ಮೋದಿ ಆಡಳಿತವನ್ನು ಟೀಕಿಸಿದ ಬೆನ್ನಲ್ಲೇ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮುಖ್ಯಸ್ಥೆ ರಾಜೀನಾಮೆ

Date:

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಟೀಕಿಸಿ ಲೇಖನವನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮುಖ್ಯಸ್ಥೆ ಯಾಮಿನಿ ಅಯ್ಯರ್ ರಾಜೀನಾಮೆ ನೀಡಿದ್ದಾರೆ.

ಯಾಮಿನಿ ಅಯ್ಯರ್ ಅವರು ಮಾರ್ಚ್ 26 ರಂದು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು ಅದಕ್ಕೂ ಕೆಲವು ದಿನಗಳ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಟೀಕಿಸಿ ಮಾರ್ಚ್ 23 ರಂದು ಲೇಖನವನ್ನು ಬರೆದಿದ್ದರು.

“ಭಾರತವು ತನ್ನ 18ನೇ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ತೆವಳುತ್ತಿರುವ ನಿರಂಕುಶ ಪ್ರಭುತ್ವದ ಕರಾಳ ಛಾಯೆಯು ಭಾರತದ ಮೇಲೆ ಆವರಿಸಿದೆ” ಎಂದು ಲೇಖನದಲ್ಲಿ ಹೇಳಿದ್ದರು. “ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿ” ಎಂಬುವುದು ಲೇಖನದ ಶೀರ್ಷಿಕೆ ಆಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?   ಪ್ರಧಾನಿ ಮೋದಿಯ ಆಡಳಿತ ಅಮೃತ ಕಾಲವಲ್ಲ, ವಿನಾಶ ಕಾಲ: ಸಿದ್ದರಾಮಯ್ಯ ಟೀಕೆ

“ನರೇಂದ್ರ ಮೋದಿಯವರ ಬಿಜೆಪಿ ಮೂರನೇ ಬಾರಿಗೆ ಗೆದ್ದು ಅಧಿಕಾರವನ್ನು ಹಿಡಿಯಲು ಸಜ್ಜಾಗಿದೆ. ಆದರೆ ಆಕ್ರಮಣಕಾರಿಯಾದ, ವ್ಯಕ್ತಿತ್ವದ ಆರಾಧನೆಯನ್ನು ಒಳಗೊಂಡ, ಹಿಂದೂ-ರಾಷ್ಟ್ರೀಯ ಸಿದ್ಧಾಂತವನ್ನು ಹೊಂದಿರುವ ಅವರ ಆಡಳಿತವು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ” ಎಂದು ಈ ಲೇಖನದಲ್ಲಿ ಯಾಮಿನಿ ಅಭಿಪ್ರಾಯಿಸಿದ್ದಾರೆ.

ಇದಾದ ಕೆಲವೇ ದಿನಗಳಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಹೇಳಿಕೆ ಬಿಡುಗಡೆ ಮಾಡಿದ್ದು, “ಯಾಮಿನಿ ಅಯ್ಯರ್ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕಿ ಹುದ್ದೆಯಿಂದ ಮಾರ್ಚ್ 31, 2024ರಂದು ಕೆಳಗಿಳಿಯಲಿದ್ದಾರೆ. ತಮ್ಮ ಸಂಶೋಧನಾ ಆಸಕ್ತಿಗಳತ್ತ ಅಧಿಕ ಗಮನ ಹರಿಸಲಿದ್ದಾರೆ” ಎಂದು ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ | 4,568 ಕೋಟಿ ರೂ. ಒಡೆಯ ಕೆ.ವಿಶ್ವೇಶ್ವರ ರೆಡ್ಡಿ ರಾಜ್ಯದ ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ

ತೆಲಂಗಾಣದ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಮಣಿಪುರ ಹಿಂಸಾಚಾರ | ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ

ಮಣಿಪುರದ ನರಂಸೇನಾ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಕೇಂದ್ರೀಯ...

ಪಶ್ಚಿಮ ಬಂಗಾಳ | ಪ್ರಧಾನಿ ಚುನಾವಣಾ ರ್‍ಯಾಲಿ ಬಳಿಕ ಟಿಎಂಸಿಯಿಂದ ಮೋದಿ ಹೇಳಿಕೆಗಳ ಫ್ಯಾಕ್ಟ್‌ಚೆಕ್!

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ...

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...