ರಾಜಸ್ಥಾನ ವಿದ್ಯುತ್ ನಿಗಮದಿಂದ ಹೆಚ್ಚುವರಿ 1300 ಕೋಟಿ ರೂ ಶುಲ್ಕ ಕೇಳಿದ್ದ ಅದಾನಿ ಸಂಸ್ಥೆಯ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Date:

ರಾಜಸ್ಥಾನದ ಜೈಪುರ ವಿದ್ಯುತ್‌ ವಿತ್ರನ್ ನಿಗಮ ನಿಯಮಿತ ಕಂಪನಿಯಿಂದ ಹೆಚ್ಚುವರಿ 1300 ಕೋಟಿ ರೂ. ವಿಳಂಬ ಶುಲ್ಕ ಕೇಳಿದ್ದ ಅದಾನಿ ವಿದ್ಯುತ್ ರಾಜಸ್ಥಾನ ಸಂಸ್ಥೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇತರ ಅರ್ಜಿಗಳ ವಿಚಾರಣೆ ನಡೆಸಿದ ಅನಿರುದ್ಧ ಬೋಸ್‌ ಮತ್ತು ಪಿ ವಿ ಸಂಜಯ್ ಕುಮಾರ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ವಿಳಂಬ ಹೆಚ್ಚುವರಿ ಶುಲ್ಕ ವಿಧಿಸುವುದಕ್ಕೆ ಅದಾನಿ ಸಂಸ್ಥೆಯು ಸರಿಯಾದ ಕಾನೂನು ನೆರವನ್ನು ಪಡೆದುಕೊಂಡಿಲ್ಲ ಎಂದು ಹೆಚ್ಚುವರಿ ಶುಲ್ಕದ ಅರ್ಜಿಯನ್ನು ವಜಾಗೊಳಿಸಿತು.

“ಈ ರೀತಿಯ ಪರಿಹಾರವನ್ನು ಇತರ ಅರ್ಜಿಯಲ್ಲಿ ಕೇಳುವಂತಿಲ್ಲ. ಇದನ್ನು ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟೀಕರಣದ ಅರ್ಜಿ ಎಂದು ವಿವರಿಸಲಾಗಿದೆ” ಎಂದು ಪೀಠ ಹೇಳಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಪ್ರೀಂ ಕೋರ್ಟ್‌ನ ಕಾನೂನು ನೆರವು ಸಮಿತಿಗೆ ಅದಾನಿ ವಿದ್ಯುತ್ ರಾಜಸ್ಥಾನ ಲಿಮಿಟೆಡ್‌ಗೆ ವಿಧಿಸಲಾಗಿರುವ 50 ಸಾವಿರ ರೂ ಮೊತ್ತವನ್ನು ಠೇವಣಿಯಿಡಬೇಕು ಎಂದು ತೀರ್ಪಿನ ಉಳಿದ ಭಾಗವನ್ನು ಓದುವಾಗ ಪೀಠ ತಿಳಿಸಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

ಜನವರಿ 24ರಂದು ವಾದಿ ಪ್ರತಿವಾದಿಗಳ ವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ಜೈಪುರದ ವಿದ್ಯುತ್‌ ನಿಗಮದ ಪರವಾಗಿ ಹಾಜರಾಗಿದ್ದ ದುಷ್ಯಂತ್ ದಾವೆ ಅದಾನಿ ಸಂಸ್ಥೆ ಕೇಳಿದ್ದ ಹೆಚ್ಚುವರಿ ವಿಳಂಬ ಶುಲ್ಕ 1300 ಕೋಟಿ ರೂ. ಹಣವನ್ನು ಸ್ಪಷ್ಟವಾಗಿ ವಿರೋಧಿಸಿದರು.

ಅದಾನಿ ಕಂಪನಿಯ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಹಾಜರಾಗಿದ್ದರು.

ವಿದ್ಯುತ್‌ ಖರೀದಿಯ ಒಪ್ಪಂದಕ್ಕಾಗಿ 2022ರ ಜೂನ್‌ 30ರಂದು ರಾಜಸ್ಥಾನ ಸರ್ಕಾರ ಹಾಗೂ ಅದಾನಿ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿತ್ತು. ಅದಾನಿ ಸಂಸ್ಥೆ ಬಾಕಿ ಹಣ ಉಳಿಸಿಕೊಂಡಿದ್ದಕ್ಕಾಗಿ 1376.35 ಕೋಟಿ ರೂ. ಹೆಚ್ಚುವರಿ ವಿಳಂಬ ಶುಲ್ಕ ಬಾಕಿ ನೀಡಬೇಕೆಂದು ಮನವಿ ಸಲ್ಲಿಸಿದೆ.

ಇದನ್ನು ವಿರೋಧಿಸಿರುವ ಜೈಪುರ ವಿದ್ಯುತ್ ಸಂಸ್ಥೆ ಪ್ರಕರಣವನ್ನು ಸುಪ್ರೀಂ ಕೋರ್ಟ್ 2020ರಲ್ಲಿಯೇ ಬಗೆಹರಿಸಿದೆ ಎಂದು ತಿಳಿಸಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಲಿಕಾಪ್ಟರ್ ಹತ್ತುವಾಗ ಎಡವಿ ಬಿದ್ದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ಪ್ರಚಾರದ...

ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು...

‘ತಾರಕ್ ಮೆಹ್ತಾ’ ನಟ ಗುರುಚರಣ್ ಸಿಂಗ್ ನಾಪತ್ತೆ; ಅಪಹರಣ ಪ್ರಕರಣ ದಾಖಲು

ಅತ್ಯಂತ ಜನಪ್ರಿಯ ಭಾರತೀಯ ಟಿವಿ ಶೋ ಆದ 'ತಾರಕ್ ಮೆಹ್ತಾ ಕಾ...

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...