ಅಂಕಿತಾ ಭಂಡಾರಿ ಪ್ರಕರಣ: ಅಪರಾಧಿ ಪುಲ್ಕಿತ್ ಆರ್ಯ ತಂದೆ ವಿರುದ್ಧ ದೂರು

Date:

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಪುಲ್ಕಿತ್ ಆರ್ಯನ ತಂದೆ ವಿನೋದ್ ಆರ್ಯ ವಿರುದ್ಧ ಸೋಮವಾರ ಪೊಲೀಸ್ ದೂರು ದಾಖಲಾಗಿದೆ. ಸಂತ್ರಸ್ತೆಯ ಖಾಸಗಿ ಚಾಟ್‌ಗಳನ್ನು ಬಹಿರಂಗಪಡಿಸಿ, ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಈ ದೂರು ನೀಡಲಾಗಿದೆ.

- Advertisement -

​ಭಾನುವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ವಿನೋದ್ ಆರ್ಯ, ರಾಜಕೀಯ ಒತ್ತಡದಿಂದಾಗಿ ತಮ್ಮ ಮಗನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ‘ಅಂಕಿತಾ ಕೊಲೆಯಾಗಿಲ್ಲ, ಪೋಷಕರು ಮತ್ತು ಆಕೆಯ ಸ್ನೇಹಿತನ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಹೇಳಿ, ಅಂಕಿತಾ ಹಾಗೂ ಆಕೆಯ ಸ್ನೇಹಿತನ ನಡುವಿನ 4,000 ಪುಟಗಳ Whatsapp ಚಾಟ್‌ಗಳನ್ನು ಬಿಡುಗಡೆ ಮಾಡಿದ್ದರು. ಜೊತೆಗೆ ಈ ಬಗ್ಗೆ ಸಿಬಿಐ ತನಿಖೆಗೂ ಆಗ್ರಹಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

​ವಿನೋದ್ ಆರ್ಯ ಅವರ ಈ ನಡೆಯನ್ನು ಖಂಡಿಸಿ ‘ಪಹಾಡಿ ಮಹಾಸಭಾ’ ಸಂಘಟನೆಯ ಪದಾಧಿಕಾರಿಗಳು ಸೋಮವಾರ ನಗರದ ಪೊಲೀಸ್ ಠಾಣೆ (ನಗರ ಕೊತ್ವಾಲಿ) ಎದುರು ಪ್ರತಿಭಟನೆ ನಡೆಸಿದರು. ಖಾಸಗಿ ಚಾಟ್‌ಗಳ ಬಹಿರಂಗಪಡಿಸುವಿಕೆಯು ಆಕೆಯ ಖಾಸಗಿತನದ ಸ್ಪಷ್ಟ ಉಲ್ಲಂಘನೆಯಾಗಿದ್ದು, ವಿನೋದ್ ಆರ್ಯ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಔಪಚಾರಿಕ ದೂರು ಸಲ್ಲಿಸಿದರು.

​ಪಹಾಡಿ ಮಹಾಸಭಾದ ಅಧ್ಯಕ್ಷ ತರುಣ್ ವ್ಯಾಸ್ ಮಾತನಾಡಿ, “ಅಂಕಿತಾ ಭಂಡಾರಿ ಕೇವಲ ಒಂದು ಕುಟುಂಬದ ಮಗಳಲ್ಲ, ಇಡೀ ಉತ್ತರಾಖಂಡ ರಾಜ್ಯದ ಮಗಳು. ಈ ಸೂಕ್ಷ್ಮ ಪ್ರಕರಣದಲ್ಲಿ ಮೃತಳ ಖಾಸಗಿ ಸಂಭಾಷಣೆಗಳನ್ನು ಸಾರ್ವಜನಿಕಗೊಳಿಸುವುದು ಆಕೆಯ ಘನತೆಗೆ ಮಾಡಿದ ಅಪಚಾರ. ಅಂಕಿತಾ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ, ಇದರ ನಡುವೆ ವಿನೋದ್ ಆರ್ಯ ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಾಟ್‌ಗಳ ಮೂಲದ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

​ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ ಪುರೋಹಿತ್ ಮಾತನಾಡಿ, ನ್ಯಾಯಕ್ಕಾಗಿ ಹೋರಾಡುತ್ತಿರುವ ಅಂಕಿತಾ ಪೋಷಕರ ಪರವಾಗಿ ಇಡೀ ಉತ್ತರಾಖಂಡವೇ ನಿಂತಿದೆ. ಆದರೆ, ಈ ರೀತಿ ಚಾಟ್‌ಗಳನ್ನು ಲೀಕ್ ಮಾಡಿರುವುದು ಜನರ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ. ಪ್ರಕರಣದಲ್ಲಿ ಇತರರ ಕೈವಾಡವಿರುವ ಶಂಕೆಯಿದ್ದು, ಪೊಲೀಸರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

​ರಿಷಿಕೇಶ ಸಮೀಪದ ವಂತರಾ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಅಂಕಿತಾಳನ್ನು 2022ರ ಸೆಪ್ಟೆಂಬರ್ 18ರಂದು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹಾಗೂ ಆತನ ಸಿಬ್ಬಂದಿಗಳಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಕೊಲೆ ಮಾಡಿದ್ದರು. ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

​ಇದೇ ಪ್ರಕರಣದಲ್ಲಿ ‘ವಿಐಪಿ’ಯೊಬ್ಬರ ಪಾತ್ರವಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಶಿಫಾರಸಿನ ಮೇರೆಗೆ, ಸಿಬಿಐ ಇದೇ ವರ್ಷದ ಫೆಬ್ರವರಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ. ಅಂಕಿತಾ ಪೋಷಕರ ಸತತ ಒತ್ತಾಯದ ಮೇರೆಗೆ ಈ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ ವಿಮಾನ ನಿಲ್ದಾಣದ ಖಾಸಗೀಕರಣಕ್ಕೆ ಆಸ್ಪದವಿಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ...

₹227 ಕೋಟಿ ವನ್ಯಜೀವಿ ಶುಲ್ಕವನ್ನು ₹2.27 ಕೋಟಿಗೆ ಇಳಿಸಿದ್ದ ಅದಾನಿ ಯೋಜನೆಗೆ ಬ್ರೇಕ್!

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸಂಸ್ಥೆಯ 'ತಾರಲಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್...

ಶಾಂಘೈ ಕೌಶಲ್ಯ ಶೃಂಗಸಭೆಯಲ್ಲಿ ಮಿಂಚಿದ ಕರ್ನಾಟಕದ ಪ್ರತಿಭೆಗಳು…ಪದಕಗಳ ಸೂರೆ

ಚೀನಾದ ಶಾಂಘೈನಲ್ಲಿ ನಡೆದ ಜಾಗತಿಕ 'ಕೌಶಲ್ಯ ಒಲಿಂಪಿಕ್ಸ್' ವೇದಿಕೆಯಲ್ಲಿ ನಮ್ಮ ಕರುನಾಡಿನ...