ಮಹಾರಾಷ್ಟ್ರ | ಬರದ ನಡುವೆ ಸಂಭ್ರಮದ ಸಡಗರ; ಸರ್ಕಾರದ ಆದ್ಯತೆಗೆ ತೀವ್ರ ಆಕ್ರೋಶ!

Date:

ಮಹಾರಾಷ್ಟ್ರದಾದ್ಯಂತ ಭೀಕರ ಬರಗಾಲದ ಕರಿನೆರಳು ಆವರಿಸಿದೆ. ಕಳೆದ ಐದು ದಶಕಗಳಲ್ಲೇ ಕಾಣದಂತಹ ಘನಘೋರ ಪರಿಸ್ಥಿತಿಯನ್ನು ರಾಜ್ಯ ಇಂದು ಎದುರಿಸುತ್ತಿದ್ದು, ಲಕ್ಷಾಂತರ ರೈತ ಕುಟುಂಬಗಳು ಬೆಳೆ ನಷ್ಟ ಮತ್ತು ಸಾಲದ ಹೊರೆಯಿಂದ ಕಂಗೆಟ್ಟು ಹೋಗಿವೆ. ಒಂದೆಡೆ ಬೆಳೆಗಳು, ಇನ್ನೊಂದೆಡೆ ಸತತ ಆತ್ಮಹತ್ಯೆಗಳಿಂದ ಗದ್ದೆಗಳು ಮಸಣವಾಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಅದ್ಧೂರಿ ಉದ್ಘಾಟನೆಗಳು ಮತ್ತು ಸಡಗರದ ವೆಚ್ಚಗಳು ಆಡಳಿತಾರೂಢರ ಆದ್ಯತೆಯನ್ನೇ ಬತ್ತಿಸಿವೆ.

- Advertisement -

ಅಕ್ಟೋಬರ್ 31ರಂದು ನಾಸಿಕ್‌ನಲ್ಲಿ ಸಿಂಹಸ್ಥ ಕುಂಭಮೇಳದ ಧ್ವಜಾರೋಹಣ ಮತ್ತು ಉದ್ಘಾಟನಾ ಸಮಾರಂಭವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಹಾರಾಷ್ಟ್ರ ಸರ್ಕಾರದ ಇಡೀ ಆಡಳಿತ ಯಂತ್ರವೇ ಈ ಸಮಾರಂಭದಲ್ಲಿ ಹಾಜರಿತ್ತು. ಈ ಏಕೈಕ ಕಾರ್ಯಕ್ರಮಕ್ಕಾಗಿ ಸರ್ಕಾರ ಬೊಕ್ಕಸದಿಂದ ಖರ್ಚು ಮಾಡಿದ ಮೊತ್ತ ಬರೋಬ್ಬರಿ 20 ಕೋಟಿ ರೂಪಾಯಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ...

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ ಘನತೆ-ಗಾಂಧೀಜಿ ಪ್ರತಿಪಾದಿಸಿದ ಈ ಮೂರು ಮೌಲ್ಯಗಳು ಇಂದಿನ ಅಸಮಾನತೆಯ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದರೆ ಅವುಗಳನ್ನು ವೈಯಕ್ತಿಕ ಬದುಕು, ಸಾಮಾಜಿಕ...

ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ...

ಜಾಗತಿಕ ಆರ್ಥಿಕತೆಯು ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಗಳ ನಡುವೆ ತೊಳಲಾಡುತ್ತಿರುವ ಹೊತ್ತಿನಲ್ಲಿ, ಭಾರತದ ಆರ್ಥಿಕತೆಯ ನಿಜವಾದ ಸ್ಥಿತಿಗತಿ ಏನು? ನಾವು ಸಾಗುತ್ತಿರುವ ಹಾದಿ ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬಲ್ಲದೇ? ಈ...

ಇಸ್ರೇಲ್ ಪ್ರಧಾನಿ ಪಟ್ಟಕ್ಕೇರಲು ಗಾಡಿ ಐಸೆನ್ಕೋಟ್ ಮಾಡಿಕೊಳ್ಳಬೇಕಾದ ಪ್ರಮುಖ...

ಇಸ್ರೇಲ್‌ನ ಚುನಾವಣೆ ಮುಗಿದ್ದು, ಅತಂತ್ರ ಪರಿಸ್ಥಿತಿ ಇದೆ. ಹೊಸ ಸರ್ಕಾರ ರಚನೆಗೆ ಮಾಜಿ ಸೇನಾ ಮುಖ್ಯಸ್ಥ, ನ್ಯಾಷನಲ್ ಯೂನಿಟಿ ಪಕ್ಷದ ನಾಯಕ ಗಾಡಿ ಐಸೆನ್ಕೋಟ್ ಅವರನ್ನು ಅಧ್ಯಕ್ಷರು ಆಹ್ವಾನಿಸಿದ್ದಾರೆ. ಆದರೆ, ಅವರ ಪಕ್ಷವು...

ಅಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಾಡಿದ 23 ಟ್ವೀಟ್‌ಗಳ ಪೈಕಿ 19 ಟ್ವೀಟ್‌ಗಳು ಈ ಸಮಾರಂಭದ ವೈಭವ ಹಾಗೂ ಸಂಭ್ರಮವನ್ನೇ ಹೊಗಳುತ್ತಿದ್ದವು. ಆದರೆ, ಇಡೀ ರಾಜ್ಯವನ್ನು ದಹಿಸುತ್ತಿರುವ ಭೀಕರ ಬರದ ಬಗ್ಗೆ ಅವರ ಖಾತೆಯಲ್ಲಿ ಒಂದೇ ಒಂದು ಸಾಲೂ ಇರಲಿಲ್ಲ. ರಾತ್ರಿ 11:08ಕ್ಕೆ ಪೋಸ್ಟ್ ಮಾಡಿದ ಕೊನೆಯ ಟ್ವೀಟ್‌ನಲ್ಲಿ, ಗೋದಾ ಆರತಿ ಬೆಳಗಿ ಗಿನ್ನಿಸ್ ದಾಖಲೆ ಬರೆದ 6,233 ಬುಡಕಟ್ಟು ಜನರಿಗೆ ಶುಭಾಶಯ ಕೋರಿ “ಹರ್ ಹರ್ ಮಹಾದೇವ್” ಎಂದಿದ್ದರು.

ಸರ್ಕಾರ ಗಿನ್ನಿಸ್ ದಾಖಲೆಯ ಸಂಭ್ರಮದಲ್ಲಿ ತೇಲುತ್ತಿದ್ದ ಅದೇ ರಾತ್ರಿ, ಯವತ್ಮಾಲ್ ಜಿಲ್ಲೆಯ ಕೃಷಿಕ, 45 ವರ್ಷದ ಟೀಕಾರಾಮ್ ಚವಾಣ್ ತಮ್ಮ ಬದುಕಿಗೆ ತಾವೇ ಅಂತ್ಯ ಹಾಡಿಕೊಂಡರು. ತಮ್ಮ 8 ಎಕರೆ ಜಮೀನಿನಲ್ಲಿ ಈ ಬಾರಿ ಬೆಳೆ ತೆಗೆಯಲು ಅವರು ಬ್ಯಾಂಕ್‌ನಿಂದ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಆದರೆ, ಒಣಹವೆ ಹಾಗೂ ಮಳೆಯ ಅಭಾವ ಅವರ ನಿರೀಕ್ಷೆಗಳನ್ನೆಲ್ಲ ಸುಟ್ಟು ಬೂದಿ ಮಾಡಿತು. ಜಮೀನಿನಲ್ಲಿ ಬೆಳೆ ಒಣಗಿ ನಿಂತಾಗ, ಸಾಲ ತೀರಿಸಲು ದಾರಿಕಾಣದೆ ಚವಾಣ್ ಆತ್ಮಹತ್ಯೆಗೆ ಶರಣಾದರು. ರೈತ ಹೋರಾಟಗಾರ ಕಿಶೋರ್ ತಿವಾರಿ ಹೇಳುವಂತೆ, ವಿದರ್ಭ ವಿಭಾಗ ಒಂದರಲ್ಲೇ ಕೇವಲ 6 ದಿನಗಳಲ್ಲಿ 10 ರೈತರು ಜೀವ ಕಳೆದುಕೊಂಡಿದ್ದಾರೆ. ಅಮರಾವತಿ ವಿಭಾಗದಲ್ಲಿ ಈ ವರ್ಷದ ಜನವರಿಯಿಂದ ಜೂನ್ ಅವಧಿಯಲ್ಲೇ 815 ರೈತರ ಆತ್ಮಹತ್ಯೆ ದಾಖಲಾಗಿದೆ. ಇತ್ತ ಮರಾಠವಾಡದ ಕಥೆಯೂ ಬೇರೆಯಾಗಿಲ್ಲ. ಜನವರಿಯಿಂದ ಸೆಪ್ಟೆಂಬರ್ ನಡುವೆ 760 ಕೃಷಿಕರು ಪ್ರಾಣ ಕಳೆದುಕೊಂಡಿದ್ದು, ಸೆಪ್ಟೆಂಬರ್ ಒಂದೇ ತಿಂಗಳಿನಲ್ಲಿ 108 ಸಾವುಗಳು ಸಂಭವಿಸಿವೆ.

ಸರ್ಕಾರದ ಈ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್, “ಕುಂಭಮೇಳದ ದೀಪಾಲಂಕಾರಕ್ಕೆ ಕೋಟಿ ಕೋಟಿ ಸುರಿಯುವ ಬದಲು, ಅನ್ನದಾತನ ಮನೆಯಲ್ಲಿ ದೀಪಾವಳಿ ಬೆಳಕಾಗುವಂತೆ ನೋಡಿ. ಪ್ರಾಣ ಬಿಡುತ್ತಿರುವ ಈ ರೈತರು ಹಿಂದೂಗಳಲ್ಲವೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಶೇಕಡಾ 67ರಷ್ಟು ಮಾತ್ರ ನೀರಿದ್ದು, ಅಮರಾವತಿ (55%) ಮತ್ತು ಮರಾಠವಾಡದಲ್ಲಿ (54%) ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಂತರ್ಜಲ ಸಮೀಕ್ಷೆ (GSDA) ವರದಿ ಪ್ರಕಾರ, ಮರಾಠವಾಡದ ಬಾವಿಗಳಲ್ಲಿ ಅಕ್ಟೋಬರ್ ಒಂದೇ ತಿಂಗಳಿನಲ್ಲಿ ಅಂತರ್ಜಲ ಮಟ್ಟ 4.39 ಮೀಟರ್‌ನಷ್ಟು ಕುಸಿದಿದೆ. ಧಾರಾಶಿವ್‌ನಲ್ಲಿ 8.86 ಮೀಟರ್‌ಗೆ ತಲುಪಿದೆ.

ಹಬ್ಬದ ದಿನಗಳಲ್ಲಿ ಕೈಯಲ್ಲಿ ಹಣವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಮಹಾರಾಷ್ಟ್ರದ ರೈತಾಪಿ ವರ್ಗ ಕತ್ತಲಲ್ಲಿ ತಳಮಳಿಸುತ್ತಿದೆ. ಆಡಳಿತ ಮಂಡಳಿಗೆ ಶೋಕದಲ್ಲಿರುವ ರೈತನ ಕಣ್ಣೀರಿಗಿಂತ ಉತ್ಸವಗಳೇ ಮುಖ್ಯವಾಯಿತೇ ಎನ್ನುವುದು ಇಡೀ ರಾಜ್ಯವನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುರುಪುರ | ನೂತನ ಕಾರ್ಮಿಕ ಸಂಹಿತೆ ರದ್ದತಿಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ...

ಕರ್ನಾಟಕ ಏಕೀಕರಣಕ್ಕೆ 70 ವರ್ಷ: ಕನ್ನಡ ಅನ್ನದ ಭಾಷೆಯಾಗುವುದೆಂದು?

ಕರ್ನಾಟಕ ಏಕೀಕರಣಗೊಂಡು ಈ ವರ್ಷಕ್ಕೆ 70 ವರ್ಷ. ಆದರೆ, ಎಪ್ಪತ್ತು ವರ್ಷಗಳ...

ಶಿವಮೊಗ್ಗ | ರಸ್ತೆ ದಾಟಲು ನಿಂತಾಗ ಬೈಕ್ ಡಿಕ್ಕಿ; ವೃದ್ಧ ಕೊನೆಯುಸಿರು

ರಸ್ತೆ ದಾಟಲು ನಿಂತಿದ್ದ ವೃದ್ಧರೊಬ್ಬರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ...