2018ರ ಮಾನನಷ್ಟ ಮೊಕದ್ದಮೆ: ಧ್ರುವ್ ರಾಠಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Date:

2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರ ವಿರುದ್ಧ ದೆಹಲಿಯ ಸಾಕೇತ್ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.

- Advertisement -

ದೂರುದಾರ ವಿಕಾಸ್ ಸಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ಅವರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅನಮ್ ರಯೀಸ್ ಖಾನ್ ಅವರು ಈ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಡಿಸೆಂಬರ್ 3ಕ್ಕೆ ನಿಗದಿಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿರುಪತಿ ಕೇಶಮುಂಡನ : ಭಕ್ತರ ನಂಬಿಕೆಯೂ, ಕೋಟ್ಯಂತರ ರೂಪಾಯಿ...

ಕೂದಲಿನ ಸೌಂದರ್ಯ ಪ್ರಜ್ಞೆ, ತಳಮಳಗಳ ಭಾವನೆಗಳೇ ಇಂದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಉದ್ದಿಮೆಗಳಿಗೆ ಮೂಲ ಬಂಡವಾಳವಾಗಿದೆ. ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದು ಭಕ್ತಿಯ ರೂಪವನ್ನೂ ಪಡೆದುಕೊಂಡಿದೆ. ಅದಕ್ಕೆ ಉದಾಹರಣೆಯೆಂದರೆ...

“ನಾನು ಬಿಜೆಪಿಯ ಗುಲಾಮನಲ್ಲ, ಅಂಬೇಡ್ಕರ್‌ವಾದಿ”- ರಾಮದಾಸ್‌ ಅಠಾವಳೆ ಹೇಳಿಕೆಯ...

ತಾವು ಬಿಜೆಪಿಯ ಸದಸ್ಯರಲ್ಲ, ಕೇವಲ ಅಂಬೇಡ್ಕರ್‌ವಾದಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಸ್ಪಂದಿಸದ ಕಾರಣಕ್ಕೆ ಎನ್‌ಡಿಎ ಸೇರಿದೆ ಎನ್ನುತ್ತಾರೆ...

ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ...

ಹಳೇ ಮೈಸೂರು ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ, ಇಂದು ಆ ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರಿಗೂ ಕಾಡಿನೊಳಗಿನ ವನ್ಯಜೀವಿಗಳಿಗೂ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,...

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ನನ್ನನ್ನು ಬಂಧಿಸಿರಲಿಲ್ಲ, ಕಿಡ್ನಾಪ್ ಮಾಡಲಾಗಿತ್ತು: ಧೃವ್ ರಾಠಿ ಆರೋಪ

ಏನಿದು ಪ್ರಕರಣ?

2018ರ ಮೇ ತಿಂಗಳಿನಲ್ಲಿ ಧ್ರುವ್ ರಾಠಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಬಿಜೆಪಿ ಐಟಿ ಸೆಲ್ ಪಾರ್ಟ್ 2’ ಎಂಬ ಶೀರ್ಷಿಕೆಯ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ, ‘ಐ ಸಪೋರ್ಟ್ ನರೇಂದ್ರ ಮೋದಿ’ ಫೇಸ್‌ಬುಕ್ ಪುಟದ ಸಂಸ್ಥಾಪಕ ವಿಕಾಸ್ ಪಾಂಡೆ ಅವರು ಬಿಜೆಪಿ ಐಟಿ ಸೆಲ್‌ನ ಭಾಗವಾಗಿದ್ದು, ಸುಳ್ಳು ಸುದ್ದಿ ಹರಡುವ ಆರೋಪಗಳನ್ನು ಹಿಂಪಡೆಯಲು ಮಧ್ಯವರ್ತಿಯೊಬ್ಬರ ಮೂಲಕ 50 ಲಕ್ಷ ರೂಪಾಯಿ ಲಂಚದ ಆಮಿಷ ಒಡ್ಡಿದ್ದರು ಎಂದು ರಾಠಿ ಆರೋಪಿಸಿದ್ದರು. ಈ ಆರೋಪಗಳು ಸುಳ್ಳಾಗಿದ್ದು, ತಮ್ಮ ಘನತೆಗೆ ಧಕ್ಕೆ ತಂದಿವೆ ಎಂದು ವಿಕಾಸ್ ಪಾಂಡೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ವಿದೇಶದಲ್ಲಿ ನೆಲೆಸಿರುವ ಧ್ರುವ್ ರಾಠಿ ಅವರು ನ್ಯಾಯಾಲಯದ ಸಮನ್ಸ್‌ಗಳಿಗೆ ಪದೇ ಪದೇ ಗೈರುಹಾಜರಾಗಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ರಾಠಿ ಅವರು ಬೆಂಗಳೂರಿನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದಾಗ, ದೂರುದಾರರ ಪರ ವಕೀಲರು ಶೀಘ್ರ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಕ್ಟೋಬರ್ 17 ಮತ್ತು ಅಕ್ಟೋಬರ್ 31ರಂದು ರಾಠಿ ವಿರುದ್ಧ ಜಾಮೀನು ಸಹಿತ ವಾರಂಟ್‌ಗಳನ್ನು ಜಾರಿಗೊಳಿಸಿತ್ತು.

ಇದನ್ನೂ ಓದಿ: SIR ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರಮ; ಸರ್ಕಾರದ ಧೋರಣೆ ವಿರುದ್ಧ 20 ದೇಶಗಳಲ್ಲಿ ಪ್ರತಿಭಟನೆ

2018ರಲ್ಲಿ ಧ್ರುವ್ ರಾಠಿ ಅವರ ಈ ವಿವಾದಾತ್ಮಕ ವಿಡಿಯೋವನ್ನು ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಿಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಕಾಸ್ ಪಾಂಡೆ ಅವರು ಕೇಜ್ರಿವಾಲ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಕೇಜ್ರಿವಾಲ್ ಅವರು ನ್ಯಾಯಾಲಯದ ಮುಂದೆ ಒಪ್ಪಿಕೊಂಡು ಕ್ಷಮೆಯಾಚಿಸಿದ್ದರು. ಆದರೆ, ವಿಡಿಯೋ ಸೃಷ್ಟಿಸಿ ಪ್ರಕಟಿಸಿದ ಧ್ರುವ್ ರಾಠಿ ವಿರುದ್ಧದ ಮೂಲ ಪ್ರಕರಣದ ವಿಚಾರಣೆ ಸಾಕೇತ್ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಇವೆಲ್ಲವುದರ ನಡುವೆ ಕೇಂದ್ರ ಸರ್ಕಾರದ ನೀತಿಗಳು, ಚುನಾವಣಾ ಪ್ರಕ್ರಿಯೆ ಮತ್ತು ಆಡಳಿತ ವೈಖರಿಯನ್ನು ತಮ್ಮ ಯೂಟ್ಯೂಬ್ ವಿಡಿಯೋಗಳ ಮೂಲಕ ನಿರಂತರವಾಗಿ ಪ್ರಶ್ನಿಸುತ್ತಾ ಬಂದಿರುವ ಧ್ರುವ್ ರಾಠಿ ಅವರ ಧ್ವನಿಯನ್ನು ಅಡಗಿಸಲು ಈ ಹಳೆಯ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಠಿ ಕಾಣಿಸಿಕೊಂಡ ಬೆನ್ನಲ್ಲೇ, 2019ರಿಂದ ಬಾಕಿ ಇದ್ದ ಈ ಪ್ರಕರಣದ ವಿಚಾರಣೆಯನ್ನು ದಿಢೀರ್ ಚುರುಕುಗೊಳಿಸಿರುವುದು ‘ಬಂಧನದ ಸಂಚು’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಆಲಮಟ್ಟಿ ನೀರು ಹಂಚಿಕೆಯಲ್ಲಿ ಅವಳಿ ಜಿಲ್ಲೆಗೆ ಅನ್ಯಾಯದ ಶಂಕೆ: ಶ್ವೇತಪತ್ರಕ್ಕೆ ರೈತ ಸಂಘಟನೆಗಳ ಆಗ್ರಹ

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ನಾರಾಯಣಪುರ, ತೆಲಂಗಾಣ ರಾಜ್ಯ ಹಾಗೂ...

ಪಕ್ಷಾಂತರ ನಿಷೇಧ ಕಾಯ್ದೆ ಸುಧಾರಣೆಗಾಗಿ ಪಿಐಎಲ್‌; ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಪಕ್ಷಾಂತರ ನಿಷೇಧ ಕಾಯ್ದೆಯ ಚೌಕಟ್ಟಿನಲ್ಲಿ ಸಮಗ್ರ ಸುಧಾರಣೆಗಳನ್ನು ತರಬೇಕೆಂದು ಕೋರಿ ಸಲ್ಲಿಸಲಾಗಿರುವ...

ಸರ್ಕಾರಿ ಶಾಲೆಯಲ್ಲಿ ದಲಿತ ಸಿಬ್ಬಂದಿ ಮೇಜಿನ ಮೇಲೆ ಮಲ ವಿಸರ್ಜನೆ ಆರೋಪ; ಭುಗಿಲೆದ್ದ ಆಕ್ರೋಶ

ವೈಜ್ಞಾನಿಕ ಚಿಂತನೆ, ಸಾಮಾಜಿಕ ಅರಿವು, ಸಮಾನತೆ-ಸಹಬಾಳ್ವೆಯ ಪಾಠ ಕಲಿಸುವ ಶಿಕ್ಷಣ ಸಂಸ್ಥೆಗಳಲ್ಲೇ...

ಹೂಡಿಕೆ ಆಕರ್ಷಣೆ; ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧ: ಸಿಎಂ‌ ಡಿ ಕೆ‌ ಶಿವಕುಮಾರ್

ರಾಜ್ಯದಲ್ಲಿ ಹೂಡಿಕೆ ಆಕರ್ಷಸಿ, ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧವಾಗಿದ್ದೇವೆ ಎಂದು...