಾರಿ ಉದ್ಯೋಗ ಒದಗಿಸುತ್ತೇವೆ ಎನ್ನುತ್ತಿದೆ.

- Advertisement -

‘ನೀವು ಎಲ್ಲರನ್ನೂ ಕೆಲವು ಸಮಯ ಮೂರ್ಖರನ್ನಾಗಿ ಮಾಡಬಹುದು, ಕೆಲವರನ್ನು ಎಲ್ಲ ಸಮಯದಲ್ಲೂ ಮೂರ್ಖರನ್ನಾಗಿಸಬಹುದು, ಆದರೆ, ಎಲ್ಲರನ್ನೂ ಎಲ್ಲ ಸಮಯದಲ್ಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’ – ಇದು ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು 1858ರಲ್ಲಿ ಹೇಳಿದ್ದ ಮಾತು. ಈ ಮಾತು ಬಿಜೆಪಿಗರಿಗೆ ಇಂದಿಗೂ ಅರ್ಥವಾದಂತೆ ಕಾಣುತ್ತಿಲ್ಲ. ಬಿಜೆಪಿ ಒಂದೇ ವಿಚಾರದಲ್ಲಿ ಎಲ್ಲರನ್ನೂ, ಎಲ್ಲ ಸಮಯದಲ್ಲಿಯೂ ಮೂರ್ಖರನ್ನಾಗಿ ಮಾಡಬಹುದೆಂದು ನಂಬಿಕೊಂಡಂತಿದೆ. ಜನರನ್ನು ಮರುಳು ಮಾಡಲು ಯತ್ನಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಬಿಹಾರ ಚುನಾವಣೆಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಯುವಜನರನ್ನು ಸೆಳೆಯಲು ‘ಉದ್ಯೋಗ ಸೃಷ್ಟಿ’ ಕುರಿತ ಪೊಳ್ಳು ಭರವಸೆಯನ್ನು ಮತ್ತೆ ಪ್ರಯೋಗಿಸಿದೆ. ಬಿಹಾರದ ಯುವಜನರಿಗೆ 1 ಕೋಟಿ ಸರ್ಕಾರಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದೆ. ಕಳೆದ 15 ವರ್ಷಗಳಿಂದ ಉದ್ಯೋಗ ಆಮಿಷದೊಂದಿಗೆ ಮತ್ತೆ-ಮತ್ತೆ ಯುವಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ನೋಡುತ್ತಿದೆ. ಆದರೆ, ದೇಶವಾಸಿಗಳು ಎಚ್ಚೆತ್ತಿದ್ದಾರೆ. ಮೋದಿ/ಬಿಜೆಪಿ/ಎನ್‌ಡಿಎ ಭರವಸೆಯನ್ನು ಟೀಕಿಸಿ, ಟ್ರೋಲ್ ಮಾಡುತ್ತಿದ್ದಾರೆ.

ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿ ಹುದ್ದೆಗಾಗಿ ಮೊದಲ ಬಾರಿಗೆ ಸ್ಪರ್ಧಿಸಿದಾಗ, ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಘೋಷಿಸಿದ್ದರು. ನಿರುದ್ಯೋಗದಿಂದ ಬಸವಳಿದಿದ್ದ ಯುವಜನರು ತಮಗೆ ಉದ್ಯೋಗಗಳು ದೊರೆಯುತ್ತವೆ ಎಂದು ಬಿಜೆಪಿಗೆ ಮತ ಚಲಾಯಿಸಿದರು. ಮೋದಿ ಅವರಿಗೆ ಅಧಿಕಾರ ನೀಡಿದರು. ಅಧಿಕಾರಕ್ಕೆ ಬಂದ ಮೋದಿ ಅವರು ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 22 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ಮೋದಿ ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ.

ಕೇಂದ್ರ ಸರ್ಕಾರವೇ ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, 2014ರಿಂದ 2023ರವರೆಗಿನ 9 ವರ್ಷಗಳಲ್ಲಿ ಮೋದಿ ಸರ್ಕಾರ ಸೃಷ್ಟಿಸಿದ ಉದ್ಯೋಗಗಳ ಸಂಖ್ಯೆ ಕೇವಲ 1.5 ಕೋಟಿ. ಅಂದರೆ, ಮೋದಿ ಅವರು ಭರವಸೆಯಂತೆ ಈ ಉದ್ಯೋಗಗಳು ಕೇವಲ 9 ತಿಂಗಳುಗಳಲ್ಲಿ ಸೃಷ್ಟಿಯಾಗಬೇಕಿತ್ತು. ಆದರೆ, ಅದಾಗಲಿಲ್ಲ. ಬದಲಾಗಿ, 1.5 ಕೋಟಿ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಸರ್ಕಾರವು 9 ವರ್ಷಗಳನ್ನು ತೆಗೆದುಕೊಂಡಿತು.

ಭಾರತದಲ್ಲಿನ ನಿರುದ್ಯೋಗ ಪ್ರಮಾಣವು ಮೋದಿ ಆಡಳಿತದಲ್ಲಿ ಕಳೆದ 45 ವರ್ಷಗಳಲ್ಲಿಯೇ ಅತ್ಯಧಿಕ ಹಂತಕ್ಕೆ ಏರಿಕೆಯಾಯಿತು. ಪ್ರಸ್ತುತ ನಿರುದ್ಯೋಗ ಪ್ರಮಾಣವು 7% ಇದೆ ಎಂದು ಹೇಳಲಾಗಿದೆ. ಯುವಜನರಲ್ಲಿನ ನಿರುದ್ಯೋಗ ದರವು 10% ಆಸುಪಾಸಿನಲ್ಲಿದೆ. ಮಾತ್ರವಲ್ಲದೆ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಪರಿಣಾಮ ಹಾಗೂ ಕೋವಿಡ್‌ ನಂತರದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಬಿಹಾರದ ನಿರುದ್ಯೋಗವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದು, 10.8% ಇದೆ. ಬಿಹಾರದ ಯುವಜನರು ಉದ್ಯೋಗ ಹರಸಿ ನಾನಾ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಅನ್ಯ ರಾಜ್ಯಗಳಿಗೆ ವಲಸೆ ಹೋಗುವವರ ಸಂಖ್ಯೆ ವಾರ್ಷಿಕ 50 ಲಕ್ಷವೆಂದು ಅಂದಾಜಿಸಲಾಗಿದೆ.

ಇಂತಹ ಸಮಯದಲ್ಲಿಯೂ, 2018ರಲ್ಲಿ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು, ‘ಪಕೋಡಾ ಮಾರುವುದು ಉದ್ಯೋಗವೇ’ ಎಂದು ಹೇಳಿದರು. ‘ಯುವಜನರಲ್ಲಿ ಕೌಶಲ್ಯವಿಲ್ಲ’ ಎಂದು ದೂರಿದರು. ನಿರುದ್ಯೋಗಕ್ಕೆ ಯುವಜನರೇ ಕಾರಣವೆಂದು ಹೇಳುತ್ತಲೇ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು. ಇದೀಗ, ಬಿಹಾರ ಚುನಾವಣೆಯಲ್ಲಿ ‘ರೀಲ್ಸ್‌ ಮಾಡುವುದು ಕೂಡ ಉದ್ಯೋಗ’ ಎಂದು ಭಾಷಣಗೈದಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?

ಈಗ, ಬಿಹಾರದಲ್ಲಿ 1 ಕೋಟಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುತ್ತೇವೆಂದು ಬಿಜೆಪಿ, ಅರ್ಥಾಥ್ ಎನ್‌ಡಿಎ ಭರವಸೆ ನೀಡಿದೆ. ಅಂದಹಾಗೆ, ಬಿಹಾರದಲ್ಲಿ ಕಳೆದ 20 ವರ್ಷಗಳಿಂದ ನಿತೀಶ್‌ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವೇ ಬಹುತೇಕ ಆಡಳಿತ ನಡೆಸಿದೆ. ಈ 20 ವರ್ಷಗಳಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವು ಯುವಜನರಿಗೆ ಉದ್ಯೋಗ ಸೃಷ್ಟಿಸಲಿಲ್ಲ. ಉದ್ಯೋಗ ಕೊಡಲಿಲ್ಲ. ಇದೀಗ, 1 ಕೋಟಿ ಸರ್ಕಾರಿ ಉದ್ಯೋಗ ಒದಗಿಸುತ್ತೇವೆ ಎನ್ನುತ್ತಿದೆ.

ಬಿಜೆಪಿಯ ಉದ್ಯೋಗ ಭರವಸೆಗಳನ್ನು ಯುವಜನರು ‘ಜುಮ್ಲಾ’ (ಖಾಲಿ ಭರವಸೆಗಳು) ಎಂದು ಕರೆದಿದ್ದಾರೆ. ಇಂತಹ ಹುಸಿ ಭರವಸೆಗಳಿಗೆ ನಾವು ಮರುಳಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. 20 ವರ್ಷಗಳಲ್ಲಿ ಬಿಹಾರದಲ್ಲಿ ಉದ್ಯೋಗಗಳನ್ನು ಯಾಕೆ ಸೃಷ್ಟಿಸಲಿಲ್ಲ. ಬಿಹಾರದ ಜನರು ಉದ್ಯೋಗಕ್ಕಾಗಿ ನಾನಾ ರಾಜ್ಯಗಳಿಗೆ ವಲಸೆ ಹೋಗುವಾಗ ಅವರನ್ನು ರಾಜ್ಯದಲ್ಲಿಯೇ ಉಳಿಸಿಕೊಂಡು, ಅವರಿಗೆ ಉದ್ಯೋಗ ಯಾಕೆ ನೀಡಲಿಲ್ಲ. ಮೋದಿ ಸರ್ಕಾರ ಹೇಳಿದ್ದ ವಾರ್ಷಿಕ 2 ಕೋಟಿ ಉದ್ಯೋಗಗಳ ಪೈಕಿ, ಬಿಹಾರದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ಬಿಹಾರಿಗರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂದು ಯುವಜನರು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ನಮ್ಮನ್ನು ಮೂರ್ಖರನ್ನಾಗಿಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, ಎನ್‌ಡಿಎ ಹೇಳುವಂತೆ ಬಿಹಾರದಲ್ಲಿ 5 ವರ್ಷಗಳಲ್ಲಿ 1 ಕೋಟಿ ಸರ್ಕಾರಿ ಉದ್ಯೋಗ ಒದಗಿಸಬೇಕೆಂದರೆ, ವಾರಕ್ಕೆ 40,000 ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಇಚ್ಛಾಶಕ್ತಿ ಬಿಜೆಪಿಗೆ ಇದೆಯೇ – ಉದ್ಯೋಗ ಸೃಷ್ಟಿ ಸಾಧ್ಯವೇ? ಅಬ್ರಹಾಂ ಲಿಂಕನ್ ಅವರ ಮಾತು ಬಿಜೆಪಿಗೆ ಇನ್ನಾದರೂ ಅರ್ಥವಾಗುವುದೇ?

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಇವು ಕೇವಲ ಉಪಚುನಾವಣೆಗಳು’: ನಂದಿಗ್ರಾಮ, ರೆಜಿನಗರ ‘ಎಸ್‌ಐಆರ್’ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಉಪಚುನಾವಣೆಗೂ ಮುನ್ನ ‘ವಿಶೇಷ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...

22 ನಿಮಿಷದ ಜಾಹೀರಾತು, 75 ಸಾವಿರ ದಂಡ! ಸಿನಿಪ್ಲೆಕ್ಸ್‌ ಕಿವಿಹಿಂಡಿದ ಗ್ರಾಹಕ ವೇದಿಕೆ

ಸಿನಿಮಾ ಶುರುವಾಗುವ ಮುನ್ನ 22 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳು ಮತ್ತು...

ಅಶೋಕ್ ಸಿಂಘಲ್: ಕೋಮುವಾದದ ರೂವಾರಿಯ ವೈಭವೀಕರಣ – ಮಾರಿಕೊಂಡ ಮಾಧ್ಯಮಗಳು

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಲ್ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ...