ಸ್ವಂತ ಬಂದೂಕಿನಿಂದ ಆಕಸ್ಮಿಕ ಗುಂಡೇಟು ಬಿದ್ದರೂ ‘ಯುದ್ಧ ಗಾಯಾಳು’ ಸೌಲಭ್ಯಕ್ಕೆ ಅರ್ಹ: ಸುಪ್ರೀಂ ಕೋರ್ಟ್‌

Date:

ಕಾರ್ಯಾಚರಣೆಯ ಕರ್ತವ್ಯದಲ್ಲಿದ್ದಾಗ ಸೈನಿಕನೊಬ್ಬನಿಗೆ ತನ್ನದೇ ಸೇವಾ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಗಾಯವಾದರೆ, ಅದನ್ನು ‘ಸ್ವಯಂ-ಹಾನಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ಪ್ರಕರಣಗಳನ್ನು ‘ಯುದ್ಧ ಗಾಯಾಳು’ ಎಂದು ಪರಿಗಣಿಸಿ, ಸೈನಿಕನಿಗೆ ಹೆಚ್ಚುವರಿ ‘ಯುದ್ಧ ಗಾಯದ ಪಿಂಚಣಿ’ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

- Advertisement -

ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ನೊಂಗ್ಮೈಕಾಪಮ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ನಿವೃತ್ತ ಸೇನಾ ಸುಬೇದಾರ್ ಮೇಜರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ಈ ತೀರ್ಪು ಪ್ರಕಟಿಸಿದೆ. ಈ ಮೂಲಕ ಅರ್ಜಿದಾರರಿಗೆ ಯುದ್ಧ ಗಾಯದ ಪಿಂಚಣಿಯನ್ನು ನಿರಾಕರಿಸಿದ್ದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಪ್ರಕರಣದ ಹಿನ್ನೆಲೆ ಏನು?

 33 ವರ್ಷಗಳ ಸುದೀರ್ಘ ಸೇವೆಯ ನಂತರ 2019ರ ಮಾರ್ಚ್ 31ರಂದು ನಿವೃತ್ತರಾಗಿದ್ದ ಸುಬೇದಾರ್ ಮೇಜರ್ ಅವರು, 2002ರ ಆಗಸ್ಟ್ 7ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಆಪರೇಷನ್ ರಕ್ಷಕ್’ ಕಾರ್ಯಾಚರಣೆಯ ಕರ್ತವ್ಯದಲ್ಲಿದ್ದರು. ಈ ವೇಳೆ ಅವರ ಲೋಡ್ ಆಗಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ, ಅವರ ಎಡ ತೊಡೆಯನ್ನು ಸೀಳಿಕೊಂಡು ಹೋಗಿತ್ತು. ಇದರಿಂದ ಅವರ ತೊಡೆಯ ಪ್ರಮುಖ ರಕ್ತನಾಳಕ್ಕೆ ತೀವ್ರ ಹಾನಿಯಾಗಿತ್ತು.

ವೈದ್ಯಕೀಯ ಮಂಡಳಿಯು ಅವರಿಗೆ ಶೇ. 40ರಷ್ಟು ಶಾಶ್ವತ ಅಂಗವೈಕಲ್ಯವಿದೆ ಎಂದು ದೃಢಪಡಿಸಿತ್ತು. ಆದರೆ, ಸೇನೆಯು ಅವರಿಗೆ ಕೇವಲ ಸಾಮಾನ್ಯ ‘ಅಂಗವೈಕಲ್ಯ ಪಿಂಚಣಿ’ಯನ್ನು ಮಾತ್ರ ನೀಡಿತ್ತು. ಹೆಚ್ಚುವರಿ ‘ಯುದ್ಧ ಗಾಯದ ಪಿಂಚಣಿ’ಗಾಗಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಲಕ್ನೋದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯು 2023ರ ಮೇ 10ರಂದು ತಿರಸ್ಕರಿಸಿತ್ತು. ಸೇನೆಯ ಸಕ್ಷಮ ಪ್ರಾಧಿಕಾರದಿಂದ ಅಂತಿಮ ಅನುಮೋದನೆ ಸಿಕ್ಕಿಲ್ಲ ಹಾಗೂ ಡಿಜಿಟಲ್ ಡೇಟಾಬೇಸ್‌ನಲ್ಲಿ ಅವರ ಹೆಸರಿಲ್ಲ ಎಂಬ ಕಾರಣವನ್ನು ನ್ಯಾಯಮಂಡಳಿ ನೀಡಿತ್ತು.

ಸುಪ್ರೀಂ ಕೋರ್ಟ್‌ನ ಪ್ರಮುಖ ಅವಲೋಕನಗಳು:-

ತೀರ್ಪು ಬರೆದ ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ಅವರು, “ಬಂದೂಕು ಸೈನಿಕನಿಗೆ ಸೇರಿದ್ದು ಎಂಬ ಒಂದೇ ಕಾರಣಕ್ಕೆ ಆ ಗಾಯವನ್ನು ಸ್ವಯಂ-ಹಾನಿ ಎಂದು ಕರೆಯಲಾಗುವುದಿಲ್ಲ. ಆಯುಧದ ಮಾಲೀಕತ್ವ ಮತ್ತು ಗಾಯ ಮಾಡಿಕೊಳ್ಳುವ ಉದ್ದೇಶ ಇವೆರಡೂ ವಿಭಿನ್ನ ಸಂಗತಿಗಳು. ಉದ್ದೇಶಪೂರ್ವಕವಾಗಿ ಗಾಯ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿಲ್ಲದೆ ಅದನ್ನು ಸ್ವಯಂ-ಹಾನಿ ಎಂದು ಪರಿಗಣಿಸಲಾಗದು” ಎಂದು ಸ್ಪಷ್ಟಪಡಿಸಿದರು.

ಕರ್ತವ್ಯದ ವೇಳೆ ಬಿದ್ದಾಗ, ಟ್ರಿಗರ್‌ಗೆ ಏನಾದರೂ ಸಿಲುಕಿಕೊಂಡಾಗ, ಆಕಸ್ಮಿಕ ಒತ್ತಡ ಬಿದ್ದಾಗ ಅಥವಾ ತಾಂತ್ರಿಕ ದೋಷದಿಂದಲೂ ಸೇವಾ ಬಂದೂಕಿನಿಂದ ಗುಂಡು ಹಾರಬಹುದು. ಇಂತಹ ಘಟನೆಗಳನ್ನು ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳುವ ಸ್ವಯಂ-ಹಾನಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

2014ರ ಪ್ರವಾಹದಲ್ಲಿ ಸೇನೆಯ ಮೂಲ ದಾಖಲೆಗಳು ನಾಶವಾಗಿವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, “ಸರ್ಕಾರಿ ವಶದಲ್ಲಿದ್ದ ದಾಖಲೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿರುವುದಕ್ಕೆ ಅರ್ಜಿದಾರರನ್ನು ಹೊಣೆ ಮಾಡಲಾಗದು. ಡಿಜಿಟಲ್ ಡೇಟಾಬೇಸ್‌ನಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ, ಘಟನೆ ನಡೆದ ಸಮಯದಲ್ಲಿ ಸಹಿ ಮಾಡಲಾದ ಅಧಿಕೃತ ದಾಖಲೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ” ಎಂದಿತು.

ಸೇನಾ ಆದೇಶ  ಪ್ಯಾರಾ 69ರ ಪ್ರಕಾರ, ಕಾರ್ಯಾಚರಣೆಯ ಸಂದರ್ಭದಲ್ಲಿ ತೀವ್ರ ಸ್ವರೂಪದ ಗಾಯವಾದರೆ ಅದನ್ನು ‘ಬ್ಯಾಟಲ್ ಕ್ಯಾಶುಯಲ್ಟಿ’ ಎಂದು ಪರಿಗಣಿಸಬೇಕು. ಅರ್ಜಿದಾರರ ಪ್ರಕರಣದಲ್ಲಿ ಈ ಎರಡೂ ನಿಯಮಗಳು ಪೂರೈಕೆಯಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅದರಂತೆ, ಅರ್ಜಿದಾರರು ನಿವೃತ್ತರಾದ ದಿನಾಂಕದಿಂದಲೇ ಅನ್ವಯವಾಗುವಂತೆ ‘ಯುದ್ಧ ಗಾಯದ ಪಿಂಚಣಿ’ಯನ್ನು ನೀಡಬೇಕು. ಈಗಾಗಲೇ ಪಾವತಿಸಿರುವ ಸಾಮಾನ್ಯ ಅಂಗವೈಕಲ್ಯ ಪಿಂಚಣಿಯನ್ನು ಸರಿಹೊಂದಿಸಿಕೊಂಡು ಹಾಗೂ ಮುಂದಿನ ಮೂರು ತಿಂಗಳೊಳಗೆ ಪರಿಷ್ಕೃತ ಪಿಂಚಣಿ ಆದೇಶ (PPO) ಮತ್ತು ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅರ್ಜಿದಾರರ ಪರವಾಗಿ ವಕೀಲ ಅಖಿಲೇಶ್ ಕೆ. ಸೋನಿ ಹಾಗೂ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದ ಮಂಡಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Vibe ಸಮೀಕ್ಷೆ: ಯೂಪಿಯಲ್ಲಿ ಮತ್ತಷ್ಟು ಕುಸಿಯುವುದೇ ಬಿಎಸ್‌ಪಿ; ಮಾಯಾವತಿ ಪಕ್ಷ ಕುಸಿದಷ್ಟೂ ಬಿಜೆಪಿಗೆ ನಷ್ಟ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ರಾಜ್ಯದಲ್ಲಿ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ ಮತ್ತು ಬೆಂಬಲಿಗರ ಮನೋಭಾವದ ವಿಶ್ಲೇಷಣೆ!

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು...

ಚಿಕಿತ್ಸಾ ನಿರ್ಲಕ್ಷ್ಯದಿಂದ ಮಹಿಳೆಗೆ ತೀವ್ರ ರಕ್ತಸ್ರಾವ: ಬೆಂಗಳೂರಿನ ವೈದ್ಯೆಗೆ ₹2 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗ

ವಿಫಲವಾದ ಗರ್ಭಧಾರಣೆಯ ಬಳಿಕ ಗರ್ಭಕೋಶವನ್ನು ಶುಚಿಗೊಳಿಸುವ ಶಸ್ತ್ರಚಿಕಿತ್ಸೆಯನ್ನು (ಡಿ ಆ್ಯಂಡ್ ಸಿ)...

ವಿಜಯಪುರ |ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸಂಶೋಧನಾ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ...