‘ಬಾಹುಬಲಿ’ಯಂತೆ ವರ್ತಿಸಬೇಡಿ, ಕಾನೂನಿನ ಇತಿಮಿತಿಯಲ್ಲಿರಿ: ಬಿಹಾರದ ನ್ಯಾಯಾಧೀಶರಿಗೆ ಸುಪ್ರೀಂ ತರಾಟೆ!

Date:

ಕಾನೂನು ವ್ಯಾಪ್ತಿ ಮೀರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಶಿಕ್ಷೆ ವಿಧಿಸಿದ ಬಿಹಾರದ ಕೆಳಹಂತದ ನ್ಯಾಯಾಲಯದ ನ್ಯಾಯಾಧೀಶರೊಬ್ಬರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಅತಿರೇಕದ ವರ್ತನೆಯನ್ನು ಕಟುವಾಗಿ ಟೀಕಿಸಿದ ಸರ್ವೋಚ್ಚ ನ್ಯಾಯಾಲಯ, “ನೀವೇನು ‘ಬಾಹುಬಲಿ’ಯಂತೆ ವರ್ತಿಸಲು ಹೊರಟಿದ್ದೀರಾ?” ಎಂದು ಪ್ರಶ್ನಿಸಿ, ಅವರಿಗೆ ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ (NJA) ತರಬೇತಿ ಕೊಡಿಸುವಂತೆ ಸಲಹೆ ನೀಡಿದೆ.

- Advertisement -

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಪಾಟ್ನಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸದರಿ ಸೆಷನ್ಸ್ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ!ದೆಹಲಿಯ...

ಇಮ್ಯೂನಿಟಿ (Immunity) ಎಂಬ ಆಂಗ್ಲಭಾಷೆಯ ಪದವನ್ನು ಜನರು ಹೆಚ್ಚಾಗಿ ಕೊರೊನಾ ಕಾಲದ ಸಂಕಟದ ದಿನಗಳಲ್ಲಿ ಬಳಸುತ್ತಿದ್ದರು. ರೋಗ ನಿರೋಧಕ ಶಕ್ತಿ ಶರೀರದಲ್ಲಿ ಕಡಿಮೆಯಾದಾಗ ವೈರಸ್‌ ಗಳು ದೇಹವನ್ನು ಆಕ್ರಮಿಸುತ್ತವೆ. ಅದರಿಂದ ರಕ್ಷಣೆ ಪಡೆಯುವ...

ಕೋಲ್ಕತ್ತಾ: SFI ಪುಸ್ತಕ ಮಳಿಗೆ ಮೇಲೆ ದಾಳಿ; ABVP...

ಬ್ರಿಟಿಷ್ ಆಡಳಿತದ ಪರವಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ನಿಲುವುಗಳು, ಸಂಘಪರಿವಾರದ ಸೈದ್ಧಾಂತಿಕ ಹಿನ್ನೆಲೆ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮರೆಮಾಚುವ ಪ್ರಯತ್ನಗಳ ವಿಶ್ಲೇಷಣೆ. ಪುಸ್ತಕಗಳು ಜ್ಞಾನವನ್ನು ನೀಡುತ್ತವೆ. ಇತಿಹಾಸವನ್ನು ಪರಿಚಯಿಸುತ್ತವೆ. ಪ್ರಶ್ನಿಸುವ ಮನೋಭಾವವನ್ನು...

ತಿರುಪತಿ ಕೇಶಮುಂಡನ : ಭಕ್ತರ ನಂಬಿಕೆಯೂ, ಕೋಟ್ಯಂತರ ರೂಪಾಯಿ...

ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಉದ್ದಿಮೆಗಳಿಗೆ ಮೂಲ ಬಂಡವಾಳವಾಗಿದೆ. ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದು ಭಕ್ತಿಯ ರೂಪವನ್ನೂ ಪಡೆದುಕೊಂಡಿದೆ. ಅದಕ್ಕೆ ಉದಾಹರಣೆಯೆಂದರೆ...

ಏನಿದು ಪ್ರಕರಣ?

2023ರಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ (FIR) ದಾಖಲಿಸಲು ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದರು. ಆದರೆ, ಈ ನಿರ್ದೇಶನವನ್ನು ಪಾಲಿಸದ ಕಾರಣಕ್ಕೆ ಆಗ ರೋಹ್ಟಾಸ್‌ನಲ್ಲಿ  ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿಗೆ ನ್ಯಾಯಾಧೀಶರು ಸಮನ್ಸ್ ಜಾರಿಗೊಳಿಸಿದ್ದರು. ಅಷ್ಟೇ ಅಲ್ಲದೆ, ಕಳೆದ ಸೆಪ್ಟೆಂಬರ್‌ನಲ್ಲಿ ಆ ಅಧಿಕಾರಿಯನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಅಡಿಯಲ್ಲಿ ದೋಷಿ ಎಂದು ತೀರ್ಮಾನಿಸಿ, ಸಾಂಕೇತಿಕವಾಗಿ 1 ರೂಪಾಯಿ ದಂಡ ವಿಧಿಸಿದ್ದರು.

ನ್ಯಾಯಾಧೀಶರ ಈ ನಡೆಯನ್ನು ಅಧಿಕಾರ ವ್ಯಾಪ್ತಿಯ ಉಲ್ಲಂಘನೆ ಎಂದು ಬಣ್ಣಿಸಿದ್ದ ಪಾಟ್ನಾ ಹೈಕೋರ್ಟ್, ಅವರಿಗೆ ಛೀಮಾರಿ ಹಾಕಿತ್ತು. ಹೈಕೋರ್ಟ್‌ನ ಈ ಟೀಕೆಗಳನ್ನು ತೆಗೆದುಹಾಕುವಂತೆ ಕೋರಿ ನ್ಯಾಯಾಧೀಶರು ವಕೀಲ ಪ್ರೇಮ್ ಪ್ರಕಾಶ್ ಅವರ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ವಿಚಾರಣೆಯ ವೇಳೆ ನ್ಯಾಯಾಧೀಶರ ಕಾನೂನು ತಿಳಿವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಾಗ್ಚಿ, “ನಿಮ್ಮ ಕಾನೂನು ಜ್ಞಾನ ಆಘಾತಕಾರಿಯಾಗಿದೆ. ಎಸ್‌ಪಿಯವರನ್ನು ಕರೆಸಿ ಶಿಕ್ಷೆ ವಿಧಿಸುವಂತಹ ಆಕ್ರಮಣಕಾರಿ ನಿಲುವನ್ನು ನೀವು ತಳೆದಿದ್ದೀರಿ. ನ್ಯಾಯ ಒದಗಿಸುವ ನಿಮ್ಮ ಉದ್ದೇಶವನ್ನು ನಾವು ಗೌರವಿಸುತ್ತೇವೆ, ಆದರೆ ನಾವೆಲ್ಲರೂ ಕಾರ್ಯವಿಧಾನದ ನಿಯಮಗಳು ಮತ್ತು ಶಿಸ್ತಿಗೆ ಬದ್ಧರಾಗಿರಬೇಕು. ಇನ್ನು ಸಾಕು ನಿಮ್ಮ ಸಾಹಸ. ಒಬ್ಬ ನ್ಯಾಯಾಧೀಶರಾಗಿ ನಿಮ್ಮ ಅಧಿಕಾರ ವ್ಯಾಪ್ತಿ ಏನೆಂಬುದನ್ನು ಮೊದಲು ತಿಳಿದುಕೊಳ್ಳಿ” ಎಂದು ಕಿವಿಮಾತು ಹೇಳಿದರು.

ಭಾರತೀಯ ಅಪರಾಧ ಕಾನೂನಿನಡಿ (ಹಳೆಯ ಸಿಆರ್‌ಪಿಸಿ ಸೆಕ್ಷನ್ 345 ಮತ್ತು ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – BNSS ಸೆಕ್ಷನ್ 384) ವಿಚಾರಣಾ ನ್ಯಾಯಾಧೀಶರಿಗೆ ಇರುವ ‘ಸಂಕ್ಷಿಪ್ತ ನ್ಯಾಯಾಂಗ ನಿಂದನೆ’  ಅಧಿಕಾರದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿತು. ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗ ಯಾರಾದರೂ ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿದರೆ, ನ್ಯಾಯಾಲಯವನ್ನು ನಿಂದಿಸಿದರೆ ಅಥವಾ ನ್ಯಾಯಾಧೀಶರು ಸೂಚಿಸಿದ ಮೇಲೂ ನ್ಯಾಯಾಲಯದ ಕೊಠಡಿಯಿಂದ ಹೊರಹೋಗಲು ನಿರಾಕರಿಸಿದರೆ—ಅದು ‘ನ್ಯಾಯಾಲಯದ ಸಮ್ಮುಖದಲ್ಲಿ ನಡೆದ ಅಪರಾಧ’ ಎನಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಮಾತ್ರ ವಿಚಾರಣಾ ನ್ಯಾಯಾಧೀಶರು ತಕ್ಷಣವೇ ಕ್ರಮ ಕೈಗೊಳ್ಳಬಹುದು.

ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ನೀಡಿದ ಆದೇಶವನ್ನು ಪೊಲೀಸರು ಪಾಲಿಸದಿದ್ದರೆ, ಅದು ನ್ಯಾಯಾಲಯದ ಸಮ್ಮುಖದಲ್ಲಿ ನಡೆದ ಅಪರಾಧವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆಯೇ ಹೊರತು, ಕೆಳಹಂತದ ನ್ಯಾಯಾಧೀಶರೇ ಸ್ವಯಂಪ್ರೇರಿತವಾಗಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

ನ್ಯಾಯಾಧೀಶರ ಅರ್ಜಿಯನ್ನು ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್, “ನಿಮ್ಮ ಕೈಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ” ಎಂದು ಎಚ್ಚರಿಕೆ ನೀಡಿತು. ಆದಾಗ್ಯೂ, ನ್ಯಾಯಾಧೀಶರ ವೃತ್ತಿಜೀವನದ ದೃಷ್ಟಿಯಿಂದ, ಪಾಟ್ನಾ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಅವಕಾಶ ನೀಡಿದ ಸರ್ವೋಚ್ಚ ನ್ಯಾಯಾಲಯ, ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಹೈಕೋರ್ಟ್‌ಗೆ ತಿಳಿಸಿದೆ. 

ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಳಹಂತದ ನ್ಯಾಯಾಧೀಶರು ತಮ್ಮ ಶಾಸನಬದ್ಧ ಮಿತಿಯನ್ನು ಮೀರಿ ಕಾರ್ಯಾಂಗದ (ಪೊಲೀಸ್ ಇಲಾಖೆ) ಮೇಲೆ ನೇರವಾಗಿ ದಂಡನಾತ್ಮಕ ಕ್ರಮ ಕೈಗೊಳ್ಳುವುದು ಅಧಿಕಾರ ವಿಭಜನೆಯ ತತ್ವಕ್ಕೆ ವಿರುದ್ಧವಾಗಿದೆ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಎತ್ತಿಹಿಡಿದಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಈ ಸಂಸ್ಥೆಯು ದೇಶದ ನ್ಯಾಯಾಧೀಶರಿಗೆ ಕಾನೂನು ತಿದ್ದುಪಡಿಗಳು, ಕಾರ್ಯವಿಧಾನದ ಶಿಸ್ತು ಮತ್ತು ನ್ಯಾಯಾಂಗ ಆಡಳಿತದ ಕುರಿತು ವಿಶೇಷ ತರಬೇತಿ ನೀಡುವ ಅತ್ಯುನ್ನತ ಸಂಸ್ಥೆಯಾಗಿದೆ. ಹೊಸ ಕಾನೂನಾದ BNSS ಜಾರಿಯಾದ ನಂತರ ಕೆಳಹಂತದ ನ್ಯಾಯಾಧೀಶರಿಗೆ ಇಂತಹ ತರಬೇತಿಗಳ ಅಗತ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಪರೋಕ್ಷವಾಗಿ ಒತ್ತಿಹೇಳಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಮಾತೃವಂದನಾ ಯೋಜನೆಯಡಿ ಜಿಲ್ಲಾ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಪ್ರಧಾನ ಮಂತ್ರಿ ಮಾತೃವಂದನಾ...

ಬಾಗಲಕೋಟೆ |ರವಿ ಹಂಜ ಬಂಧನಕ್ಕೆ ಆಗ್ರಹ: ‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ಒತ್ತಾಯ

ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ಹಾಗೂ ಬರಹಗಳನ್ನು ಪ್ರಕಟಿಸಿರುವ ರವಿ...

ಚಿತ್ರದುರ್ಗ| ದಲಿತ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ: ಮೋಟಾರ್ ಪಂಪ್ ಅಳವಡಿಕೆ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪಿ. ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ತಿರುಪತಿ ಕೇಶಮುಂಡನ : ಭಕ್ತರ ನಂಬಿಕೆಯೂ, ಕೋಟ್ಯಂತರ ರೂಪಾಯಿ ವ್ಯವಹಾರವೂ…

ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ...