ಡಿಲಿಮಿಟೇಷನ್ ಮಸೂದೆ: 50% ಸ್ಥಾನ ಹೆಚ್ಚಳ ಅಥವಾ ಜನಸಂಖ್ಯೆ ಆಧಾರಿತ ವಿಂಗಡಣೆ; ಡಿಎಂಕೆಗೆ ಕೇಂದ್ರದ ಬೆದರಿಕೆ

Date:

ಕೇಂದ್ರ ಸರ್ಕಾರದ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಅಧಿಕೃತವಾಗಿ ಬೆಂಬಲ ಸೂಚಿಸಲು ನಿರ್ಧರಿಸಿದೆ. ಈ‌ ನಿರ್ಧಾರದ ಹಿಂದೆ, ‘50% ಸ್ಥಾನ ಹೆಚ್ಚಳ ಪ್ರಸ್ತಾಪವನ್ನು ಬೆಂಬಲಿಸಿ ಅಥವಾ ಜನಸಂಖ್ಯೆ ಆಧಾರಿತ ವಿಂಗಡಣೆಯನ್ನು ಎದುರಿಸಿ’ ಎಂಬ ಮೋದಿ ಸರ್ಕಾರದ ಬೆದರಿಕೆ ಇದೆ ಎಂದು ವರದಿಯಾಗಿದೆ.

- Advertisement -

ನವೆಂಬರ್ 28ರ ಶನಿವಾರದಂದು ಚೆನ್ನೈನಲ್ಲಿ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಸಭೆಯಲ್ಲಿ ಡಿಲಿಮಿಟೇಷನ್ ಮಸೂದೆಯನ್ನು ಬೆಂಬಲಿಸುವ ಮಹತ್ವದ ನಿರ್ಣಯ ಅಂಗೀಕರಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸ್ಟಾಲಿನ್, “ನ್ಯಾಯಯುತ ಕ್ಷೇತ್ರ ಪುನರ್‌ವಿಂಗಡಣೆಯ ಬೇಡಿಕೆಗಳನ್ನು ಒಳಗೊಂಡಿರುವ ಮಸೂದೆಯನ್ನು ಡಿಎಂಕೆ ಬೆಂಬಲಿಸುತ್ತದೆ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಕಾಡಿನ ಮಕ್ಕಳೇ ವನ್ಯಜೀವಿಗಳ ನಿಜವಾದ ಬಂಧುಗಳು: ಆದಿವಾಸಿಗಳ ಜ್ಞಾನ,...

ಕಾಡು ಎಂದರೆ ಕೇವಲ ಮರಗಳು, ಪ್ರಾಣಿಗಳು ಮತ್ತು ಭೌಗೋಳಿಕ ಪ್ರದೇಶವಲ್ಲ. ಅದು ಸಾವಿರಾರು ವರ್ಷಗಳಿಂದ ಮನುಷ್ಯ ಮತ್ತು ಪ್ರಕೃತಿ ಪರಸ್ಪರ ಅವಲಂಬನೆಯೊಂದಿಗೆ ಬದುಕಿಕೊಂಡು ಬಂದಿರುವ ಜೀವಂತ ಪರಿಸರ ವ್ಯವಸ್ಥೆ. ಈ ವ್ಯವಸ್ಥೆಯೊಂದಿಗೆ ಅತ್ಯಂತ...

ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು, ಗುಮಾಸ್ತರನ್ನು ಸೃಷ್ಟಿಸಿದ ಮೆಕಾಲೆ- ಇದು...

ಇತಿಹಾಸದ ಹೆಸರಿನಲ್ಲಿ ಆಯ್ದ ನಿರೂಪಣೆ; ಜಾತಿ ಪ್ರಾಬಲ್ಯ, ಶಿಕ್ಷಣದ ಹಕ್ಕು ಮತ್ತು ಆಧುನಿಕ ಅಭಿವೃದ್ಧಿಯ ವಾಸ್ತವಗಳು ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸದ ಹೆಸರಿನಲ್ಲಿ ಮುಂದಿಟ್ಟಿರುವ ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು ಮತ್ತು ಗುಮಾಸ್ತರನ್ನು ಸೃಷ್ಟಿಸಿದ...

ಮುಂದುವರೆದು, “ಕಳೆದ ಏಪ್ರಿಲ್‌ನಲ್ಲಿ ನಾವು ವಿರೋಧಿಸಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಹೊಸ ಮಸೂದೆಯಲ್ಲಿ ಲಿಖಿತ ರೂಪದಲ್ಲಿ ಸೇರಿಸಲಾಗಿದ್ದು, ಇದು 2024ರಿಂದ ಡಿಎಂಕೆ ನಡೆಸಿದ ನಿರಂತರ ಹೋರಾಟ ಮತ್ತು ತಮಿಳುನಾಡು ಸೇರಿದಂತೆ ಎಲ್ಲ ದಕ್ಷಿಣದ ರಾಜ್ಯಗಳಿಗೆ ಸಂದ ಜಯವಾಗಿದೆ” ಎಂದು ಬಣ್ಣಿಸಿದ್ದಾರೆ.

“1971ರ ಜನಸಂಖ್ಯೆಯ ಆಧಾರದ ಮೇಲೆ ಎಲ್ಲ ರಾಜ್ಯಗಳ ಕ್ಷೇತ್ರಗಳಲ್ಲಿ 50%ರಷ್ಟು ಹೆಚ್ಚಳಕ್ಕೆ ಅವಕಾಶ ನೀಡುವ ಈ ಮಸೂದೆಯನ್ನು ಕೈಬಿಟ್ಟರೆ ಆಗಬಹುದಾದ ಪರಿಣಾಮಗಳ ಬಗ್ಗೆ ಭಾವನಾತ್ಮಕವಾಗದೆ ಶಾಂತವಾಗಿ ಯೋಚಿಸಿ, ಪ್ರಾಯೋಗಿಕವಾಗಿ ಕಾರ್ಯಸಾಧ್ಯವಾದ ಮತ್ತು ರಾಜ್ಯಕ್ಕೆ ಪ್ರಯೋಜನಕಾರಿಯಾದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಸಂಸತ್ತಿನಲ್ಲಿ ಈ ಪ್ರಸ್ತಾವಿತ ಮಸೂದೆಯನ್ನು ಬೆಂಬಲಿಸುವುದೇ ದಕ್ಷಿಣದ ರಾಜ್ಯಗಳ ಹಿತದೃಷ್ಟಿಯಿಂದ ಉತ್ತಮ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಡಿಎಂಕೆಗೆ ಪರೋಕ್ಷವಾಗಿ ತಿಳಿಸಿತ್ತು ಎಂದು ವರದಿಯಾಗಿದೆ. ಹೊಸ ಕರಡು ಮಸೂದೆಯ ಪ್ರಕಾರ, ದೇಶದ ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಈಗ ಇರುವುದಕ್ಕಿಂತ 50%ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಸಾಮಾನ್ಯವಾಗಿ ಇತ್ತೀಚಿನ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ನಡೆಸಿದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂಬ ಆತಂಕವಿದೆ.

ಹೀಗಾಗಿ, ಎಲ್ಲ ರಾಜ್ಯಗಳಿಗೂ ಸಮಾನವಾಗಿ 50%ರಷ್ಟು ಸ್ಥಾನಗಳನ್ನು ಹೆಚ್ಚಿಸುವುದು ‘ಎರಡು ಕೆಟ್ಟ ಆಯ್ಕೆಗಳಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನಬಹುದಾದ ಆಯ್ಕೆ’ ಎಂಬಂತೆ ಡಿಎಂಕೆಗೆ ಮನವರಿಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳೇ ತಿಳಿಸಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಬೇಕಾದರೆ ಸದನದಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಸಂಸದರ ಮೂರನೇ ಎರಡರಷ್ಟು (2/3) ವಿಶೇಷ ಬಹುಮತದ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಿಎಂಕೆ ಪಕ್ಷದ 22 ಸಂಸದರ ಮತಗಳು ಮಸೂದೆಯ ಭವಿಷ್ಯ ನಿರ್ಧರಿಸುವಲ್ಲಿ ಅತ್ಯಂತ ನಿರ್ಣಾಯಕವಾಗಿವೆ. ಒಂದು ವೇಳೆ ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದರೆ, 2027ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಸರ್ಕಾರವು ಡಿಎಂಕೆಗೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

2002ರ ಸಂವಿಧಾನದ 84ನೇ ತಿದ್ದುಪಡಿ ಕಾಯ್ದೆಯ ಪ್ರಕಾರ, ವಿವಿಧ ರಾಜ್ಯಗಳ ಜನಸಂಖ್ಯಾ ಬೆಳವಣಿಗೆಯ ದರಗಳಲ್ಲಿನ ವ್ಯತ್ಯಾಸದಿಂದ ಉಂಟಾಗುವ ಅಸಮತೋಲನವನ್ನು ತಡೆಯಲು ಮತ್ತು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ಷೇತ್ರ ಪುನರ್‌ವಿಂಗಡಣೆಯನ್ನು 2026ರವರೆಗೆ ಸ್ಥಗಿತಗೊಳಿಸಲಾಗಿತ್ತು. ಈ ತಿದ್ದುಪಡಿಯು 2026ರ ನಂತರ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆ ನಡೆಸಲು ಅವಕಾಶ ನೀಡುತ್ತದೆ ಮತ್ತು ಅದಕ್ಕಾಗಿ ಸಂಸತ್ತಿನಲ್ಲಿ ಕೇವಲ ಸರಳ ಬಹುಮತದ ಕಾನೂನು ಅಂಗೀಕರಿಸಿದರೆ ಸಾಕಾಗುತ್ತದೆ ಎಂಬ ಅಂಶವನ್ನು ಸರ್ಕಾರವು ಡಿಎಂಕೆಗೆ ನೆನಪಿಸಿತ್ತು ಎಂದು ತಿಳಿದುಬಂದಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇರಾನಿನ ದಾಳಿ ಭೀತಿ: ಬಂಗಲೆ ತೊರೆದು ಸೇನಾ ನೆಲೆ ಸೇರಿದ ಟ್ರಂಪ್ ಸಚಿವರು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಮುಖ ಸಚಿವರು ಮತ್ತು ಉನ್ನತ...

ಈ ದಿನ ಸಂಪಾದಕೀಯ | ಡಿಲಿಮಿಟೇಷನ್: 50% ಸಮಾನ ಕ್ಷೇತ್ರಗಳ ಹೆಚ್ಚಳವಾಗಲಿ; ಶಾಶ್ವತ ಸಂವಿಧಾನಾತ್ಮಕ ರಕ್ಷಣೆ ಸಿಗಲಿ

ಬಿಜೆಪಿಯ ತಂತ್ರಗಳಿಗೆ ಅವಕಾಶ ದೊರೆತರೆ, ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪಿಗೂ ಪಕ್ಷಗಳು...

ಇರಾನ್ ಮೇಲೆ ಮತ್ತೆ ಟ್ರಂಪ್ ಕಣ್ಣು: ಆರ್ಥಿಕ ನಷ್ಟದ ನಡುವೆಯೂ ಮರುದಾಳಿಗೆ ಸಜ್ಜಾದ ಅಮೆರಿಕ!

ಇರಾನ್ ವಿರುದ್ಧದ ದಾಳಿಯಿಂದಾಗಿ ಅಮೆರಿಕದ ರಕ್ಷಣಾ ಇಲಾಖೆ ಈಗಾಗಲೇ ಬರೋಬ್ಬರಿ 48.3...

ಶಿವಮೊಗ್ಗ| ದಿನಪತ್ರಿಕೆ ಸಾಗಿಸುತ್ತಿದ್ದ ಕಾರು ಪಲ್ಟಿ ; ಓರ್ವ ಸಾವು

ಶಿವಮೊಗ್ಗದಿಂದ ದಿನಪತ್ರಿಕೆಗಳನ್ನು ಸಾಗಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ...