ನಾಗಾಗಳಲ್ಲಿ ನಾಯಿ ಮಾಂಸ ಸೇವನೆ ಒಪ್ಪಿತ ಆಹಾರ ಸಂಪ್ರದಾಯ: ಸರ್ಕಾರದ ನಿಷೇಧ ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್

Date:

ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸ ಸೇವನೆ ಮತ್ತು ಮಾರಾಟ ನಿಷೇಧಿಸಿ ರಾಜ್ಯ ಸರ್ಕಾರ 2020ರಲ್ಲಿ ಹೊರಡಿಸಿದ್ದ ಆದೇಶವನ್ನು ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠ ನಿಷೇಧಿಸಿದೆ. 

“ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್) ಕಾಯಿದೆಯ ಆಧಾರದ ಮೇಲೆ ಸರ್ಕಾರ ಆದೇಶ ಹೊರಡಿಸಿದ್ದು, ನಿಷೇಧಕ್ಕೆ ಆದೇಶ ನೀಡುವ ಸಂಬಂಧ ಸರ್ಕಾರಕ್ಕೆ ಇರುವ ಅಧಿಕಾರವನ್ನು ಎಲ್ಲಿಯೂ ಅದು ಪ್ರಸ್ತಾಪಿಸಿಲ್ಲ. ಶಾಸನಾತ್ಮಕವಾಗಿ ಯಾವುದೇ ಕಾನೂನು ಜಾರಿಗೊಳಿಸದೆ ನಾಯಿ ಮಾಂಸ ಸೇವನೆ ನಿಷೇಧಿಸುವಂತಿಲ್ಲ. ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು ನಾಯಿ ಮಾಂಸಕ್ಕೆ ಸಂಬಂಧಿಸಿಲ್ಲ” ಎಂದು ನ್ಯಾಯಮೂರ್ತಿ ಮಾರ್ಲಿ ವ್ಯಾನ್ಕುಂಗ್ ಅವರು ಜೂನ್‌ 2ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.  

“ಈಶಾನ್ಯ ರಾಜ್ಯಗಳ ಕೆಲ ಭಾಗಗಳಲ್ಲಿ ಮಾತ್ರ ನಾಯಿ ಮಾಂಸವನ್ನು ಸೇವಿಸಲಾಗುತ್ತದೆ. ದೇಶದ ಉಳಿದ ಭಾಗದಲ್ಲಿ ಇಂತಹ ಸೇವನೆಯಿಲ್ಲ. ಮಾನವನ ಆಹಾರದ ಬಳಕೆಯ ಪ್ರಾಣಿಗಳ ಪಟ್ಟಿಯಲ್ಲಿ ಶ್ವಾನ/ ನಾಯಿಗಳನ್ನು ಪ್ರಾಣಿಯಾಗಿ ಸೇರಿಸುವ ಚಿಂತನೆ ಊಹಿಸಲು ಸಾಧ್ಯವಾಗದಿರುವುದರಿಂದ ನಿಯಮಾವಳಿ 2.5 ರ1(ಎ) ಅಡಿಯಲ್ಲಿ ನಾಯಿ ಮಾಂಸದ ಸೇವನೆಯನ್ನು ಊಹಿಸಲೂ ಆಗದು ಎಂದು ಪರಿಗಣಿಸಲಾಗಿದೆ. ನಾಯಿ ಮಾಂಸದ ಸೇವನೆಯು ಆಧುನಿಕ ಕಾಲದಲ್ಲೂ ನಾಗಾಗಳಲ್ಲಿ ಅಂಗೀಕೃತ ಸಂಪ್ರದಾಯ ಮತ್ತು ಆಹಾರವಾಗಿರುವಂತೆ ತೋರುತ್ತಿದೆ. ನಾಯಿ ಮಾಂಸ ಮಾರಾಟದಿಂದ ಅರ್ಜಿದಾರರು ಜೀವನೋಪಾಯ ನಡೆಯತ್ತಿದೆ” ಎಂದು ಅದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ: ರಾಜ್ಯದಲ್ಲಿ ಇಂಟರ್‌ನೆಟ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

2014ರ ಆಗಸ್ಟ್ 6ರ ಎಫ್‌ಎಸ್‌ಎಸ್‌ಎಐ(ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಸುತ್ತೋಲೆಯ ಅನುಸಾರವಾಗಿ ‘ಪ್ರಾಣಿಗಳು’, ‘ಮೃತಶರೀರ’ ಮತ್ತು ‘ಮಾಂಸ’ಗಳ ವ್ಯಾಖ್ಯಾನವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಸರಿಯಾಗಿ ಆಕ್ಷೇಪಾರ್ಹ ಅಧಿಸೂಚನೆಯನ್ನು ಹೊರಡಿಸಿದೆಯೇ ಎಂಬುದು ಪರಿಗಣನೆಯ ಮುಖ್ಯ ವಿಷಯವಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ ಎಂದು ಪೀಠ ಹೇಳಿದೆ.

ಇತ್ಯರ್ಥಗೊಂಡಿರುವ ಕಾನೂನಿನಂತೆ ಎಫ್‌ಎಸ್‌ಎಸ್‌ಎಐ ಕಾಯಿದೆಯಡಿ ರಾಜ್ಯದಲ್ಲಿ ಯಾವ ಮಾಂಸ ನಿಷೇಧಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಆಯುಕ್ತರು ತೀರ್ಮಾನಿಸಬೇಕೇ ವಿನಾ ರಾಜ್ಯದ ಮುಖ್ಯ ಕಾರ್ಯದರ್ಶಿಯಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತು.  

ಪ್ರತಿವಾದಿಗಳಾಗಿ ನಾಗಾಲ್ಯಾಂಡ್‌ನ ಮುಖ್ಯ ಕಾರ್ಯದರ್ಶಿ, ಆಹಾರ ಸುರಕ್ಷತೆ ಆಯುಕ್ತರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಹಿಮಾ ಮುನ್ಸಿಪಲ್ ಕೌನ್ಸಿಲ್, ಪೀಪಲ್ ಫಾರ್ ಅನಿಮಲ್ಸ್ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಹಾಜರಿದ್ದರು.

ನಾಗಲ್ಯಾಂಡ್ ರಾಜ್ಯ ಸಚಿವ ಸಂಪುಟವು 2020ರಲ್ಲಿ ನಾಯಿಗಳ ವಾಣಿಜ್ಯ ಆಮದು ಮತ್ತು ವ್ಯಾಪಾರ, ನಾಯಿ ಮಾರುಕಟ್ಟೆಗಳು ಮತ್ತು ನಾಯಿ ಮಾಂಸವನ್ನು ಬೇಯಿಸಿದ ಮತ್ತು ಬೇಯಿಸದೆ ಮಾರಾಟ ಮಾಡುವುದನ್ನು ನಿಷೇಧಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಸಂಸದ ಸತೀಶ್ ಗೌತಮ್

ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ...

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ...

ಕರ್ನಾಟಕಕ್ಕೆ ನೀಡಲು ‘ಇಲ್ಲ’ ಎಂದಿದ್ದ ‘ಅಕ್ಕಿ’ ಸಿಂಗಾಪುರಕ್ಕೆ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ!

ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದಾಗ 'ನಿಮಗೆ...