ಅಂತರ್ಜಲದಲ್ಲಿ ಯುರೇನಿಯಂ ಭೀತಿ ದೂರ ಮಾಡಿದ ಬಿಎಆರ್‌ಸಿ; ಫ್ಲೋರೈಡ್, ಟಿಡಿಎಸ್ ಬಗ್ಗೆ ಇರಲಿ ಎಚ್ಚರ

Date:

ಕುಡಿಯುವ ನೀರಿನಲ್ಲಿ ಅಪಾಯಕಾರಿ ‘ಯುರೇನಿಯಂ’ ಅಂಶ ಸೇರಿಕೊಂಡಿದೆಯೇ ಎಂಬ ಆತಂಕ ಎಲ್ಲರಲ್ಲೂ ಕಾಡುವುದು ಸಹಜ. ಆದರೆ, ಈ ಬಗ್ಗೆ ದೇಶಾದ್ಯಂತ ಬೃಹತ್ ಸಮೀಕ್ಷೆ ನಡೆಸಿರುವ ಭಾಭಾ ಅಣು ಸಂಶೋಧನಾ ಕೇಂದ್ರ (BARC) ಜನಸಾಮಾನ್ಯರಿಗೆ ನಿರಾಳವಾಗುವಂತಹ ಸುದ್ದಿಯೊಂದನ್ನು ನೀಡಿದೆ. ದೇಶದಾದ್ಯಂತ ಸಂಗ್ರಹಿಸಲಾದ ಶೇ 98ರಷ್ಟು ಅಂತರ್ಜಲ (ಬೋರ್‌ವೆಲ್ ನೀರು) ಸಂಪೂರ್ಣ ಸುರಕ್ಷಿತವಾಗಿದೆ. ಈ ನೀರಿನಲ್ಲಿ ಯುರೇನಿಯಂ ಪ್ರಮಾಣವು ರಾಷ್ಟ್ರೀಯ ವಿಕಿರಣ ಸುರಕ್ಷತಾ ಮಿತಿಯೊಳಗೇ ಇದೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ.

- Advertisement -

ದೇಶದಾದ್ಯಂತ ಕುಡಿಯುವ ನೀರಿನ ನಕ್ಷೆ ತಯಾರಿಸುವ ಉದ್ದೇಶದಿಂದ ಈ ಬೃಹತ್ ಸಮೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ದೇಶದ ವಿವಿಧ ಭಾಗಗಳಿಂದ 55,554 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಮೇಲ್ಮೈ ನೀರು (ನದಿ, ಕೆರೆ) ಮತ್ತು ಅಂತರ್ಜಲ (ಬೋರ್‌ವೆಲ್) ಎರಡೂ ಸೇರಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಪರೀಕ್ಷೆಗೊಳಪಡಿಸಿದ ಒಟ್ಟು ಮಾದರಿಗಳಲ್ಲಿ ಶೇ 83.6ರಷ್ಟು ನೀರಿನಲ್ಲಿ ಯುರೇನಿಯಂ ಇರುವುದು ಕಂಡುಬಂದಿದೆ. ಆದರೆ, ನೆಮ್ಮದಿಯ ವಿಚಾರವೆಂದರೆ ಶೇ 98ರಷ್ಟು ಅಂತರ್ಜಲದಲ್ಲಿ ಇದರ ಪ್ರಮಾಣವು ಅಣುಶಕ್ತಿ ನಿಯಂತ್ರಣ ಮಂಡಳಿ (AERB) ನಿಗದಿಪಡಿಸಿದ ಸುರಕ್ಷತಾ ಮಿತಿಯ (Safety Limit) ಒಳಗೇ ಇದೆ. ಕೇವಲ ಶೇ 2ರಷ್ಟು ಬೋರ್‌ವೆಲ್ ನೀರಿನಲ್ಲಿ ಮಾತ್ರ ಯುರೇನಿಯಂ ಅಂಶ ನಿಗದಿತ ಮಿತಿಗಿಂತ ಹೆಚ್ಚಾಗಿದೆ. ಇನ್ನು, ನದಿ-ಕೆರೆಗಳಂತಹ ಮೇಲ್ಮೈ ನೀರಿನ ಯಾವುದೇ ಮಾದರಿಯಲ್ಲೂ ಯುರೇನಿಯಂ ಮಿತಿ ಮೀರಿಲ್ಲ.

ಇತರ ರಾಸಾಯನಿಕಗಳದ್ದೇ ಅಸಲಿ ಸಮಸ್ಯೆ:ನೀರಿನಲ್ಲಿ ಯುರೇನಿಯಂ ಹೇಗೆ ಬೆರೆಯುತ್ತದೆ ಎಂಬುದನ್ನು ಅರಿಯಲು ಒಟ್ಟು 12 ನೀರಿನ ಗುಣಮಟ್ಟದ ಅಂಶಗಳನ್ನು ಪರೀಕ್ಷಿಸಲಾಗಿತ್ತು. ಆಘಾತಕಾರಿ ವಿಚಾರವೆಂದರೆ, ಯುರೇನಿಯಂ ಸುರಕ್ಷಿತವಾಗಿದ್ದರೂ, ಇತರ 8 ರಾಸಾಯನಿಕಗಳ ಪ್ರಮಾಣವು ‘ಭಾರತೀಯ ಮಾನದಂಡಗಳ ಬ್ಯೂರೋ’ (BIS) ನಿಗದಿಪಡಿಸಿದ ಕುಡಿಯುವ ನೀರಿನ ಮಿತಿಯನ್ನು ಮೀರಿದೆ.

ನೀರಿನಲ್ಲಿ ಯುರೇನಿಯಂ ಅಂಶ ಸುರಕ್ಷಿತವಾಗಿದ್ದರೂ, ಇತರ ರಾಸಾಯನಿಕಗಳ ಪ್ರಮಾಣ ಆತಂಕಕಾರಿಯಾಗಿದೆ. ಪರೀಕ್ಷಿಸಲಾದ ಮಾದರಿಗಳ ಪೈಕಿ ಶೇ 51.6ರಷ್ಟು ನೀರಿನಲ್ಲಿ ಕಠಿಣತೆ (Hardness) ಹಾಗೂ ಶೇ 45ರಷ್ಟು ನೀರಿನಲ್ಲಿ ಕ್ಷಾರೀಯತೆ (Alkalinity) ಮಿತಿ ಮೀರಿದೆ. ಹಾಗೆಯೇ, ಕರಗಿದ ಘನವಸ್ತುಗಳ (TDS) ಪ್ರಮಾಣ ಶೇ 34.3ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಹಲ್ಲು ಮತ್ತು ಮೂಳೆಗಳಿಗೆ ಹಾನಿ ಮಾಡುವ ಫ್ಲೋರೈಡ್ ಶೇ 20.5ರಷ್ಟು, ನೈಟ್ರೇಟ್ ಶೇ 14ರಷ್ಟು, ಕ್ಲೋರೈಡ್ ಶೇ 12.9ರಷ್ಟು ಮತ್ತು ಸಲ್ಫೇಟ್ ಶೇ 4.2ರಷ್ಟು ಮಾದರಿಗಳಲ್ಲಿ ‘ಭಾರತೀಯ ಮಾನದಂಡಗಳ ಬ್ಯೂರೋ’ (BIS) ನಿಗದಿಪಡಿಸಿದ ಸುರಕ್ಷತಾ ಮಿತಿಯನ್ನು ಮೀರಿರುವುದು ಪತ್ತೆಯಾಗಿದೆ.

ಬೋರ್‌ವೆಲ್‌ಗಳನ್ನು ಹೆಚ್ಚು ಆಳಕ್ಕೆ ಕೊರೆದಂತೆ ಮತ್ತು ನೀರಿನಲ್ಲಿ ಟಿಡಿಎಸ್ (TDS) ಪ್ರಮಾಣ ಹೆಚ್ಚಾದಂತೆ, ಅದರಲ್ಲಿ ಕರಗಿರುವ ಯುರೇನಿಯಂ ಪ್ರಮಾಣವೂ ಹೆಚ್ಚಾಗುತ್ತದೆ ಎಂದು ಈ ಅಧ್ಯಯನ ವೈಜ್ಞಾನಿಕವಾಗಿ ವಿವರಿಸಿದೆ. ‘ಕರೆಂಟ್ ಸೈನ್ಸ್’ (Current Science) ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ವರದಿಯು ಯುರೇನಿಯಂ ಕುರಿತ ಜನಸಾಮಾನ್ಯರ ದೊಡ್ಡ ಆತಂಕವನ್ನು ದೂರ ಮಾಡಿದೆ. ಆದರೆ, ದಿನಬಳಕೆಯ ನೀರಿನಲ್ಲಿ ಮಿತಿಮೀರಿರುವ ಫ್ಲೋರೈಡ್ ಹಾಗೂ ಟಿಡಿಎಸ್‌ನಂತಹ ಇತರ ಅಪಾಯಕಾರಿ ರಾಸಾಯನಿಕಗಳ ಬಗ್ಗೆ ನಾವೆಲ್ಲರೂ ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಎಚ್ಚರಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ವಾಣಿಜ್ಯ ಮಳಿಗೆಗಳಿಗೆ ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ನಿರ್ಬಂಧ!

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ತಡರಾತ್ರಿ ನಡೆಯುವ ಅಹಿತಕರ ಘಟನೆಗಳನ್ನು...

ಮಂಗಳೂರು | ಪ್ರತಿಭಟನಾಕಾರರ ಅಹವಾಲು ಆಲಿಸಲು ಸಚಿವರ ನಿಯೋಜನೆ: ಸಲೀಂ ಅಹ್ಮದ್

ಡಿಸೆಂಬರ್ 2ರಿಂದ 11ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ ಸಚಿವಾಲಯದ ಎಚ್ಚರಿಕೆಯ ಹಿಂದಿನ ವಾಸ್ತವ

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್...