ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

Date:

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೂ ಒತ್ತಾಯಿಸಿ ನಡೆಯುತ್ತಿರುವ ಬೃಹತ್ ಚಳುವಳಿ ಅದರ ಘನತೆಗೆ ಕುಂದುಂಟು ಮಾಡಿದೆ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮೇಲಿನ ವಿಶ್ವಾಸವನ್ನು ವಿರೋಧ ಪಕ್ಷಗಳು ಅದರಲ್ಲೂ ನಾಗರಿಕ ಸಮಾಜ ವಿಶೇಷವಾಗಿ ಯುವಕರು ಕಳೆದುಕೊಂಡಿದ್ದಾರೆ.

- Advertisement -

ಒಂದು ಸದೃಢವಾದ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಚುನಾವಣೆ ಒಂದು ಮೂಲಾಧಾರವಾಗಿದೆ. ಇದು ದೇಶದ ಆಡಳಿತ ಪಥ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟಲ್ಲದೆ, ಅಮೆರಿಕದ ಮಾಜಿ ಅಧ್ಯಕ್ಷ, ಚಿಂತಕ, ರಾಜನೀತಿಜ್ಞ ಅಬ್ರಾಹಂ ಲಿಂಕನ್ ಚುನಾವಣೆಯ ಕುರಿತಂತೆ, ಚುನಾವಣೆ ಜನರಿಗೆ ಸಂಬಂಧಿಸಿದ್ದು. ಅದು ಅವರ ನಿರ್ಧಾರ. ಇಂತಹ ಭಾವನೆಗಳ ಮೂಲಕ ಈ ತತ್ವಗಳನ್ನು ಒತ್ತಿ ಹೇಳುತ್ತಾರೆ. ಚುನಾವಣೆಯ ಮೂಲಕ ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜನರ ಆಶೋತ್ತರ ಪ್ರತಿನಿಧಿಸುತ್ತಾರೆ ಎಂಬುದನ್ನು ಒತ್ತಿ ಹೇಳುತ್ತಾರೆ. ಹಾಗೆಯೇ ಅವರು ಜನರ ಇಚ್ಛೆಯನ್ನು ಪ್ರತಿಫಲಿಸುವ ನೀತಿಯನ್ನು ಜಾರಿ ಮಾಡುತ್ತಾರೆ, ಒಟ್ಟಾರೆ ಚುನಾವಣೆ ಒಂದು ವಿಧಾನವಾಗಿ ಕಾರ್ಯನಿರ್ವಹಿಸುವ ಮೂಲಕ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ತನ್ಮೂಲಕ ನೀತಿ ನಿರೂಪಣೆ ಹಾಗೂ ಸಮಾಜ ಹೇಗೆ ಸಾಗಬೇಕೆಂಬ ದಿಕ್ಕನ್ನು ರೂಪಿಸುತ್ತದೆ .

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

ಹೀಗಾಗಿಯೇ ನಮ್ಮ ದೇಶ ಸಂವಿಧಾನ ಸ್ವೀಕರಿಸಿ ಗಣರಾಜ್ಯ ಆಗುವುದಕ್ಕಿಂತ ಮುನ್ನವೇ ಚುನಾವಣಾ ಆಯೋಗ 1950ರ ಜನವರಿ 25ರಂದು ಜನ್ಮ ತಾಳಿತು. ನಂತರದ ದಶಕಗಳಲ್ಲಿ ಇದೊಂದು ನಿಷ್ಪಕ್ಷಪಾತ ಚುನಾವಣಾ ಕಾವಲು ಸಂಸ್ಥೆಯಾಗಿ ಅತ್ಯುನ್ನತ ಹೆಸರನ್ನು ಗಳಿಸಿತು. ಮತದಾರರ ಅಪಾರ ನಂಬಿಕೆಯನ್ನು ಹೊಂದಿರುವ ಆಯೋಗವು ನಮ್ಮಂತಹ ಬೃಹತ್ ರಾಷ್ಟ್ರದಲ್ಲಿ ವ್ಯವಸ್ಥಿತವಾಗಿ ಚುನಾವಣೆ ನಡೆಸುವುದರ ಮೂಲಕ ವೃತ್ತಿಪರತೆ ಮತ್ತು ದಕ್ಷತೆಗಾಗಿ ಜಗದಗಲ ಪ್ರಶಂಸೆ ಪಡೆದಿದೆ.

ಹೀಗೆ ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೂ ಒತ್ತಾಯಿಸಿ ನಡೆಯುತ್ತಿರುವ ಬೃಹತ್ ಚಳುವಳಿ ಅದರ ಘನತೆಗೆ ಕುಂದುಂಟು ಮಾಡಿದೆ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮೇಲಿನ ವಿಶ್ವಾಸವನ್ನು ವಿರೋಧ ಪಕ್ಷಗಳು ಅದರಲ್ಲೂ ನಾಗರಿಕ ಸಮಾಜ ವಿಶೇಷವಾಗಿ ಯುವಕರು ಕಳೆದುಕೊಂಡಿದ್ದಾರೆ.

ದೇಶದ ರಾಜಧಾನಿ ಮಾತ್ರವಲ್ಲದೆ ಪ್ರಮುಖ ನಗರಗಳಲ್ಲಿ ಜನ ಬೀದಿಗಿಳಿದು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ಹೊತ್ತಲ್ಲಿ ಸಾಮೂಹಿಕವಾಗಿ ಮತದಾರರ ಹಕ್ಕನ್ನು ಇಲ್ಲದಂತೆ ಮಾಡುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಕೈ ಬಿಡುವಂತೆ ಒತ್ತಾಯಿಸಲಾಗುತ್ತಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಪರವಾಗಿ ಆಯೋಗ ಕೆಲಸ ಮಾಡುತ್ತಿದೆ ಎಂಬ ಅನುಮಾನದಿಂದ ಆಯೋಗದ ವಿಶ್ವಾಸಾರ್ಹತೆ ಜನರ ಮನದಲ್ಲಿ ಕುಸಿತ ಕಂಡಿದೆ.

Advertisements

ಇಲ್ಲಿ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತನ್ನ ಹಠದಂತೆಯೇ ನಡೆಸುತ್ತಿದ್ದಾರೆ ಎಂದು ಆಯೋಗದ ಉಳಿದಿಬ್ಬರು ಸದಸ್ಯರು ಮಾಡಿರುವ ಆಪಾದನೆಯನ್ನು ಆಂಗ್ಲದೈನಿಕ ಒಂದು ಬಹಿರಂಗಗೊಳಿಸಿತ್ತು. ಪತ್ರಿಕಾ ವರದಿ ಹೊರಬಂದ ಕೆಲವೇ ಗಂಟೆಗಳಲ್ಲಿ ನಿರೀಕ್ಷೆಯಂತೆ ಕೆಲ ಪತ್ರಕರ್ತರು, ಸುದ್ದಿವಾಹಿನಿಗಳು ಮತಪರಿಷ್ಕರಣೆ ಸೇರಿದಂತೆ ಎಲ್ಲಾ ಬಗೆಯ ತೀರ್ಮಾನಗಳನ್ನು ಸರ್ವಾನುಮತದಿಂದ ಮಾಡಲಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಶೋಧನೆಗೆ ಇಳಿದಿದ್ದವು. ಅಂದಹಾಗೆ, ನಾನಿಲ್ಲಿ ದೇಶದ ಪತ್ರಿಕೋದ್ಯಮದ ಸ್ಥಿತಿಗತಿಯ ಕುರಿತು ಹೇಳುತ್ತಿಲ್ಲ, ಬದಲಿಗೆ ನಮ್ಮ ದೇಶದ ಚುನಾವಣಾ ಆಯೋಗದಲ್ಲಿ ಪಾರದರ್ಶಕತೆ ಮತ್ತು ನಿಷ್ಠೆಯ ಬಗ್ಗೆ ಎದ್ದಿರುವ ಕೊರತೆಯ ಬಗ್ಗೆ ಹೇಳಲು ಪ್ರಯತ್ನಿಸುತ್ತಿರುವೆ. ಇಲ್ಲಿ ನನಗೆ ಮಾತ್ರವಲ್ಲ ಮಾಧ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಹಾಗೂ ಯಾವೊಬ್ಬ ಮತದಾರ ತನ್ನ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಆಯೋಗದ ಮೇಲಿದೆ. ಇಂತಹ ಹೊಣೆಗಾರಿಕೆ ಮರೆತು ನಮ್ಮಲ್ಲಿ ಕೆಲವರು ತಾವು ಸಾಮಾನ್ಯರಲ್ಲಿ ಮೊದಲಿಗ ಎಂಬ ಪ್ರತಿಷ್ಠೆ ಹೊತ್ತು ಮೆರೆಯುತ್ತಿದ್ದಾರೆ. ಬಹುಶಃ ಇವರು ತಾವೇ ಏಕಮೇವಾದ್ವಿತೀಯ ಎಂಬ ಹುಂಬ ಮನಸ್ಥಿತಿಯಲ್ಲಿದ್ದಾರೆ.

ಅದೊಂದು ಮಧ್ಯಾಹ್ನ ಭಾರತೀಯ ಚುನಾವಣಾ ಆಯೋಗ ಒಂದು ಪುಟದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿತ್ತು. ಅದು ನಿರೀಕ್ಷೆಯಂತೆ ಚುನಾವಣಾ ಆಯೋಗದ ಇತರೆ ಆಯುಕ್ತರುಗಳು ಎತ್ತಿದ ಯಾವ ವಿಷಯವು ಅಲ್ಲಿರಲಿಲ್ಲ. ಅಂದು ಅದರಲ್ಲಿ ಬಹಳಷ್ಟು ವಿಷಯಗಳನ್ನು ಚುನಾವಣಾ ಆಯೋಗಕ್ಕೆ ಜೋಡಣೆ ಮಾಡಿದ್ದರು. ನನಗನಿಸುವಂತೆ ಜ್ಞಾನೇಶ್ ಕುಮಾ‌ರ್ ಅವರ ಅವಧಿಯಲ್ಲಿ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಪಟ್ಟಿಯಿಂದ ಹೊರ ಹಾಕಲು ಎಸ್‌ಐಆ‌ರ್ ನ್ನು ಸಾಧನವಾಗಿ ಬಳಸಿಕೊಂಡಿರುವ ಸಾಧ್ಯತೆಗಳಿರುವಂತೆ ತೋರುತ್ತದೆ. ಸುದ್ದಿ ವರದಿಗಳಂತೆ ಇಬ್ಬರು ಚುನಾವಣಾ ಆಯುಕ್ತರು ಪ್ರಸಕ್ತ ನಡೆಯುತ್ತಿರುವ ಮತಪರಿಷ್ಕರಣೆ ಬಗ್ಗೆ ತೀವ್ರ ಆಕ್ಷೇಪಗಳನ್ನು ದೇಶದ ಮುಂದೆ ಇಟ್ಟಿದ್ದಾರೆ. ಹೊಸ ಮತದಾರರ ಕುರಿತಾದ ಕ್ರಮಗಳು ಅನಧಿಕೃತ ಮತ್ತು ಕಾನೂನುಬಾಹಿರ ಎಂದು ಸಹ ತೆರೆದಿಟ್ಟಿದ್ದಾರೆ. ಆಯೋಗದ ಅಧಿಕಾರಿಗಳನ್ನು ಕಡೆಗಾಣಿಸಿ ಮತದಾರರ ಡೇಟಾಬೇಸ್ ಪ್ರದೇಶವನ್ನು ದೆಹಲಿಯಲ್ಲಿ ಕೇಂದ್ರೀಕರಿಸುವುದರ ವಿರುದ್ಧ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ.

ಹೀಗಾಗಿಯೇ ಗುಣಮಟ್ಟದೊಂದಿಗೆ ಪರಿಮಣಾತ್ಮಕ ಪ್ರಜಾಪ್ರಭುತ್ವಕ್ಕೆ ಚುನಾವಣಾ ಸುಧಾರಣೆ ಹಿಂದೆಂದಿಗಿಂತಲೂ ಇವತ್ತು ಹೆಚ್ಚು ಅಗತ್ಯವಾಗಿದೆ . ಆಗ ಮಾತ್ರ ಅದರ್ಶ ಪ್ರಜಾಪ್ರಭುತ್ವ ಎಂಬುದು ಗಟ್ಟಿಗೊಳ್ಳುತ್ತದೆ. ಅಲ್ಲದೆ ಜಗತ್ತಿನ ಇತರೆ ದೇಶಗಳು ಕೂಡ ನಮ್ಮನ್ನು ಅನುಸರಿಸುತ್ತವೆ. ತಪಸ್ಸಿನಂತೆ ಕೂತು ಐಎಎಸ್, ಐಪಿಎಸ್ ಪಾಸು ಮಾಡಿ ಜಿಲ್ಲಾಧಿಕಾರಿ, ಆಯುಕ್ತರಾಗಿ ನೇಮಕಗೊಳ್ಳುವ ಪ್ರತಿಭಾವಂತರು ಅರೆ-ಬರೆ ಓದಿ ಬಂದ ರಾಜಕಾರಣಿಗಳ ಮಾತನ್ನು ಕೇಳಬೇಕಾಗುತ್ತದೆ. ಇದು ನಿಜಕ್ಕೂ ವಿಪರ್ಯಾಸವೇ ಸರಿ. ಇದನ್ನು ನಹಿಸಿಕೊಳ್ಳಬಹುದಾದರೂ ಅತ್ಯಂತ ನಾಚಿಕೆಗೇಡಿತನದ ವಿಚಾರ ಒಂದಿದೆ.

ಅದು ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳಂತಹ ಅತ್ಯುನ್ನತ ಹುದ್ದೆಗಳಿಗೆ ಚುನಾವಣೆ ನಡೆದಾಗಲೂ ಮತಗಳಲ್ಲಿ ಅಸಿಂಧು ಗೊಳ್ಳುತ್ತಿವೆ. 2022ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು 53 ಮತಗಳು ಅಸಿಂಧು ಗೊಂಡಿದ್ದವು. ಗೊತ್ತಿರಲಿ, ಇಲ್ಲಿ ಮತ ಚಲಾಯಿಸುವವರು ಅನಕ್ಷರಸ್ಥರಲ್ಲ. ಬದಲಿಗೆ ಅವರು ನಮ್ಮನ್ನಾಳುವ ಶಾಸಕರು, ಸಂಸದರಾಗಿದ್ದಾರೆ. ಇದಕ್ಕಾಗಿ ಭಾರತೀಯ ಆಡಳಿತ ಪೊಲೀಸ್‌ ಸೇವೆಯಂತೆ ರಾಜಕೀಯ ಸೇವೆಯನ್ನು ತೆರೆಯುವ ಅಗತ್ಯವಿದೆ, ಆಗ ಸಹಜವಾಗಿ ಕೌಟುಂಬಿಕ ರಾಜಕಾರಣ ಕೂಡ ಕೊನೆಗೊಳ್ಳಬಹುದು. ದುರಂತ ಎಂದರೆ, ಇತ್ತೀಚೆಗೆ ನಡೆದ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸಹ 34,051 ಮತಗಳು ತಿರಸ್ಕೃತಗೊಂಡಿವೆ. ಹೌದು, ನಮ್ಮಲ್ಲಿ ರಾಜಕಾರಣಿಗಳು ರಾಜಕಾರಣವನ್ನು ಕುಟುಂಬದ ವ್ಯವಹಾರ ಎಂಬಂತೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಇವರು ಇಂದಿಗೂ ಜನಸೇವೆಯನ್ನು ʼಸಾಧನ ʼಎಂದು ಭಾವಿಸೇ ಇಲ್ಲ. ಒಂದೊಮ್ಮೆ ರಾಜಕಾರಣಕ್ಕೆ ಧುಮುಕಿರುವ ಸಸಿಕಾಂತ್‌ ಸೆಂಥಿಲ್ ಅವರಂತಹ ಅಧಿಕಾರಿಗಳು ಸಚಿವರಾಗಿ ನೇಮಕಗೊಂಡರೆ, ಅಸಾಧಾರಣವಾದಂತಹ ಸೇವೆ ಮಾಡಬಹುದು. ಇದೇ ಹೊತ್ತಲ್ಲಿ, ಕಡಿಮೆ ಶಿಕ್ಷಣ ಹೊಂದಿರುವ ಸಚಿವರನ್ನು ಮತ್ತೊಮ್ಮೆ ಸಚಿವರನ್ನಾಗಿ ಆಯ್ಕೆ ಮಾಡುವುದಿಲ್ಲ. ಕಾರಣ ಇವರು ಸಚಿವರಾಗಿ ಮಾಡಿರುವ ಸಾಧನೆ ಕಳಪೆ ಮಟ್ಟದಿಂದ ಕೂಡಿರುತ್ತದೆ. ಹಾಗಂತ ಕಾಮರಾಜರಂತಹ ಮುಖ್ಯಮಂತ್ರಿಯವರ ಕೊಡುಗೆಯನ್ನು ಇತಿಹಾಸ ಮರೆಯಲು ಸಾಧ್ಯವಿಲ್ಲ. ಇಷ್ಟಲ್ಲದೆ, ನಮ್ಮ ವಿಸ್ತ್ರತ ಶೈಲಿಯ ಚುನಾವಣಾ ಸುಧಾರಣೆಯನ್ನು ಸಹ ಅನುಷ್ಠಾನಗೊಳಿಸುವ ಅಗತ್ಯವಿದೆ.

ಇದಕ್ಕಾಗಿ ರಾಜಕೀಯ ಒಮ್ಮತಕ್ಕೆ ಕಾಯುವ ಅಗತ್ಯವಿಲ್ಲ. ಇದಕ್ಕೆ ಜಾರ್ಜ್ ಫರ್ನಾಂಡಿಸ್ ಪ್ರಕರಣವನ್ನು ಉದಾಹರಣೆಯನ್ನಾಗಿ ಕೊಡಬಹುದಾಗಿದೆ. ಇವರು ತಮ್ಮ ಸ್ಮರಣಶಕ್ತಿಯನ್ನು ಕಳೆದುಕೊಂಡರೂ ರಾಜ್ಯಸಭೆಗೆ ಹೋಗಿದ್ದರು. ಹೀಗಾಗಿ ಚುನಾವಣೆ ಪೂರ್ವದಲ್ಲಿ ಉಮೇದು ವಾರರು ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರವನ್ನು ಹಾಜರುಪಡಿಸುವುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತಾಗಬೇಕಿದೆ. ಕೆಲವೊಂದು ಮಾಹಿತಿಯ ಮೂಲಗಳಂತೆ ಜಾರ್ಜ್ ಫರ್ನಾಂಡಿಸ್‌ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ಶಕ್ತರಾಗಿರಲಿಲ್ಲ. ಆಗವರ ಬದಲು ಅವರ ಸಹೋದ್ಯೋಗಿ ಶಿವಾನಂದ ತಿವಾರಿ ಅವರು ಪ್ರಮಾಣವನ್ನು 2009ರ ಆಗಸ್ಟ್ 4 ರಂದು ಪಡೆದಿದ್ದರು.

ಇನ್ನೂ ಕೆಲವು ಶಿಕ್ಷಕರು ಮತ್ತು ಪದವೀಧರರು ಅಸಮಾಧಾನದಿಂದ ಮತದಾನದಿಂದ ದೂರ ಉಳಿದಿದ್ದರು. ಹಾಗಂತ ಮತದಾನ ಮಾಡದಿರುವುದು ಪ್ರತಿಭಟನೆ ಅಲ್ಲ. ಬದಲಾಗಿ ಅದೊಂದು ಬಗೆಯಲ್ಲಿ ಶರಣಾಗತಿ. ನಿಜಕ್ಕೂ ಚುನಾವಣೆಯಲ್ಲಿ ಭಾಗವಹಿಸದಿರುವುದು ತನ್ನ ಧ್ವನಿಯನ್ನು ತಾನೇ ಹತ್ತಿಕ್ಕಿ ಕೊಂಡಂತೆ. ದೇಶದ ಭವಿಷ್ಯ ಮತ್ತು ಕರ್ತವ್ಯದಿಂದ ವಿಮುಖಗೊಂಡಂತೆ ಎಂಬುದನ್ನು ಮರೆಯಬಾರದು, ಅಮೆರಿಕ, ಬ್ರಿಟನ್, ಕೆನಡಾ ದೇಶಗಳಲ್ಲಿ ಚುನಾವಣೆಯನ್ನು ನಾಗರಿಕ ಕರ್ತವ್ಯದ ಪ್ರಮುಖ ಭಾಗವೆಂದೇ ಪರಿಗಣಿಸಲಾಗಿದೆ. ಇದೊಂದು ಅಧಿಕಾರ ಶಾಹಿ ಪ್ರಕ್ರಿಯೆ ಮಾತ್ರವಲ್ಲದೆ ಪ್ರಜಾಪ್ರಭುತ್ವ ಮೌಲ್ಯದ ಅಭಿವ್ಯಕ್ತಿಯಾಗಿದೆ.

ಚುನಾವಣಾ ಪ್ರಣಾಳಿಕೆಗಳು ಚುನಾವಣೆಯ ಕೇಂದ್ರ ಬಿಂದುವಾಗಿರುತ್ತದೆ. ಇದು ಚುನಾಯಿತರಾಗಿ ಸರ್ಕಾರ ರಚನೆ ಮಾಡುವ ಮುನ್ನ ತಾನು ಈಡೇರಿಸಬಹುದಾದ ಭರವಸೆ ಮತ್ತು ನೀತಿಗಳನ್ನು ಸಾರುತ್ತದೆ, ಅಲ್ಲದೆ ಆಡಳಿತದ ನೀಲಿ ನಕಾಶೆ ಆಗಿರುತ್ತದೆ. ಪ್ರಣಾಳಿಕೆಗಳಿಂದ ಯಾವ ಪಕ್ಷಗಳ ಕಾರ್ಯ ಸೂಚಿ ತಮ್ಮ ಆಶೋತ್ತರಗಳನ್ನು ಈಡೇರಿಸುತ್ತದೆ ಎಂಬ ನಿರ್ಣಯಕ್ಕೆ ಬರಲು ಸಹ ಸಹಕಾರಿಯಾಗುತ್ತದೆ. ಇಂತಹ ಪ್ರಣಾಳಿಕೆಗಳ ಸೂಕ್ತ ಪರಿಶೀಲನೆಯ ಬಳಿಕ ಮತದಾರ ಪ್ರಭು ಯಾವ ಅಭ್ಯರ್ಥಿ, ಯಾವ ಪಕ್ಷ ತನ್ನ ಹಿತಾಸಕ್ತಿ ಕಾಯಬಲ್ಲದೆಂಬ ನಿರ್ಧಾರಕ್ಕೆ ಬರುತ್ತಾನೆ. ಇಷ್ಟಲ್ಲದೆ ಮತದಾನ ಹಕ್ಕಿನ ಕುರಿತಾದ ಅರಿವು ಮೂಡಿಸುವಿಕೆಯನ್ನು ಚುನಾವಣಾ ಆಯೋಗ ಮತ್ತಷ್ಟು ಪ್ರಬಲವಾಗಿ ಮಾಡಬೇಕಿದೆ. ಜೊತೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ವಿಸ್ತತವಾಗಿ ಪಾಲ್ಗೊಳ್ಳಲು ಮತದಾರರನ್ನು ಉತ್ತೇಜಿಸಲು ಮತ್ತಷ್ಟು ಸಿದ್ಧತೆಗಳ ಮೂಲಕವೂ ಮುಂದಾಗಬೇಕಿದೆ.

ಬಹುತೇಕ ಜನಸಾಮಾನ್ಯರು ಅದರಲ್ಲೂ ಅಂಚಿಗೆ ದೂಡಲ್ಪಟ್ಟ ಸಮುದಾಯಗಳ ಜನ ತಮ್ಮ ಮತದಾನದ ಹಕ್ಕಿನ ಕುರಿತಂತೆ ಅರಿವಿನ ಕೊರತೆ ಹೊಂದಿರುತ್ತಾರೆ. ಅಲ್ಲದೆ, ತಮ್ಮ ಮತದಾನದ ಹಕ್ಕಿನ ಚಲಾವಣೆಗೆ ಹಲವು ಅಡೆತಡೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಶಿಕ್ಷಣ, ಮತ್ತದರ ವಿಸ್ತ್ರತ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ನಾಗರಿಕರನ್ನು ಸಬಲೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಇವತ್ತು ಪಕ್ಷವನ್ನು ಆಧರಿಸಿ ಮತದಾನ ಮಾಡುವುದಕ್ಕಿಂತ ಸೂಕ್ತವಾದ ಅಭ್ಯರ್ಥಿಗಳನ್ನು ಗುರುತಿಸಿ ಮತದಾನ ಮಾಡುವ ಸನ್ನಿವೇಶ ಜಾರಿಗೆ ಬರಬೇಕಿದೆ.

ಮತದಾರರು ಅಭ್ಯರ್ಥಿಯ ವಿದ್ಯಾರ್ಹತೆ, ಅವರಲ್ಲಿರುವ ಬದ್ಧತೆ ಹಾಗೂ ಸಮಗ್ರತೆಯನ್ನು ಗಮನಿಸುತ್ತಾರೆ. ಮುಖ್ಯವಾಗಿ ಸಾರ್ವಜನಿಕರಿಗೆ ಹೇಗೆ ಸೇವೆ ಸಲ್ಲಿಸುತ್ತಾರೆ ಎಂಬುದನ್ನು ಆಧರಿಸಿ ತಮ್ಮ ಆಯ್ಕೆಯ ಮುದ್ರೆಗಳನ್ನು ಹೊತ್ತುತ್ತಾರೆ . ಅಲ್ಲದೆ ಅಭ್ಯರ್ಥಿಯ ಹಿನ್ನೆಲೆ, ನೀತಿ, ನಿರ್ಮಾಣ ಸಾಮರ್ಥ್ಯ ಹಾಗೂ ಸಾಗಿ ಬಂದ ಹಾದಿಯನ್ನು ಶೋಧಿಸಿ ತಿಳಿವಳಿಕೆಯಿಂದ ಆಯ್ಕೆ ಮಾಡುವ ಗುಣ ರೂಡಿಸಿಕೊಳ್ಳುತ್ತಿದ್ದಾರೆ.

ಇಷ್ಟಕ್ಕೂ ಚುನಾವಣಾ ಆಯುಕ್ತರ ನಡುವಿನ ತೀವ್ರ ಬಗೆಯ ಭಿನ್ನಾಭಿಪ್ರಾಯಗಳು ಎದ್ದಿರುವುದು ಇದೇ ಮೊದಲಲ್ಲ. ಆದರೆ ಇದೀಗ ಎದ್ದಿರುವುದು ಅತ್ಯಂತ ಹಾನಿಕಾರಕ. ಹಿಂದೆ ನಡೆದ ಭಿನ್ನಾಭಿಪ್ರಾಯ ಪ್ರಕರಣಗಳಲ್ಲಿ ಅಭಿಪ್ರಾಯ ಭೇದ ಸಣ್ಣ ಪ್ರಮಾಣದಲ್ಲಿತ್ತು. ಅದು ಬಹುತೇಕ ಆಡಳಿತಾತ್ಮಕ ಸಮಸ್ಯೆಯಿಂದ ಕೂಡಿದ್ದವು ಆದರಿಂದು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಜೊತೆಗೆ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇನ್ನಿಬ್ಬರು ಚುನಾವಣಾ ಆಯುಕ್ತರಿಗೆ ಇಲ್ಲವಾಗಿದೆ.

ಸುದ್ದಿ ವರದಿಗಳು ಹೇಳುವಂತೆ ಜ್ಞಾನೇಶ್ ಕುಮಾರ್ ಅವರ ಹಸ್ತಕ್ಷೇಪದಿಂದಾಗಿ ಸುಮಾರು 13 ಕೋಟಿ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಚುನಾವಣಾ ಕಾಯ್ದೆಯ ಪ್ರಕಾರ ಆಯೋಗದ ವ್ಯವಹಾರಗಳು ಒಮ್ಮತದ ಅಥವಾ ಬಹುಮತದ ಆಧಾರದ ಮೇಲೆ ಇರಬೇಕು ಎಂಬುದನ್ನು ನ್ಯಾಯಾಲಯ ಮತ್ತೊಮ್ಮೆ ನೆನಪಿಸುವ ಅಗತ್ಯವಿದೆ .ಈಗಾಗಲೇ ನ್ಯಾಯಾಲಯ ಪತ್ರಿಕಾ ವರದಿಗಳನ್ನು ಅಂತಿಮ ಎಂದು ಪರಿಗಣಿಸಲು ನಿರಾಕರಿಸಿದೆ.

ಅಲ್ಲದೆ , ನ್ಯಾಯಾಲಯ ಆಯೋಗದ ನಿರ್ಧಾರಗಳ ನೈಜ ಸ್ವರೂಪವನ್ನು ಅರಿಯಲು ಅಧಿಕೃತ ದಾಖಲೆ ಮತ್ತು ನಡಾವಳಿಗಳನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಒಂದೊಮ್ಮೆ ಇಬ್ಬರು ಚುನಾವಣಾ ಆಯುಕ್ತರ ಗಮನಕ್ಕೆ ಬಾರದಂತೆ 14 ಬಗೆಯ ಆಕ್ಷೇಪಣೆಗಳನ್ನು ಕಡೆಗಾಣಿಸಿ ಏಕ ಪಕ್ಷೀಯವಾಗಿ ಜ್ಞಾನೇಶ್ ಕುಮಾರ್ ಅವರು ನಿರ್ಣಯ ಕೈಗೊಂಡಿದ್ದರೆ ಅಗತ್ಯ ಕ್ರಮ ಜರುಗಬೇಕಾಗುತ್ತದೆ. ಚುನಾವಣಾ ಆಯೋಗದ ಅಧಿಕಾರಿಗಳ ಗಮನಕ್ಕೆ ತಾರದೆ ಕಾರ್ಯಭಾರ ಹಂಚಿಕೆ ಮಾಡಿದ್ದು ಸಣ್ಣ ಸಂಗತಿಯಲ್ಲ.

ಅದು ಜುಲೈ 29 . ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಮಧ್ಯಪ್ರವೇಶ ಮಾಡಲು ಬಯಸಿ ಪತ್ರ ಬರೆದಿದ್ದರು . ಇದರ ಮೇಲೆ ಅಭಿಪ್ರಾಯ ಕೋರಿ ಸಂಪುಟ ಕಾರ್ಯದರ್ಶಿಯನ್ನು ಕೋರಿದ್ದರೆ ಸಮಸ್ಯೆ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ. ಚುನಾವಣಾ ಆಯೋಗ ಮೂರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿ ರಚನೆಯಾದಾಗಿನಿಂದ ಬಾಕಿ ಉಳಿದ ಪ್ರಕರಣಗಳನ್ನು ಚರ್ಚಿಸಲು ಹಾಗೂ ನಿರ್ಧಾರ ಕೈಗೊಳ್ಳಲು ಪ್ರತಿನಿತ್ಯ ಸಭೆ ಸೇರುವುದನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬರಲಾಗಿದೆ. ಹೀಗಾಗಿ ನಾನು ಕೇಳುವುದು ಕಳೆದ ಒಂದು ವರ್ಷದಲ್ಲಿ ಮೂರು ಜನರು ಕೂಡಿ ಎಷ್ಟು ಸಭೆಗಳನ್ನು ನಡೆಸಿದ್ದಾರೆ. ಯಾವ ಯಾವ ವಿಷಯಗಳನ್ನು ಚರ್ಚಿಸಿದ್ದಾರೆ. ಯಾವುದರ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ನನಗೆ ಮಾತ್ರವಲ್ಲ ದೇಶವಾಸಿಗಳಿಗೆ ತಿಳಿಯಬೇಕಿದೆ.

ಆಯೋಗದಲ್ಲಿ ಇಂತಹದ್ದೊಂದು ಅನುಮಾನ ದಶಕದ ಹಿಂದೆಯೇ ಮೊಳೆತಿದ್ದರೂ, ಇತ್ತೀಚಿನ ದಿನಗಳಲ್ಲಿ ದೊಡ್ಡದಾಗಿ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ. ಮೊದಲ ಬಾರಿಗೆ ಅಂದರೆ 2017ರಲ್ಲಿ ಚುನಾವಣಾ ಆಯೋಗದ ನಿರ್ಧಾರ, ನಿರ್ಣಯಗಳನ್ನು ವಿರೋಧ ಪಕ್ಷಗಳು ನಿಕಟವಾಗಿ ಗಮನಿಸಿದ್ದವು. ಆಗ ಎದುರಾದ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಚುನಾವಣಾ ದಿನಾಂಕಗಳನ್ನು ವಾಡಿಕೆಯಂತೆ ಒಂದೇ ಗುಕ್ಕಿಗೆ ಪ್ರಕಟಿಸಲಿಲ್ಲ.

2017ರ ಅಕ್ಟೋಬರ್ 12ರಂದು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಅಕ್ಟೋಬರ್ 25ರಂದು ಗುಜರಾತಿಗೆ ಚುನಾವಣೆ ಘೋಷಿಸಿತು. ಇದುವೇ ಆಯೋಗಕ್ಕೆ ಎದುರಾದ ಮೊದಲ ಆಕ್ಷೇಪಣೆಯಾಗಿದೆ . ಇದಕ್ಕೆ ನೆರೆ ಪರಿಹಾರ ಕಾರ್ಯ ಇರುವುದರಿಂದ ಚುನಾವಣಾ ಘೋಷಣೆಯನ್ನು ಮುಂದಕ್ಕೆ ಹಾಕಿ ಎಂದು ಗುಜರಾತ್ ಸರ್ಕಾರ ಅಂದು ಕೋರಿಕೊಂಡಿದ್ದರಿಂದ ಹಿಮಾಚಲ ಪ್ರದೇಶದೊಂದಿಗೆ ಚುನಾವಣೆ ನಡೆಸಲಿಲ್ಲ ಎಂಬ ಸಬೂಬನ್ನು ಆಯೋಗ ಹೇಳಿಕೊಂಡಿತ್ತು.

ಇದಿಷ್ಟೇ ಅಲ್ಲದೆ, ಮಧ್ಯಪ್ರದೇಶ, ಛತ್ತೀಸ್ತಡ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಸಲುವಾಗಿ 2018ರ ಅಕ್ಟೋಬರ್ 6ರಂದು ಬೆಳಿಗ್ಗೆ 12:30 ಕ್ಕೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಪತ್ರಿಕಾಗೋಷ್ಠಿಯನ್ನು 12:30 ಬದಲಿಗೆ 3 ಗಂಟೆಗೆ ಮುಂದೂಡಲಾಯಿತು. ಇಂತಹ ಮುಂದೂಡಿಕೆಗೆ ಕಾರಣ ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಅಲ್ಲೊಂದು ಗ್ಯಾರಂಟಿ ಯೋಜನೆ ಘೋಷಿಸಲು ಅನುವಾಗುವಂತೆ ಆಯೋಗ ಪತ್ರಿಕಾಗೋಷ್ಠಿಯನ್ನು ಮುಂದೂಡಿದೆ ಎಂದು ಕಾಂಗ್ರೆಸ್ ಪಕ್ಷ ಆಪಾದಿಸಿತ್ತು. ತೆಲಂಗಾಣದಲ್ಲಿ ಮತದಾರರ ಪಟ್ಟಿ ಪ್ರಕಟಣೆಗೆ ಸಂವಹನ ಕೊರತೆಯಿಂದಾಗಿ ವಿಳಂಬವಾಯಿತೆಂಬ ಕಾರಣ ಕೂಡ ಕೊಟ್ಟಿತು. ಇದೇ ಬಗೆಯಲ್ಲಿ ತಮಿಳುನಾಡು ಮುಖ್ಯ ಕಾರ್ಯದರ್ಶಿಯವರು ಕೊಟ್ಟ ಚಂಡಮಾರುತ ಭೀತಿಯ ಎಚ್ಚರಿಕೆಯಿಂದಾಗಿ ಪತ್ರಿಕಾ ಗೋಷ್ಠಿಯನ್ನು ಮುಂದೂಡಲಾಯಿತೆಂದು ಸ್ಪಷ್ಟಪಡಿಸಿತ್ತು.

ಇದೇ ಬಗೆಯಲ್ಲಿ ದೆಹಲಿಯ 20 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದರು. ಇದನ್ನಾಧರಿಸಿ ಶಾಸಕರನ್ನು ಅನರ್ಹತೆಗೊಳಿಸಲು ಆಯೋಗ ಮಾಡಿದ್ದ ಶಿಫಾರಸ್ಸನ್ನು ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2018 ಜನವರಿ 21ರಂದು ಸ್ವೀಕರಿಸಿದ್ದರು. ಆಗಲು ಸಹ ಆಯೋಗ ಸುದ್ದಿಗೆ ಒಳಗಾಗಿತ್ತು. ಶಾಸಕರು ತೀರ್ಪನ್ನು ವಿರೋಧಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿ, ಶಾಸಕರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಿಲ್ಲವೆಂದು ವಾದಿಸಿದರು. ಆಗ ನ್ಯಾಯಾಲಯ ಶಾಸಕರ ಅಹವಾಲನ್ನು ಮೊದಲಿನಿಂದ ಅಲಿಸುವಂತೆ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತ್ತು. ಶಾಸಕರ ಅಹವಾಲನ್ನು ಆಲಿಸದ ಚುನಾವಣಾ ಆಯೋಗ ನೈಸರ್ಗಿಕ ನ್ಯಾಯ ಅನುಸರಿಸಬೇಕೆಂಬುದು ಅದರ ನಿಲುವಾಗಿತ್ತು.
ಇಂತಹ ನಡೆಯನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದ್ದಲ್ಲದೆ ಆಯೋಗ ನರೇಂದ್ರ ಮೋದಿ ಸರ್ಕಾರದ ಕೈಗೊ ಗೊಂಬೆಯಾಗಿದೆ ಎಂದು ಹಿಯ್ಯಾಳಿಸಿತ್ತು.

ಇದೇನೆ ಇರಲಿ , ನಮ್ಮ ಚುನಾವಣಾ ವ್ಯವಸ್ಥೆಯ ನಿಜವಾದ ಸವಾಲು ಮತಗಟ್ಟೆಗಳಲ್ಲಾಗಲಿ ಅಥವಾ ಮತ ಎಣಿಕೆ ಕೊಠಡಿಗಳಲ್ಲಾಗಲಿ ಇಲ್ಲ. ಅದು ತೆರೆಮರೆಯಲ್ಲಿ ನಡೆಯುವ ಸಾರಾ ಸಗಟಾಗಿ ಮತ ಖರೀದಿಸುವುದು ಹಾಗೂ ಅಮಿಷಗಳನ್ನು ಒಡ್ಡುವುದರಲ್ಲಿ ಅಡಗಿದೆ. ಬಡತನದಂತಹ ಕ್ರೂರ ಮತ್ತು ನಿಜವಾದ ಪಿಡುಗುಗಳನ್ನು ಕಡೆಗಾಣಿಸುತ್ತಾ ನಾವಿಂದು ಸಾಗುತ್ತಿದ್ದೇವೆ. ಸಾರ್ವಜನಿಕರ ಹಿತಕ್ಕಾಗಿ ಸರ್ಕಾರ ಜಾರಿಗೆ ತರುವ ಅಲ್ಪಾವಧಿ ಪ್ರಮಾಣದ ಕಾರ್ಯ ಕ್ರಮಗಳನ್ನೇ ಮೆಚ್ಚಿಕೊಂಡು, ನೆಚ್ಚಿಕೊಂಡು ಬದುಕಿನ ಬಂಡಿಯನ್ನು ಓಡಿಸುತ್ತಿದ್ದೇವೆ. ಇದರ ನಡುವೆ ನಾವು ನೈಜ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕಾಲ್ಪನಿಕ ಸಮಸ್ಯೆಗಳಿಗೆ ನಮಗೆ ಅನುಕೂಲ ಅನಿಸಿದ ಪರಿಹಾರಗಳನ್ನು ಕಂಡು ಕೊಳ್ಳುತ್ತಿದ್ದೇವೆ.

ಆದು ಪಚ್ಚೆಮಲೈ ಎಂಬ ಬೆಟ್ಟದ ಬದಿಯ ಹಳ್ಳಿ. ಅಲ್ಲೊಬ್ಬ ಪಶುಪಾಲಕ ಇರುತ್ತಾನೆ. ಅವನು ಬೆಟ್ಟದ ಬದಿಯಲ್ಲಿರುವ ಪಂಚಾಯಿತಿ ಕಛೇರಿ ಬಳಿ ಏನನ್ನೋ ಹುಡುಕುತ್ತಿರುತ್ತಾನೆ. ಅಲ್ಲಿಯೇ ಆಡು, ದನ, ಕತ್ತೆ ಮೇಯಿಸುತ್ತಿದ್ದವರು ವಿಚಾರಿಸಿದಾಗ, ವೀರಭದ್ರ ತಾನು ಕಳೆದುಕೊಂಡ ಕೀಲಿಯನ್ನು ಹುಡುಕುತ್ತಿರುವುದಾಗಿ ತಿಳಿಸುವನು. ಆಗವವರು ಕೂಡ ವೀರಭದ್ರನೊಂದಿಗೆ ಕೀಲಿ ಹುಡುಕಲು ಕೈಜೋಡಿಸುವರು. ಆದರೆ ಕೀಲಿ ಪತ್ತೆಯಾಗುವುದಿಲ್ಲ. ಕೊನೆಗೆ, ಅವರು ಕೀಲಿ ಎಲ್ಲಿ ಕಳೆದುಹೋಯಿತು ಎಂದು ಕೇಳುವರು. ಅದಕ್ಕವನು, ಹಳ್ಳಿಯ ಪಂಚಾಯಿತಿ ಕಛೇರಿ ಸಮೀಪ ಇರುವ ಬೆಟ್ಟದ ಬಳಿ ಎನ್ನುವನು. ಹಾಗಾದರೆ ಪಂಚಾಯಿತಿ ಕಚೇರಿ ಸಮೀಪದ ಬೀದಿಯಲ್ಲೇಕೆ ಹುಡುಕುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಕ್ಕೆ, ಅವನು ದೀಪದ ಬೆಳಕಿದೆ ಎನ್ನುವನು.

ಚುನಾವಣಾ ಆಯೋಗದ ನೇಮಕಾತಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶವು, ಕೀಲಿ ಕಳೆದುಹೋದ ಸ್ಥಳಕ್ಕೆ ಬೆಳಕನ್ನು ಕೊಂಡೊಯ್ಯುವ ಬದಲು, ಬೆಳಕಿರುವ ಸ್ಥಳದಲ್ಲಿ ಕೀಲಿಯನ್ನು ಹುಡುಕುವಂತಹ ಉದಾಹರಣೆಯನ್ನು ಕೊಟ್ಟಿದ್ದ. ಇಷ್ಟಾದರೂ ಚುನಾವಣೆ ಪ್ರಕ್ರಿಯೆಯಲ್ಲಿ ಅಥವಾ ರಾಜಕೀಯ ಸಂಸ್ಕೃತಿಯಲ್ಲಿ ಯಾವುದೇ ಬಗೆಯಲ್ಲಿ ಅಷ್ಟೊಂದು ಬದಲಾವಣೆಯಾಗಿಲ್ಲ.

ಇಷ್ಟಕ್ಕೂ ಚುನಾವಣೆ ಎಂಬುದು ನಾಗರಿಕರಿಗೆ ದೊರಕಿರುವ ಬಹುದೊಡ್ಡ ಶಕ್ತಿ ಮತ್ತು ಅವಕಾಶ . ಚುನಾವಣೆ ಜನಪರವಾಗಿರುವಂತೆ ಹಾಗೂ ತಮ್ಮ ಬದುಕನ್ನು ಹಸನು ಗೊಳಿಸುವಂತಹ ನೀತಿ ರೂಪಿಸುವಂತೆ ಮಾಡಲು ಲಭ್ಯವಿರುವ ಒಂದು ಪ್ರಮುಖ ಸಾಧನವಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಜನಸಾಮಾನ್ಯರು ಕ್ರಿಯಾಶೀಲರಾಗಿ ಪಾಲ್ಗೊಂಡಾಗ ಮಾತ್ರ ಚುನಾಯಿತ ಪ್ರತಿನಿಧಿಗಳಲ್ಲಿ ಮಾಲೀಕತ್ವ ಮತ್ತು ಹೊಣೆಗಾರಿಕೆ ಪ್ರಜ್ಞೆ ಮೂಡಿಸಲು ಸಾಧ್ಯ. ಆದರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಮಾನವಾದ ಭಾಗವಹಿಸುವಿಕೆಯಲ್ಲಿ ಹತ್ತಾರು ಸವಾಲುಗಳು ಇಂದಿಗೂ ಇವೆ. ಅಂತಹವುಗಳಲ್ಲಿ ಮತದಾರರ ಹತ್ತಿಕ್ಕುವಿಕೆಯ ತಂತ್ರಗಾರಿಕೆ ಬಲು ದೊಡ್ಡದಾಗಿ ಕಾಡುತ್ತಿದೆ. ಅದರಲ್ಲೂ ಅಶಕ್ತ ಸಮುದಾಯಗಳ ಮತದಾನದ ಹಕ್ಕನ್ನು ಕಸಿಯುತ್ತಿರುವುದರಿಂದ ರಾಜಕೀಯ ಕುರಿತಂತೆ ಹೆವರಿಕೆಯೂ ಉಂಟಾಗುತ್ತಿದೆ. ಇದಕ್ಕಾಗಿ ಚುನಾವಣೆಯಲ್ಲಿ ತೊಡಗಿಸಿ ಕೊಂಡಾಗಲು ಇರುವ ಅಡೆತಡೆಗಳು ಹಾಗೂ ಸವಾಲುಗಳ ಪರಿಹಾರಕ್ಕೆ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಿರಂತರವಾಗಿ ಬಲಪಡಿಸಬೇಕಿದೆ.

ಹಿಂದೊಮ್ಮೆ ಚುನಾವಣಾ ಆಯೋಗದ ಪರವಾಗಿ ರಾಜಕಾರಣಿಗಖೇ ಪ್ರಜಾತಂತ್ರವನ್ನು ದುರ್ಬಲಗೊಳಿಸಬೇಡಿ ಎಂದು ಬರೆದಿದ್ದೆ . ಗೊತ್ತಿರಲಿ, ಸೂಕ್ಷ್ಮವಾದ ಹಾಗೂ ಕ್ಲಿಷ್ಟವಾದ ರಾಜಕೀಯ ಸವಾಲುಗಳನ್ನು ಸಹ ನ್ಯಾಯಾಂಗದ ಆದೇಶಗಳ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎನಿಸುತ್ತದೆ . ಇನ್ನೂ ನಮ್ಮ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕಂಡಾಗ, ಚುನಾವಣೆಯ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಇವತ್ತಿಗೂ ಚುನಾವಣಾ ತೀರ್ಪುಗಳನ್ನು ದೇಶದ ಉದ್ದಗಲ ಒಪ್ಪಿಕೊಳ್ಳುತ್ತಿದ್ದೇವೆ ಜೊತೆಗೆ ಶಾಂತಿಯುತವಾಗಿ ಅಧಿಕಾರವನ್ನು ಸಹ ಹಸ್ತಾಂತರ ಮಾಡುತ್ತಿದ್ದೇವೆ.

ಮೊಟ್ಟ ಮೊದಲ ಬಾರಿಗೆ ಸುಕುಮಾರ್ ಸೇನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ನಮ್ಮದೇಶ ವೈವಿಧ್ಯತೆಯಿಂದ ಮತ್ತು ಗ್ರಾಮೀಣ ಪ್ರದೇಶವನ್ನೇ ಹೆಚ್ಚಾಗಿ ಹೊಂದಿತ್ತು . ಅಲ್ಲದೆ, ಅನಕ್ಷರಸ್ಥರನ್ನೇ ಹೊತ್ತಿದ್ದ ನಮ್ಮ ದೇಶದಲ್ಲಿ ಆಗಲೂ ವಿಶ್ವಾಸಾರ್ಹ, ಶಾಂತಿಯುತ, ನಿಷ್ಪಕ್ಷಪಾತ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ಜಗತ್ತನ್ನೇ ಬೆರಗಾಗಿಸಿದ್ದರು. ಕಾಲಾನಂತರದಲ್ಲಿ ವ್ಯವಸ್ಥೆಗಳನ್ನು ಮತ್ತು ಪ್ರಕ್ರಿಯೆಗಳನ್ನು ರೂಪಿಸಿ ಬಲಪಡಿಸಲಾಯಿತು . ಇದರಿಂದಾಗಿ ನಿಷ್ಪಕ್ಷಪಾತ ಚುನಾವಣೆಗಳ ವಿಶ್ವಾಸಾರ್ಹ ಸಂಸ್ಕೃತಿಯು ವಿಕಸನಗೊಂಡಿತು.

ಇನ್ನೂ 1977 ರಲ್ಲಿ ಟಿ.ಎನ್. ಸ್ವಾಮಿನಾಥನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ, ಅತ್ಯಂತ ಕ್ಲಿಷ್ಟಕರವಾದ ಚುನಾವಣೆಯೊಂದನ್ನು ಯಶಸ್ವಿಯಾಗಿ ನಡೆಸಿದ್ದರು. ಅಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಮತ್ತು ಅವರ ಸಹೋದ್ಯೋಗಿಗಳೇ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಮತ್ತಷ್ಟು ಹೇಳಬೇಕೆಂದರೆ, ‘ತುರ್ತುಪರಿಸ್ಥಿತಿ’ಯಂತಹ ಸಂದಿಗ್ಧ ಹೊತ್ತಲ್ಲಿಯೂ, ಜನ ಯಾವುದೇ ಭಯವಿಲ್ಲದೆ ಮತ ಚಲಾಯಿಸಿದರು. ಹೀಗಾಗಿಯೇ ಸೆರೆಯಲ್ಲಿದ್ದ ಅನೇಕ ನಾಯಕರು ಸಹ ಭಾರಿ ಬಹುಮತದೊಂದಿಗೆ ಆಯ್ಕೆಯಾದರು. ನಮ್ಮ ದೇಶದ ಚುನಾವಣಾ ಇತಿಹಾಸದಲ್ಲಿ ಅತ್ಯಂತ ಗಡಸಾದ ತೀರ್ಮಾನಗಳನ್ನು ತೆಗೆದುಕೊಂಡವರೆಂದರೆ ಅದು ಟಿ.ಎನ್. ಶೇಷನ್ ಅವರು ಮಾತ್ರ .

ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನಿಯುಕ್ತರಾದ ನಂತರ, ಕಾಗದದ ಹುಲಿಯಾಗದೆ ಚುನಾವಣಾ ಕಾನೂನುಗಳಿಗೆ ಜೀವ ನೀಡಿದರು. ಸಂವಿಧಾನದ 324ನೇ ವಿಧಿಯ ವಿಶೇಷ ಅಧಿಕಾರವನ್ನು ಬಳಸಿ, ಸಂಸತ್ತಿನ ಅನುಪಸ್ಥಿತಿಯಲ್ಲಿಯೂ ಕಾನೂನನ್ನು ಅನುಷ್ಠಾನಗೊಳಿಸಬಹುದೆಂದು ತೋರಿಸಿಕೊಟ್ಟರು. ಆಗಲೇ ಮೊಟ್ಟ ಮೊದಲ ಬಾರಿಗೆ ಮೂರು ಸದಸ್ಯರ ಆಯೋಗ ಕೂಡ ರಚನೆಯಾಯಿತು. ಆರಂಭದಲ್ಲಿದು ಅಂತೆ ಕಂತೆಗಳ ಸುಳಿಗೆ ಸಿಲುಕಿದರೂ ಮೂರು ಸದಸ್ಯರ ಆಯೋಗ ಯಶಸ್ವಿಯಾಗಿ, ವಿಶ್ವಾಸಾರ್ಹ ಚುನಾವಣೆಗಳನ್ನು ನಡೆಸಿದರು.

ಆಯೋಗ ಎಷ್ಟು ಬಲಿಷ್ಠವಾಗಿತ್ತು ಎಂದರೆ, ಕೆಲವೊಮ್ಮೆ ಪ್ರಶ್ನಾರ್ಹ ಹಿನ್ನೆಲೆಯ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಿಸಿದರೂ ವ್ಯವಸ್ಥೆ ಮಾತ್ರ ಕುಸಿಯಲಿಲ್ಲ. ಆದರೆ, 2009ರಲ್ಲಿ ಎನ್. ಗೋಪಾಲಸ್ವಾಮಿ ಅವರು ಮುಖ್ಯ ಆಯುಕ್ತರಾಗಿದ್ದಾಗ 324(5)ನೇ ವಿಧಿಯಡಿ ಚುನಾವಣಾ ಆಯುಕ್ತ ರಾಗಿದ್ದ ನವೀನ್ ಚಾವ್ಲಾ ಅವರನ್ನು ಪಕ್ಷಪಾತದ ಕಾರಣಕ್ಕೆ ತೆಗೆದುಹಾಕುವಂತೆ ಶಿಫಾರಸು ಮಾಡಿದ್ದರು. ಇವರ ಶಿಫಾರಸ್ಸನ್ನು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕೂಡ ಪರಿಗಣಿಸದೆ ತಿರಸ್ಕರಿಸಿದ್ದರು. ಇಷ್ಟಕ್ಕೆ ನಿಲ್ಲದೆ, ಸಚಿವ ಸಂಪುಟದ ಶಿಫಾರಸ್ಸಿನ ಮೇರೆಗೆ ನವೀನ್ ಚಾವ್ಲಾ ಅವರನ್ನೇ ಮುಖ್ಯ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಇವರ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳಿದ್ದರೂ, 2009ರ ಸಾರ್ವತ್ರಿಕ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಿಕೊಟ್ಟಿದ್ದರು.

WhatsApp Image 2025 11 17 at 3.59.52 PM
ಡಾ. ಎಂ ಎಸ್ ಮಣಿ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ Nvidia CEO ಸ್ಕ್ಯಾಮ್ ಹೂರಣವೇನು?

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ...

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ – 3 ಸಿಆರ್‌ಪಿಎಫ್‌ ಯೋಧರಿಗೆ ಗಾಯ

ಭಯೋತ್ಪಾದಕರ ದಾಳಿಗೆ ಮೂರು ಸಿಆರ್‌ಫಿಎಫ್‌ ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ...

ದೀಪಾವಳಿ ಪಟಾಕಿ ಸಮರ್ಥಿಸಿಕೊಂಡ ಸಿಎಂ ಯೋಗಿ; ಮಾಲಿನ್ಯದ ಕಾಳಜಿಗಿಂತ ಪಟಾಕಿ ಮುಖ್ಯವೇ?

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿರುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ...

ಅಬುಧಾಬಿಯಲ್ಲಿ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ; ಅಮೆರಿಕದ ಸಂಧಾನ ಪ್ರಯತ್ನ!

ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ...