ಅದಾನಿ ಪವರ್‌ನಿಂದ ವಿದ್ಯುತ್‌ ಖರೀದಿಸಿದ ನಂತರ ಗುಜರಾತ್‌ನಲ್ಲಿ ಶೇ.102ರಷ್ಟು ವಿದ್ಯುತ್‌ ದರ ಏರಿಕೆ

Date:

ಗುಜರಾತ್ ಸರ್ಕಾರವು ಅದಾನಿ ಪವರ್‌ನಿಂದ 2021 ಮತ್ತು 2022ರ ನಡುವೆ ವಿದ್ಯುತ್‌ ಖರೀದಿಸಿದ ನಂತರ ವಿದ್ಯುತ್‌ ದರ ಏರಿಕೆ ಶೇ. 102 ರಷ್ಟು ಹೆಚ್ಚಾಗಿದೆ.  

ಗುಜರಾತ್‌ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಹೇಮಂತ್ ಅಹಿರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಇಂಧನ ಸಚಿವ ಕನು ದೇಸಾಯಿ ಅವರು, ಅದಾನಿ ಪವರ್‌ನಿಂದ ಖರೀದಿಸಿದ ವಿದ್ಯುತ್ ವೆಚ್ಚವು ಶೇ. 102 ರಷ್ಟು ಹೆಚ್ಚಾಗಿದೆ, 2022 ರಲ್ಲಿ ಪ್ರತಿ ಯೂನಿಟ್‌ಗೆ ರೂ 3.58 ರಿಂದ ರೂ. 7.24 ಕ್ಕೆ ಏರಿಕೆಯಾಗಿದೆ ಎಂದು ಸದನಕ್ಕೆ ತಿಳಿಸಿದರು.

ಅದಾನಿ ಪವರ್ ವಿದ್ಯುತ್‌ನ ಒಂದು ಯೂನಿಟ್ ಬೆಲೆ 2021ರ ಜನವರಿಯಲ್ಲಿ ರೂ. 2.83 ರಿಂದ ಡಿಸೆಂಬರ್ 2022 ರಲ್ಲಿ ರೂ. 8.83ಕ್ಕೆ ಜಿಗಿದಿದೆ. ಬೆಲೆ ಏರಿಕೆಯ ಹೊರತಾಗಿಯೂ, ರಾಜ್ಯ ಸರ್ಕಾರವು 2021ಕ್ಕಿಂತ 2022ರಲ್ಲಿ ಅದಾನಿ ಪವರ್‌ನಿಂದ ಶೇ.7.5 ರಷ್ಟು ಹೆಚ್ಚು ವಿದ್ಯುತ್ ಖರೀದಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2022ರಲ್ಲಿ, ಗುಜರಾತ್ ಸರ್ಕಾರವು 6007 ಮಿಲಿಯನ್ ಯೂನಿಟ್‌ಗಳನ್ನು ಖರೀದಿಸಿತು. 2021ರಲ್ಲಿ 5587 ಮಿಲಿಯನ್ ಯುನಿಟ್‌ ವಿದ್ಯುತ್‌ ಖರೀದಿಸಿತ್ತು.

ಈ ಎರಡು ವರ್ಷಗಳಲ್ಲಿ (2021-2022), ಸರ್ಕಾರವು ಅದಾನಿ ಪವರ್‌ಗೆ 8,160 ಕೋಟಿ ರೂ.ಗಳನ್ನು ಪಾವತಿಸಿದೆ, ಇದರಲ್ಲಿ ಸ್ಥಿರ ಶುಲ್ಕಗಳು ಮತ್ತು ಪ್ರತಿ ಯೂನಿಟ್ ವಿದ್ಯುತ್ ವೆಚ್ಚವೂ ಸೇರಿದೆ.

ಈ ಸುದ್ದಿ ಓದಿದ್ದೀರಾ? ನಾಗಾಗಳಲ್ಲಿ ನಾಯಿ ಮಾಂಸ ಸೇವನೆ ಒಪ್ಪಿತ ಆಹಾರ ಸಂಪ್ರದಾಯ: ಸರ್ಕಾರದ ನಿಷೇಧ ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್

2007 ರಲ್ಲಿ ಅದಾನಿ ಕಂಪನಿಗೆ 25 ವರ್ಷಗಳವರೆಗೆ ಪ್ರತಿ ಯೂನಿಟ್‌ಗೆ ರೂ 2.35 ರಿಂದ ರೂ 2.89 ರವರೆಗೆ ಬೆಲೆಗೆ ವಿದ್ಯುತ್ ಅನ್ನು ಮಾರಾಟ ಮಾಡಲು ಅನುವು ಮಾಡಿಕೊಟ್ಟ ನಂತರವೂ ವಿದ್ಯುತ್‌ ದರ ಏರಿಕೆ ಕಂಡಿದೆ.

ಗುಜರಾತ್ ಸರ್ಕಾರದ ಪ್ರಕಾರ, ಅದಾನಿ ಪವರ್ ಯೋಜನೆಯು ಇಂಡೋನೇಷ್ಯಾದಿಂದ ಆಮದು ಮಾಡಿಕೊಂಡ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ ಮತ್ತು 2011ರ ನಂತರ, ಕಲ್ಲಿದ್ದಲು ಬೆಲೆಯಲ್ಲಿ ಅನಿರೀಕ್ಷಿತ ಏರಿಕೆಯಿಂದಾಗಿ ವಿದ್ಯುತ್ ಉತ್ಪಾದಕರಿಗೆ ಪೂರ್ಣ ಸಾಮರ್ಥ್ಯದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿಲ್ಲ.

ಇದನ್ನು ಗಮನಿಸಿದ ರಾಜ್ಯ ಸರ್ಕಾರವು 2018, ಡಿಸೆಂಬರ್ 1ರಂದು ಸಮಿತಿಯನ್ನು ರಚಿಸಿತು ಮತ್ತು ನಂತರ ಸಮಿತಿಯ ಶಿಫಾರಸುಗಳನ್ನು ಭಾಗಶಃ ಬದಲಾಯಿಸುವ ಮತ್ತು ವಿದ್ಯುತ್ ದರಗಳ ಹೆಚ್ಚಳವನ್ನು ಅನುಮೋದಿಸುವ ನಿರ್ಣಯವನ್ನು ಹೊರಡಿಸಿತು. 

ಇದು 2018, ಡಿಸೆಂಬರ್ 5 ರಂದು ಅದಾನಿ ಪವರ್ ಮತ್ತು ಸರ್ಕಾರದ ನಡುವೆ ಪೂರಕ ಒಪ್ಪಂದಕ್ಕೆ ಕಾರಣವಾಯಿತು. ಇದಲ್ಲದೆ, ಭಾರತ ಸರ್ಕಾರ ಮಧ್ಯಪ್ರವೇಶ ಮಾಡಿದ ನಂತರ, ಕಂಪನಿಯೊಂದಿಗಿನ ಒಪ್ಪಂದದ ಪ್ರಕಾರ ಪ್ರತಿ ಯೂನಿಟ್‌ಗೆ ರೂ 4.5 ಮತ್ತು ಸಾಮರ್ಥ್ಯದ ಶುಲ್ಕಗಳ ಸ್ಥಿರ ಇಂಧನ ಶುಲ್ಕದಲ್ಲಿ ವಿದ್ಯುತ್ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ನೀಡಲಾಯಿತು.

“ಗುಜರಾತ್ ಸರ್ಕಾರವು ಕಳೆದ ಹಲವು ವರ್ಷಗಳಿಂದ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಎಂದು ಹೇಳಿಕೊಂಡರೂ, ಕಂಪನಿಯ ಅಧಿಕಾರಿಗಳ ಒತ್ತಡದಿಂದ ಇಂಧನ ಅಧಿಕಾರಿಗಳು ವಸತಿ ಗ್ರಾಹಕರ ದ್ವೈಮಾಸಿಕ ವಿದ್ಯುತ್ ಬಿಲ್‌ನ ಭಾಗವಾಗಿರುವ ಎಫ್‌ಪಿಪಿಪಿಎ(ಇಂಧನ ಮತ್ತು ವಿದ್ಯುತ್ ಖರೀದಿ ಬೆಲೆ ಹೊಂದಾಣಿಕೆ) ಶುಲ್ಕವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದಾರೆ” ಎಂದು ಹೆಸರೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 2021 ಮತ್ತು 2022 ರ ನಡುವೆ ಎಫ್‌ಪಿಪಿಪಿಎ ವೆಚ್ಚವನ್ನು ಕನಿಷ್ಠ ಎಂಟು ಬಾರಿ ಹೆಚ್ಚಿಸಿದೆ. ರಾಜ್ಯ ವಿಧಾನಸಭೆ ಚುನಾವಣೆಯ ನಂತರ 2023ರ ಜನವರಿಯಲ್ಲಿ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರವು ಪ್ರಸ್ತುತ ಪ್ರತಿ ಯೂನಿಟ್‌ನ ಇಂಧನ ಶುಲ್ಕವು ಎಫ್‌ಪಿಪಿಪಿಎಗೆ 2.85 ರೂ. ಇದೆ. 2021 ರ ಏಪ್ರಿಲ್‌ನಲ್ಲಿ, ಇಂಧನ ಶುಲ್ಕವು ಪ್ರತಿ ಯೂನಿಟ್‌ಗೆ 1.8 ರೂ ಇತ್ತು.

ಹಿಂಡೆನ್‌ಬರ್ಗ್ ವರದಿಯ ನಂತರ ಜನವರಿ 24 ರಿಂದ ಅದಾನಿ ಸಮೂಹದ ಷೇರುಗಳು ಹೆಚ್ಚು ಕುಸಿಯುತ್ತಿವೆ. ಹೂಡಿಕೆದಾರರ ವಿಶ್ವಾಸವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ, ಅದಾನಿ ಗ್ರೂಪ್ ವಿಶ್ವಾದ್ಯಂತ ಸಮಾವೇಶಗಳನ್ನು ನಡೆಸುತ್ತಿದೆ. ಕಂಪನಿಯು ದುಬೈ, ಲಂಡನ್ ಮತ್ತು ಅಮೆರಿಕದಲ್ಲಿ ಈ ವರ್ಷದ ಮಾರ್ಚ್ 7 ರಿಂದ 15 ರವರೆಗೆ ಸ್ಥಿರ ಆದಾಯದ ಹೂಡಿಕೆದಾರರೊಂದಿಗೆ ಸಭೆಗಳನ್ನು ನಡೆಸಲಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಆಪ್ತ ಗೆಳೆಯನ ಬೊಕ್ಕಸಕ್ಕೆ ರೊಕ್ಕ; ಪ್ರಶಾಂತ್ ಭೂಷಣ್

ಗುಜರಾತ್‌ನಲ್ಲಿ ಏರುಗತಿ ಕಾಣುತ್ತಿರುವ ವಿದ್ಯುತ್ ಬೆಲೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಛೇಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಗುಜರಾತ್ ಖರೀದಿಸಿದ ಅದಾನಿ ಪವರ್ ವಿದ್ಯುತ್‌ನ ಒಂದು ಯೂನಿಟ್ ಬೆಲೆ ಜನವರಿ 2021ರಿಂದ 2.83 ರಿಂದ ಡಿಸೆಂಬರ್ 2022 ರವರೆಗೆ ರೂ.8.83 ಕ್ಕೆ ಜಿಗಿದಿದೆ! ನಿಮ್ಮ ಆಪ್ತ ಗೆಳೆಯನ ಬೊಕ್ಕಸ ತುಂಬಿಸಿ ರಾಜ್ಯ ಮತ್ತು ಜನರನ್ನು ಬಡಪಾಯಿ ಮಾಡುತ್ತೀರಾ ಮೋದಿಜಿ? ಎಂದು ಪ್ರಶ್ನಿಸಿದ್ದಾರೆ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಲೆಯೇರಿಕೆ, ನಿರುದ್ಯೋಗ, ರೈತರ ಬಗ್ಗೆ ಪ್ರಧಾನಿ ಮೋದಿ ತುಟಿಯೇ ಬಿಚ್ಚಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆಯೇ ಮಾಡುವುದಿಲ್ಲ. ಕೇವಲ...

ಮೋದಿಯವರ ‘ಚಾರ್‌ ಸವ್ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು...

ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ...

ರಣಹೇಡಿ ನಾನಲ್ಲ, ಗಿಫ್ಟ್ ಕೂಪನ್ ಕೊಡುವವರು ರಣಹೇಡಿಗಳು: ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು

ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್...