UGC-NET ಕೀ-ಉತ್ತರ ವಿವಾದ; 4 ಪ್ರಶ್ನೆಗಳ ಮರುಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶ!

Date:

ಸ್ಪರ್ಧಾತ್ಮಕ ಪರೀಕ್ಷೆಗಳ ಕೀ-ಉತ್ತರಗಳ ವಿವಾದಗಳಲ್ಲಿ ನ್ಯಾಯಾಂಗದ ಸಂಯಮವು ಸಂಪೂರ್ಣವಾದುದಲ್ಲ. ಯಾವುದೇ ತರ್ಕ ಅಥವಾ ವಿಶ್ಲೇಷಣೆಯ ಅಗತ್ಯವಿಲ್ಲದೆಯೇ ಉತ್ತರವು ಸ್ಪಷ್ಟವಾಗಿ ತಪ್ಪಾಗಿದೆ ಎಂದು ಸಾಬೀತಾದರೆ ನ್ಯಾಯಾಲಯವು ಮಧ್ಯಪ್ರವೇಶಿಸಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

- Advertisement -

2026ರ ಜೂನ್ ತಿಂಗಳಲ್ಲಿ ನಡೆದ ಯುಜಿಸಿ-ನೆಟ್ (UGC-NET) ಪರೀಕ್ಷೆಯ ಕೀ ಉತ್ತರಗಳಲ್ಲಿನ ಲೋಪಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಏಕಸದಸ್ಯ ಪೀಠವು, ವಿವಾದಿತ 4 ಪ್ರಶ್ನೆಗಳನ್ನು ಮರುನಿರ್ಧಾರಕ್ಕಾಗಿ ಸಂಬಂಧಪಟ್ಟ ವಿಷಯ ತಜ್ಞರ ಸಮಿತಿಗೆ ಒಪ್ಪಿಸಿ ಆದೇಶಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಜೂನ್ 22 ರಿಂದ 30ರವರೆಗೆ ನಡೆದಿದ್ದ ಯುಜಿಸಿ-ನೆಟ್ ಪರೀಕ್ಷೆಗೆ ಸುಮಾರು 7,27,506 ಅಭ್ಯರ್ಥಿಗಳು ಹಾಜರಾಗಿದ್ದರು. ಆಗಸ್ಟ್‌ನಲ್ಲಿ ಫಲಿತಾಂಶ ಪ್ರಕಟವಾಗಿತ್ತು. ಆದರೆ, ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರಗಳಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿ ನಾಸಿರ್ ರಶೀದ್ ಸೇರಿದಂತೆ ಹಲವು ಅಭ್ಯರ್ಥಿಗಳು ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಒಟ್ಟು 10 ಪ್ರಶ್ನೆಗಳ ಕೀ ಉತ್ತರಗಳನ್ನು ಪ್ರಶ್ನಿಸಲಾಗಿತ್ತು.

“ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಪ್ಪಾದ ಕೀ ಉತ್ತರವು ಅಭ್ಯರ್ಥಿಗಳ ಶ್ರೇಯಾಂಕ ಮತ್ತು ಅರ್ಹತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕಟ್-ಆಫ್ ಅಂಕಗಳನ್ನು ದಾಟಲು ಒಂದೇ ಒಂದು ಅಂಕವೂ ನಿರ್ಣಾಯಕವಾಗಬಹುದು. ಇಂತಹ ಲೋಪಗಳಿಂದ ಅಭ್ಯರ್ಥಿಗಳು ತೊಂದರೆ ಅನುಭವಿಸಬಾರದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಟ್ಟು 10 ವಿವಾದಿತ ಪ್ರಶ್ನೆಗಳಲ್ಲಿ 6 ಪ್ರಶ್ನೆಗಳು ಶೈಕ್ಷಣಿಕ ಅಭಿಪ್ರಾಯ ಮತ್ತು ತರ್ಕವನ್ನು ಆಧರಿಸಿವೆ. ಈಗಾಗಲೇ ವಿಷಯ ತಜ್ಞರು ಅವುಗಳನ್ನು ಪರಿಶೀಲಿಸಿರುವುದರಿಂದ, ಮೇಲ್ಮನವಿ ಪ್ರಾಧಿಕಾರದಂತೆ ತಜ್ಞರ ಅಭಿಪ್ರಾಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಶಿಕ್ಷಣಶಾಸ್ತ್ರ ವಿಭಾಗದ ಎರಡು, ಉರ್ದು ಮತ್ತು ಭೂಗೋಳಶಾಸ್ತ್ರದ ತಲಾ ಒಂದು ಪ್ರಶ್ನೆಗಳು ಸಾರ್ವಜನಿಕವಾಗಿ ಲಭ್ಯವಿರುವ ಪ್ರಮಾಣಿತ ಪಠ್ಯಪುಸ್ತಕಗಳ ಆಧಾರದ ಮೇಲೆ ಒಂದೇ ನಿಖರ ಉತ್ತರವನ್ನು ಹೊಂದಿವೆ. ಮೇಲ್ನೋಟಕ್ಕೆ ಇವುಗಳ ಕೀ ಉತ್ತರ ತಪ್ಪಾಗಿರುವುದು ಕಂಡುಬಂದಿದೆ.

ತಪ್ಪಾದ ಉತ್ತರಗಳನ್ನು ನ್ಯಾಯಾಲಯವೇ ಸ್ವತಃ ತಿದ್ದುವುದಿಲ್ಲ, ಆ ಕೆಲಸವನ್ನು ವಿಷಯ ತಜ್ಞರೇ ಮಾಡಬೇಕು ಎಂದು ಹೇಳಿದ ಪೀಠವು, ಈ ನಾಲ್ಕು ಪ್ರಶ್ನೆಗಳನ್ನು ತಜ್ಞರ ಸಮಿತಿಗೆ ವರ್ಗಾಯಿಸಿದೆ. ಅರ್ಜಿದಾರರ ಅಹವಾಲುಗಳನ್ನು ಆಲಿಸಿ, ಮೂರು ವಾರಗಳ ಒಳಗಾಗಿ ಸೂಕ್ತ ಕಾರಣಗಳೊಂದಿಗೆ ಆದೇಶ ಹೊರಡಿಸುವಂತೆ ಸಮಿತಿಗೆ ನಿರ್ದೇಶನ ನೀಡಿದೆ.

2026ರ ಜೂನ್‌ನಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆಯು ಹಲವು ವಿವಾದಗಳಿಗೆ ಕಾರಣವಾಗಿತ್ತು. ಇಂಗ್ಲಿಷ್ ಪತ್ರಿಕೆಯ 150 ಪ್ರಶ್ನೆಗಳಲ್ಲಿ 67 ಪ್ರಶ್ನೆಗಳು 2024ರ ಪರೀಕ್ಷೆಯಿಂದಲೇ ಯಥಾವತ್ತಾಗಿ ಪುನರಾವರ್ತನೆಯಾಗಿದ್ದವು ಎಂಬ ಆರೋಪ ಕೇಳಿಬಂದಿತ್ತು. ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಪತ್ರಿಕೆಗಳ ಕುರಿತ ದೂರುಗಳ ಹಿನ್ನೆಲೆಯಲ್ಲಿ ಎನ್‌ಟಿಎ (NTA) ಸೆಪ್ಟೆಂಬರ್ 2026ರಲ್ಲಿ ಮರುಪರೀಕ್ಷೆ ನಡೆಸಿತ್ತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಧಿ ಕುಟುಂಬದ ಬಗ್ಗೆ ವಿವಾದಾತ್ಮಕ ಪೋಸ್ಟ್: ಕಂಗನಾ ವಿರುದ್ಧ FIR ದಾಖಲು!

ಗಾಂಧಿ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಪೋಸ್ಟ್...

ಗುಜರಾತ್‌ನಲ್ಲಿ ಭೀಕರ ಜಾತಿ ದೌರ್ಜನ್ಯ: ಕಳ್ಳತನದ ಶಂಕೆಯ ಮೇಲೆ ದಲಿತ ಯುವಕನ ಹತ್ಯೆ

ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಮತ್ತು ಆತನ ಸ್ನೇಹಿತನನ್ನು ಅಪಹರಿಸಿ,...

ಬೀದರ್‌ | ನಮ್ಮ ನಾಡಿನ ಸಂಸ್ಕೃತಿಯ ತಾಯಿಬೇರು ಜಾನಪದ: ಹಾವಗಿರಾವ ಮೈಲಾರೆ

ಜಾನಪದವು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ನೆಲಮೂಲದ ಬದುಕಿನ ಪ್ರತಿಬಿಂಬವಾಗಿದೆ....

ರಾಜ್ಯದಲ್ಲಿ ಈ ಬಾರಿ ‘ಬಿಸಿಯಾದ ನವೆಂಬರ್’: ಕಳೆದ 6 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು

ರಾಜ್ಯದಲ್ಲಿ ಈ ಬಾರಿ ನವೆಂಬರ್ ತಿಂಗಳು ಅಸಾಮಾನ್ಯವಾದ ಬಿಸಿಲಿನಿಂದ ಕೂಡಿದೆ. ತಿಂಗಳ...