ತಮಿಳುನಾಡು | ಪೆರಿಯಾರ್ ಗ್ರಂಥಾಲಯ ಹಗರಣ; ಎಐ ಬರೆದ ಕಳಪೆ ಪುಸ್ತಕಗಳ ಖರೀದಿ ಆರೋಪ!

Date:

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಿರ್ಮಿಸಲಾಗಿರುವ ಭವ್ಯವಾದ ‘ಪೆರಿಯಾರ್ ಅರಿವುಳಗಂ’ ಗ್ರಂಥಾಲಯಕ್ಕೆ ಸುಮಾರು 1,800 ನಕಲಿ ಪುಸ್ತಕಗಳನ್ನು ಖರೀದಿಸಿರುವ ಹಗರಣ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

- Advertisement -

ಡಿಎಂಕೆ‌ ಸರ್ಕಾರದ ಅವಧಿಯಲ್ಲಿ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ನಡೆದಿತ್ತು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಅಕ್ಟೋಬರ್ 16ರಂದು ಉದ್ಘಾಟಿಸಿದ್ದರು. ಈ ಗ್ರಂಥಾಲಯಕ್ಕಾಗಿ ಡಿಜಿಟಲ್ ಮತ್ತು ಮುದ್ರಿತ ರೂಪದ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸುವ ಪ್ರಕ್ರಿಯೆ ನಡೆದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

ಆದರೆ, ಇದೀಗ (ನ.6) ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರು ‘ಸಿಂದೈ’ ಎಂಬ ಡಿಜಿಟಲ್ ನಿಯತಕಾಲಿಕೆಯಲ್ಲಿ ಬರೆದ ಲೇಖನವೊಂದು ಗ್ರಂಥಾಲಯದಲ್ಲಿ ನಡೆದಿರುವ ಅಕ್ರಮಗಳನ್ನು ಬಯಲಿಗೆಳೆದಿದೆ. ಸಾಹಿತ್ಯ ವಲಯದಲ್ಲಿ ಯಾರಿಗೂ ಪರಿಚಯವಿಲ್ಲದ ‘ಅಕಲ್ ವಿಳಕ್ಕು’ ಎಂಬ ಒಂದೇ ಪ್ರಕಾಶನ ಸಂಸ್ಥೆಯಿಂದ ಸುಮಾರು 1,800 ಪುಸ್ತಕಗಳನ್ನು ಖರೀದಿಸಿರುವುದನ್ನು ಅವರು ಪತ್ತೆಹಚ್ಚಿದ್ದಾರೆ. ಗಟ್ಟಿ ರಟ್ಟಿನ ಈ ಪುಸ್ತಕಗಳಿಗೆ ಅತ್ಯಂತ ದುಬಾರಿ ಬೆಲೆ ನಿಗದಿಪಡಿಸಲಾಗಿದ್ದು, ಕೇವಲ 300 ಪುಟಗಳ ಪುಸ್ತಕವೊಂದಕ್ಕೆ ಸುಮಾರು 1,445 ರೂಪಾಯಿ ದರ ವಿಧಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಆಘಾತಕಾರಿ ವಿಷಯವೆಂದರೆ, ಈ ಪುಸ್ತಕಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ಬರೆಯಲಾದ ತಲೆಬುಡವಿಲ್ಲದ ಅಸಂಬದ್ಧ ಮಾಹಿತಿಗಳಿವೆ. ಉದಾಹರಣೆಗೆ, 1947ರಲ್ಲಿ ‘ಮುತ್ತುವೇಲು ಸುಬ್ಬಯ್ಯ ಅಯ್ಯರ್’ ಎಂಬುವವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು ಎಂಬ ಕಾಲ್ಪನಿಕ ಮತ್ತು ಹಾಸ್ಯಾಸ್ಪದ ಮಾಹಿತಿಯನ್ನು ಒಂದು ಪುಸ್ತಕದಲ್ಲಿ ಮುದ್ರಿಸಲಾಗಿದೆ. ಅಷ್ಟೇ ಅಲ್ಲದೆ, ಮತ್ತೊಂದು ಪುಸ್ತಕದ ಲೇಖಕರ ಹೆಸರನ್ನು ‘ತ್ರಿಷಾ ವಿಜಯ್’ ಎಂದು ನಮೂದಿಸಲಾಗಿದೆ. ಇಂತಹ ವಿಚಿತ್ರ ಶೀರ್ಷಿಕೆಗಳು, ಕಾಲ್ಪನಿಕ ಲೇಖಕರು ಹಾಗೂ ಅಸಂಬದ್ಧ ವಿಷಯಗಳನ್ನು ಉಲ್ಲೇಖಿಸಿರುವ ಪೆರುಮಾಳ್ ಮುರುಗನ್, ಪುಸ್ತಕ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಜಯ್ ಅವರ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಾಗಿರುವುದರಿಂದ ಇಂತಹ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಅವರು ನಡೆಸಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಆದರೆ, ಡಿಎಂಕೆ ಪಕ್ಷದ ಬೆಂಬಲಿಗರು ಮತ್ತು ಕೆಲವು ಬರಹಗಾರರು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಪುಸ್ತಕಗಳ ಮೇಲೆ ಜೂನ್ 22 ರ ಮುದ್ರೆ ಇರುವುದರಿಂದ ಮತ್ತು ಅದು ವಿಜಯ್ ಅಧಿಕಾರ ವಹಿಸಿಕೊಂಡ ನಂತರದ ದಿನಾಂಕವಾಗಿರುವುದರಿಂದ ಇದಕ್ಕೆ ಡಿಎಂಕೆ ಹೊಣೆಯಲ್ಲ ಎಂದು ಕೆಲವರು ವಾದಿಸಿದ್ದಾರೆ. ಜೊತೆಗೆ, ಗ್ರಂಥಾಲಯದ ಕೆಲವೇ ಕಪಾಟುಗಳಲ್ಲಿ ಮಾತ್ರ ಇಂತಹ ಪುಸ್ತಕಗಳಿವೆ ಎಂದು ಮತ್ತೆ ಕೆಲವರು ಸಮಜಾಯಿಷಿ ನೀಡಿದ್ದಾರೆ.

ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಗ್ರಂಥಾಲಯ ಖಾತೆ ಸಚಿವ ಎ. ರಾಜಮೋಹನ್, ಅಕಲ್ ವಿಳಕ್ಕು ಪ್ರಕಾಶನಕ್ಕೆ ಫೆಬ್ರವರಿ 14 ರಂದೇ ಖರೀದಿ ಆದೇಶ (Purchase Order) ನೀಡಲಾಗಿತ್ತು ಮತ್ತು ಮಾರ್ಚ್ ತಿಂಗಳಲ್ಲೇ ಹಣವನ್ನು ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಜೂನ್ ತಿಂಗಳ ಮುದ್ರೆಯು ಕೇವಲ ಪುಸ್ತಕಗಳು ಗ್ರಂಥಾಲಯಕ್ಕೆ ಅಧಿಕೃತವಾಗಿ ತಲುಪಿದ ದಿನಾಂಕವನ್ನು ಮಾತ್ರ ಸೂಚಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ ನಕಲಿ ಪ್ರಕಾಶಕರಿಂದ ಇನ್ನೂ ಹಲವು ಬೋಗಸ್ ಖರೀದಿಗಳು ನಡೆದಿದ್ದು, ತಮಿಳುನಾಡು ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (DVAC) ಈ ಕುರಿತು ತನಿಖೆ ಆರಂಭಿಸಿದೆ ಎಂದು ಅವರು ಹೇಳಿದ್ದಾರೆ. ಡಿಎಂಕೆ ಕೂಡ ಸಮಗ್ರ ತನಿಖೆಗೆ ಒತ್ತಾಯಿಸಿದೆ.

ತಮಿಳುನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸುವ ಪ್ರಕ್ರಿಯೆ ಮೊದಲಿನಿಂದಲೂ ರಾಜಕೀಯ ಪಕ್ಷಗಳಿಗೆ ಭ್ರಷ್ಟಾಚಾರದ ಮೂಲವಾಗಿದೆ ಎಂಬ ಆಪಾದನೆ ಇದೆ. 2024ರ ಜೂನ್‌ನಲ್ಲಿ ಮದ್ರಾಸ್ ಹೈಕೋರ್ಟ್ ಕೂಡ ಪುಸ್ತಕ ಖರೀದಿಯಲ್ಲಾಗುತ್ತಿರುವ ಅಕ್ರಮಗಳನ್ನು ಕಂಡು ಇದೊಂದು ದೊಡ್ಡ ಹಗರಣ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಪಾರದರ್ಶಕ ನೀತಿಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ ಸರ್ಕಾರ ಪಾರದರ್ಶಕ ಪುಸ್ತಕ ಖರೀದಿ ನೀತಿಯನ್ನು ಜಾರಿಗೆ ತಂದಿತ್ತಾದರೂ, ನಿಯಮಗಳನ್ನು ಗಾಳಿಗೆ ತೂರಿ ನಕಲಿ ಪ್ರಕಾಶಕರಿಗೆ ಪುಸ್ತಕ‌ ಪೂರೈಕೆ‌ ಆದೇಶ ನೀಡಲಾಗಿದೆ ಎಂಬ ಆರೋಪ‌ ಮತ್ತೆ ಮುನ್ನೆಲೆಗೆ ಬಂದಿದೆ. ಪುಸ್ತಕ ಆಯ್ಕೆ ಸಮಿತಿಯಲ್ಲಿದ್ದ ಅನೇಕ ಸದಸ್ಯರು ತಾವು ಈ ಪುಸ್ತಕಗಳನ್ನು ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜ್ಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಜೆ. ಜಯರಂಜನ್ ಅವರು ಈ ಖರೀದಿಗೆ ಅನುಮೋದನೆ ನೀಡಿದ್ದರು ಎಂಬ ದಾಖಲೆಯನ್ನು ಸಚಿವ ರಾಜಮೋಹನ್ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | 25 ವರ್ಷಗಳಿಂದ ಭಕ್ತರ ಪ್ರೀತಿ ಗಳಿಸಿದ್ದ ಧ್ರುವರಾಜ ಆನೆ ಇನ್ನಿಲ್ಲ; ಮಾವುತ ಕಣ್ಣೀರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವಾಲಯದ...

ಹವಾಮಾನ ವರದಿ: ಮುಂದಿನ 7 ದಿನ ರಾಜ್ಯಕ್ಕಿಲ್ಲ ಮಳೆ; ಚಳಿ-ಬಿಸಿಲಿನದ್ದೇ ಅಬ್ಬರ!

ಕಳೆದ ತಿಂಗಳು ಮಳೆ ಅಬ್ಬರ ಕಂಡಿದ್ದ ಕರ್ನಾಟಕದ ವಾತಾವರಣದಲ್ಲಿ ಈಗ ಭಾರೀ...

ವಿವಾದಕ್ಕೀಡಾಗಿ ಜೈಲು ಸೇರಿದ್ದ ನಿವೃತ್ತ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ನಿಧನ

ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದ...

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ: ಸುಂಕದಲ್ಲಿ ಭಾರತಕ್ಕೆ ವಿಶೇಷ ರಿಯಾಯಿತಿ ನೀಡಲಿದೆ ಅಮೆರಿಕ; ಕೇಂದ್ರ ಸರ್ಕಾರ ಹೇಳಿಕೆ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ...