ಭಾರತದ ಪ್ರಜಾಪ್ರಭುತ್ವವು 2014ರಲ್ಲಿಯೇ ನಾಶವಾಗಿದೆ: ರಾಹುಲ್ ಗಾಂಧಿ

Date:

ಭಾರತದ ಪ್ರಜಾಪ್ರಭುತ್ವವು ಸಾರ್ವಜನಿಕರ ಆಸ್ತಿಯಾಗಿದೆ. ಆದರೆ, ಅದು 2014ರಲ್ಲಿಯೇ ನಾಶವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ತೆಲಂಗಾಣ ಸರ್ಕಾರವು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ‘ಭಾರತ್ ಶೃಂಗಸಭೆ’ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 2024ರ ಲೋಕಸಭಾ ಚುನಾವಣೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ವೀಸಾ ರದ್ದತಿ ಪ್ರಕರಣ:...

ನಿರಂತರ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯ, 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ಧಾಂತದ ಸಂವಿಧಾನದ ಮೂಲಕ ಸ್ಥಾಪಿಸಿದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವುಗಳನ್ನು ಕಾಪಾಡುವಲ್ಲಿ ಆಡಳಿತದ ಹೊಣೆಗಾರಿಕೆ ಭಾರತದ ಜಾಗತಿಕ ಪ್ರತಿಷ್ಠೆಯ ಮೂಲಾಧಾರಗಳಾಗಿವೆ. ನಾರ್ವೆಯ...

ವಿಜ್ಞಾನ ಜಗತ್ತಿನ ಅಮೂಲ್ಯ ವಿಜ್ಞಾನಿ- ಪ್ರೊ. ಅಮೂಲ್ಯ ಕುಮಾರ್...

ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ ಸಮಾಜದ ನಡುವೆ ಕೊಂಡೊಯ್ದ ಪ್ರಮುಖರಲ್ಲಿ ಒಬ್ಬರಾದ ಪ್ರೊ. ಅಮೂಲ್ಯ ಕುಮಾರ್ ನಿಜ ಅರ್ಥದ ಜೀನಿಯಸ್. ವಿಜ್ಞಾನದ ಜೊತೆಗೆ ಗ್ರಾಮೀಣ ಅಭಿವೃದ್ಧಿ,...

ಎನ್‌ವಿಡಿಯಾ ಗೂಢಚರ್ಯೆ ಭೀತಿ: ಚೀನಾದ ಮೇಲಿನ ಚಿಪ್ ದಿಗ್ಬಂಧನ...

ನವೆಂಬರ್ 18-19ರಂದು ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೆ ಕೆಲವೇ ದಿನಗಳ ಮೊದಲು ಈ ಹನಿ ಟ್ರ್ಯಾಪ್ ಹಗರಣ ಸ್ಫೋಟಗೊಂಡಿದೆ.‌ ಎರಡೂ ದೇಶಗಳಲ್ಲಿ...

ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದೇಶಿ ಅತಿಥಿಗಳಿಗೆ ಕ್ಷಮೆಯಾಚಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, “ಕೇಂದ್ರದ ಮೋದಿ ಸರ್ಕಾರವು ಅವರೆಲ್ಲರಿಗೂ ವೀಸಾ ನೀಡಲು ನಿರಾಕರಿಸಿದೆ. ಕೊನೆ ಕ್ಷಣದಲ್ಲಿ ವೀಸಾಗಳನ್ನು ರದ್ದುಗೊಳಿಸಿದೆ. ಇದು ನಾವು ನಮ್ಮ ದೇಶದಲ್ಲಿ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ತಮಗೆಲ್ಲವೂ ತಿಳಿದಿದೆ ಎಂದು ಭಾವಿಸುವ ಮತ್ತು ಬೇರೆಯವರ ಮಾತನ್ನು ಕೇಳುವ ಅಗತ್ಯವಿಲ್ಲ ಎಂಬಂತೆ ವರ್ತಿಸುವ ರಾಜಕೀಯ ನಾಯಕರು ಫ್ಯಾಸಿಸ್ಟ್‌ಗಳಾಗಿರುತ್ತಾರೆ. ಇಂತಹವರು ಬಹುಸಂಖ್ಯಾತರಲ್ಲದಿದ್ದರೂ, ಜೋರಾಗಿ ಕಿರುಚಾಡುವ ಮೂಲಕ ಗಮನ ಸೆಳೆಯುತ್ತಾರೆ. ಐತಿಹಾಸಿಕವಾಗಿ ವ್ಯವಸ್ಥೆಗಳು ಕುಸಿದಾಗ ಫ್ಯಾಸಿಸ್ಟ್‌ಗಳು ಹೊರಬಂದು ಅಲ್ಪಕಾಲ ಉಪಟಳ ನಡೆಸುತ್ತಾರೆ. ನಂತರ ಕಣ್ಮರೆಯಾಗುತ್ತಾರೆ. ಆದರೆ, ಕಳೆದ ಒಂದು ದಶಕದಿಂದ ಭಾರತದಲ್ಲಿ ಇಂತಹ ಶಕ್ತಿಗಳು ಅಬ್ಬರಿಸುತ್ತಿವೆ” ಎಂದು ಅವರು ಹೇಳಿದ್ದಾರೆ.

“2014ರ ಚುನಾವಣೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ರಾಜಕೀಯ ವ್ಯವಸ್ಥೆಯೊಳಗೆ ಕೋಟ್ಯಂತರ ಡಾಲರ್ ಹಣವನ್ನು ಹರಿಸಲಾಯಿತು. ಸಂಪೂರ್ಣ ಹೊಸ ಬಗೆಯ ನಾಟಕೀಯ ಪ್ರಚಾರವನ್ನು ನಡೆಸಲಾಯಿತು. ಈ ಬೆಳವಣಿಗೆಯಿಂದ ವಿರೋಧ ಪಕ್ಷಗಳು ಕೇವಲ ಒಂದೆರಡು ವರ್ಷಗಳಲ್ಲ, ಬದಲಾಗಿ ಇಡೀ ಒಂದು ದಶಕ ಕಾಲ ಆಘಾತದಲ್ಲಿದ್ದವು. ಭಾರತೀಯ ರಾಜಕಾರಣದಲ್ಲಿ ಸೃಷ್ಟಿಯಾದ ಈ ಬಿಕ್ಕಟ್ಟನ್ನು ಆರಂಭದಲ್ಲಿ ಗ್ರಹಿಸಿದ ವಿರೋಧ ಪಕ್ಷಗಳು, ನಿಧಾನವಾಗಿ ಸತ್ಯವನ್ನು ಕಂಡುಕೊಂಡಿವೆ. 2014ರಲ್ಲಿ ಭಾರತದ ಪ್ರಜಾಪ್ರಭುತ್ವವು ನಾಶವಾಗಿದೆ ಎಂಬುದನ್ನು ನಾವು ಯಾವುದೇ ಸಂಶಯವಿಲ್ಲದಂತೆ ಸಾಬೀತುಪಡಿಸಿದ್ದೇವೆ” ಎಂದು ಅವರು ಪ್ರತಿಪಾದಿಸಿದ್ದಾರೆ.

“2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ 14 ಕೋಟಿ ಜನರನ್ನು ಕೆಲವು ತಿಂಗಳುಗಳ ಹಿಂದೆ ಅಸ್ತಿತ್ವದಲ್ಲೇ ಇಲ್ಲದ ಮತದಾರರು ಅಥವಾ ಮತ ಚಲಾಯಿಸದವರು ಎಂದು ಘೋಷಿಸಲಾಗಿದೆ. ಹೀಗಿರುವಾಗ ಆ ಚುನಾವಣೆಯ ಫಲಿತಾಂಶವು ಹೇಗೆ ನ್ಯಾಯಸಮ್ಮತವಾಗಿರಲು ಸಾಧ್ಯ” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!

“ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಜಯಗಳಿಸಿತ್ತು. ಆದರೆ, ಕೇವಲ ಮೂರು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಸಂಪೂರ್ಣವಾಗಿ ನೆಲಕಚ್ಚಿತು. ಇದರ ವಿವರಗಳನ್ನು ಪರಿಶೀಲಿಸಿದಾಗ, ಎರಡೂ ಚುನಾವಣೆಗಳಲ್ಲಿ ನಮ್ಮ ಮೈತ್ರಿಕೂಟಕ್ಕೆ ನಿಖರವಾಗಿ ಅಷ್ಟೇ ಪ್ರಮಾಣದ ಮತಗಳು ಬಂದಿರುವುದು ಕಂಡುಬಂದಿದೆ. ಆದರೆ, ಕೇವಲ ಮೂರು ತಿಂಗಳ ಅಂತರದಲ್ಲಿ 70 ಲಕ್ಷ ಹೊಸ ಮತದಾರರು ನಿಗೂಢವಾಗಿ ಸೇರ್ಪಡೆಯಾಗಿದ್ದು, ಆ ಎಲ್ಲ 70 ಲಕ್ಷ ಮತಗಳು ಬಿಜೆಪಿಗೆ ಬಿದ್ದಿವೆ. ಅವರು ಚುನಾವಣೆ ಗೆದ್ದಿದ್ದಾರೆ. ಇಂತಹ ಉದಾಹರಣೆಗಳನ್ನು ಒಂದಾದ ಮೇಲೊಂದರಂತೆ ಹಲವು ರಾಜ್ಯಗಳಲ್ಲಿ ನೀಡಬಲ್ಲೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಭಾರತದ ಪ್ರಜಾಪ್ರಭುತ್ವದ ಗಾತ್ರ ಮತ್ತು ಸಂಕೀರ್ಣತೆಯಿಂದಾಗಿ ಅದು ಕೇವಲ ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ಒಂದು ಸಾರ್ವಜನಿಕ ಆಸ್ತಿಯಾಗಿದೆ. ಜಾಗತಿಕ ಪ್ರಜಾಪ್ರಭುತ್ವ ಚಳವಳಿಯ ದೃಷ್ಟಿಯಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದು ಅತ್ಯಂತ ಮುಖ್ಯ. ಆದ್ದರಿಂದ ಭಾರತದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಕಳವಳದ ವಿಷಯವಾಗಬೇಕು” ಎಂದು ಕರೆ ನೀಡಿದ್ದಾರೆ.

“ವಿರೋಧ ಪಕ್ಷಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ತೀವ್ರ ಒತ್ತಡ ಹೇರಲಾಗುತ್ತಿದ್ದರೂ, ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ರಾಜಕೀಯ ಹೋರಾಟವನ್ನು ಮುಂದುವರಿಸುತ್ತೇವೆ. ದ್ವೇಷ ಮತ್ತು ಹಿಂಸಾಚಾರದ ವಿರುದ್ಧದ ನಮ್ಮ ಸಾಮೂಹಿಕ ಹೋರಾಟವು ನಮ್ಮದೇ ಆದ ಸಿದ್ಧಾಂತ ಮತ್ತು ಚೌಕಟ್ಟಿನೊಳಗೆ, ಯಾವುದೇ ಕೋಪ ಅಥವಾ ದ್ವೇಷವಿಲ್ಲದೆ, ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ₹15 ಸಾವಿರ ಸಂಬಳದ ಯುವಕನ ಹೆಸರಿನಲ್ಲಿ ₹350 ಕೋಟಿಗೂ ಅಧಿಕ ಜಿಎಸ್‌ಟಿ ವಂಚನೆ!

ಸಾಮಾನ್ಯ ಕುಟುಂಬದ ಯುವಕನೊಬ್ಬನ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಆತನ ಹೆಸರಿನಲ್ಲಿ ಬರೋಬ್ಬರಿ...

ಬೀದರ್‌ | ಬಿಸಿಯೂಟ ಯೋಜನೆಯ ಜವಾಬ್ದಾರಿ ಅಡುಗೆ ನೌಕರರಿಗೆ ವಹಿಸಿ: ಸಿಐಟಿಯು ಆಗ್ರಹ

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯ ನಿರ್ವಹಣೆಯ ಜವಾಬ್ದಾರಿಯನ್ನು ಶಿಕ್ಷಕರ ಬದಲಿಗೆ...

ಔರಾದ್‌ | ಅನುಭವ ಮಂಟಪ ಪಬ್ಲಿಕ್‌ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ಔರಾದ್‌: ತಾಲ್ಲೂಕಿನ ಸಂತಪೂರ ಗ್ರಾಮದ ಅನುಭವ ಮಂಟಪ ಗುರುಕುಲ ಪಬ್ಲಿಕ್‌ ಶಾಲೆಯಲ್ಲಿ...

ಬೂತ್ ಮಟ್ಟದಲ್ಲಿ ‘ವೋಟ್ ಬಚಾವೋ’ ಅಭಿಯಾನ ಚುರುಕುಗೊಳಿಸಿದ ಕಾಂಗ್ರೆಸ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು ಮುಖ್ಯ...