ಮಧ್ಯಪ್ರದೇಶ | ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಮಂದಿಯ ಹತ್ಯೆ

Date:

  • ಮಧ್ಯಪ್ರದೇಶ ಮೊರೆನಾ ಜಿಲ್ಲೆಯ ಲೇಪಾ ಗ್ರಾಮದಲ್ಲಿ ಘಟನೆ
  • ಎರಡು ಕುಟುಂಬಗಳ ನಡುವಿನ ಹಳೆಯ ವೈಷಮ್ಯ ದಾಳಿಗೆ ಕಾರಣ

ಮಧ್ಯಪ್ರದೇಶ ಮೊರೆನಾ ಜಿಲ್ಲೆಯಲ್ಲಿ ಶುಕ್ರವಾರ (ಮೇ 5) ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮೂವರು ಗಾಯಗೊಂಡು ಪಾರಾಗಿದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಜೇಂದ್ರ ಸಿಂಗ್ ತೋಮರ್ ಮತ್ತು ಅವರ ಇಬ್ಬರು ಮಕ್ಕಳು ಮೃತ ಆರು ಮಂದಿ ಪೈಕಿ ಇತರ ಮೂವರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಧ್ಯಪ್ರದೇಶ ಮೊರೆನಾ ಜಿಲ್ಲೆಯಿಂದ 50 ರಿಂದ 60 ಕಿ ಮೀ ದೂರದ ಲೇಪಾ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿ ಕುಟುಂಬ ಹಾಗೂ ಅಪರಿಚಿತರ ನಡುವೆ ನಡೆಯುತ್ತಿದ್ದ ಮಾತುಕತೆ ವಾಗ್ವಾದ ಹಂತಕ್ಕೆ ತಲುಪಿತ್ತು.

ಇದರಿಂದ ಉದ್ರಿಕ್ತ ಅಪರಿಚಿತರು ಬಂದೂಕುಗಳಿಂದ ಕುಟುಂಬದ ಸದಸ್ಯರ ಮೇಲೆ ದಾಳಿ ಮಾಡಿ ಮರದ ಕೋಲುಗಳಿಂದ ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ ವಾಗ್ವಾದ ನಡೆದಿತ್ತು. ಹಳೆಯ ದ್ವೇಷದಿಂದ ಗುಂಡಿನ ದಾಳಿ ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಧ್ಯಪ್ರದೇಶ ಚಂಬಲ್ ವಲಯದ ಪೊಲೀಸ್ ಮಹಾನಿರ್ದೇಶಕ (ಐಜಿ) ಎಸ್ ಸಕ್ಸೇನಾ ತಿಳಿಸಿದ್ದಾರೆ.

ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತ್ಯಾಜ್ಯ ಎಸೆಯುವ ಸಂಬಂಧ 2013ರಲ್ಲಿ ಗಜೇಂದ್ರ ಸಿಂಗ್ ಮತ್ತು ಧೀರ್ ಸಿಂಗ್ ಕುಟುಂಬಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ಧೀರ್ ಸಿಂಗ್ ಅವರ ಕುಟುಂಬದ ಇಬ್ಬರು ಸದಸ್ಯರು ಮೃತಪಟ್ಟಿದ್ದರು. ಗಜೇಂದ್ರ ಸಿಂಗ್ ಕುಟುಂಬ ಊರು ತೊರೆದಿತ್ತು.

ಈ ಸುದ್ದಿ ಓದಿದ್ದೀರಾ? ಜಮ್ಮು- ಕಾಶ್ಮೀರ | ಕಿಶ್ತ್ವಾರ್ ಬಳಿ ಸೇನಾ ಹೆಲಿಕಾಪ್ಟರ್ ಪತನ ; ತನಿಖೆಗೆ ಆದೇಶ

ನ್ಯಾಯಾಲಯದ ಹೊರಗೆ ಎರಡು ಕುಟುಂಬಗಳು ರಾಜಿ ಮಾಡಿಕೊಂಡಿದ್ದವು. ಶುಕ್ರವಾರ ಗಜೇಂದ್ರ ಸಿಂಗ್‌ ಕುಟುಂಬ ಊರಿಗೆ ಮರಳಿತ್ತು.

ಈ ಮಾಹಿತಿ ತಿಳಿದ ಧೀರ್‌ ಸಿಂಗ್‌ ಕುಟುಂಬ ಗಜೇಂದ್ರ ಸಿಂಗ್ ಕುಟುಂಬದ ಮೇಲೆ ಪೂರ್ವ ಯೋಜಿತ ದಾಳಿ ನಡೆಸಿತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಉತ್ತರ ಪ್ರದೇಶ | 2027ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುತ್ತದೆ: ಬಿಜೆಪಿ ಶಾಸಕನ ವಿಡಿಯೋ ವೈರಲ್

"2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಸೋಲು ಕಾಣಲಿದೆ,...

‘ಕಣ್ಣು ರಸ್ತೆಯ ಮೇಲಿರಲಿ’: ರೀಲ್ಸ್‌ ಮಾಡುತ್ತಾ ಅಪಘಾತಕ್ಕೀಡಾದ ಯುವಕರ ವಿಡಿಯೋ ಹಂಚಿಕೊಂಡ ಪೊಲೀಸರು

ಯುವಕರಿಬ್ಬರು ಬೈಕ್‌ನಲ್ಲಿ ಸವಾರಿ ಮಾಡುವಾಗ 'ರೀಲ್ಸ್‌' ಚಿತ್ರೀಕರಿಸಲು ಮುಂದಾಗಿದ್ದು, ಅಪಘಾತಕ್ಕೀಡಾಗಿದ್ದಾರೆ. ಆ...

ತ್ರಿಪುರಾ | ಬುಡಕಟ್ಟು ಯುವಕನ ಹತ್ಯೆ; ಭುಗಿಲೆದ್ದ ಹಿಂಸಾಚಾರ

ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಬುಡಕಟ್ಟು ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆಗೈದ ಬಳಿಕ ಗುಂಪು...