ಜಿಎಸ್‌ಟಿ 2.0 | ವಸ್ತುಗಳ ಬೆಲೆಯೇ 50% ಕಡಿತ; ತಪ್ಪು ಲೆಕ್ಕ ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ಸಂಸದ

Date:

‘ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುವುದು’ ಈ ಬಿಜೆಪಿಗರಿಗೆ ಹೊಸದೇನಲ್ಲ. ಯಾಕೆಂದ್ರೆ, ತಾನೇ ಮಾಡಿದ ತಪ್ಪುಗಳಿಗೆ, ತಾನೇ ಪರಿಹಾರ ರೂಪದಲ್ಲಿ ಒಂದಷ್ಟು ಬದಲಾವಣೆ ಮಾಡಿ, ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಮೋದಿ ಸರ್ಕಾರದ ಪರಿಪಾಠ. ಇದೀಗ, ಅದು ಜಿಎಸ್‌ಟಿಗೆ ವಿಸ್ತರಣೆಯಾಗಿದೆ. ತಾವೇ ಜಾರಿಗೆ ತಂದ ಜಿಎಸ್‌ಟಿ ವ್ಯವಸ್ಥೆಯಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ಮಾಡಿ, ತಾನೇ ಸಂಭ್ರಮಿಸುತ್ತಿದೆ. ಮೋದಿ ಭಕ್ತರು ಉಡುಗೊರೆ ಎಂದೆಲ್ಲ ಬೊಬ್ಬೆಹೊಡೆಯುತ್ತಿದ್ದಾರೆ.

- Advertisement -

2017ರಲ್ಲಿ ಇದೇ ಮೋದಿ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಿತು. ನಾಲ್ಕು ಹಂತಗಳಲ್ಲಿ ತೆರಿಗೆಯನ್ನು ನಿಗದಿ ಮಾಡಿತು. ಜಿಎಸ್‌ಟಿ ಮೂಲಕ ಆರ್ಥಿಕತೆಯನ್ನು ಸರಳಗೊಳಿಸುತ್ತೇವೆ. ದೇಶಾದ್ಯಂತ ಒಂದೇ ತೆರಿಗೆ ಇರಲಿದೆ ಎಂದು ಹೇಳಿಕೊಂಡಿದೆ. ಆದರೆ, ಈಗಲೂ ಜಿಎಸ್‌ಟಿ, ಸೆಸ್‌ ರೀತಿಯ ತೆರಿಗೆಗಳು ಇವೆ ಎಂಬುದು ವಾಸ್ತವ. ಅದೇನೇ ಇರಲಿ, ಜನರಿಗೆ ಅನುಕೂಲ ಮಾಡಿಕೊಡುತ್ತದೆ ಎಂದಿದ್ದ ಜಿಎಸ್‌ಟಿ, ಜನರಿಗೆ ಮತ್ತಷ್ಟು ಆರ್ಥಿಕ ಹೊರೆಯನ್ನು ಹೇರಿತೇ ಹೊರತು, ಹೊರೆಯನ್ನು ತಗ್ಗಿಸಲಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ, ಹಲವು ವಸ್ತುಗಳ ಬೆಲೆಯನ್ನು ಮತ್ತಷ್ಟು ಹೆಚ್ಚಾಗಿದ್ದು ವಾಸ್ತವ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕಳೆದ 8 ವರ್ಷಗಳಲ್ಲಿ ಜನರ ಮೇಲೆ ಭಾರೀ ತೆರಿಗೆ ಹೇರಿದ್ದ ಮೋದಿ ಸರ್ಕಾರ, ಇದೀಗ ಅಗತ್ಯ ಮತ್ತು ದಿನ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿದೆ. ತನ್ನ ಕೃತ್ಯವನ್ನು ತಾನೇ ಒಂದಷ್ಟು ಸರಿದೂಗಿಸಿಕೊಂಡು ಜನರಿಗೆ ಭಾರೀ ಕೊಡುಗೆ ಕೊಟ್ಟೆವೆಂದು ಸಂಭ್ರಮಿಸುತ್ತಿದೆ.

ಬಿಜೆಪಿಗರು ತಮ್ಮ ಸರ್ಕಾರವನ್ನು ಹೊಗಳುವ ಭರದಲ್ಲಿ ಏನು ಮಾತನಾಡುತ್ತಿದ್ದೇವೆ ಎಂಬುದರ ಅರಿವೂ ಇಲ್ಲದೆ ಮಾತನಾಡುತ್ತಿದ್ದಾರೆ. ಅವರಲ್ಇ, ಉತ್ತರ ಪ್ರದೇಶದ ಬಿಜೆಪಿ ಸಂಸದ ರವಿಕಿಶನ್ ಮೊದಲಿಗರು. ಅವರು ಯಾವುದೇ ಅಂಜಿಕೆಯಿಲ್ಲದೇ ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ರವಿಕಿಶನ್, “ಜಿಎಸ್‌ಟಿ ಪರಿಷ್ಕರಣೆಯಿಂದ ಬಟ್ಟೆ, ಟೆಲಿವಿಷನ್ ಸೇರಿದಂತೆ ಹಲವು ಉತ್ಪನ್ನಗಳು 50%ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ ದೊರೆಯಲಿವೆ. ನಿಮಗೆ ಈ ಹಿಂದೆ 100 ರೂಪಾಯಿಗೆ ಸಿಗುತ್ತಿದ್ದ ಉತ್ಪನ್ನ ಈಗ ಕೇವಲ 45 ರೂಪಾಯಿಗೆ ಸಿಗುತ್ತದೆ. 1,000 ರೂಪಾಯಿಗೆ ಸಿಗುತ್ತಿದ್ದ ಉತ್ಪನ್ನ ಕೇವಲ 450 ರೂಪಾಯಿಗೆ ಹಾಗೇಯೇ, 5,000 ರೂಪಾಯಿಗೆ ಸಿಗುತ್ತಿದ್ದ ಉತ್ಪನ್ನ ಕೇವಲ 2,450 ರೂಪಾಯಿಗೆ ಸಿಗುತ್ತದೆ” ಎಂದು ಹೇಳಿಕೆ ನೀಡಿದ್ದಾರೆ.

ಈ ಲೇಖನ ಓದಿದ್ದೀರಾ?: ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ- ಭಾಗ 6

ಅವರ ಈ ಹೇಳಿಕೆ ಅಕ್ಷರಶಃ ಸುಳ್ಳು. ಯಾಕೆಂದ್ರೆ, ಮೋದಿ ಅವರು ಜಿಎಸ್‌ಟಿ ದರವನ್ನು ಕಡಿತಗೊಳಿಸಿದ್ದಾರೆಯೇ ಹೊರತು, ವಸ್ತುಗಳ ಬೆಲೆಯನ್ನಲ್ಲ. ತೆರಿಗೆ ಕಡಿಮೆ ಆಗುವುದರಿಂದ, ವಸ್ತುಗಳ ಬೆಲೆ 50%ಗಿಂತ ಕಮ್ಮಿ ಆಗಿಬಿಡುತ್ತದೆ ಎಂಬುದು ಸಂಪೂರ್ಣ ಸುಳ್ಳು. ಜಿಎಸ್‌ಟಿ ಕಡಿತ ಆಗುವುದರಿಂದ 50% ಬೆಲೆ ಕಮ್ಮಿ ಆಗಲ್ಲ. ಜಿಎಸ್‌ಟಿ ದರ ಇಳಿಕೆಯಿಂದ 5,000 ರೂಪಾಯಿ ಮೌಲ್ಯದ ವಸ್ತು 4,500 ರೂಪಾಯಿಗೆ ಸಿಗಬಹುದು. ಆದರೆ, 2,500 ರೂ.ಗೆ ಸಿಗಲ್ಲ. ಯಾಕೆಂದರೆ, 5,000 ರೂ. ಮೌಲ್ಯದ ಒಂದು ವಸ್ತುಗೆ 18% ಜಿಎಸ್‌ಟಿ ಇದ್ದರೆ, ಆ ವಸ್ತುವಿನ ಬೆಲೆ 5,900 ರೂ. ಆಗುತ್ತದೆ. ಆ ಜಿಎಸ್‌ಟಿ ದರವನ್ನು 5%ಗೆ ಇಳಿಸಿದರೆ, ಆ ವಸ್ತುವಿನ ಎಲೆ 5,250 ರೂ. ಆಗುತ್ತದೆಯೇ ಹೊರತು, 2,500 ರೂ. ಆಗಲ್ಲ. ಈ ಸಣ್ಣ ಲೆಕ್ಕಾಚಾರವೂ ಗೊತ್ತಿಲ್ಲದೆ ಆತ ವಸ್ತುವಿನ ಬೆಲೆಯೇ 50% ಇಳಿದುಬಿಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ.

ಬಿಜೆಪಿ ಸಂಸದ ರವಿಕಿಶನ್ ಅವರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಜಿಎಸ್‌ಟಿ ದರ ಸುಧಾರಣೆಗಳ ಕುರಿತು ಬಿಜೆಪಿಗರ ಹೇಳಿಕೆಗಳ ವಿರುದ್ಧ ಹರಿಹಾಯ್ದಿದ್ದಾರೆ. “ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ವಿಶ್ವ ದಾಖಲೆಯನ್ನು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಜಿಎಸ್‌ಟಿ ವಿಚಾರವಾಗಿ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ನಾಚಿಕೆಗೇಡು ಎಂದು ಜರಿದಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

CJP ಪ್ರೊಟೆಸ್ಟ್‌ ಎಫೆಕ್ಟ್ | ಅ.10ರಂದು ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು

ದೆಹಲಿಯಲ್ಲಿ ಅಕ್ಟೋಬರ್‌ 10ರಂದು ನಡೆಯಲಿರುವ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಯ...

ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ

ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು...

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...