ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ, ಆದರೆ ಯೋಗ್ಯ ವೇತನವಿಲ್ಲ: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಆತಂಕ

Date:

ಕಂಪನಿಗಳ ಲಾಭ ಹೆಚ್ಚಳವಾಗುತ್ತಿದ್ದರೂ, ಉದ್ಯೋಗಿಗಳಿಗೆ ಸಿಗುತ್ತಿರುವ ವೇತನ ತೃಪ್ತಿಕರವಾಗಿಲ್ಲ ಎಂಬ ಸತ್ಯವನ್ನು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಬಹಿರಂಗಪಡಿಸಿದ್ದಾರೆ. 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಸಂವಾದದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ, ಉದ್ಯೋಗ ಮಾರುಕಟ್ಟೆ ಮತ್ತು ಎಐ ಸವಾಲುಗಳ ಕುರಿತು ಮಹತ್ವದ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡ 7ರ ಆಸುಪಾಸಿನಲ್ಲಿ ಸಾಗುತ್ತಿದ್ದು, ಕಾರ್ಪೊರೇಟ್ ವಲಯ ಭರ್ಜರಿ ಲಾಭ ಗಳಿಸುತ್ತಿದ್ದರೂ, ಜನಸಾಮಾನ್ಯರ ಜೇಬಿಗೆ ತಕ್ಕಷ್ಟು ಆದಾಯ ಸೇರುತ್ತಿಲ್ಲ ಎಂಬ ಕಟು ವಾಸ್ತವವನ್ನು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಡಾ. ವಿ ಅನಂತ ನಾಗೇಶ್ವರನ್ ಬಿಚ್ಚಿಟ್ಟಿದ್ದಾರೆ. “ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ, ಆದರೆ ಅವು ಸಾಕಷ್ಟು ಸಂಬಳ ನೀಡುತ್ತಿವೆಯೇ ಎಂಬುದೇ ಈಗಿರುವ ದೊಡ್ಡ ಸಮಸ್ಯೆ” ಎಂದು ನೇರವಾಗಿ ವಿಶ್ಲೇಷಿಸಿದ್ದಾರೆ.

- Advertisement -

ಪ್ರತಿಷ್ಠಿತ ಆಂಗ್ಲ ದೈನಿಕ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಪಾಲ್ಗೊಂಡು, ಪತ್ರಕರ್ತೆ ಆಂಚಲ್ ಮ್ಯಾಗಜೀನ್ ಮತ್ತು ಹಿರಿಯ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನಾಗೇಶ್ವರನ್, ದೇಶದ ಆರ್ಥಿಕತೆಯ ಪ್ರಸ್ತುತ ಸ್ಥಿತಿಗತಿ, ಉದ್ಯೋಗ ಮಾರುಕಟ್ಟೆಯ ಸವಾಲುಗಳು, ಕೃತಕ ಬುದ್ಧಿಮತ್ತೆ (ಎಐ) ಪ್ರಭಾವ ಮತ್ತು ಸ್ವಾವಲಂಬನೆಯ ಅಗತ್ಯತೆಗಳ ಕುರಿತು ಸಮಗ್ರ ಚಿತ್ರಣವನ್ನು ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಕಂಪನಿಗಳು ಉತ್ತಮ ಲಾಭ ಗಳಿಸುತ್ತಿದ್ದರೂ ಉತ್ಪಾದನಾ ವಲಯದಲ್ಲಿ ನಿರೀಕ್ಷಿತ ಉದ್ಯೋಗ ಸೃಷ್ಟಿಯಾಗುತ್ತಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಶ್ವರನ್, “ನನ್ನ ಪ್ರಕಾರ ನಮ್ಮಲ್ಲಿರುವುದು ಉದ್ಯೋಗದ ಸಮಸ್ಯೆಗಿಂತ ಹೆಚ್ಚಾಗಿ ಆದಾಯದ ಸಮಸ್ಯೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಿಎಂ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಸಲಹೆಗಾರರ ನೇಮಕ; MLC ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ

ವಾರ್ಷಿಕ ಕೈಗಾರಿಕಾ ಸಮೀಕ್ಷೆ (ಎಎಸ್‌ಐ) ಮತ್ತು ‘ನೌಕರಿ ಡಾಟ್ ಕಾಮ್’ನಂತಹ ಖಾಸಗಿ ವಲಯದ ದತ್ತಾಂಶಗಳನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಆದರೆ, ಪೂರ್ಣಾವಧಿ ಉದ್ಯೋಗಗಳಿಗೆ ಹೋಲಿಸಿದರೆ ಹೆಚ್ಚಿನ ಸಂಬಳ ಅಥವಾ ನಿಯಮಿತ ವೇತನ ಹೆಚ್ಚಳವಿಲ್ಲದ ‘ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರಿತ ಉದ್ಯೋಗಗಳು’ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು. ಕೋವಿಡ್ ನಂತರದ ಆರ್ಥಿಕ ಚೇತರಿಕೆಯು ಜಾಗತಿಕವಾಗಿ ಉದ್ಯೋಗ ಮತ್ತು ಆದಾಯಕ್ಕಿಂತ ಹೆಚ್ಚಾಗಿ ಬಂಡವಾಳ ಮತ್ತು ಲಾಭ ಕೇಂದ್ರಿತವಾಗಿರುವುದನ್ನು ಗುರುತಿಸಿದರು.

ಮುಂದಿನ 5 ರಿಂದ 10 ವರ್ಷಗಳಲ್ಲಿ ದೇಶದ ಜನಸಂಖ್ಯಾ ಲಾಭಾಂಶವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ವೇತನದ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ಕೈಗೊಳ್ಳುತ್ತಿರುವ ಐದು ಪ್ರಮುಖ ಕ್ರಮಗಳನ್ನು ನಾಗೇಶ್ವರನ್ ವಿವರಿಸಿದ್ದಾರೆ.

  1. ಉದ್ಯೋಗ ಆಧಾರಿತ ನೀತಿಗಳು: 2024ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಪ್ರೋತ್ಸಾಹಧನ, ಇಂಟರ್ನ್‌ಶಿಪ್ ಮತ್ತು ಕಾರ್ಪೊರೇಟ್ ಅಪ್ರೆಂಟಿಸ್‌ಶಿಪ್ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
  2. ಮುಕ್ತ ವ್ಯಾಪಾರ ಒಪ್ಪಂದಗಳು (FTAs): ಕಾರ್ಮಿಕ ಆಧಾರಿತ ಸರಕು ಮತ್ತು ಸೇವೆಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ವಿವಿಧ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಜವಳಿ, ಸೀಗಡಿ ಕೃಷಿ, ಚರ್ಮ ಮತ್ತು ಪಾದರಕ್ಷೆ ಉದ್ಯಮಗಳಿಗೆ ಇದರಿಂದ ಭಾರಿ ಲಾಭವಾಗಲಿದೆ.
  3. ನಿಯಂತ್ರಣ ಸಡಿಲಿಕೆ (Deregulation): ರಾಜ್ಯಗಳ ಮಟ್ಟದಲ್ಲಿ ಅನಗತ್ಯ ನಿಯಮಗಳನ್ನು ಸಡಿಲಗೊಳಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವೆಚ್ಚವನ್ನು ತಗ್ಗಿಸಲಾಗುತ್ತಿದೆ. ಏಕೆಂದರೆ ಅತಿ ಹೆಚ್ಚು ಉದ್ಯೋಗ ನೀಡುವ ವಲಯ ಇದಾಗಿದೆ.
  4. ಕೃಷಿ ವಲಯದಲ್ಲಿ ಹೂಡಿಕೆ: ಜಾಗತಿಕ ಕೃಷಿ ಮಾರುಕಟ್ಟೆ 2.5 ಟ್ರಿಲಿಯನ್ ಡಾಲರ್‌ನಷ್ಟಿದ್ದು, ಇದರಲ್ಲಿ ಭಾರತ ಕೇವಲ ಶೇ. 4ರಷ್ಟು ಪಾಲು ಹೊಂದಿದೆ. ಕೃಷಿ ಮತ್ತು ಕೃಷಿ ಸಂಸ್ಕರಣಾ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದರಿಂದ ಉತ್ಪಾದಕತೆ ಮತ್ತು ಆದಾಯ ಎರಡೂ ಹೆಚ್ಚಾಗಲಿದೆ.
  5. ಕೌಶಲ್ಯಾಭಿವೃದ್ಧಿ: ವ್ಯಾಪಾರ ಸಂಬಂಧಿತ ಕೌಶಲ್ಯಗಳು ಮತ್ತು ಮಾನವ ಕೇಂದ್ರಿತ ಸೇವೆಗಳಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದೆ.

ಎಐ ದೇಶದ ಆರ್ಥಿಕತೆಗೆ ಸಿಕ್ಕ ವರದಾನ!

ಕೃತಕ ಬುದ್ಧಿಮತ್ತೆ (ಎಐ) ವಲಯದಲ್ಲಿನ ಷೇರುಗಳ ಮೌಲ್ಯಮಾಪನದ ಏರಿಳಿತಗಳ ಬಗ್ಗೆ ಮಾತನಾಡಿದ ನಾಗೇಶ್ವರನ್, “ಕಳೆದ ಎರಡು ವರ್ಷಗಳಲ್ಲಿ ಎಐ ಪರಿಸರ ವ್ಯವಸ್ಥೆಯಲ್ಲಿ ದೇಶದ ದೊಡ್ಡ ಮಟ್ಟದ ಭಾಗಿದಾರನಾಗಿರಲಿಲ್ಲ. ಆದರೆ, ಈಗ ಜಾಗತಿಕ ಮಟ್ಟದಲ್ಲಿ ಎಐ ಷೇರುಗಳ ಮೌಲ್ಯ ಕುಸಿದಾಗ, ‘ನಾನ್-ಎಐ’ ಮಾರುಕಟ್ಟೆಯಾಗಿರುವ ದೇಶಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಒಲವು ಹೆಚ್ಚಾಗುತ್ತಿದೆ” ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: ಲಕ್ಷ ಉದ್ಯೋಗ ಸೃಷ್ಟಿ: ಸರ್ಕಾರದ ಭರವಸೆ ಹುಸಿಯಾದರೆ ಮರುಕಳಿಸುವುದೇ ಧಾರವಾಡದ ಹೋರಾಟ?

ಅಲ್ಲದೆ, ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪಾರಾಗಲು ‘ಮಾನವನ ಹಸ್ತಕ್ಷೇಪ ಅತ್ಯಗತ್ಯವಿರುವ’ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಕೌಶಲ್ಯಗಳಿಗೆ ದೇಶದ ಒಳಗೆ ಮತ್ತು ಹೊರಗೆ ಭಾರಿ ಬೇಡಿಕೆಯಿದ್ದು, ಇವು ‘ಎಐ-ನಿರೋಧಕ’ ಉದ್ಯೋಗಗಳಾಗಿರಲಿವೆ ಎಂದು ಭರವಸೆ ನೀಡಿದರು.

ಇನ್ನು ಚುನಾವಣೆಗಳ ಹಿನ್ನೆಲೆಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ಘೋಷಿಸುತ್ತಿರುವ ನಿರುದ್ಯೋಗ ಭತ್ಯೆ ಮತ್ತು ಮಹಿಳೆಯರಿಗೆ ನಗದು ವರ್ಗಾವಣೆ ಯೋಜನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಉದ್ಯೋಗ ಸೃಷ್ಟಿಸಲು ಸಾಧ್ಯವಾಗದಿದ್ದಾಗ ರಾಜಕೀಯ ಪಕ್ಷಗಳು ಭತ್ಯೆಗಳನ್ನು ನೀಡುತ್ತವೆ. ಆದರೆ, ಈ ಭತ್ಯೆಗಳು ರಾಜ್ಯಗಳ ಆರ್ಥಿಕತೆಯ ಮೇಲೆ ದೊಡ್ಡ ಹೊರೆಯಾಗುತ್ತಿದ್ದು, ಮೂಲಸೌಕರ್ಯ ಮತ್ತು ಉತ್ಪಾದಕ ಹೂಡಿಕೆಗಳನ್ನು ಮಾಡದಂತೆ ರಾಜ್ಯಗಳನ್ನು ಕಟ್ಟಿಹಾಕುತ್ತಿವೆ. ನಿರುದ್ಯೋಗ ಭತ್ಯೆಯಿಂದ ನಿರುದ್ಯೋಗ ಸಮಸ್ಯೆ ಎಂದಿಗೂ ಬಗೆಹರಿದಿಲ್ಲ” ಎಂದು ಎಚ್ಚರಿಸಿದರು.

ಮುಂದಿನ ದಶಕಗಳು ಕೇವಲ ಇಂಧನ ಮತ್ತು ಸರಕುಗಳಿಗಾಗಿ ಮಾತ್ರವಲ್ಲ, ತಂತ್ರಜ್ಞಾನ ಮತ್ತು ಬಂಡವಾಳಕ್ಕಾಗಿ ನಡೆಯುವ ಸ್ಪರ್ಧೆಯಾಗಿರಲಿವೆ. ಚೀನಾ ಸುರಂಗ ಕೊರೆಯುವ ಯಂತ್ರಗಳ (ಟಿಬಿಎಂ) ರಫ್ತಿನ ಮೇಲೆ ನಿರ್ಬಂಧ ಹೇರಿರುವಂತಹ ಘಟನೆಗಳು ನಮಗೆ ಸ್ವಾವಲಂಬನೆಯ ಪಾಠ ಕಲಿಸಿವೆ ಎಂದರು.

ಇನ್ನು, ಜಾಗತಿಕ ಹವಾಮಾನ ಸಮ್ಮೇಳನಗಳಲ್ಲಿ (COP31) ಹವಾಮಾನ ಬದಲಾವಣೆಯ ವಿಷಯ ಹಿಂದಕ್ಕೆ ಸರಿಯುತ್ತಿದ್ದರೂ, ಭಾರತದಂತಹ ದೇಶಕ್ಕೆ ಇದು ಅತ್ಯಂತ ಗಂಭೀರ ವಿಷಯವಾಗಿದೆ. ನಾವು ಇಂಗಾಲ ಹೊರಸೂಸುವಿಕೆ ತಗ್ಗಿಸುವುದಕ್ಕಿಂತ ಹೆಚ್ಚಾಗಿ, ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ನೀರಾವರಿ ಮೂಲಸೌಕರ್ಯ ಮತ್ತು ಕೃಷಿ ವಲಯದ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ಕಚ್ಚಾ ತೈಲ ಬೆಲೆಯ ಏರಿಳಿತ ಮತ್ತು ಜಾಗತಿಕ ಅನಿಶ್ಚಿತತೆಗಳ ನಡುವೆಯೂ ದೇಶದ ಆರ್ಥಿಕತೆ ಶೇ. 7ರಷ್ಟು ವೃದ್ಧಿ ದರವನ್ನು ಕಾಯ್ದುಕೊಳ್ಳುವ ವಿಶ್ವಾಸವನ್ನು ಮುಖ್ಯ ಆರ್ಥಿಕ ಸಲಹೆಗಾರರು ವ್ಯಕ್ತಪಡಿಸಿದ್ದಾರೆ. ಆದಾಯ ತೆರಿಗೆ ಕಡಿತ, ಜಿಎಸ್‌ಟಿ ದರ ಇಳಿಕೆ ಮತ್ತು ಕಡಿಮೆ ಹಣದುಬ್ಬರದಿಂದಾಗಿ ಜನರ ಖರೀದಿ ಸಾಮರ್ಥ್ಯ ಸುಧಾರಿಸಿದೆ. ಆದರೆ, ದೇಶದ ಆರ್ಥಿಕ ಬೆಳವಣಿಗೆಯ ನಿಜವಾದ ಫಲ ಕಟ್ಟಕಡೆಯ ಕಾರ್ಮಿಕನಿಗೆ ತಲುಪಬೇಕಾದರೆ, ಕೇವಲ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ‘ಗೌರವಯುತ ಮತ್ತು ಯೋಗ್ಯ ವೇತನ’ ನೀಡುವ ವ್ಯವಸ್ಥೆಯನ್ನು ನಿರ್ಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದನ್ನು ಈ ಸಂವಾದ ಸ್ಪಷ್ಟವಾಗಿ ಸಾರಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಗಮ-ಮಂಡಳಿ ನೇಮಕದಲ್ಲಿ RSS ಕಾರ್ಯಕರ್ತನಿಗೆ ಮಣೆ; ಕಾಂಗ್ರೆಸ್‌ನೊಳಗೇ ಭಾರೀ ಆಕ್ರೋಶ!

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡ್ಯ ಜಿಲ್ಲೆಯ 14 ಮಂದಿಗೆ...

ಶಿವಮೊಗ್ಗ ವಿಮಾನ ನಿಲ್ದಾಣದ ಖಾಸಗೀಕರಣಕ್ಕೆ ಆಸ್ಪದವಿಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ...

₹227 ಕೋಟಿ ವನ್ಯಜೀವಿ ಶುಲ್ಕವನ್ನು ₹2.27 ಕೋಟಿಗೆ ಇಳಿಸಿದ್ದ ಅದಾನಿ ಯೋಜನೆಗೆ ಬ್ರೇಕ್!

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸಂಸ್ಥೆಯ 'ತಾರಲಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್...