2019ರ ಬಳಿಕ ಲಡಾಖ್‌ನಲ್ಲಿ ಮೊದಲ ಪಂಚಾಯತ್, ನಗರಸಭೆ ಚುನಾವಣೆ: ‘ಗ್ಯಾನು ಮಾದರಿ’ ಇಲ್ಲೂ ಅನ್ವಯ ಎಂದ ನಾಯಕರು!

Date:

ಸಂವಿಧಾನದ 370ನೇ ವಿಧಿ ರದ್ದತಿ ಮತ್ತು 2019ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಇಂದು (ನವೆಂಬರ್ 21) ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಿಗೆ ಮತದಾನ ಆರಂಭವಾಗಿದೆ. ಬರೋಬ್ಬರಿ 8 ವರ್ಷಗಳ ಸುದೀರ್ಘ ವಿರಾಮದ ಬಳಿಕ ಈ ಶೀತ ಮರುಭೂಮಿ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಇಡೀ ಲಡಾಖ್‌ನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಚುನಾವಣೆ ನಡುವೆ ಇಲ್ಲೂ ‘ಗ್ಯಾನು ಮಾದರಿ’ ಸದ್ದು ಎದ್ದಿದೆ!

- Advertisement -

ಈ ಹಿಂದೆ ಲಡಾಖ್ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗ 2018ರಲ್ಲಿ ಕೊನೆಯ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಮತ್ತೊಂದೆಡೆ, ಲಡಾಖ್‌ಗೆ ರಾಜ್ಯದ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದದಡಿ ಸಾಂವಿಧಾನಿಕ ರಕ್ಷಣೆ ಮತ್ತು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕಾಗಿ ಆಗ್ರಹಿಸಿ ‘ಲೇಹ್ ಅಪೆಕ್ಸ್ ಬಾಡಿ’ ಮತ್ತು ‘ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್’ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆಯೇ ಚುನಾವಣೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಇದನ್ನೂ ಓದಿ: ಲಡಾಖ್‌ನಲ್ಲಿ ಚುನಾವಣೆ ವಿರೋಧಿಸಿ ಪ್ರತಿಭಟನೆ; ಹೋರಾಟಗಾರ ಸೋನಮ್‌ ವಾಂಗ್‌ಚುಕ್‌ಗೆ ಗೃಹ ಬಂಧನ

ಈಗಾಗಲೇ ಕೊರೆಯುವ ಚಳಿಗಾಲದಲ್ಲಿ ಚುನಾವಣೆ ನಡೆಸುತ್ತಿರುವ ಆಡಳಿತದ ನಿರ್ಧಾರಕ್ಕೆ ಸ್ಥಳೀಯ ರಾಜಕೀಯ ನಾಯಕರು ಮತ್ತು ಪ್ರಮುಖ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಲಡಾಖ್‌ನಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿಯುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸ್ಥಳೀಯರು ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಹೋಗಿರುತ್ತಾರೆ. ಹೀಗಾಗಿ ಚಳಿಗಾಲದಲ್ಲಿ ಚುನಾವಣೆ ನಡೆಸುವುದರಿಂದ ಸಾವಿರಾರು ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ‘ಲೇಹ್ ಅಪೆಕ್ಸ್ ಬಾಡಿ’ (ಎಲ್‌ಎಬಿ) ಮತ್ತು ‘ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್’ (ಕೆಡಿಎ) ಆಕ್ಷೇಪ ವ್ಯಕ್ತಪಡಿಸಿವೆ. ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗಿದೆ. ಆದರೂ ಚುನಾವಣೆಯನ್ನು ಈ ಚಳಿಗಾಲದಲ್ಲೇ ನಡೆಸಲಾಗುತ್ತಿದೆ.

ದೇಶದಲ್ಲಿ ಚುನಾವಣಾ ಸಂಬಂಧಿತ ಹಲವು ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಬಗ್ಗೆ ಈಗಾಗಲೇ ತನಿಖಾ ವರದಿ ಬಹಿರಂಗಗೊಂಡಿದೆ. ಇದನ್ನು ‘ಗ್ಯಾನು ಮಾದರಿ’ ಎಂದು ವಿಪಕ್ಷಗಳು, ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಇದೀಗ ಇದೇ ರೀತಿಯ ‘ಗ್ಯಾನು ಮಾದರಿ’ ಲಡಾಖ್‌ನಲ್ಲೂ ಕಂಡುಬಂದಿದೆ ಎಂದು ಲಡಾಖ್ ನಾಯಕರು ಹೇಳಿದ್ದಾರೆ.

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಕೋ ಚೇರ್‌ಮನ್ ಸಜ್ಜಾದ್ ಕಾರ್ಗಿಲಿ, “ಚುನಾವಣೆ ನಡುವೆ ಸೋನಮ್ ವಾಂಗ್‌ಚುಕ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. ನಾನು ವಾಂಗ್‌ಚುಕ್ ಅವರನ್ನು ಭೇಟಿ ಮಾಡಲು ಹೋದಾಗ ನನಗೆ ಅವಕಾಶ ನೀಡಿಲ್ಲ. ಅವರ ಮನೆಯ ಹೊರಗೆ ಪೊಲೀಸರು ಇದ್ದಾರೆ. ಇನ್ನೊಂದೆಡೆ ಮತದಾರರ ಪಟ್ಟಿಯಲ್ಲಿ ಒಂದೇ ಯುವತಿಯ ಹೆಸರಲ್ಲಿ ಹಲವಾರು ಮತಗಳು ಕಂಡುಬಂದಿವೆ. ಹೀಗೆ ಹಲವು ದೋಷಗಳು ಕಂಡುಬಂದಿವೆ” ಎಂದು ದೂರಿದ್ದಾರೆ.

ಈ ಬಗ್ಗೆ ಸಜ್ಜಾದ್ ಕಾರ್ಗಿಲಿ ಎಕ್ಸ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. “ಕಠಿಣ ಚಳಿಗಾಲದ ಕಾರಣ ಲಡಾಖ್‌ನಿಂದ ಈಗಾಗಲೇ ಹಲವಾರು ಮಂದಿ ಬೇರೆಡೆ ಹೋಗಿದ್ದಾರೆ. ಹಾಗಾಗಿ ಲಡಾಖ್‌ನಲ್ಲೂ ‘ಗ್ಯಾನು ಮಾದರಿ’ (Gyanu model) ಅನ್ವಯವಾಗಿರುವಂತೆ ತೋರುತ್ತಿದೆ. ಒಂದೇ ಯುವತಿ, ಒಂದೇ ಹೆಸರು, ಆದರೆ ಎರಡು ಬೇರೆ ಬೇರೆ ಮತಗಟ್ಟೆಗಳು” ಎಂದು ದಾಖಲೆ ಸಹಿತ ಪೋಸ್ಟ್ ಮಾಡಿದ್ದಾರೆ.

ಇನ್ನು, “ಲಡಾಖ್ ಮತ್ತು ದೇಶದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸಬೇಡಿ. ಸೋನಮ್ ವಾಂಗ್‌ಚುಕ್ ಗೃಹಬಂಧನದಲ್ಲಿಲ್ಲ ಎಂಬುದನ್ನು ಪೊಲೀಸರು ಹೇಗೆ ನಿರ್ಲಜ್ಜವಾಗಿ ನಿರಾಕರಿಸುತ್ತಿದ್ದಾರೆ? ಅವರು ಏನಾಯಿತು ಎಂಬುದನ್ನು ಬಹಿರಂಗಪಡಿಸುವ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಮುಸುಕುಧಾರಿ ಸಿಬ್ಬಂದಿ ಅವರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ದು ನಂತರ ಅವರ ನಿವಾಸಕ್ಕೆ ನಿರ್ಬಂಧ ಹೇರಲಾಗಿದೆ. HIAL ಅನ್ನು ಪರಿಣಾಮಕಾರಿಯಾಗಿ ಪೊಲೀಸ್ ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ” ಎಂದು ದೂರಿದ್ದಾರೆ.

“ನಮ್ಮ ನಿಯೋಗ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ನಮ್ಮನ್ನು ಗೇಟ್‌ನಲ್ಲಿ ತಡೆದು ಪ್ರವೇಶ ನಿರಾಕರಿಸಲಾಯಿತು. ಇಂತಹ ನಿರಾಕರಣೆಗಳು ದಾರಿತಪ್ಪಿಸುವಂತದ್ದು ಮತ್ತು ಸಂಪೂರ್ಣವಾಗಿ ಖಂಡನೀಯ. ಆಡಳಿತವು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸತ್ಯಗಳನ್ನು ಅಳಿಸಲು ಸಾಧ್ಯವಿಲ್ಲ. ಇದು ಲಡಾಖ್‌ನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಭಿನ್ನಾಭಿಪ್ರಾಯದ ನಿಗ್ರಹವನ್ನು ಬಹಿರಂಗಪಡಿಸುತ್ತವೆ” ಎಂದು ಹೇಳಿದ್ದಾರೆ.

ಲಡಾಖ್‌ ಚುನಾವಣೆ

ಲಡಾಖ್‌ನ ಎಂಟು ಜಿಲ್ಲೆಗಳಲ್ಲಿರುವ ಒಟ್ಟು 192 ಪಂಚಾಯತ್ ಹಲ್ಕಾಗಳು ಮತ್ತು ಲೇಹ್ ಹಾಗೂ ಕಾರ್ಗಿಲ್‌ನ ಎರಡು ನಗರಸಭೆಗಳಿಗೆ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನವೆಂಬರ್ 30ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಒಟ್ಟು 192 ಪಂಚಾಯತ್ ಹಲ್ಕಾಗಳ ಪೈಕಿ 55 ಸರಪಂಚ್‌ಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 137 ಸರಪಂಚ್ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಹಾಗೆಯೇ 1,428 ಪಂಚ್ ಸ್ಥಾನಗಳಲ್ಲಿ 1,186 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 242 ಸ್ಥಾನಗಳಿಗೆ ಇಂದು ಮತ ಚಲಾವಣೆಯಾಗುತ್ತಿದೆ. ಇನ್ನು ಲೇಹ್ ನಗರಸಭೆಯ ಎಲ್ಲ 21 ವಾರ್ಡ್‌ಗಳಿಗೆ ಮತದಾನ ನಡೆಯುತ್ತಿದ್ದರೆ, ಕಾರ್ಗಿಲ್ ನಗರಸಭೆಯ 17 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫೇರ್‌ನೆಸ್ ಕ್ರೀಮ್‌ನಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ: 17ರ ಬಾಲಕಿಯ ಮೂತ್ರಪಿಂಡಕ್ಕೆ ಗಂಭೀರ ಹಾನಿ

ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಪ್ರಚಾರದ ವಿಡಿಯೊಗಳನ್ನು ನಂಬಿ ಆನ್‌ಲೈನ್ ಮೂಲಕ ಖರೀದಿಸಿದ...

ವಿಜಯಪುರ |ಜಾತಿ–ಧರ್ಮದ ಭೇದ ಮರೆತು ಸೌಹಾರ್ದದ ದೀಪ ಬೆಳಗಿಸಿದ ಸರ್ವಧರ್ಮೀಯರು

ಜಾತಿ, ಧರ್ಮಗಳ ಎಲ್ಲ ಭೇದಭಾವಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ...