ದಿಲ್ಜಿತ್ ಇಂದೋರ್ ಕನ್ಸರ್ಟ್‌ಗೆ ಬಾಂಬ್ ಬೆದರಿಕೆ; ಹೈಕೋರ್ಟ್‌ಗೆ ಇಮೇಲ್!

Date:

ಪ್ರಸಿದ್ಧ ಪಂಜಾಬಿ ಗಾಯಕ ದಿಲ್ಜಿತ್ ದೊಸಾಂಜ್ ಅವರ ಮುಂಬರುವ ‘ಆರಾ ಟೂರ್’ ಕನ್ಸರ್ಟ್ ಸ್ಥಳದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠಕ್ಕೆ ಬೆದರಿಕೆ ಇಮೇಲ್ ಬಂದಿದೆ. ನವೆಂಬರ್ 15 ರಂದು ಇಂದೋರ್‌ನಲ್ಲಿ ನಡೆಯಲಿರುವ ಈ ಪ್ರದರ್ಶನದ ವೇದಿಕೆಯನ್ನೇ ಉಡಾಯಿಸುವುದಾಗಿ ಇಮೇಲ್‌ನಲ್ಲಿ ಎಚ್ಚರಿಸಲಾಗಿದ್ದು, ಇದರ ಬೆನ್ನಲ್ಲೇ ಪೊಲೀಸರು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಗ್ವಾಲಿಯರ್ ಹೈಕೋರ್ಟ್ ಮತ್ತು ನ್ಯಾಯಾಧೀಶರ ನಿವಾಸಗಳ ಸುತ್ತಲೂ ಪೊಲೀಸ್ ಬಂದೋಬಸ್ತ್ ತೀವ್ರಗೊಳಿಸಲಾಗಿದೆ.

- Advertisement -

ಗ್ವಾಲಿಯರ್ ಪೊಲೀಸ್ ವರಿಷ್ಠಾಧಿಕಾರಿ ಸುಕೀರ್ತಿ ಸೋಮವಂಶಿ ಅವರು ಬೆದರಿಕೆ ಇಮೇಲ್ ಬಂದಿರುವುದನ್ನು ದೃಢಪಡಿಸಿದ್ದು, ಇಮೇಲ್ ಕಳುಹಿಸಲಾದ ಐಪಿ (IP) ಅಡ್ರೆಸ್ ವಿದೇಶಿ ನೆಟ್‌ವರ್ಕ್‌ಗೆ ಲಿಂಕ್ ಆಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಇಮೇಲ್‌ನ ಮೂಲ ಸ್ಥಳವನ್ನು ಪತ್ತೆಹಚ್ಚಲು ಹಾಗೂ ಕಳುಹಿಸಿದ ವ್ಯಕ್ತಿಯನ್ನು ಗುರುತಿಸಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದಿಲ್ಜಿತ್ ಭಾರತ ಪ್ರವಾಸ ಅಕ್ಟೋಬರ್ 30 ರಂದು ದೆಹಲಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆರಂಭವಾದಾಗಿನಿಂದಲೂ ಇಂತಹ ಸರಣಿ ಬೆದರಿಕೆಗಳು ಬಂದಿದ್ದು, ನವೆಂಬರ್ 2 ರಂದು ಇಂದೋರ್‌ನ ಮೂರು ಖಾಸಗಿ ಶಾಲೆಗಳಿಗೆ ಹಾಗೂ ಮೇಯರ್ ನಿವಾಸಕ್ಕೂ ಕನ್ಸರ್ಟ್‌ಗೆ ಸಂಬಂಧಿಸಿದಂತೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

ಬೆದರಿಕೆಗಳ ಹೊರತಾಗಿಯೂ ತಮ್ಮ ಇಂದೋರ್ ಭೇಟಿ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ದಿಲ್ಜಿತ್ ದೊಸಾಂಜ್, “ನಾನು ನವೆಂಬರ್ 15 ರಂದು ಇಂದೋರ್‌ಗೆ ಖಂಡಿತ ಬರುತ್ತೇನೆ ಮತ್ತು ಅಲ್ಲಿಗೆ ಹೋದ ತಕ್ಷಣವೇ ಪ್ರಸಿದ್ಧ ಇಂದೋರ್ ಪೋಹಾ ಸವಿಯುತ್ತೇನೆ, ಸುದ್ದಿಯಲ್ಲಿ ಅನಾಹುತದ ಬಗ್ಗೆ ಕೇಳಿದ್ದೇನೆ, ಆದರೆ ಇದನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ” ಎಂದು ಖಡಕ್ ಸವಾಲು ಎಸೆದಿದ್ದಾರೆ.

ಈ ಸರಣಿ ಬೆದರಿಕೆಗಳ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಪ್ರತ್ಯೇಕತಾವಾದಿ ಖಲಿಸ್ತಾನಿ ಗುಂಪುಗಳ ಪಾತ್ರವನ್ನೂ ಶಂಕಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಕೆನಡಾದ ಕ್ಯಾಲ್ಗರಿಯ ಕನ್ಸರ್ಟ್‌ನಲ್ಲಿ ಖಲಿಸ್ತಾನಿ ಧ್ವಜ ಹಾರಿಸಿದವರನ್ನು ವೇದಿಕೆಯಿಂದಲೇ ತಡೆದು ಹೊರನಡೆಯುವಂತೆ ದಿಲ್ಜಿತ್ ಎಚ್ಚರಿಸಿದ್ದರು. ಕೆನಡಾ ಮೂಲದ ಖಲಿಸ್ತಾನ್ ತೀವ್ರಗಾಮಿ ಗುಂಪುಗಳು ಅಲ್ಲಿನ ಸ್ಥಳೀಯ ಸಂಸ್ಥೆಗಳನ್ನು ಬಳಸಿಕೊಂಡು ಹಿಂಸಾಚಾರಕ್ಕೆ ಹಾಗೂ ಉಗ್ರ ಕೃತ್ಯಗಳಿಗೆ ಹಣ ಸಂಗ್ರಹಿಸುತ್ತಿವೆ ಎಂದು ಕೆನಡಾ ಸೆಕ್ಯೂರಿಟಿ ಇಂಟೆಲಿಜೆನ್ಸ್ ಸರ್ವಿಸ್ (CSIS) ತನ್ನ ವರದಿಯಲ್ಲಿ ಈಗಾಗಲೇ ತಿಳಿಸಿದ್ದು, ಸದ್ಯ ಪೊಲೀಸರು ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಿದ್ದಾರೆ.

ಇನ್ನು ಸಿಎಸ್‌ಐಎಸ್ ತನ್ನ ವರದಿಯಲ್ಲಿ ಮೊದಲ ಬಾರಿಗೆ “ಕೆನಡಾ ಮೂಲದ ಖಲಿಸ್ತಾನಿ ತೀವ್ರಗಾಮಿಗಳು” ಎಂಬ ಪದವನ್ನು ಅಧಿಕೃತವಾಗಿ ಬಳಸಿದೆ. ಈ ಗುಂಪುಗಳು ಕೆನಡಾದ ರಾಷ್ಟ್ರೀಯ ಭದ್ರತೆಗೆ ಮತ್ತು ಶಾಂತಿಗೆ ನಿರಂತರ ಬೆದರಿಕೆಯಾಗಿದ್ದು, ಹಿಂಸಾತ್ಮಕ ತೀವ್ರಗಾಮಿ ಅಜೆಂಡಾವನ್ನು ಪ್ರಚಾರ ಮಾಡುತ್ತಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.  

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ದೊಡ್ಡ ಮುನಿಸೂ ಇಲ್ಲ,...

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ಭಾರೀ ರಿಯಾಯಿತಿ: ಸಿಎಂ ಡಿ ಕೆ ಶಿವಕುಮಾರ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ 2008ರ ಆಗಸ್ಟ್ 10ರ ಪೂರ್ವದಲ್ಲಿ...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು ಜೀವವಿತ್ತ ದೀಪಾವಳಿ!

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ,...

ಬೀದರ್‌ | ಪ್ರತಿ ಟನ್‌ ಕಬ್ಬಿಗೆ ₹4,000 ಬೆಂಬಲ ಬೆಲೆ ನಿಗದಿಪಡಿಸಿ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌...