ಅಮೆರಿಕದ ವಿಮಾನಯಾನದಲ್ಲಿ ಕಂಡರಿಯದ ಅಲ್ಲೋಲ-ಕಲ್ಲೋಲ: 11,000 ವಿಮಾನಗಳು ದಿಢೀರ್ ಸ್ಥಗಿತ

Date:

ಅಮೆರಿಕದ ವಾಯು ಸಂಚಾರ ನಿಯಂತ್ರಣ (ATC) ಸಂಪರ್ಕ ವ್ಯವಸ್ಥೆಯಲ್ಲಿ ಉಂಟಾದ ಭಾರಿ ವೈಫಲ್ಯದಿಂದಾಗಿ ದೇಶದಾದ್ಯಂತ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಎಲ್ಲಾ ವಿಮಾನಗಳ ಹಾರಾಟವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. 2001ರ ಸೆಪ್ಟೆಂಬರ್ 11ರ (9/11) ಭಯೋತ್ಪಾದಕ ದಾಳಿಯ ನಂತರ ಅಮೆರಿಕದಲ್ಲಿ ನಡೆದ ಅತಿದೊಡ್ಡ ವಿಮಾನಯಾನ ಸ್ಥಗಿತ ಇದಾಗಿದ್ದು, ಬರೋಬ್ಬರಿ 11,000ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಪರದಾಡುವಂತಾಯಿತು.

- Advertisement -

​ಈ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಅಮೆರಿಕದ ಗೃಹ ಭದ್ರತಾ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್, “ಇದು ಮತ್ತೊಂದು 9/11 ದಾಳಿಯಲ್ಲ” ಎಂದು ಜನರಿಗೆ ಅಭಯ ನೀಡಿದ್ದಾರೆ. ಹಳೆಯ ವಾಯು ನಿಯಂತ್ರಣ ವ್ಯವಸ್ಥೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಹೋದಾಗ ಉಂಟಾದ ತಾಂತ್ರಿಕ ಒತ್ತಡವೇ (ಡೇಟಾ ಓವರ್‌ಲೋಡ್) ಈ ದಿಢೀರ್ ವೈಫಲ್ಯಕ್ಕೆ ಕಾರಣ. ಇದರಲ್ಲಿ ಯಾವುದೇ ದುರುದ್ದೇಶಪೂರಿತ ಸೈಬರ್ ದಾಳಿಯ ಸುಳಿವು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಆಗಸದಲ್ಲಿದ್ದ ಎಲ್ಲಾ ವಿಮಾನಗಳು ಸುರಕ್ಷಿತವಾಗಿವೆ ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

​ಅಸಾಧಾರಣ ಸನ್ನಿವೇಶಗಳು ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ವಿಮಾನಗಳ ಹಾರಾಟ ಸ್ಥಗಿತಕ್ಕೆ (ಗ್ರೌಂಡ್ ಸ್ಟಾಪ್) ಆದೇಶಿಸಿತ್ತು. ನಾಲ್ಕು ಗಂಟೆಗಳ ಬಳಿಕ ಈ ಆದೇಶವನ್ನು ಹಿಂಪಡೆಯಲಾಗಿದ್ದರೂ, ಹಾರಾಟ ವ್ಯವಸ್ಥೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ವಿಮಾನಯಾನ ಪ್ರಾಧಿಕಾರ ಎಚ್ಚರಿಸಿದೆ. ಆಗಸದಲ್ಲಿದ್ದ ವಿಮಾನಗಳನ್ನು ತಮ್ಮ ಗಮ್ಯಸ್ಥಾನಗಳಿಗೆ ತೆರಳಲು ಅವಕಾಶ ನೀಡಲಾಗಿತ್ತು, ಆದರೆ ನೆಲದಲ್ಲಿದ್ದ ವಿಮಾನಗಳ ಟೇಕಾಫ್‌ಗೆ ಬ್ರೇಕ್ ಹಾಕಲಾಗಿತ್ತು.

​ಫ್ಲೈಟ್‌ಅವೇರ್ (FlightAware) ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಅಮೆರಿಕದಾದ್ಯಂತ ಸುಮಾರು 10,000 ವಿಮಾನಗಳು ವಿಳಂಬವಾಗಿವೆ ಮತ್ತು 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಒಟ್ಟು 827 ವಿಮಾನಗಳನ್ನು ವಾಷಿಂಗ್ಟನ್ ಡಲ್ಲೆಸ್, ಲಾಸ್ ಏಂಜಲೀಸ್ ಸೇರಿದಂತೆ ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಇದರಿಂದಾಗಿ ಪ್ರಮುಖ ವಿಮಾನ ನಿಲ್ದಾಣಗಳು ಅಕ್ಷರಶಃ ತುಂಬಿ ತುಳುಕುತ್ತಿದ್ದು, ಕೆನಡಾ ಮತ್ತು ಯುರೋಪ್‌ನಿಂದ ಬರಬೇಕಿದ್ದ ಅಂತರರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೂ ಗಂಭೀರ ಪರಿಣಾಮ ಬೀರಿದೆ.

​ಸಾರಿಗೆ ಕಾರ್ಯದರ್ಶಿ ಸೀನ್ ಡಫ್ಫಿ ಈ ಕುರಿತು ಮಾಹಿತಿ ನೀಡಿ, ಅಮೆರಿಕದ ವಿಮಾನಯಾನ ಮೂಲಸೌಕರ್ಯವು ತುಂಬಾ ಹಳೆಯದಾಗಿದೆ ಎಂದಿದ್ದಾರೆ. ವಿಪರೀತ ಡೇಟಾ ಪ್ರಮಾಣವನ್ನು ನಿಭಾಯಿಸಲು ಹಳೆಯ ಅನಲಾಗ್ ವ್ಯವಸ್ಥೆ ಮತ್ತು ಟೆಲಿಕಾಂ ಉಪಕರಣಗಳು ವಿಫಲವಾಗಿವೆ. ಡೇಟಾ ಓವರ್‌ಲೋಡ್‌ನಿಂದಾಗಿ ಸ್ವಿಚ್‌ಗಳು ಮತ್ತು ರೌಟರ್‌ಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ರೇಡಾರ್ ವ್ಯವಸ್ಥೆ ಸಂಪೂರ್ಣವಾಗಿ ಕೈಕೊಟ್ಟಿರಲಿಲ್ಲವಾದರೂ, ಪ್ರಯಾಣಿಕರ ಸುರಕ್ಷತೆಗಾಗಿ ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

​ಅಮೆರಿಕದ ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ವ್ಯವಸ್ಥೆ ನಿರ್ಮಿಸಲು 50 ಬಿಲಿಯನ್ ಡಾಲರ್( ಸುಮಾರು 5 ಸಾವಿರ ಕೋಟಿ ರೂಪಾಯಿ) ಅನುದಾನ ಒದಗಿಸುವಂತೆ ಸೀನ್ ಡಫ್ಫಿ ಅಮೆರಿಕನ್ ಕಾಂಗ್ರೆಸ್ ಅನ್ನು ಒತ್ತಾಯಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಳೆದ ಒಂದು ವರ್ಷದಿಂದ ಈ ಮೂಲಸೌಕರ್ಯ ಅಭಿವೃದ್ಧಿಗೆ ಸಂಪೂರ್ಣ ಅನುದಾನ ನೀಡುವಂತೆ ಶಾಸಕರನ್ನು ಕೋರುತ್ತಲೇ ಬಂದಿದ್ದಾರೆ. ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಈ ತಾಂತ್ರಿಕ ಮೇಲ್ದರ್ಜೆಗೇರಿಸುವಿಕೆ ಅತ್ಯಗತ್ಯ ಎಂದು ಸರ್ಕಾರ ಪ್ರತಿಪಾದಿಸಿದೆ.

​ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಅಡಚಣೆಗೆ ಯಾವುದೇ ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆ (AI) ಕಾರಣವಾಗಿರುವ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ಕೂಡ ತನ್ನ ಸೇವೆಗಳಿಗೂ ಈ ಸ್ಥಗಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಪರ್ಯಾಯ ಮಾರ್ಗಗಳನ್ನು ಸೂಚಿಸಲು ಎಫ್‌ಎಎ (FAA) ಇತ್ತೀಚೆಗೆ ಅಳವಡಿಸಿಕೊಂಡಿದ್ದ ಹೊಸ ಎಐ ಆಧಾರಿತ ವ್ಯವಸ್ಥೆಯು ಈ ವೈಫಲ್ಯಕ್ಕೆ ಪರೋಕ್ಷವಾಗಿ ಕಾರಣವಾಗಿರಬಹುದೇ ಎಂಬ ಕೋನದಲ್ಲೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

​ಅಮೆರಿಕದ ಎಫ್‌ಎಎ (FAA) ತಂತ್ರಜ್ಞಾನವು ದಶಕಗಳಷ್ಟು ಹಳೆಯದಾಗಿದ್ದು, 2028ರ ವೇಳೆಗೆ ಹವಾಮಾನ ಮಾಹಿತಿ ನೀಡಲು ಬಳಸುವ ಹಳೆಯ ‘ಫ್ಲಾಪಿ ಡಿಸ್ಕ್’ಗಳ ಬಳಕೆಯನ್ನು ನಿಲ್ಲಿಸುವ ಬಗ್ಗೆ ಏಜೆನ್ಸಿ ಕಳೆದ ವಾರವಷ್ಟೇ ಪ್ರಕಟಿಸಿತ್ತು. ತಾಮ್ರದ ತಂತಿಗಳ ಬದಲು ಫೈಬರ್-ಆಪ್ಟಿಕ್ ಅಳವಡಿಸಲು ಕಾಂಗ್ರೆಸ್ ಈಗಾಗಲೇ 12.5(1200 ಕೋಟಿ) ಬಿಲಿಯನ್ ಡಾಲರ್ ಅನುಮೋದಿಸಿದ್ದು, ಹೆಚ್ಚುವರಿ 30.1(3000 ಕೋಟಿ ರೂಪಾಯಿ) ಬಿಲಿಯನ್ ಡಾಲರ್ ಬೇಡಿಕೆ ಇಟ್ಟಿದೆ. 2025ರ ಜನವರಿಯಲ್ಲಿ 67 ಜನರನ್ನು ಬಲಿಪಡೆದಿದ್ದ ವಿಮಾನ ದುರಂತದ ಬಳಿಕ, ವಾಯುಯಾನ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿರುವ ಬೆನ್ನಲ್ಲೇ ಈ ಬೃಹತ್ ತಾಂತ್ರಿಕ ವೈಫಲ್ಯ ನಡೆದಿರುವುದು ಹಳೆಯ ಮೂಲಸೌಕರ್ಯದ ಮೇಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಕ್ಕೀಡಾಗಿ ಜೈಲು ಸೇರಿದ್ದ ನಿವೃತ್ತ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ನಿಧನ

ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದ...

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ: ಸುಂಕದಲ್ಲಿ ಭಾರತಕ್ಕೆ ವಿಶೇಷ ರಿಯಾಯಿತಿ ನೀಡಲಿದೆ ಅಮೆರಿಕ; ಕೇಂದ್ರ ಸರ್ಕಾರ ಹೇಳಿಕೆ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ ಬೆಲೆ 20,000 ಗಡಿ ದಾಟುವ ಆತಂಕ

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ ಕೇಂದ್ರ!

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ...