ಯುಕೊ ಬ್ಯಾಂಕ್‌ನಲ್ಲಿ 820 ಕೋಟಿ ಹಗರಣ: 7 ನಗರಗಳಲ್ಲಿ ಸಿಬಿಐ ದಾಳಿ

Date:

ಯುಕೊ ಬ್ಯಾಂಕ್‌ ನಲ್ಲಿ ಐಎಂಪಿಎಸ್ ವಹಿವಾಟುಗಳಲ್ಲಿ 820 ಕೋಟಿ ರೂ. ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಏಳು ನಗರಗಳ 67 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ ದಾಳಿ ನಡೆಸಿದೆ.

ಯುಕೊ ಬ್ಯಾಂಕ್ ಕಳೆದ ವರ್ಷದ ನವೆಂಬರ್‌ 10-13ರ ಅವಧಿಯಲ್ಲಿ ನಡೆಸಲಾದ 8,53,049 ಐಎಂಪಿಎಸ್ ವಹಿವಾಟುಗಳಲ್ಲಿ 41 ಸಾವಿರ ಯುಕೊ ಖಾತೆದಾರರಿಗೆ 820 ಕೋಟಿ ರೂ. ಹಣವನ್ನು ತಪ್ಪಾಗಿ ವರ್ಗಾವಣೆ ಮಾಡಲಾಗಿದೆ.

“ಏಳು ಖಾಸಗಿ ಬ್ಯಾಂಕುಗಳ 14,600 ಖಾತೆದಾರರಿಂದ 41 ಸಾವಿರ ಯುಕೊ ಬ್ಯಾಂಕ್‌ ಖಾತೆದಾರರಿಗೆ ಐಎಂಪಿಎಸ್ ವಹಿವಾಟುಗಳ ಮೂಲಕ ತಪ್ಪಾಗಿ ಹಣ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಯುಕೊ ಬ್ಯಾಂಕ್ ಖಾತೆದಾರರು ತಮ್ಮ ಮೂಲ ಬ್ಯಾಂಕ್‌ನಿಂದ ಯಾವುದೇ ಡೆಬಿಟಿಂಗ್‌ ಇಲ್ಲದೆ 820 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ” ಎಂದು ದಾಳಿಗೆ ಸಂಬಂಧಿಸಿದಂತೆ ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!

ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಹಣ ಸ್ವೀಕರಿಸಿದ ಹಾಗೂ ವಿತ್‌ಡ್ರಾ ಮಾಡಿಕೊಂಡ ಖಾತೆದಾರರು ಪುನಃ ಬ್ಯಾಂಕಿಗೆ ಮರಳಿಸಿಲ್ಲ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ಎರಡನೇ ಬಾರಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.

ಈ ಮೊದಲು ಡಿಸೆಬಂರ್ 2023ರಲ್ಲಿ ಕೊಲ್ಕತ್ತಾ ಮತ್ತು ಮಂಗಳೂರಿನ 13 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.

“ಕಾರ್ಯಾಚರಣೆ ಸಮಯದಲ್ಲಿ ಯುಕೊ ಬ್ಯಾಂಕ್ ಮತ್ತು ಐಡಿಎಫ್‌ಸಿ ಬ್ಯಾಂಕುಗಳಿಗೆ ಸಂಬಂಧಿಸಿದ ಅಂದಾಜು 130 ದೋಷಾರೋಪಣೆ ದಾಖಲೆಗಳು, 43 ಡಿಜಿಟಲ್ ಡಿವೈಸ್‌ಗಳನ್ನು ವಳಪಡಿಸಿಕೊಂಡು ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ. ಇದಲ್ಲದೆ 30 ಶಂಕಿತರು ಪತ್ತೆಯಾಗಿದ್ದು, ಅವರನ್ನು ಸ್ಥಳದಲ್ಲೆ ವಿಚಾರಣೆಗೊಳಪಡಿಸಲಾಗಿದೆ” ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಯುಕೊ ಬ್ಯಾಂಕ್‌ನಲ್ಲಿ ಅಕ್ರಮ ನಡೆಯುತ್ತಿರುವುದಾಗಿ ನವೆಂಬರ್ 2023ರಲ್ಲಿದೂರು ದಾಖಲಾಗಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...

ಅರವಿಂದ್ ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಆದರೆ ದಿನಕ್ಕೆ ಎರಡು ಡೋಸ್ ಇನ್ಸುಲಿನ್ ನೀಡಲಾಗುತ್ತಿದೆ: ವೈದ್ಯರು

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

Fact Check | ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಬಂಗಲೆ ಖರೀದಿಸಿಲ್ಲ!

ಲೋಕಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ...