ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅರಿವು ಕಾಯಕ್ರಮವನ್ನು ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನೀರ್ದೇಶನಾಲಯ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಗದಗ ಜಿಲ್ಲೆಯ ನಾಗಾವಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಆಯೋಜಕರು ಕಿರಣಕುಮಾರ ಮಾತನಾಡಿ, “ಮಕ್ಕಳ ಹಕ್ಕುಗಳು ಪ್ರತಿ ಮಗುವಿನ ಬೌದ್ಧಿಕ ಮತ್ತು ಆಂತರಿಕ ರಕ್ಷಣೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ರಕ್ಷಣೆಯನ್ನು ನೀಡುತ್ತದೆ. ವಿದ್ಯಾಥಿಗಳು ಸಮಾಜದಲ್ಲಿ ತಮಗೆ ಎದುರಾಗುವ ಸವಾಲುಗಳಿಗೆ ಹೆದರದೆ ಅದನ್ನು ಪಾಲಕರಿಗೆ ಪೋಷಕರಿಗೆ ಶಿಕ್ಷಕರಿಗೆ ಮನವರಿಕೆ ಮಾಡಬೇಕು” ಎಂದು ಹೇಳಿದರು.
ಸಂಚಾಲಕರು ರೂಪಾ. ಉಪ್ಪಿನ ಅವರು ಮಕ್ಕಳ ರಕ್ಷಣೆಯ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಮತ್ತು ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಬಸವರಾಜ ಹುಲ್ಯಾಳ ಅಧ್ಯಕ್ಷೀಯ ಮಾತುಗಳನ್ನು ಹೇಳಿದರು. ಸಿನಿ ಮುಕ್ಕೋಜಿ ಪ್ರಾರ್ಥಿಸಿದರು. ಶಂಭುಗೌಡ ಎಸ್ ತಮ್ಮನಗೌಡರ ವಂದಿಸಿದರು. ಸಿರಿ ಮುಕ್ಕೋಜಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶೋಭಾ ಬಿಳೇಯಲಿ, ಹೇಮಾ ಶಿವಶಿಂಪಿಗೇರ, ಅನಸೂಯಾ ದಾಸರ, ಕುಸುಮಾ ಸಂಶಿ, ರೂಪಾ ಬೇಟಗೇರಿ, ವಿದ್ಯಾ ನಾಯಕ, ಮೇಘನಾ ಹಿರೇಮಠ, ಮೋಹನ ಗೊಂದಿ, ಐ.ಟಿ. ಹೊಸಮನಿ, ಷಣ್ಮುಖ ಭಾವಿಕಟ್ಟಿ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.



