ವಾಟ್ಸ್‌ಆ್ಯಪ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ!

Date:

ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕವು (NCTAU) ಭದ್ರತಾ ಎಚ್ಚರಿಕೆ ನೀಡಿದೆ. ಕಚೇರಿಯ ಕಂಪ್ಯೂಟರ್‌ಗಳು ಅಥವಾ ಇತರರು ಬಳಸುವ ‘ಹಂಚಿಕೆಯ ವ್ಯವಸ್ಥೆ’ಗಳಲ್ಲಿ (Shared Systems) ವಾಟ್ಸ್‌ಆ್ಯಪ್ ವೆಬ್ ಲಾಗ್-ಇನ್ ಮಾಡಿ ಹಾಗೆಯೇ ಬಿಡುವುದರಿಂದ ನಿಮ್ಮ ಖಾತೆಯು ಸೈಬರ್ ವಂಚಕರ ಪಾಲಾಗುವ ಅಪಾಯವಿದೆ ಎಂದು ಸರ್ಕಾರ ಎಚ್ಚರಿಸಿದೆ.

- Advertisement -

ಬಳಕೆದಾರರು ಒಮ್ಮೆ ಲಾಗ್-ಇನ್ ಆಗಿ, ಲಾಗ್-ಔ೧್ ಆಗದೆ, ಹಾಗೆಯೇ ಬಿಡುವ ವಾಟ್ಸ್‌ಆ್ಯಪ್ ವೆಬ್ ಸೆಷನ್ ಅನ್ನು ದುರುಪಯೋಗಪಡಿಸಿಕೊಂಡು ಅನಧಿಕೃತ ವ್ಯಕ್ತಿಗಳು ನಿಮ್ಮ ಖಾತೆಯನ್ನು ಪ್ರವೇಶಿಸಬಹುದು. ಇದರಿಂದ ನಿಮ್ಮ ಖಾಸಗಿ ಸಂದೇಶಗಳು, ಸಂಪರ್ಕ ಸಂಖ್ಯೆಗಳು ಹಾಗೂ ಗ್ರೂಪ್ ಚಾಟ್‌ಗಳು ಸೋರಿಕೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ವಂಚಕರು ನಿಮ್ಮ ಹೆಸರು ಮತ್ತು ಗುರುತನ್ನು ಬಳಸಿಕೊಂಡು ಇತರರಿಗೆ ಸಂದೇಶಗಳನ್ನು ಕಳುಹಿಸುವುದು, ಫಿಶಿಂಗ್ ದಾಳಿ ನಡೆಸುವುದು ಹಾಗೂ ಆರ್ಥಿಕ ವಂಚನೆ ಸೇರಿದಂತೆ ವಿವಿಧ ಸೈಬರ್ ಅಪರಾಧಗಳನ್ನು ಎಸಗುವ ಅಪಾಯವಿದೆ ಎಂದು ಸರ್ಕಾರದ ಮಾರ್ಗಸೂಚಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಅಂತಹ‌ ಅಪಾಯದಿಂದ ಪಾರಾಗಲು ಬಳಕೆದಾರರು ಕಚೇರಿ ಅಥವಾ ಇತರರಿಗೆ ಸುಲಭವಾಗಿ ಸಿಗುವ ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಅನ್ನು ಶಾಶ್ವತವಾಗಿ ಲಾಗ್-ಇನ್ ಮಾಡಿ ಇಡಬಾರದು. ಬಹುತೇಕರು ಕೆಲಸ ಮುಗಿದ ನಂತರ ಕೇವಲ ಬ್ರೌಸರ್ ಟ್ಯಾಬ್ ಅಥವಾ ವಿಂಡೋವನ್ನು ಕ್ಲೋಸ್ ಮಾಡಿದರೆ ಲಾಗ್-ಔಟ್ ಆಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಹಾಗೆ ಮಾಡುವುದರಿಂದ ಖಾತೆ ಸುರಕ್ಷಿತವಾಗಿರುವುದಿಲ್ಲ. ಪ್ರತಿ ಬಾರಿ ಬಳಸಿದ ನಂತರವೂ ಕಡ್ಡಾಯವಾಗಿ ‘ಲಾಗ್-ಔಟ್’ ಆಯ್ಕೆಯನ್ನು ಒತ್ತುವ ಮೂಲಕ ಖಾತೆಯಿಂದ ಹೊರಬರುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಒಂದು ವೇಳೆ ತಾತ್ಕಾಲಿಕವಾಗಿ ವಾಟ್ಸ್‌ಆ್ಯಪ್ ವೆಬ್ ಬಳಸಲೇಬೇಕಾದ ಅನಿವಾರ್ಯತೆ ಎದುರಾದರೆ, ನಂಬಿಕಸ್ತ ಕಂಪ್ಯೂಟರ್‌ನಲ್ಲಿ ಬ್ರೌಸರ್‌ನ ‘ಇನ್‌ಕಾಗ್ನಿಟೋ’ (Incognito) ಅಥವಾ ಪ್ರೈವೇಟ್ ಮೋಡ್ ಬಳಸುವುದು ಉತ್ತಮ. ಆದರೆ, ಇನ್‌ಕಾಗ್ನಿಟೋ ಮೋಡ್ ಕೇವಲ ಹೆಚ್ಚುವರಿ ಸುರಕ್ಷತೆಯ ಕ್ರಮವೇ ಹೊರತು ಲಾಗ್-ಔಟ್ ಮಾಡುವುದಕ್ಕೆ ಪರ್ಯಾಯವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು; ಬ್ರೌಸರ್ ಮುಚ್ಚುವ ಮುನ್ನ ಖುದ್ದಾಗಿ ಲಾಗ್-ಔಟ್ ಮಾಡುವುದು ಅತ್ಯಗತ್ಯ. ಸೈಬರ್ ಕೆಫೆಗಳು, ಸಾರ್ವಜನಿಕ ಕಿಯೋಸ್ಕ್‌ಗಳು, ಹೋಟೆಲ್ ಬ್ಯುಸಿನೆಸ್ ಸೆಂಟರ್‌ಗಳು ಹಾಗೂ ಎರವಲು ಪಡೆದ ಕಂಪ್ಯೂಟರ್‌ಗಳಲ್ಲಿ ಯಾವುದೇ ಕಾರಣಕ್ಕೂ ವಾಟ್ಸ್‌ಆ್ಯಪ್ ಲಾಗ್-ಇನ್ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಬಳಕೆದಾರರು ತಮ್ಮ ಖಾತೆಯಲ್ಲಿ ತಾವು ಕಳುಹಿಸದ ಸಂದೇಶಗಳು ಕಾಣಿಸಿಕೊಳ್ಳುವುದು ಅಥವಾ ಅಪರಿಚಿತ ಪ್ರತಿಕ್ರಿಯೆಗಳು ಬರುವಂತಹ ಅಸಹಜ ಚಟುವಟಿಕೆಗಳ ಬಗ್ಗೆ ಸದಾ ನಿಗಾ ಇಡಬೇಕು. ಜೊತೆಗೆ, ಕಂಪ್ಯೂಟರ್‌ನ ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮತ್ತು ಸೆಕ್ಯುರಿಟಿ ಸಾಫ್ಟ್‌ವೇರ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳುವುದು ಹಾಗೂ ಅನುಮಾನಾಸ್ಪದ ಫೈಲ್‌ಗಳು ಮತ್ತು ಕ್ರ್ಯಾಕ್ಡ್ ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್ ಮಾಡದೇ ಇರುವುದು ಸುರಕ್ಷಿತ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಎಲ್ ನಿನೋ’ ಎಫೆಕ್ಟ್ | ಹಿಮಾಲಯದಲ್ಲಿ ಭಾರೀ‌ ಹಿಮಪಾತ, ಪ್ರವಾಹ ಸಂಭವ: ವರದಿ

'ಎಲ್ ನಿನೋ' ಪರಿಣಾಮವಾಗಿ ಚಳಿಗಾಲದಲ್ಲಿ ಹಿಮಾಲಯದ ಹಿಂದು ಕುಶ್ ಪರ್ವತ ಶ್ರೇಣಿಯ...

ನ.26ರಂದು ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಸಂವಿಧಾನ ದಿನಾಚರಣೆ

ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ ಪಾಠ!

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ...

ಗೋಧ್ರಾ ರೈಲು ದಹನ ಪ್ರಕರಣ: ಅಪರಾಧಿಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು!

2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ...