ʼಕಾಕ್ರೋಚ್‌ ಈಸ್‌ ಬ್ಯಾಕ್‌ʼ: ಡಿಜಿಟಲ್ ಪರದೆಯಿಂದ ದಿಲ್ಲಿಯ ಬೀದಿಗಿಳಿಯಲಿದೆ ಜಿರಳೆ ಸೈನ್ಯ!

Date:

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲು CJP ಯೋಜನೆ ರೂಪಿಸಿದೆ. ಈ ಪ್ರತಿಭಟನೆ ಆಂದೋಲನದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ. ಸರ್ಕಾರದ ಕಾನೂನು ಕ್ರಮಗಳು, ಸಾಮಾಜಿಕ ಮಾಧ್ಯಮಗಳ ನಿಷೇಧ ಹಾಗೂ ತೀವ್ರ ಆನ್‌ಲೈನ್ ದ್ವೇಷದ ನಡುವೆಯೂ, ವ್ಯಂಗ್ಯದ ಮೂಲಕವೇ ವ್ಯವಸ್ಥೆಯನ್ನು ಪ್ರಶ್ನಿಸುತ್ತಿರುವ ಈ “ಜಿರಳೆಗಳ ಸೈನ್ಯ” ಭಾರತೀಯ ರಾಜಕಾರಣದಲ್ಲಿ ಹೊಸ ಮಾದರಿಯ ಜನಪ್ರತಿರೋಧಕ್ಕೆ ಸಾಕ್ಷಿಯಾಗಲಿದೆ.

- Advertisement -

ಸಾಮಾಜಿಕ ಜಾಲತಾಣವನ್ನೇ ವೇದಿಕೆಯಾಗಿ ಬಳಸಿಕೊಂಡು, ವ್ಯಂಗ್ಯಾತ್ಮಕ ಆಂದೋಲನವಾಗಿ ಆರಂಭಗೊಂಡು, ಸದ್ಯ ದೇಶದ ಕೋಟ್ಯಂತರ ಯುವಕರ ಧ್ವನಿಯಾಗಿ ರೂಪಾಂತರಗೊಂಡಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಈಗ ಡಿಜಿಟಲ್‌ ಪರದೆಯಿಂದ ನೇರವಾಗಿ ದಿಲ್ಲಿಯ ಬೀದಿ ಹೋರಾಟಕ್ಕೆ ಧುಮುಕಲು ಸಜ್ಜಾಗಿದೆ. ಸಿಜೆಪಿ ರೂವಾರಿ ಅಭಿಜೀತ್, ಇದೇ ಜೂನ್ 6ರಂದು ಅಮೆರಿಕದಿಂದ ಭಾರತಕ್ಕೆ ಮರಳುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ತಲ್ಲಣ ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಕೇವಲ ಒಂದು ತಿಂಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮೂಲಕ ಆರಂಭವಾದ ‘ಕಾಕ್ರೋಚ್ ಪಾರ್ಟಿ’ ಆಂದೋಲನ, ಇಂದು ದೇಶದ ರಾಜಕೀಯ ವಲಯದಲ್ಲಿ ಅಕ್ಷರಶಃ ನಡುಕ ಹುಟ್ಟಿಸಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಅಭಿಜೀತ್, ತಂದೆ ಇಷ್ಟಪಟ್ಟು ಕೊಡಿಸಿದ್ದ ಇಂಜಿನಿಯರಿಂಗ್ ಸೀಟು ಬಿಟ್ಟು ಪುಣೆಯಲ್ಲಿ ಜರ್ನಲಿಸಂ ಪದವಿ ಮುಗಿಸಿದ್ದರು. ಆನಂತರ ಅಮೆರಿಕದ ಪ್ರತಿಷ್ಠಿತ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪಬ್ಲಿಕ್ ರಿಲೇಷನ್ಸ್ ವಿಷಯದಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಅವರು AAP ಸೇರಿ ರಾಜಕೀಯ ಸಂವಹನ ತಂತ್ರಜ್ಞರಾಗಿ ಗುರುತಿಸಿಕೊಂಡರು.

ಕೆಲವೇ ದಿನಗಳಲ್ಲಿ ಭಾರತಕ್ಕೆ ಮರಳುತ್ತಿರುವ ಅಭಿಜೀತ್, NEET ಹಗರಣದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದಾರೆ. ಇದೇ ಕಾರಣಕ್ಕೆ ವಿಮಾನ ನಿಲ್ದಾಣದಲ್ಲೇ ಅವರ ಬಂಧನದ ಸಾಧ್ಯತೆಗಳಿರುವುದರಿಂದ ಇಡೀ ದೇಶದ ಕಣ್ಣು ಈಗ ಅವರ ಆಗಮನದ ಮೇಲೆ ನೆಟ್ಟಿದೆ.

ಅಭಿಜೀತ್ ದೀಪ್ಕೆ ಆಮ್ ಆದ್ಮಿ ಪಾರ್ಟಿ ಜೊತೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದವರು. ಆಪ್‌ ಗೆಲುವಿನಲ್ಲಿ ಪ್ರಮುಖರೆನಿಸಿಕೊಂಡಿದ್ದವರು. ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಸಂವಹನ ಸಲಹೆಗಾರರಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ದೆಹಲಿಯ ಶಿಕ್ಷಣ ಮಾದರಿಯನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, 2023ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಇತ್ತೀಚೆಗಷ್ಟೇ ಓದು ಮುಗಿಸಿ ಅಲ್ಲಿ ಉದ್ಯೋಗಕ್ಕೆ ಸಜ್ಜಾಗುತ್ತಿದ್ದಾಗಲೇ ಭಾರತದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಕೀಲರೊಬ್ಬರ ವಿಚಾರಣೆ ಸಂದರ್ಭದಲ್ಲಿ ನೀಡಿದ ಹೇಳಿಕೆಯೊಂದು ಅವರ ಇಂಥದ್ದೊಂದು ಕ್ರಾಂತಿಕಾರಕ ಹೆಜ್ಜೆಗೆ ಕಾರಣವಾಯಿತು.

ದೇಶದಲ್ಲಿರುವ ನಿರುದ್ಯೋಗಿಗಳನ್ನು ಪರೋಕ್ಷವಾಗಿ ಜಿರಳೆಗಳೆಂದ ಸಿಜೆಐಗೆ ವ್ಯಂಗ್ಯದ ರೂಪದಲ್ಲೇ ಪ್ರತಿಕ್ರಿಯಿಸಿದ ಅಭಿಜೀತ್, ದೇಶದ ಯುವ ಸಮೂಹ, ನಿರುದ್ಯೋಗಿಗಳು ಮತ್ತು ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳ ಪರವಾಗಿ “ಕಾಕ್ರೋಚ್ ಜನತಾ ಪಾರ್ಟಿ” (CJP) ಎಂಬ ವ್ಯಂಗ್ಯ ರಾಜಕೀಯ ವೇದಿಕೆಯನ್ನು ಮೇ 16 ರಂದು ಪ್ರಾರಂಭಿಸಿದರು. ತಮಾಷೆಗಾಗಿಯೇ ಆರಂಭವಾದ ಈ ವೆಬ್‌ಸೈಟ್‌ಗೆ ಕೆಲವೇ ದಿನಗಳಲ್ಲಿ ಕೋಟ್ಯಂತರ  ಜನ ಸದಸ್ಯರಾಗಿ ನೋಂದಾಯಿಸಿಕೊಂಡರು. ಸದಸ್ಯರಾಗಲು ವ್ಯಕ್ತಿ ನಿರುದ್ಯೋಗಿಯಾಗಿರಬೇಕು ಮತ್ತು ಸೋಮಾರಿಯಾಗಿರಬೇಕು ಎಂಬ ವ್ಯಂಗ್ಯದ ನಿಯಮಗಳು ಲಕ್ಷಾಂತರ ಬೆಂಬಲಿಗರನ್ನ ಸೆಳೆದವು. ನಿವೃತ್ತಿಯ ನಂತರ ಮುಖ್ಯ ನ್ಯಾಯಮೂರ್ತಿಗಳಿಗೆ ರಾಜಕೀಯ ಹುದ್ದೆ ನೀಡಬಾರದು, ಪಕ್ಷಾಂತರ ನಿಷೇಧ ಕಾಯ್ದೆ ಕಠಿಣಗೊಳಿಸಬೇಕು ಹಾಗೂ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕು ಎಂಬ ಅತ್ಯಂತ ಗಂಭೀರ ಘೋಷಣೆಗಳಿಂದ ಈ ಆಂದೋಲನ ಮನೆ ಮನೆ ತಲುಪಿತು.

CJP ಯ ಅಧಿಕೃತ ‘X’ ಖಾತೆಯು ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿದ್ದಂತೆ, ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಅದನ್ನು ಭಾರತದಲ್ಲಿ ಬ್ಲಾಕ್ ಮಾಡಿತು. ಇದನ್ನು ಪ್ರಶ್ನಿಸಿ ಅಭಿಜೀತ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರಿದ್ದ ಪೀಠವು, ಪ್ರಕರಣದಲ್ಲಿ ಕಾನೂನು ಸೂಕ್ಷ್ಮತೆಗಳಿರುವುದರಿಂದ ಖಾತೆಯನ್ನು ತಕ್ಷಣವೇ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದಿತು. ಆದರೆ ಐಟಿ ಸಚಿವಾಲಯದ ಪರಿಶೀಲನಾ ಸಮಿತಿಯ ಮುಂದೆ ವರ್ಚುವಲ್ ಆಗಿ ಹಾಜರಾಗಿ ವಾದ ಮಂಡಿಸಲು ದೀಪ್ಕೆಗೆ ನ್ಯಾಯಾಲಯ ಅವಕಾಶ ನೀಡಿತು. ಇದೇ ವೇಳೆ, ಬಿಜೆಪಿ ಬೆಂಬಲಿತ ಐಟಿ ಸೆಲ್‌ಗಳು ಎಂದಿನಂತೆ, ಈ ಆಂದೋಲನದ ಹಿಂದೆ ವಿದೇಶಿ ಫಂಡಿಂಗ್ ಮತ್ತು ದೇಶದ ಇಮೇಜ್ ಹಾಳುಮಾಡುವ ಪಿತೂರಿ ಇದೆ ಎಂದು ಆರೋಪಿಸಿ CBI ತನಿಖೆಗೆ ಒತ್ತಾಯಿಸಿದವು. ಆದರೆ, ಆರಂಭಿಕ ಹಂತದಲ್ಲೇ ನ್ಯಾಯಾಲಯವು ಯಾವುದೇ ಗಂಭೀರ ಆಧಾರಗಳಿಲ್ಲದೆ ಇಂತಹ ತನಿಖೆಗಳಿಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಆ ಬೇಡಿಕೆಯನ್ನ ನಿರಾಕರಿಸಿತು.

ಸರ್ಕಾರ ‘X’ ಖಾತೆಯನ್ನು ನಿರ್ಬಂಧಿಸಿದರೂ ಆಂದೋಲನದ ತೀವ್ರತೆ ತಗ್ಗಲಿಲ್ಲ. ‘Cockroach is Back’ ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಖಾತೆ ತೆರೆಯಲಾಯಿತು. ಈ ಖಾತೆ ಕೇವಲ 5 ದಿನಗಳ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿಯ ಅಧಿಕೃತ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನೂ ಮೀರಿಸಿ, 2 ಕೋಟಿಗೂ ಹೆಚ್ಚು ಫಾಲೋವರ್ಸ್ ಪಡೆದು ಇಂಟರ್ನೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು. ಇದರ ಯಶಸ್ಸನ್ನು ಸಹಿಸದ ಕೆಲವು ಗುಂಪುಗಳು ಇದನ್ನು ಹ್ಯಾಕ್ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದರು. ಬಿಬಿಸಿ ಮತ್ತು ಅಲ್ ಜಜೀರಾ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಅವರು, ಅಧಿಕಾರದಲ್ಲಿರುವವರು ನಮ್ಮನ್ನು ಜಿರಳೆಗಳೆಂದು ಕರೆದರು. ಅಂದರೆ, ಸದ್ಯ ದೇಶದ ವ್ಯವಸ್ಥೆಯೂ ಕೊಳೆತಿದೆ ಎಂಬುದಕ್ಕೆ ಈ ಯುವ ಕ್ರಾಂತಿಯೇ ಸಾಕ್ಷಿ ಎಂದು ಗುಡುಗಿದ್ದರು.

CJP ಯ ಈ ಅಭೂತಪೂರ್ವ ಯಶಸ್ಸು ಆಡಳಿತ ಪಕ್ಷದ ಬೆಂಬಲಿಗರನ್ನು (ಅಂಧ ಭಕ್ತರನ್ನು) ಕೆರಳಿ ಕೆಂಡವಾಗಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಜೀತ್ ದೀಪ್ಕೆ ವಿರುದ್ಧ ದ್ವೇಷದ ಅಭಿಯಾನ, ನಿಂದನೆ ಮತ್ತು ಕೊಲೆ ಬೆದರಿಕೆಗಳು ಹರಿದುಬರುತ್ತಿವೆ. ಇದು ವಿರೋಧ ಪಕ್ಷಗಳ ಪ್ರಾಯೋಜಿತ ನಾಟಕ ಎಂದು ಸ್ವತಃ ಅಭಿಜೀತ್ ಆರೋಪಿಸುತ್ತಿದ್ದಾರೆ. ಈ ತೀವ್ರ ವಿರೋಧ ಮತ್ತು ದ್ವೇಷದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅಭಿಜೀತ್ ಅವರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಸದ್ಯ ಅವರ ಮನೆಗೆ ಪೊಲೀಸರು ವಿಶೇಷ ರಕ್ಷಣೆ ನೀಡಿದ್ದಾರೆ. ಮರಾಠಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರ ತಾಯಿ ಅನಿತಾ ದೀಪ್ಕೆ, ʼಅವನು ಅಮೆರಿಕದಲ್ಲಿ ಕೋಟಿ ಕೋಟಿ ಸಂಬಳದ ಕೆಲಸ ಬಿಟ್ಟು ಈ ರಾಜಕೀಯಕ್ಕೆ ಬಿದ್ದಿದ್ದಾನೆ, ನಮಗೆ ರಾತ್ರಿ ನಿದ್ದೆಯೇ ಬರುತ್ತಿಲ್ಲʼ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:  ‘ಕಾಕ್ರೋಚ್ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಜೂನ್ 6ರಂದು ಭಾರತಕ್ಕೆ; ಬಂಧಿಸಲಿದೆಯೇ ಮೋದಿ ಸರ್ಕಾರ?

ಭಾರತದ ಮಣ್ಣಿಗೆ ಕಾಲಿಡುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಬಂಧಿಸುವ ಸಾಧ್ಯತೆಯಿದೆ ಎಂದು ಪೋಷಕರು ಮತ್ತು ಸ್ನೇಹಿತರು ಹೆದರುತ್ತಿರುವುದಾಗಿ ತಿಳಿಸಿರುವ ಅಭಿಜೀತ್, ತಾವು ಸಂವಿಧಾನದ ಹಾದಿಯಲ್ಲಿ ನಡೆಯುವವನಾಗಿದ್ದು ಜೈಲಿಗೆ ಹೆದರುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ‌

NEET ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲು CJP ಯೋಜನೆ ರೂಪಿಸಿದೆ. ಈ ಪ್ರತಿಭಟನೆ ಆಂದೋಲನದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ. ಸರ್ಕಾರದ ಕಾನೂನು ಕ್ರಮಗಳು, ಸಾಮಾಜಿಕ ಮಾಧ್ಯಮಗಳ ನಿಷೇಧ ಹಾಗೂ ತೀವ್ರ ಆನ್‌ಲೈನ್ ದ್ವೇಷದ ನಡುವೆಯೂ, ವ್ಯಂಗ್ಯದ ಮೂಲಕವೇ ವ್ಯವಸ್ಥೆಯನ್ನು ಪ್ರಶ್ನಿಸುತ್ತಿರುವ ಈ “ಜಿರಳೆಗಳ ಸೈನ್ಯ” ಭಾರತೀಯ ರಾಜಕಾರಣದಲ್ಲಿ ಹೊಸ ಮಾದರಿಯ ಜನಪ್ರತಿರೋಧಕ್ಕೆ ಸಾಕ್ಷಿಯಾಗಲಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...

‘ಮಕ್ಕಳಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು; ಸಂಪೂರ್ಣ ನಿಷೇಧ ಪರಿಹಾರವಲ್ಲ’: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಯಸ್ಕರಂತೆ ಮಕ್ಕಳಿಗೂ ಇಂಟರ್‌ನೆಟ್ ಸಂಪರ್ಕ ಪಡೆಯುವ ಮತ್ತು ಅದನ್ನು ಬಳಸುವ ಮೂಲಭೂತ...