ಗ್ರಾಹಕರಿಗೆ ವಂಚನೆ: ಓಲಾಗೆ ₹10 ಲಕ್ಷ ದಂಡ, ‘ಅಡ್ವಾನ್ಸ್ ಟಿಪ್’ ಆಯ್ಕೆ ಸ್ಥಗಿತಕ್ಕೆ ಆದೇಶ!

Date:

ಗ್ರಾಹಕರನ್ನು ದಾರಿತಪ್ಪಿಸುವ ‘ಮುಂಗಡ ಟಿಪ್’ ವೈಶಿಷ್ಟ್ಯವನ್ನು ಬಳಸಿದ ಆರೋಪದ ಮೇಲೆ ಪ್ರಮುಖ ಕ್ಯಾಬ್ ಅಗ್ರಿಗೇಟರ್ ಸಂಸ್ಥೆಯಾದ ‘ಓಲಾ’ ಮೇಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹10 ಲಕ್ಷ ದಂಡ ವಿಧಿಸಿದೆ. ಬುಕಿಂಗ್‌ ಖಚಿತವಾಗುವ ಮುನ್ನವೇ ಹೆಚ್ಚುವರಿ ಹಣ ಪಾವತಿಸುವಂತೆ ಗ್ರಾಹಕರ ಮೇಲೆ ಮಾನಸಿಕ ಒತ್ತಡ ಹೇರುವ ಎಲ್ಲಾ ಪ್ರಾಂಪ್ಟ್‌ಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆಯೂ ಪ್ರಾಧಿಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

- Advertisement -

CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರನ್ನೊಳಗೊಂಡ ಪೀಠವು ನವೆಂಬರ್ 10 ರಂದು ಈ ಮಹತ್ವದ ಆದೇಶ ಹೊರಡಿಸಿದ್ದು, 15 ದಿನಗಳ ಒಳಗಾಗಿ ದಂಡ ಪಾವತಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಓಲಾ ಸಂಸ್ಥೆಗೆ ಸೂಚಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | “ಟ್ರಾಫಿಕ್ ಪೊಲೀಸರ ಶ್ರಮಕ್ಕೆ ಆಡಳಿತದ ಸಹಕಾರವಿಲ್ಲವೇ?...

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಖ್ಯೆ ಏರಿಕೆ, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಹಾಗೂ ರಸ್ತೆ ಒತ್ತುವರಿಯಿಂದಾಗಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಸುಧಾರಿಸಲು ಪೊಲೀಸ್‌ ಇಲಾಖೆ...

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್...

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ 22 ಸೀಟುಗಳ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿಯವರೆಗೂ 254 ಡೆಮೊಕ್ರಟಿಕ್ ಅಭ್ಯರ್ಥಿಗಳು ಮತ್ತು 169 ರಿಪಬ್ಲಿಕನ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸಮೀಕ್ಷೆಗಳ...

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಏನಿದು ಪ್ರಕರಣ?

Advertisements

2025ರ ಮೇ ತಿಂಗಳಿನಲ್ಲಿ ಸಲ್ಲಿಕೆಯಾಗಿದ್ದ ಗ್ರಾಹಕರ ದೂರಿನ ಆಧಾರದ ಮೇಲೆ ಪ್ರಾಧಿಕಾರವು ಈ ತನಿಖೆ ನಡೆಸಿತ್ತು. ಗ್ರಾಹಕರು ರೈಡ್‌ಗಾಗಿ ಬುಕಿಂಗ್ ಮಾಡಿ ಚಾಲಕನ ಒಪ್ಪಿಗೆಗಾಗಿ ಕಾಯುತ್ತಿರುವಾಗ, ಓಲಾ ಆ್ಯಪ್ ಪರದೆಯ ಮೇಲೆ “ಟಿಪ್ ಸೇರಿಸುವುದರಿಂದ ವೇಗವಾಗಿ ರೈಡ್ ಸಿಗುವ ಸಾಧ್ಯತೆ ಹೆಚ್ಚಾಗಬಹುದು” ಎಂಬ ಸಂದೇಶ ಕಾಣಿಸಿಕೊಳ್ಳುತ್ತಿತ್ತು. ಆರಂಭದಲ್ಲಿ ₹10 ರಿಂದ ₹40 ರವರೆಗಿನ ಆಯ್ಕೆಗಳನ್ನು ನೀಡಲಾಗುತ್ತಿತ್ತಾದರೂ, ಆ್ಯಪ್‌ನಲ್ಲಿ ಗರಿಷ್ಠ ₹499 ರವರೆಗೂ ಹೆಚ್ಚುವರಿ ಹಣ ಪಾವತಿಸುವ ಅವಕಾಶ ಕಲ್ಪಿಸಲಾಗಿತ್ತು. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅಡಿಯಲ್ಲಿ ‘ದಾರಿತಪ್ಪಿಸುವ ಜಾಹೀರಾತು’, ‘ತಪ್ಪಾದ ವ್ಯಾಪಾರ ಪದ್ಧತಿ’ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದ ಓಲಾ, ಈ ಪಾವತಿಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಪ್ಲಾಟ್‌ಫಾರ್ಮ್ ಯಾವುದೇ ಕಡಿತ ಮಾಡದೆ ನೇರವಾಗಿ ಚಾಲಕರಿಗೆ ವರ್ಗಾಯಿಸುತ್ತದೆ ಎಂದು ವಾದಿಸಿತ್ತು. ದೂರದ ಸ್ಥಳಗಳಿಂದ ಬಂದು ಗ್ರಾಹಕರನ್ನು ಪಿಕ್ ಮಾಡುವಂತಹ ಲಾಭದಾಯಕವಲ್ಲದ ರೈಡ್‌ಗಳನ್ನು ಚಾಲಕರು ಒಪ್ಪಿಕೊಳ್ಳಲು ಇದು ಪ್ರೋತ್ಸಾಹ ನೀಡುತ್ತದೆ ಹಾಗೂ ವೇಗವಾಗಿ ರೈಡ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿತ್ತು.

ಆದರೆ, ಓಲಾ ಸಂಸ್ಥೆಯ ಸ್ವಂತ ದತ್ತಾಂಶಗಳೇ ಅದರ ವಾದವನ್ನು ಸುಳ್ಳು ಎಂದು ಸಾಬೀತುಪಡಿಸಿವೆ. 

ದೆಹಲಿಯಲ್ಲಿ ಹೆಚ್ಚುವರಿ ಹಣ  ಸೇರಿಸಿದ ರೈಡ್ ವಿನಂತಿಗಳಲ್ಲಿ ಕೇವಲ 32% ರಿಂದ 38% ರಷ್ಟು ಮಾತ್ರ ಚಾಲಕರಿಂದ ಸ್ವೀಕರಿಸಲ್ಪಟ್ಟಿದ್ದರೆ, ಯಾವುದೇ ಹೆಚ್ಚುವರಿ ಹಣವಿಲ್ಲದ 62% ರಿಂದ 68% ರಷ್ಟು ವಿನಂತಿಗಳು ಸ್ವೀಕರಿಸಲ್ಪಟ್ಟಿವೆ.

ಬೆಂಗಳೂರಿನಲ್ಲಿ ಹೆಚ್ಚುವರಿ ಪಾವತಿಯೊಂದಿಗೆ ಕೇವಲ 39% ರಿಂದ 40% ರೈಡ್‌ಗಳು ಸ್ವೀಕರಿಸಲ್ಪಟ್ಟಿದ್ದರೆ, ಸಾಮಾನ್ಯ ಬುಕಿಂಗ್‌ಗಳಲ್ಲಿ 68% ರಷ್ಟು ರೈಡ್‌ಗಳು ಯಶಸ್ವಿಯಾಗಿವೆ.

ವಿಚಾರಣೆ ನಡೆಸಿದ CCPA, ಓಲಾದ ವಾದಗಳಲ್ಲಿನ ದ್ವಂದ್ವವನ್ನು ಎತ್ತಿ ತೋರಿಸಿದೆ. ಹೆಚ್ಚುವರಿ ಪಾವತಿಯು ಚಾಲಕನ ನಿರ್ಧಾರದ ಮೇಲೆ ಪ್ರಭಾವ ಬೀರದಿದ್ದರೆ, ‘ವೇಗವಾಗಿ ರೈಡ್ ಸಿಗುತ್ತದೆ’ ಎಂಬ ಆ್ಯಪ್ ಸಂದೇಶ ಸುಳ್ಳಾಗುತ್ತದೆ. ಒಂದು ವೇಳೆ ಅದು ಪ್ರಭಾವ ಬೀರುವುದೇ ಆಗಿದ್ದರೆ, ನಿಗದಿತ ದರ ಪಾವತಿಸಲು ಸಿದ್ಧವಿದ್ದರೂ ಹೆಚ್ಚುವರಿ ಹಣ ನೀಡದ ಗ್ರಾಹಕರನ್ನು ಅನ್ಯಾಯವಾಗಿ ಕಡೆಗಣಿಸಿದಂತಾಗುತ್ತದೆ.

ಸಾಮಾನ್ಯವಾಗಿ ಸೇವೆಯನ್ನು ಪಡೆದ ನಂತರ ಮೆಚ್ಚುಗೆಯ ರೂಪದಲ್ಲಿ ‘ಟಿಪ್’ ನೀಡಲಾಗುತ್ತದೆ. ಆದರೆ, ಚಾಲಕರು ಬುಕಿಂಗ್ ಒಪ್ಪಿಕೊಳ್ಳುವ ಮೊದಲೇ ಹಣ ಕೇಳುವುದನ್ನು ‘ಸ್ವಯಂಪ್ರೇರಿತ ಟಿಪ್’ ಎಂದು ಪರಿಗಣಿಸಲು ಸಾಧ್ಯವಿಲ್ಲ. ರೈಡ್ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿರುವ ಗ್ರಾಹಕರನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಿ ಹಣ ಪಾವತಿಸುವಂತೆ ಪ್ರೇರೇಪಿಸುವುದು ‘ಡಾರ್ಕ್ ಪ್ಯಾಟರ್ನ್‌ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿ-2023’ ರ ಅಡಿಯಲ್ಲಿ ನಿಷೇಧಿತ ‘ಕನ್ಫರ್ಮ್ ಶೇಮಿಂಗ್’ ತಂತ್ರವಾಗಿದೆ.

ಒಂದೇ ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈಡ್ ವಿನಂತಿಗಳಲ್ಲಿ ಈ ವೈಶಿಷ್ಟ್ಯವನ್ನು ಬಳಸಲಾಗಿದ್ದು, ಇದು ಅಲ್ಪ ಪ್ರಮಾಣದ ಗ್ರಾಹಕರ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂಬ ಓಲಾ ವಾದವನ್ನು ಒಪ್ಪಲಾಗದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಆ್ಯಪ್ ವಿನ್ಯಾಸ ಮತ್ತು ಸಂದೇಶಗಳ ಮೂಲಕ ಗ್ರಾಹಕರ ನಿರ್ಧಾರಗಳ ಮೇಲೆ ಪ್ರಭಾವ ಬೀರಿ ಹೆಚ್ಚುವರಿ ಹಣ ವಸೂಲಿ ಮಾಡುವ ಪ್ರವೃತ್ತಿಗೆ ಈ ಆದೇಶವು ಕಡಿವಾಣ ಹಾಕಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪ್ರತಿಭಟನೆ!

ಶಿವಮೊಗ್ಗ : ರಾಜ್ಯದಲ್ಲಿ ಹಾಲು ಮತ್ತು ಬಸ್ ಪ್ರಯಾಣ ದರ ಹೆಚ್ಚಳದಿಂದ...

ಶಿವಮೊಗ್ಗ | ನಾಳೆ ರಾಜ್ಯವ್ಯಾಪಿ ಶಾಲೆಗಳಲ್ಲಿ ಅಡುಗೆ ತಯಾರಿಕೆಯನ್ನು ಬಂದ್​ ಮಾಡಿ ಮುಷ್ಕರ

ಶಿವಮೊಗ್ಗ ಶಾಲಾ ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೆ ಕುತ್ತು ತರುವಂತಹ ಪ್ರಯತ್ನಗಳನ್ನು...

ಮುಂಬೈ | ಕಿರುಕುಳ ಪ್ರಶ್ನಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಿಡಿಗೇಡಿ; ಯುವತಿಯ ಎಡಗೈ ತುಂಡು

ಮುಂಬೈ ಜೀವನಾಡಿಯಾಗಿರುವ ಲೋಕಲ್ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ...

ದಕ್ಷಿಣ ಕನ್ನಡ | ಸೌಜನ್ಯ ಕೊಲೆ ಪ್ರಕರಣ : ಎಸ್‌ಐಟಿ ಮುಂದೆ ಹಾಜರಾದ ಡಾ. ಮಹಾಬಲ ಶೆಟ್ಟಿ

ಮಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ವಿಶೇಷ ತನಿಖಾ ತಂಡದಿಂದ...