ನಾವು ಉಸಿರಾಡುವ ಗಾಳಿ ಗುಣಮಟ್ಟ ಸೂಚ್ಯಂಕ ಬಚ್ಚಿಟ್ಟಿರುವುದೇನು?

Date:

2026ರ ನವೆಂಬರ್ 9ರ ದೀಪಾವಳಿಯ ಸಂದರ್ಭದಲ್ಲಿ ದೆಹಲಿಯ ವಾಯುಮಾಲಿನ್ಯವು ವಿಚಿತ್ರ ವೈರುಧ್ಯವೊಂದನ್ನು ತೆರೆದಿಟ್ಟಿತು. ಒಂದೆಡೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಸುಮಾರು 370 ಇದೆ ಎಂದು ವರದಿ ಮಾಡಿದರೆ, ಖಾಸಗಿ ವೇದಿಕೆಗಳು 260 ರಿಂದ ಬರೋಬ್ಬರಿ 1,700ಕ್ಕೂ ಹೆಚ್ಚಿನ ಅಂಕಿ-ಅಂಶಗಳನ್ನು ತೋರಿಸುತ್ತಿದ್ದವು. ಒಂದೇ ನಗರದಲ್ಲಿ ಇಷ್ಟೊಂದು ಭಿನ್ನವಾದ ಅಂಕಿ-ಅಂಶಗಳು ಬರಲು ಹೇಗೆ ಸಾಧ್ಯ? ಎಲ್ಲಕ್ಕಿಂತ ಮುಖ್ಯವಾಗಿ, ಜನರು ನಿಜವಾಗಿಯೂ ಉಸಿರಾಡುತ್ತಿದ್ದ ವಿಷಗಾಳಿಯ ಪ್ರಮಾಣವನ್ನು ಇವುಗಳಲ್ಲಿ ಯಾವುದು ಪ್ರತಿನಿಧಿಸುತ್ತಿತ್ತು? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. 

- Advertisement -

ಭಾರತವು CPCB ಅಭಿವೃದ್ಧಿಪಡಿಸಿದ ತನ್ನದೇ ಆದ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು ಬಳಸುತ್ತದೆ. ಇದು ಪ್ರಮುಖ ಎಂಟು ಮಾಲಿನ್ಯಕಾರಕಗಳ ಸಾಂದ್ರತೆಯನ್ನು ಆಧರಿಸಿ 0 ರಿಂದ 500ರವರೆಗೆ ಅಂಕಗಳನ್ನು ನೀಡುತ್ತದೆ. ಆದರೆ, ‘ಐಕ್ಯೂಏರ್’ (IQAir) ನಂತಹ ಖಾಸಗಿ ವೇದಿಕೆಗಳು ಸಾಮಾನ್ಯವಾಗಿ ಅಮೆರಿಕದ ಮಾನದಂಡವನ್ನು ಅನುಸರಿಸುತ್ತವೆ. ಇವುಗಳ ಮಾಲಿನ್ಯದ ಮಿತಿಗಳು ಮತ್ತು ಲೆಕ್ಕಾಚಾರದ ವಿಧಾನವೇ ಬೇರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಂಘೈ ಕೌಶಲ್ಯ ಶೃಂಗಸಭೆಯಲ್ಲಿ ಮಿಂಚಿದ ಕರ್ನಾಟಕದ ಪ್ರತಿಭೆಗಳು…ಪದಕಗಳ ಸೂರೆ

ಚೀನಾದ ಶಾಂಘೈನಲ್ಲಿ ನಡೆದ ಜಾಗತಿಕ 'ಕೌಶಲ್ಯ ಒಲಿಂಪಿಕ್ಸ್' ವೇದಿಕೆಯಲ್ಲಿ ನಮ್ಮ ಕರುನಾಡಿನ ಯುವಪ್ರತಿಭೆಗಳು ಹೊಸ ಇತಿಹಾಸ ಬರೆದಿದ್ದಾರೆ. ಕೇವಲ ಕನಸುಗಳನ್ನಷ್ಟೇ ಹೊತ್ತೊಯ್ದಿದ್ದ ನಮ್ಮ ನಾಡಿನ ಪ್ರತಿಭೆಗಳು, ತಮ್ಮ ಬೆವರು, ಕಠಿಣ ಪರಿಶ್ರಮ ಹಾಗೂ...

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ...

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ ಘನತೆ-ಗಾಂಧೀಜಿ ಪ್ರತಿಪಾದಿಸಿದ ಈ ಮೂರು ಮೌಲ್ಯಗಳು ಇಂದಿನ ಅಸಮಾನತೆಯ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದರೆ ಅವುಗಳನ್ನು ವೈಯಕ್ತಿಕ ಬದುಕು, ಸಾಮಾಜಿಕ...

ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ...

ಜಾಗತಿಕ ಆರ್ಥಿಕತೆಯು ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಗಳ ನಡುವೆ ತೊಳಲಾಡುತ್ತಿರುವ ಹೊತ್ತಿನಲ್ಲಿ, ಭಾರತದ ಆರ್ಥಿಕತೆಯ ನಿಜವಾದ ಸ್ಥಿತಿಗತಿ ಏನು? ನಾವು ಸಾಗುತ್ತಿರುವ ಹಾದಿ ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬಲ್ಲದೇ? ಈ...

ಸಮಯದ ಅವಧಿಯೂ ಇಲ್ಲಿ ಮುಖ್ಯವಾಗುತ್ತದೆ. ಭಾರತದ ಅಧಿಕೃತ AQI ಕಣಗಳ ಮಾಲಿನ್ಯಕ್ಕೆ (PM2.5/PM10) ಕಳೆದ 24 ಗಂಟೆಗಳ ಸರಾಸರಿಯನ್ನು ಪರಿಗಣಿಸಿದರೆ, ಖಾಸಗಿ ವೇದಿಕೆಗಳು ಕ್ಷಣಕ್ಷಣದ ಅಥವಾ ಅಲ್ಪಾವಧಿಯ ಏರಿಳಿತಗಳನ್ನು ತೋರಿಸುತ್ತವೆ. ಉದಾಹರಣೆಗೆ, ದಿನವಿಡೀ PM2.5 ಮಟ್ಟ 100 µg/m³ (ಮೈಕ್ರೋಗ್ರಾಮ್ ಪರ್ ಕ್ಯೂಬಿಕ್ ಮೀಟರ್ ) ಇದ್ದು, ರಾತ್ರಿ ದಿಢೀರನೆ 500 µg/m³ ಗೆ ಏರಿದರೆ, 24 ಗಂಟೆಗಳ ಸರಾಸರಿ ಲೆಕ್ಕಾಚಾರವು ಆ ದಿಢೀರ್ ಏರಿಕೆಯನ್ನು ಮರೆಮಾಚುತ್ತದೆ. ಆದರೆ, ಆ ಸಮಯದಲ್ಲಿ ಹೊರಗಿರುವ ಜನರು ತೀವ್ರ ವಿಷಕಾರಿ ಗಾಳಿಯನ್ನೇ ಉಸಿರಾಡುತ್ತಿರುತ್ತಾರೆ.

ಒಂದೇ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ತೀವ್ರ ಭಿನ್ನವಾಗಿರುತ್ತದೆ. ವಿವಿಧ ಮಾಪನ ಕೇಂದ್ರಗಳ ಅಂಕಿ-ಅಂಶಗಳ ಸರಾಸರಿ ತೆಗೆಯುವುದು ವೈಜ್ಞಾನಿಕವಾಗಿ ಸರಿಯಲ್ಲ ಎಂದು CPCB ಪೋರ್ಟಲ್ ಸ್ವತಃ ಒಪ್ಪಿಕೊಂಡಿದೆ. ಮೂರು ಕೇಂದ್ರಗಳಲ್ಲಿ ಕ್ರಮವಾಗಿ 150, 300 ಮತ್ತು 450 AQI ದಾಖಲಾದರೆ, ನಗರದ ಸರಾಸರಿ 300 ಎಂದು ತೋರಿಸಲಾಗುತ್ತದೆ. ಆದರೆ 450 ದಾಖಲಾದ ಪ್ರದೇಶದ ನಿವಾಸಿಗಳು ಅನುಭವಿಸುವ ನರಕಯಾತನೆ ಈ ಸರಾಸರಿ ಅಂಕಿಯಲ್ಲಿ ಕಾಣಿಸುವುದೇ ಇಲ್ಲ.

ದೀಪಾವಳಿಯ ಮಾಲಿನ್ಯವು ಮತ್ತೊಂದು ಗಂಭೀರ ಲೋಪವನ್ನು ಬಯಲು ಮಾಡಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ತನಿಖೆಯ ಪ್ರಕಾರ, ದೆಹಲಿಯ 59 ಮಾಪನ ಕೇಂದ್ರಗಳ ಪೈಕಿ 45 ಕೇಂದ್ರಗಳಲ್ಲಿ ಕನಿಷ್ಠ ಒಂದು ಮಾಲಿನ್ಯಕಾರಕದ ಗಂಟೆಯ ದತ್ತಾಂಶಗಳೇ ಕಾಣೆಯಾಗಿದ್ದವು. ಅತಿಹೆಚ್ಚು ಮಾಲಿನ್ಯವಿದ್ದ ಸಮಯದಲ್ಲಿ 1,000 µg/m³ ಗಿಂತ ಹೆಚ್ಚಿನ ದಾಖಲೆಗಳು CPCB ಪಟ್ಟಿಯಿಂದ ನಾಪತ್ತೆಯಾಗಿದ್ದವು. ಉದಾಹರಣೆಗೆ, ಮುಂಡ್ಕಾ ಕೇಂದ್ರದಲ್ಲಿ ರಾತ್ರಿ ವೇಳೆ PM2.5 ಮಟ್ಟ 3,744 µg/m³ ತಲುಪಿತ್ತು. ಅಲ್ಲದೆ, ಭಾರತದ AQI ಮಾಪಕವು 500ಕ್ಕೆ ನಿಂತುಬಿಡುತ್ತದೆ. ಮಾಲಿನ್ಯ ಎಷ್ಟೇ ತೀವ್ರವಾದರೂ 500ಕ್ಕಿಂತ ಹೆಚ್ಚಿನ ಭೀಕರತೆಯನ್ನು ತೋರಿಸುವ ಸಾಮರ್ಥ್ಯ ಈ ಸೂಚ್ಯಂಕಕ್ಕಿಲ್ಲ.

ಗಾಳಿಯಲ್ಲಿನ ಅತಿಸೂಕ್ಷ್ಮ ಧೂಳಿನ ಕಣಗಳ (PM2.5) ಸುರಕ್ಷಿತ ಮಿತಿಯನ್ನು ನಿಗದಿಪಡಿಸುವಲ್ಲಿ ಭಾರತದ ಮಾನದಂಡಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಿಂತ ಎಷ್ಟೋ ಪಟ್ಟು ಸಡಿಲವಾಗಿವೆ. ಒಂದು ದಿನದ (24 ಗಂಟೆಗಳ) ಸರಾಸರಿಯನ್ನು ತೆಗೆದುಕೊಂಡರೆ, ಪ್ರತಿ ಘನ ಮೀಟರ್ ಗಾಳಿಯಲ್ಲಿ 15 ಮೈಕ್ರೋಗ್ರಾಮ್‌ಗಿಂತ ಹೆಚ್ಚು ಮಾಲಿನ್ಯ ಇರಬಾರದು ಎಂದು WHO ಹೇಳುತ್ತದೆ. ಆದರೆ ಭಾರತದಲ್ಲಿ ಈ ಮಿತಿ 60 ಮೈಕ್ರೋಗ್ರಾಮ್‌ವರೆಗೂ ಇದೆ (ಅಂದರೆ 4 ಪಟ್ಟು ಹೆಚ್ಚು). ಇನ್ನು ವಾರ್ಷಿಕ ಸರಾಸರಿಯ ವಿಚಾರಕ್ಕೆ ಬಂದರೆ, WHO ನಿಗದಿಪಡಿಸಿರುವ ಸುರಕ್ಷಿತ ಮಿತಿ ಕೇವಲ 5 ಮೈಕ್ರೋಗ್ರಾಮ್ ಆಗಿದ್ದರೆ, ಭಾರತದ ಕಾನೂನು 40 ಮೈಕ್ರೋಗ್ರಾಮ್‌ವರೆಗೂ ಅವಕಾಶ ನೀಡುತ್ತದೆ. ಇದು ಜಾಗತಿಕ ಆರೋಗ್ಯ ಮಾರ್ಗಸೂಚಿಗಿಂತ ಬರೋಬ್ಬರಿ 8 ಪಟ್ಟು ಹೆಚ್ಚಾಗಿದೆ.

ಅಂದರೆ, ಭಾರತದ ನಿಯಮಗಳ ಪ್ರಕಾರ ‘ಸುರಕ್ಷಿತ’ ಎನಿಸಿಕೊಳ್ಳುವ ಗಾಳಿಯು, WHO ಪ್ರಕಾರ ಆರೋಗ್ಯಕ್ಕೆ 7 ಪಟ್ಟು ಹೆಚ್ಚು ಅಪಾಯಕಾರಿಯಾಗಿರಬಹುದು.

ಹಾಗೆಂದು ಖಾಸಗಿ ಸೆನ್ಸಾರ್‌ಗಳೇ ಸಂಪೂರ್ಣ ನಿಖರ ಎಂದರ್ಥವಲ್ಲ. ಗಾಳಿಯಲ್ಲಿನ ತೇವಾಂಶ ಮತ್ತು ಸೆನ್ಸಾರ್ ಗುಣಮಟ್ಟದಿಂದ ಅವುಗಳಲ್ಲೂ ವ್ಯತ್ಯಾಸವಾಗಬಹುದು. ಅಂತಿಮವಾಗಿ, ಮೊಬೈಲ್ ಪರದೆಯ ಮೇಲೆ ಕಾಣುವ AQI ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ನಾವು ಉಸಿರಾಡುವ ಗಾಳಿ ಶುದ್ಧವಾಗುವುದಿಲ್ಲ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಧನ-ಆಹಾರ ದರ ಏರಿಕೆ: ಅಕ್ಟೋಬರ್ ಸಗಟು ಹಣದುಬ್ಬರ 12.29%ಗೆ ಜಿಗಿತ!

ದೇಶದ ಜನಸಾಮಾನ್ಯರು ಮತ್ತು ಉದ್ಯಮ ವಲಯಕ್ಕೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು...

ವಿದ್ಯಾರ್ಥಿಗಳೆದರು ಹರೀಶ್ ಪೂಂಜಾ ದ್ವೇಷ ಭಾಷಣ; ಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಸೂಚನೆ

ಜನಪ್ರತಿನಿಧಿಯಾಗಿ ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಶಾಲಾ ಮಕ್ಕಳ...

ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ ಕುರಿತು ರಘುರಾಮ್ ರಾಜನ್ ಒಳನೋಟ

ಜಾಗತಿಕ ಆರ್ಥಿಕತೆಯು ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಗಳ ನಡುವೆ...

ಕುಮಟಾ–ಹೊನ್ನಾವರ ಕ್ಷೇತ್ರಕ್ಕೆ ರೂ.12 ಲಕ್ಷ ಅನುದಾನ; ಮನ್ಸೂರ್ ಅಲಿ ಖಾನ್‌ಗೆ ನಿವೇದಿತ್ ಆಳ್ವಾ ಕೃತಜ್ಞತೆ

ಕುಮಟಾ–ಹೊನ್ನಾವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳ...