ಹೊಸ ಓದು | ಶ್ರೀನಿವಾಸರಾಜು ದೊಡ್ಡೇರಿ ಅವರ ‘ಬಾಬಾ ಸಾಹೇಬ್’

Date:

ಕನ್ನಡದ ಅಪರೂಪದ ಬರಹಗಾರ, ಅನುವಾದಕರಾದ ಶ್ರೀನಿವಾಸರಾಜು ದೊಡ್ಡೇರಿ ಅವರು ಅನುವಾದಿಸಿರುವ 'ಬಾಬಾ ಸಾಹೇಬ್' ಕೃತಿಯು ಇಂದು ಭಾನುವಾರ ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಒಂದು ಆಯ್ದ ಭಾಗ... ಈದಿನ ಓದುಗರಿಗಾಗಿ...

‘ಭಾರತದಲ್ಲಿ ಜಾತಿಗಳು’ ಲೇಖನವೇ ಅಂಬೇಡ್ಕರರ ಮೊದಲ ವೈಚಾರಿಕ ಬರಹ, ‘ದ ಇಂಡಿಯನ್‌ ಆಂಟಿಕ್ವರಿ’ ಎಂಬ ನಿಯತಕಾಲಿಕದಲ್ಲಿ ಇದು ಪ್ರಕಟವಾಯ್ತು. ತಮ್ಮ ಈ ಬರಹದ ಬಗ್ಗೆ ಅಂಬೇಡ್ಕರ್‌ಗೆ ಎಷ್ಟು ಹೆಮ್ಮೆ ಇತ್ತೆಂದರೆ, ತಾವು ಬರೆದ ಪಿಎಚ್.ಡಿ ಪ್ರಬಂಧವನ್ನು ಪುಸ್ತಕವಾಗಿ ಪ್ರಕಟಿಸಿದಾಗ ಅದರ ಮುಖಪುಟದಲ್ಲಿ ಅವರು ‘ಭಾರತದಲ್ಲಿ ಜಾತಿಗಳು ಲೇಖನದ ಬರಹಗಾರನಿಂದ ರಚಿತವಾದ ಕೃತಿ’ ಎಂದು ಅಚ್ಚುಹಾಕಿಸಿದ್ದರು. ಮುಂದೊಮ್ಮೆ (1944ರಲ್ಲಿ) ಅವರು ತಮ್ಮ ‘ಜಾತಿವಿನಾಶ’ ಕೃತಿಯ ಮೂರನೆಯ ಮುದ್ರಣವನ್ನು ಹೊರತಂದಾಗ ಅದರಲ್ಲಿ ಅವರು ಉಲ್ಲೇಖಿಸಿದರು: ‘1937ರಲ್ಲಿ ಎರಡನೇ ಬಾರಿ ಪ್ರಕಟವಾಗಿದ್ದ ಜಾತಿವಿನಾಶ ಕೃತಿಯ ಎಲ್ಲ ಪ್ರತಿಗಳೂ ಮುಗಿದುಹೋಗಿ ಈಗ ಇದರ ಮೂರನೇ ಮುದ್ರಣ ಹೊರಬರುತ್ತಿದೆ. ಮೂರನೇ ಮುದ್ರಣ ಹೊರಬರಲು ಹೆಚ್ಚಿನ ಸಮಯವೇ ಹಿಡಿಯಿತು. ಇದಕ್ಕೆ ಕಾರಣ, ನಾನು ಈ ಪುಸ್ತಕವನ್ನು ತಿದ್ದಿ ಬರೆಯುವ ಪ್ರಯತ್ನದಲ್ಲಿದ್ದುದು ಹಾಗೂ ಭಾರತದಲ್ಲಿ ಜಾತಿಗಳು ಎಂಬ ನನ್ನ ಇನ್ನೊಂದು ಪ್ರಬಂಧವನ್ನು ಈ ಪುಸ್ತಕದಲ್ಲಿ ಅಳವಡಿಸಲು ಸಾಧ್ಯವೇ ಎಂಬ ಪರಿಶೀಲನೆಯಲ್ಲಿ ತೊಡಗಿದ್ದುದು. 1950ರ ದಶಕದಲ್ಲಿ, ಅಂದರೆ ತಮ್ಮ ಬದುಕಿನ ಚರಮ ಘಟ್ಟವನ್ನು ಮುಟ್ಟುತ್ತಿದ್ದಾಗ ಕೂಡ ಅಂಬೇಡ್ಕರ್ ಬರೆದ ಅನೇಕ ಪುಸ್ತಕಗಳು ‘ಭಾರತದಲ್ಲಿ ಜಾತಿಗಳು ಲೇಖನದ ಬರಹಗಾರನಿಂದ ರಚಿತವಾದ ಕೃತಿ’ ಎಂಬ ಅಗ್ಗಳಿಕೆಯ ವಾಕ್ಯವನ್ನು ತಮ್ಮ ಮುಖಪುಟದಲ್ಲಿ ಹೊತ್ತುಕೊಂಡಿರುತ್ತಿದ್ದವು. ತಮ್ಮ ತಾರುಣ್ಯದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಪಿಎಚ್.ಡಿ ವಿದ್ಯಾರ್ಥಿಯಾಗಿ ಮಾಡಿದ್ದ ಈ ಸಾಧನೆ ಅಂಬೇಡ್ಕರರಿಗೆ ಎಷ್ಟು ಮಹತ್ವದಾಗಿತ್ತು, ಎಂತಹ ಸವಿ ನೆನಪಾಗಿತ್ತು ಎಂಬುದಕ್ಕೆ ಇದು ಒಂದು ದಾಖಲೆ.

- Advertisement -

ನ್ಯೂಯಾರ್ಕ್‌ನಲ್ಲಿ ಸವೆಸಿದ ಮೂರು ವರ್ಷಗಳೂ ಅಂಬೇಡ್ಕರರ ಬದುಕಿನಲ್ಲಿ ನಿರ್ಣಾಯಕವಾಗಿದ್ದವು. ವಿಶ್ವವಿದ್ಯಾಲಯದ ಒಳಗೂ, ವಿಶ್ವವಿದ್ಯಾಲಯದಾಚೆಗೂ ಅವರು ಮಾಡಿದ ಕಲಿಕೆ, ದಕ್ಕಿಸಿಕೊಂಡ ಗ್ರಹಿಕೆ ವ್ಯಾಪಕವಾಗಿತ್ತು. ಹಾಗೆ ನೋಡುವುದಾದರೆ, ಅಂಬೇಡ್ಕರರ ‘ಭಾರತದಲ್ಲಿ ಜಾತಿಗಳು’ ಲೇಖನವು ಅವರು ಅಧ್ಯಯನ ಮಾಡುತ್ತಿದ್ದ ‘ಹಣಕಾಸಿನ ವಿಜ್ಞಾನ’ ವಿಷಯವೊಂದನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಒಳಗೊಂಡಿತ್ತು! ವಿದ್ಯಾರ್ಥಿಯಾಗಿ ಬಾಲ್ಯದಲ್ಲಿ ತಾವು ಎದುರಿಸಿದ ಸನ್ನಿವೇಶಗಳನ್ನು ಅಂಬೇಡ್ಕರ್ ‘ವೇಟಿಂಗ್ ಫಾರ್ ಎ ವೀಸಾ’ ಎಂಬ ತಮ್ಮ ಅನುಭವ ಕಥನದಲ್ಲಿ ಬರೆದುಕೊಂಡರು. ಆದರೆ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅವರು ಪಡೆದುಕೊಂಡ ಶಿಕ್ಷಣ, ಅವರ ವಿದ್ಯಾರ್ಥಿ ಬದುಕಿಗೆ ಬೇರೆಯದೇ ತಳಹದಿಯನ್ನು ನಿರ್ಮಿಸಿಕೊಟ್ಟಿತು. ದುರದೃಷ್ಟವಶಾತ್ ಈ ಕುರಿತು ಎಲ್ಲೂ ದಾಖಲಾಗಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ...

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ...

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

*

ಲಂಡನ್‌ನಲ್ಲಿ ಅಂಬೇಡ್ಕ‌ರ್ ವಿವಿಧ ಗಣ್ಯರನ್ನು ಭೇಟಿ ಮಾಡಿದ್ದರು. ಅವರಲ್ಲಿ ಬ್ಯಾರನ್ ಜಾರ್ಜ್ ಸಿಡನ್‌ಹ್ಯಾಮ್ ಕ್ಲಾರ್ಕ್ ಅವರೂ ಒಬ್ಬರು. ಸಿಡನ್‌ಹ್ಯಾಮ್, 1907ರಿಂದ 1913ರ ವರೆಗೆ ಬಾಂಬೆಯ ಗವರ್ನರ್ ಆಗಿದ್ದರು. 1913ರಲ್ಲಿ ಅವರಿಗೆ ‘ಲಾರ್ಡ್’ ಪದವಿ ಸಿಕ್ಕಿತ್ತು. ಅಂದಿನಿಂದ ಅವರು ಲಾರ್ಡ್ ಸಿಡನ್ ಹ್ಯಾಮ್ ಎಂದು ಪ್ರಸಿದ್ದಿಗೆ ಬಂದರು. ಸಿಡನ್‌ಹ್ಯಾಮ್ ಬಗ್ಗೆ ‘ಒಳ್ಳೆಯ ಸಂವೇದನೆಗಳಿಲ್ಲದ, ಒರಟು ನಡವಳಿಕೆಯ, ಮಾತಿನ ಕೊರೆತದಲ್ಲಿ ನಿಪುಣನಾದ, ಭಾರಿ ಅಶಿಸ್ತಿನ ಮನುಷ್ಯ’ ಎಂಬ ಒಂದು ಉಲ್ಲೇಖವಿದೆ. ಆಮೇಲಾಮೇಲೆ ಇವರು ತಮ್ಮ ಜನಾಂಗವಿರೋಧಿ, ಫ್ಯಾಶಿಸ್ಟ್ ನಿಲುವುಗಳಿಂದ ಹೆಸರು ಕೆಡಿಸಿಕೊಂಡರಾದರೂ ತಮ್ಮ ಹೆಸರಿನಲ್ಲಿ ಸ್ಥಾಪನೆಯಾಗಿದ್ದ ಬಾಂಬೆಯ ಸಿಡನ್‌ಹ್ಯಾಮ್ ಕಾಲೇಜಿನಲ್ಲಿ 1918ರ ಹೊತ್ತಿಗೆ ಅಂಬೇಡ್ಕರ್‌ಗೆ ಒಂದು ಹುದ್ದೆಯನ್ನು ದೊರಕಿಸಿಕೊಡುವಲ್ಲಿ ನೆರವಿಗೆ ಬಂದರು.

ಇದನ್ನು ಓದಿದ್ದೀರಾ?: ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ ಅದ್ವಿತೀಯ ಇತಿಹಾಸಕಾರ

1918ರಲ್ಲಿ ಅಂಥದ್ದೊಂದು ಸನ್ನಿವೇಶ ಅಂಬೇಡ್ಕರರ ಬದುಕಿನಲ್ಲಿ ಯಾಕೆ ನಿರ್ಮಾಣವಾಗಿತ್ತು ಎಂಬುದನ್ನೂ ನೋಡಬೇಕು. 1917ರ ಬೇಸಿಗೆ ಕಾಲಕ್ಕೆ ಅಂಬೇಡ್ಕರ್ ಲಂಡನ್‌ಗೆ ಕಾಲಿಟ್ಟು ಒಂದು ವರ್ಷವಾಗಿತ್ತು. ಅಷ್ಟು ಹೊತ್ತಿಗೆ ಅವರ ವ್ಯಾಸಂಗ ವೇತನದ ಅವಧಿಯೂ ಮುಗಿಯಿತು. ವ್ಯಾಸಂಗ ವೇತನದ ಅವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂಬ ಅಂಬೇಡ್ಕರರ ಮನವಿಯನ್ನು ಬರೋಡಾ ರಾಜ್ಯದ ಆಡಳಿತವು ತಿರಸ್ಕರಿಸಿತು. ‘ತಕ್ಷಣವೇ ಇಂಡಿಯಾಕ್ಕೆ ವಾಪಸಾಗುವುದು’ ಎಂದೂ ಕೂಡ ಅದು ಸೂಚಿಸಿತು.

ಇತ್ತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಂಬೇಡ್ಕರರ ಪದವಿ ಪರೀಕ್ಷೆಯ ಕೋರ್ಸ್‌ವರ್ಕ್ ಮುಗಿದಿತ್ತಾದರೂ ಅಂತಿಮ ಪ್ರಬಂಧ ಸಲ್ಲಿಕೆಯಾಗುವ ಪ್ರಕ್ರಿಯೆ ಇನ್ನೂ ಬಾಕಿಯಿತ್ತು. ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಿದ್ದ ಪಿಎಚ್.ಡಿ ಪ್ರಬಂಧವನ್ನು ಅವರಿನ್ನೂ ಬರೆದು ಮುಗಿಸಿರಲಿಲ್ಲ. ಗ್ರೇ ಕಾನೂನು ಶಾಲೆಯಲ್ಲಿ ಎರಡು ಸೆಮಿಸ್ಟರ್‌ಗಳ ಅವಧಿಯನ್ನಷ್ಟೆ ಅಂಬೇಡ್ಕರ್ ಪೂರೈಸಿದ್ದರು. ಕಾನೂನು ಪದವಿ ಪಡೆಯಲು ಇನ್ನೂ ಐದು ವರ್ಷಗಳು ಹಿಡಿಯುತ್ತಿದ್ದವು. ವಕೀಲ ವೃತ್ತಿಗೆ ಇಳಿಯುವ ಮುನ್ನ ‘ವಕೀಲಿಕೆ’ಯ ಅನುಭವವನ್ನೂ ಅವರು ಪಡೆದುಕೊಳ್ಳಬೇಕಾಗುತ್ತಿತ್ತು. ಅದಕ್ಕಾಗಿ ಯಾರಾದರೂ ನುರಿತ ವಕೀಲರ ಬಳಿ ಪ್ರಾಕ್ಟಿಸ್ ಮಾಡುವುದು ಅವಶ್ಯಕವಾಗಿತ್ತು. ಇಷ್ಟೆಲ್ಲ ಅಡೆತಡೆಗಳ ನಡುವೆ ಅವರ ಅಭ್ಯಾಸ ಸಿಲುಕಿತ್ತು.

ಅಡೆತಡೆಗಳಿದ್ದ ಮಾತ್ರಕ್ಕೆ ವಿದ್ಯಾಭ್ಯಾಸವನ್ನು ಕೈಬಿಡಲು ಅಂಬೇಡ್ಕರ್ ತಯಾರಿರಲಿಲ್ಲ. ತಮ್ಮ ವಿದ್ಯಾಭ್ಯಾಸವನ್ನು ಈ ಹಂತದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿ, ಆನಂತರ ಮುಂದುವರೆಸುವುದಾಗಿ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ತಮ್ಮ ಮೇಲ್ವಿಚಾರಕರಾಗಿದ್ದ ಪ್ರೊಫೆಸರ್ ಕ್ಯಾನನ್ ಅವರಲ್ಲಿ ಹೇಳಿದರು. ಪ್ರೊಫೆಸರ್ ಕ್ಯಾನನ್, ಲಂಡನ್ ವಿಶ್ವವಿದ್ಯಾಲಯದ ಅಧಿಕಾರಿ ವರ್ಗದ ಜೊತೆ ಮಾತನಾಡಿ ‘1917ರ ಅಕ್ಟೋಬರ್‌ನಿಂದ ನಾಲ್ಕು ವರ್ಷದ ಒಳಗೆ ವಿದ್ಯಾಭ್ಯಾಸವನ್ನು ಮರು ಆರಂಭಿಸಲು’ ಅಂಬೇಡ್ಕರ್‌ಗೆ ಅನುಮತಿ ದೊರಕಿಸಿಕೊಟ್ಟರು. ‘ಇಂಡಿಯಾದಲ್ಲಿ ದೊರೆಯುವ ಪುಸ್ತಕಗಳನ್ನು ಪರಾಮರ್ಶಿಸಿ, ಅವುಗಳನ್ನು ತನ್ನ ಡಿ.ಎಸ್‌ಸಿ ಪದವಿಗೆ ಪೂರಕವಾಗಿ ಈ ವಿದ್ಯಾರ್ಥಿ ಬಳಸಿಕೊಂಡಿದ್ದಾನೆಂದು ಈತನ ಅಧ್ಯಾಪಕರು ಪ್ರಮಾಣೀಕರಿಸಿದರೆ ಈ ವಿದ್ಯಾರ್ಥಿಗೆ ಒಂದು ವರ್ಷದ ಅವಧಿಗೆ ವಿನಾಯಿತಿಯನ್ನು ನೀಡಲಾಗುವುದು’ ಎಂಬ ನಿಯಮವೂ ಅದರಲ್ಲಿ ಸೇರಿತ್ತು.

ಕ್ಯಾನನ್‌ರಿಗೆ ಕೃತಜ್ಞತೆ ಹೇಳಿ, ಅಂಬೇಡ್ಕರ್ ಭಾರತಕ್ಕೆ ವಾಪಸಾಗಲು ಸಿದ್ಧತೆ ಮಾಡಿಕೊಳ್ಳತೊಡಗಿದರು.

(ಮೂಲ: ಆಕಾಶ್‌ ಸಿಂಗ್‌ ರಾಥೋಡ್, ಕನ್ನಡಕ್ಕೆ: ಶ್ರಿನಿವಾಸರಾಜು ದೊಡ್ಡೇರಿ, ಪ್ರ: ಆಕೃತಿ ಪುಸ್ತಕ, ಬೆಲೆ: ರೂ. 500, ಸಂಪರ್ಕ: 98866 94580)

WhatsApp Image 2026 11 14 at 20.44.01
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಮೋಹಿತ್ ಉಲ್ವಾ; ಪಾಕ್ ಮಣಿಸಿ 9ನೇ ಬಾರಿ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ

ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ 'ಎಸಿಸಿ ಪುರುಷರ ಅಂಡರ್-19 ಏಷ್ಯಾ...

ಬೆಳಗಾವಿ | ದರ್ಗಾ, ಬಹುಪಯೋಗಿ ಭವನಕ್ಕೆ ಶಂಕುಸ್ಥಾಪನೆ

ಬೆಳಗಾವಿ ಜಿಲ್ಲಾ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ದರ್ಗಾ ಎಸ್ಟೇಟ್ ವಕ್ಫ್...

ಐಐಟಿ ರೂರ್ಕಿ ವಿದ್ಯಾರ್ಥಿ ಆತ್ಮಹತ್ಯೆ: 70 ಪರೀಕ್ಷೆಗಳು ನವೆಂಬರ್ 22ಕ್ಕೆ ಮುಂದೂಡಿಕೆ! 

ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ರೂರ್ಕಿಯ 20 ವರ್ಷದ ವಿದ್ಯಾರ್ಥಿಯೊಬ್ಬರು...

NCP ಬಣಗಳ ವಿಲೀನ : ಸುನೇತ್ರ ಪವಾರ್‌ ವಿರೋಧ, ಸುಪ್ರಿಯಾ ಸುಳೆ ಪೂರ್ಣ ವಿರಾಮ

ಮಹಾರಾಷ್ಟ್ರದ ಎನ್‌ಸಿಪಿಯ ಎರಡು ಬಣಗಳ ವಿಲೀನದ ಬಗ್ಗೆ ಊಹಾಪೋಹಗಳಿಗೆ ಸುನೇತ್ರ ಪವಾರ್‌...