ಯಮುನಾ ಮಾಲಿನ್ಯ| ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಚಾಟಿ; ಪ್ರತಿ ಗಡಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ!

Date:

ಯಮುನಾ ನದಿಯ ಶುದ್ಧೀಕರಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ನದಿಯ ಮಾಲಿನ್ಯ ಹೆಚ್ಚಾಗುತ್ತಲೇ ಇರುವುದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ನದಿ ತೀರದ ನಗರ, ಪಟ್ಟಣ ಮತ್ತು ಗ್ರಾಮಗಳ ಪೌರಾಡಳಿತದ ವೈಫಲ್ಯಕ್ಕೆ ಯಮುನೆಯ ದುಸ್ಥಿತಿ ಮತ್ತು ಅದಕ್ಕೆ ಕೊಳಚೆ ನೀರು ಹರಿಸುತ್ತಿರುವ 520 ಚರಂಡಿಗಳೇ ಸಾಕ್ಷಿ” ಎಂದು ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತೀಕ್ಷ್ಣವಾಗಿ ನುಡಿದಿದೆ.

- Advertisement -

ಮಾಲಿನ್ಯ ನಿಯಂತ್ರಿಸಲು ವಿಫಲವಾಗುವ ಯಮುನಾ ಜಲಾನಯನ ಪ್ರದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರೀ ದಂಡ ವಿಧಿಸುವ ಎಚ್ಚರಿಕೆ ನೀಡಿರುವ ನ್ಯಾಯಾಲಯ, ಇನ್ನು ಮುಂದೆ ರಾಜ್ಯಗಳು ಸುಳ್ಳು ಅಂಕಿ-ಅಂಶಗಳ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಯಮುನಾ ನದಿ ಮತ್ತು ಪ್ರಮುಖ ಚರಂಡಿಗಳು ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ಜಿಲ್ಲೆಯನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ಸ್ಥಳಗಳಲ್ಲಿ ನೀರಿನ ಗುಣಮಟ್ಟವನ್ನು ಅಳೆಯುವಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (CPCB) ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಒಂದು ವೇಳೆ ನದಿಯು ಒಂದು ರಾಜ್ಯ ಅಥವಾ ಜಿಲ್ಲೆಯ ಮೂಲಕ ಹಾದುಹೋಗುವಾಗ ನೀರಿನ ಗುಣಮಟ್ಟ ಕುಸಿದರೆ, ಸಂಬಂಧಪಟ್ಟ ಆಡಳಿತವನ್ನೇ ಹೊಣೆಗಾರರನ್ನಾಗಿ ಮಾಡಿ ದಂಡ ವಿಧಿಸಲಾಗುವುದು. ಇದಕ್ಕೆ ಪರಿಹಾರದ ಮೊತ್ತವನ್ನು ಲೆಕ್ಕಹಾಕಲು ಸೂತ್ರವೊಂದನ್ನು ಸಿದ್ಧಪಡಿಸುವಂತೆ CPCBಗೆ ಸೂಚಿಸಲಾಗಿದ್ದು, ತನಿಖೆಯ ನಂತರ ರಾಜ್ಯಗಳು ಈ ದಂಡವನ್ನು ಮಾಲಿನ್ಯಕಾರಕರು ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಂದ ವಸೂಲಿ ಮಾಡಬಹುದಾಗಿದೆ.

ಕೇವಲ ಹೊಸ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (STPs)  ನಿರ್ಮಿಸುವುದರಿಂದ ನದಿ ಶುದ್ಧವಾಗುವುದಿಲ್ಲ, ಬದಲಾಗಿ ಕೈಗಾರಿಕಾ ತ್ಯಾಜ್ಯ ಮತ್ತು ಸಂಸ್ಕರಿಸದ ಕೊಳಚೆ ನೀರನ್ನು ಮೂಲದಲ್ಲೇ ತಡೆಯಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ‘ಯಮುನಾ ಕ್ರಿಯಾ ಯೋಜನೆ’ಯಲ್ಲಿನ ಗಂಭೀರ ಲೋಪಗಳನ್ನು ನ್ಯಾಯಾಲಯ ಬಯಲಿಗೆಳೆದಿದೆ. ದೆಹಲಿಯ ‘ಝೋನ್ ಒ’  ವ್ಯಾಪ್ತಿಯ 35 ಜಲಮೂಲಗಳು ಮತ್ತು ತೇವಭೂಮಿಗಳಲ್ಲಿ ಯಾವುದೇ ಒತ್ತುವರಿ ಇಲ್ಲ ಎಂದು ಕ್ರಿಯಾ ಯೋಜನೆ ಹೇಳಿದ್ದರೆ, ದೆಹಲಿ ಸರ್ಕಾರದ ಸ್ವಂತ ದಾಖಲೆಗಳೇ ಎಲ್ಲಾ 35 ಜಲಮೂಲಗಳು ಒತ್ತುವರಿಯಾಗಿವೆ ಎಂದು ತೋರಿಸಿವೆ. ಅಲ್ಲದೆ, ದೆಹಲಿಯಲ್ಲಿರುವ 37 ಎಸ್‌ಟಿಪಿಗಳಲ್ಲಿ ಒಂದೇ ಒಂದು ಘಟಕವೂ ನಿಗದಿತ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂಬ ಆಘಾತಕಾರಿ ಅಂಶವನ್ನು ಪೀಠ ಉಲ್ಲೇಖಿಸಿದೆ. ‘ಝೋನ್ ಒ’ ಪ್ರದೇಶವನ್ನು ಹಸಿರು ವಲಯವಾಗಿ ರಕ್ಷಿಸಿ, ಕಾನೂನುಬದ್ಧವಾಗಿ ಒತ್ತುವರಿ ತೆರವುಗೊಳಿಸಲು ಮತ್ತು ಅರ್ಹ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕೋರ್ಟ್ ಸೂಚಿಸಿದೆ.

ಯಮುನಾ ನದಿಯನ್ನು ಒಂದು ಅವಿಭಾಜ್ಯ ಪರಿಸರ ವ್ಯವಸ್ಥೆಯಾಗಿ ಪರಿಗಣಿಸಿ, ‘ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳ’ ತತ್ವದಡಿ ಎಲ್ಲಾ ರಾಜ್ಯಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್, ಕೆಲ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ. 

ಎಲ್ಲಾ ಎಸ್‌ಟಿಪಿಗಳು (STPs), ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು (CETPs) ಮತ್ತು ಸರ್ಕಾರಿ ಬಯೋಗ್ಯಾಸ್ ಘಟಕಗಳಲ್ಲಿ ಒಂದು ತಿಂಗಳೊಳಗೆ ಟ್ಯಾಂಪರ್-ಪ್ರೂಫ್ ಸ್ಮಾರ್ಟ್ ಎನರ್ಜಿ ಮೀಟರ್‌ಗಳನ್ನು ಅಳವಡಿಸಬೇಕು. ಘಟಕಗಳ ಕಾರ್ಯನಿರ್ವಹಣೆ ಮತ್ತು ಹೊರಬಿಡುವ ನೀರಿನ ಗುಣಮಟ್ಟದ ನೇರ ದತ್ತಾಂಶವನ್ನು ಅಪ್‌ಲೋಡ್ ಮಾಡಬೇಕು.

CPCB ಹಾಗೂ ಐಐಟಿ (IIT), ಎನ್‌ಐಟಿ (NIT) ಮತ್ತು ಮಾನ್ಯತೆ ಪಡೆದ ಪ್ರಯೋಗಾಲಯಗಳ ತಜ್ಞರ ತಂಡಕ್ಕೆ ಯಾವುದೇ ಸಮಯದಲ್ಲಿ ದಿಢೀರ್ ಭೇಟಿ ನೀಡಿ ಮಾದರಿ ಸಂಗ್ರಹಿಸಲು, ಲೆಕ್ಕಪರಿಶೋಧನೆ ನಡೆಸಲು ಮುಕ್ತ ಅವಕಾಶ ನೀಡಬೇಕು. CPCB ಪ್ರತಿ ಮೂರು ತಿಂಗಳಿಗೊಮ್ಮೆ ಅನಿರೀಕ್ಷಿತ ತಪಾಸಣೆ ನಡೆಸಲಿದ್ದು, ನಿಯಮ ಉಲ್ಲಂಘನೆಯಾಗುವ ಪ್ರತಿ ದಿನಕ್ಕೂ ಪರಿಸರ ಪರಿಹಾರ ದಂಡ ವಿಧಿಸಬೇಕು.

ಎಲ್ಲಾ ಕೇಂದ್ರ ಮತ್ತು ರಾಜ್ಯ ಇಲಾಖೆಗಳು, ಖಾಸಗಿ ಘಟಕಗಳು CPCBಗೆ ಅಗತ್ಯ ತಾಂತ್ರಿಕ, ಆಡಳಿತಾತ್ಮಕ ಸಹಕಾರ ಮತ್ತು ಸಂಪೂರ್ಣ ದತ್ತಾಂಶವನ್ನು ನೀಡಬೇಕು. ತಪಾಸಣಾ ತಂಡಗಳಿಗೆ ಅಗತ್ಯವಿದ್ದಾಗ ತಕ್ಷಣವೇ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮತ್ತು ಸಶಸ್ತ್ರ ಪೊಲೀಸ್ ಭದ್ರತೆಯನ್ನು ಒದಗಿಸುವಂತೆ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳಿಗೆ ಸೂಚಿಸಲಾಗಿದೆ.

ಹಾಗೇಯೇ ಯಮುನಾ ಜಲಾನಯನ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು ಎರಡು ವಾರಗಳೊಳಗೆ ‘ವಿಶೇಷ ಕಾರ್ಯದರ್ಶಿ’ ದರ್ಜೆಗಿಂತ ಕಡಿಮೆಯಿಲ್ಲದ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಇವರು CPCB ಮತ್ತು ವಿವಿಧ ಇಲಾಖೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿ, ಕಾಲಮಿತಿಯೊಳಗೆ ವರದಿ ಸಲ್ಲಿಕೆಯಾಗುವುದನ್ನು ಖಚಿತಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ...

ECI ಅಫಿಡವಿಟ್‌ನಲ್ಲಿ ‘ಮತ ಕಳವು’ ಆರೋಪಕ್ಕೆ ಉತ್ತರವಿಲ್ಲ: ‘ಸುಪ್ರೀಂ’ಗೆ 48 ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್

'ಮತಗಳ ಕಳವು' (ವೋಟ್ ಚೋರಿ) ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ...

ನಾವು ಉಸಿರಾಡುವ ಗಾಳಿ ಗುಣಮಟ್ಟ ಸೂಚ್ಯಂಕ ಬಚ್ಚಿಟ್ಟಿರುವುದೇನು?

2026ರ ನವೆಂಬರ್ 9ರ ದೀಪಾವಳಿಯ ಸಂದರ್ಭದಲ್ಲಿ ದೆಹಲಿಯ ವಾಯುಮಾಲಿನ್ಯವು ವಿಚಿತ್ರ ವೈರುಧ್ಯವೊಂದನ್ನು...