ಅಂತಿಮ ಟೆಸ್ಟ್ | ಮೊದಲ ದಿನವೇ ಟೀಮ್ ಇಂಡಿಯಾ ಸಂಪೂರ್ಣ ಮೇಲುಗೈ: ಮಿಂಚಿದ ಕುಲ್‌ದೀಪ್‌, ಜೈಸ್ವಾಲ್

Date:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಹಾಗೂ ಐದನೇ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದ್ದು, ಮೊದಲ ದಿನವೇ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬೆನ್ ಸ್ಟೋಕ್ಸ್ ಪಡೆ, ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಅಶ್ವಿನ್ ದಾಳಿಗೆ ತತ್ತರಿಸಿ ಕೇವಲ 218 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಗಿತ್ತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ, ದಿನದಾಟದ ಮುಕ್ತಾಯದ ವೇಳೆ ಕೇವಲ 1 ವಿಕೆಟ್ ಕಳೆದುಕೊಂಡು 135 ರನ್‌ಗಳನ್ನು ಪೇರಿಸಿದೆ.

ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿ, ಮಿಂಚಿದರು. ಶೋಯೆಬ್ ಬಶೀರ್ ಎಸೆತದಲ್ಲಿ ಸ್ಟಂಪ್ ಔಟಾಗುವುದಕ್ಕೂ ಮುನ್ನ ಮೂರು ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿ ಮಿಂಚಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಿನದಾಟದ ಅಂತ್ಯದ ವೇಳೆ ಸದ್ಯ ಕ್ರೀಸ್‌ನಲ್ಲಿ ಅರ್ಧಶತಕ ಗಳಿಸಿರುವ ನಾಯಕ ರೋಹಿತ್ ಶರ್ಮಾ(52 ರನ್) ಹಾಗೂ ಯುವ ಬ್ಯಾಟರ್ ಶುಭ್‌ಮನ್ ಗಿಲ್ 26 ರನ್ ಗಳಿಸುವ ಮೂಲಕ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನ ರನ್‌ಗಿಂತ ಕೇವಲ 83 ರನ್‌ಗಳ ಹಿನ್ನಡೆಯಲ್ಲಿದ್ದು, 2ನೇ ದಿನ ಬೃಹತ್ ರನ್ ಪೇರಿಸಿ, ಮುನ್ನಡೆ ಕಾಯ್ದುಕೊಳ್ಳುವ ತವಕದಲ್ಲಿದೆ.

ಸ್ಪಿನ್ ದಾಳಿಗೆ ತತ್ತರಿಸಿದ ಆಂಗ್ಲನ್ನರು: ಕುಲ್‌ದೀಪ್‌ಗೆ 5, ಅಶ್ವಿನ್‌ಗೆ 4 ವಿಕೆಟ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಉತ್ತಮ ಆರಂಭ ಕಾಯ್ದುಕೊಂಡಿದ್ದರು. ಆದರೆ ಸ್ಪಿನ್ನರ್‍‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಅಶ್ವಿನ್ ದಾಳಿಗೆ ತತ್ತರಿಸಿ 57.4 ಓವರ್‌ಗಳಲ್ಲಿ ಕೇವಲ 218 ರನ್‌ಗಳಿಗೆ ಸರ್ವಪತನ ಕಂಡಿತು. ಅರ್ಧಶತಕ ಬಾರಿಸಿದ ಆರಂಭಿಕ ಝಾಕ್ ಕ್ರಾಲಿ ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲಿಲ್ಲ.

ಇಂಗ್ಲೆಂಡ್ ಪರ ಆರಂಭಿಕ ಝಾಕ್ ಕ್ರೌಲಿ ಬಾರಿಸಿದ 79 ರನ್​ಗಳ ತಂಡದ ಪರ ದಾಖಲಾದ ಅತ್ಯಧಿಕ ಮೊತ್ತವಾಯಿತು. ಕುಲ್‌ದೀಪ್ ಯಾದವ್ 5 ವಿಕೆಟ್ ಗಳಿಸಿದರೆ, 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆರ್ ಅಶ್ವಿನ್ 4 ವಿಕೆಟ್ ಗಳಿಸಿ ಮಿಂಚಿದರು. ರವೀಂದ್ರ ಜಡೇಜಾ ಒಂದು ವಿಕೆಟ್ ತನ್ನದಾಗಿಸಿಕೊಂಡರು. ಆ ಮೂಲಕ ಇಂಗ್ಲೆಂಡ್‌ನ ಎಲ್ಲ ವಿಕೆಟ್‌ ಅನ್ನು ಸ್ಪಿನ್ನರ್‍‌ಗಳೇ ಕಬಳಿಸಿದರು.

100ನೇ ಟೆಸ್ಟ್‌ನಲ್ಲಿ 6000 ರನ್ ಪೂರೈಸಿದ ಜಾನಿ ಬೈರ್‌ಸ್ಟೋವ್

ಇದೇ ವೇಳೆ ಧರ್ಮಶಾಲಾ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ 6000 ಟೆಸ್ಟ್ ರನ್‌ಗಳ ಹೆಗ್ಗುರುತನ್ನು ತಲುಪಿದರು. ಜಾನಿ ಬೈರ್‌ಸ್ಟೋವ್ ಅವರು 5ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್‌ಗಳನ್ನು ದಾಟಿದಾಗ 6000 ಟೆಸ್ಟ್ ರನ್‌ಗಳ ಸಾಧನೆಯನ್ನು ತಲುಪಿದರು.

ಬಲಗೈ ಬ್ಯಾಟರ್, ವಿಕೆಟ್ ಕೀಪರ್ ಬೈರ್‌ಸ್ಟೋವ್ ತಮ್ಮ ಟೆಸ್ಟ್ ವೃತ್ತಿಜೀವನದ 100ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರು. 6000 ಟೆಸ್ಟ್ ರನ್‌ಗಳನ್ನು ಪೂರೈಸಿದ ನಂತರ, ಕುಲ್‌ದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ಔಟಾಗುವ ಮೊದಲು 18 ಎಸೆತಗಳಲ್ಲಿ 29 ರನ್ ಗಳಿಸಿದರು.

ಮೊದಲ ದಿನ: ಸಂಕ್ಷಿಪ್ತ ಸ್ಕೋರ್ ವಿವರ ಹೀಗಿದೆ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ : 218ಕ್ಕೆ ಆಲೌಟ್
ಝಾಕ್ ಕ್ರೌಲಿ 79 ರನ್

ಟೀಮ್ ಇಂಡಿಯಾ ಬೌಲಿಂಗ್:
ಕುಲ್‌ದೀಪ್ ಯಾದವ್ 72ಕ್ಕೆ 5 ವಿಕೆಟ್
ಆರ್ ಅಶ್ವಿನ್ 51ಕ್ಕೆ 4 ವಿಕೆಟ್

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್: 135ಕ್ಕೆ 1 ವಿಕೆಟ್
ಯಶಸ್ವಿ ಜೈಸ್ವಾಲ್ 57 ರನ್
ರೋಹಿತ್ ಶರ್ಮಾ ಔಟಾಗದೆ 52 ರನ್
ಶುಭ್‌ಮನ್ ಗಿಲ್ ಔಟಾಗದೆ 26 ರನ್

ಇಂಗ್ಲೆಂಡ್ ಬೌಲಿಂಗ್:
ಶೊಯೇಬ್ ಬಶೀರ್ 64ಕ್ಕೆ 1

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಪೇನ್‌ಗೆ ನಾಲ್ಕನೇ ಬಾರಿ ಯೂರೋ ಕಪ್; ಸತತ 2ನೇ ಬಾರಿ ಸೋತ ಇಂಗ್ಲೆಂಡ್

ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್‌ ಪ್ರಶಸ್ತಿಯನ್ನು ಸ್ಪೇನ್‌...

ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ...

ಸಾಂಘಿಕ ಹೋರಾಟದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ಟೀಂ ಇಂಡಿಯಾಗೆ 4-1 ಟಿ20 ಸರಣಿ

ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ...

ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕ್ವಾಡ್ ಕ್ಯಾನ್ಸರ್ ಚಿಕಿತ್ಸೆಗೆ ಬಿಸಿಸಿಐ 1 ಕೋಟಿ ರೂ. ನೆರವು

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನ್ಶುಮಾನ್‌ ಗಾಯಕ್ವಾಡ್ ಅವರ ಕ್ಯಾನ್ಸರ್‌ ಚಿಕಿತ್ಸೆಗೆ...