ಒಡಿಶಾ ರೈಲು ದುರಂತ | 60 ಕೋಟಿ ದಾನ ಮಾಡಿದ ಧೋನಿ! ವಾಸ್ತವವೇನು?

Date:

ಒಡಿಶಾದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಂತ್ರಸ್ತರಾದವರಿಗೆ ಹಲವರು ನೆರವಿನ ಹಸ್ತ ಚಾಚಿದ್ದಾರೆ.

ರೈಲು ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಉದ್ಯಮಿ ಗೌತಮ್ ಅದಾನಿ ಈಗಾಗಲೇ ಘೋಷಿಸಿದ್ದಾರೆ. ರಾಜಕಾರಣಿಗಳು, ಸಿನಿಮಾ ತಾರೆಯರು ಕೂಡ ನಗದು ನೆರವು ನೀಡಲು ಮುಂದೆ ಬಂದಿದ್ದಾರೆ.

ಈ ನಡುವೆ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ, ಒಡಿಶಾ ರೈಲು ದುರಂತದಲ್ಲಿ ಸಂತ್ರಸ್ತರಾದವರಿಗೆ ಬರೋಬ್ಬರಿ 60 ಕೋಟಿ ರೂಪಾಯಿ ನೆರವು ನೀಡಿದ್ದಾರೆ ಎಂಬ ಪೋಸ್ಟರ್‌ ಒಂದು ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಧೋನಿ ದಾನ ನೀಡಿದ್ದಾರೆ ಎನ್ನುವ ಸುದ್ದಿಯ ಕುರಿತು ಹಲವು ಸುದ್ದಿ ಸಂಸ್ಥೆಗಳು ʻಫ್ಯಾಕ್ಟ್‌ ಚೆಕ್‌ʼ ನಡೆಸಿದ್ದು ಈ ವೇಳೆ ಇದು ಸುಳ್ಳು ಸುದ್ದಿ ಎಂಬುದು ದೃಢಪಟ್ಟಿದೆ. 60 ಕೋಟಿ ದಾನ ನೀಡುತ್ತಿರುವ ಬಗ್ಗೆ ಸ್ವತಃ ಎಂಎಸ್‌ ಧೋನಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹೀಗಾಗಿ ಇದು ವಾಟ್ಸಾಪ್‌ ಯುನಿವರ್ಸಿಟಿಯಲ್ಲಿ ಸೃಷ್ಟಿಯಾದ ಪೋಸ್ಟರ್‌ ಎಂಬುದು ಖಚಿತವಾಗಿದೆ.

ಧೋನಿ ಪೋಸ್ಟರ್‌ಗೂ ಮುನ್ನ ವಿರಾಟ್‌ ಕೊಹ್ಲಿಯ ಕುರಿತಾಗಿಯೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿತ್ತು. ʻಒಡಿಶಾ ಅವಘಡದಲ್ಲಿ ಸಂತ್ರಸ್ತರಾದವರಿಗೆ ಕೊಹ್ಲಿ 35 ಲಕ್ಷ ರೂಪಾಯಿ ದಾನ ಮಾಡಿದ್ದಾರೆ ಎಂಬ ಪೋಸ್ಟ್‌ ಹರಿದಾಡಿತ್ತು.

ನೆರವಿಗೆ ನಿಂತ ಸೆಹ್ವಾಗ್‌

ಒಡಿಶಾ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದಾರೆ.

ʻಒಡಿಶಾ ರೈಲು ದುರಂತದ ಫೋಟೋ ಹಾಗೂ ಘಟನಾ ಸ್ಥಳದ ದೃಶ್ಯಗಳು ತೀವ್ರ ನೋವು ತರುತ್ತಿದೆ. ಅಪಘಾತವಾದ ದಿನದಿಂದ ಈ ಚಿತ್ರಗಳು ಕಾಡುತ್ತಿದೆ. ಈ ನೋವಿನ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡಲು ಬಯಸುತ್ತೇನೆ. ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವ್ಯವಸ್ಥೆ ಕಲ್ಪಿಸುತ್ತೇನೆ. ಈ ಮಕ್ಕಳಿಗೆ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುವುದುʼ ಎಂದು ಸೆಹ್ವಾಗ್ ಟ್ವೀಟ್‌ ಮಾಡಿದ್ದಾರೆ.

ʻದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ, ಸಿಬ್ಬಂದಿ ವರ್ಗದವರಿಗೆ ನನ್ನ ಸಲ್ಯೂಟ್. ವೈದ್ಯಕೀಯ ತಂಡ, ಸ್ವಯಂ ಸೇವಕರ ಗುಂಪು, ರಕ್ತ ದಾನ ಮಾಡಿದ ಮಹನಿಯರಿಗೆ ನನ್ನ ನಮಗಳು ಎಂದುʼ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣದಲ್ಲಿ ಬಿಜೆಪಿ ವಿರೋಧಿ ಅಲೆ | ಬಿಜೆಪಿಗೆಷ್ಟು ನಷ್ಟ – ಕಾಂಗ್ರೆಸ್‌ಗೆ ಎಷ್ಟು ಲಾಭ?

ಹರಿಯಾಣದ ಎಲ್ಲ 10 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಮತದಾನ ಮುಗಿದಿದೆ....

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ಅವಘಡ: ಇಬ್ಬರು ಪೊಲೀಸರು ಸೇರಿ ಐವರು ಅಧಿಕಾರಿಗಳ ಅಮಾನತು

ಸುಮಾರು 25ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ರಾಜ್‌ಕೋಟ್ ಗೇಮ್‌ ಝೋನ್‌...

ರೆಮಲ್ ಚಂಡಮಾರುತಕ್ಕೆ ಕೋಲ್ಕತ್ತಾದಲ್ಲಿ ಓರ್ವ ಬಲಿ, ಬಂಗಾಳದಲ್ಲಿ ಭಾರೀ ಹಾನಿ

ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಭಾರೀ ಹಾನಿ ಉಂಟು ಮಾಡಿದ್ದು, ಚಂಡಮಾರುತದಿಂದ...

ತೆಲಂಗಾಣ | ಮಳೆ ಅನಾಹುತಕ್ಕೆ ಭಾನುವಾರ 12 ಮಂದಿ ಬಲಿ

ದಕ್ಷಿಣ ಭಾರತದ ನಾನಾ ಭಾಗಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಹೆಚ್ಚಾಗಿದೆ. ಭಾನುವಾರವೂ...