ಮಹಾರಾಷ್ಟ್ರದಲ್ಲಿ ‘ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್ ಯೋಜನೆ’ಯಿಂದ ಭಾರೀ ಸಂಖ್ಯೆಯ ಮಹಿಳೆಯರನ್ನು ಬಿಜೆಪಿ ನೇತೃತ್ವ ಮಹಾಯುತಿ ಸರ್ಕಾರ ಹೊರಹಾಕಿದೆ. ಪಲಾನುಭವಿಗಳ ಪೈಕಿ ಬರೋಬ್ಬರಿ 38% ಅಂದರೆ 92 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟಿದೆ. ಇದು ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕವಾಗಿ ಘೋಷಿಸಿದ್ದ 80 ಲಕ್ಷದ ಅಂದಾಜಿಗಿಂತಲೂ ಬಹಳ ದೊಡ್ಡ ಸಂಖ್ಯೆಯಾಗಿದೆ.
- Advertisement -
ಬೃಹತ್ ಸಂಖ್ಯೆಯ ಮಹಿಳೆಯರನ್ನು ಅನರ್ಹಗೊಳಿಸಿರುವ ಸರ್ಕಾರ ನೀಡಿದ ಕಾರಣಗಳು
- ಇ-ಕೆವೈಸಿ ಕೊರತೆ: ಪಟ್ಟಿಯಿಂದ ಕೈಬಿಡಲಾದವರಲ್ಲಿ ಬಹುಪಾಲು, ಅಂದರೆ ಸುಮಾರು 62 ಲಕ್ಷ ಜನರು ಕಡ್ಡಾಯವಾದ ‘ಇ-ಕೆವೈಸಿ’ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ.
- ಆದಾಯ ಮಿತಿ: ಯೋಜನೆಯಡಿ ನಿಗದಿಪಡಿಸಲಾದ ಆದಾಯದ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವವರು.
- ಸರ್ಕಾರಿ ನೌಕರರು: ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
- ಇತರ ಯೋಜನೆಗಳ ಲಾಭ: ಈಗಾಗಲೇ ಸರ್ಕಾರದ ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಿರುವವರನ್ನು ಅನರ್ಹಗೊಳಿಸಲಾಗಿದೆ.
- ವಯೋಮಿತಿ: ಯೋಜನೆಗೆ ನಿಗದಿಪಡಿಸಿದ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿದವರು.
- ಪುರುಷರ ಅರ್ಜಿಗಳು: ಮಹಿಳೆಯರಿಗಾಗಿ ಮೀಸಲಾದ ಈ ಯೋಜನೆಗೆ ಸುಮಾರು 29,000 ಪ್ರಕರಣಗಳಲ್ಲಿ ಪುರುಷರು ಅರ್ಜಿ ಸಲ್ಲಿಸಿದ್ದು, ಅಂತಹ ಎಲ್ಲ ಅರ್ಜಿಗಳನ್ನು ಸಹಜವಾಗಿಯೇ ತಿರಸ್ಕರಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.



