ಚುನಾವಣೆ 2023 | ಬಿಜೆಪಿ ಪ್ರಚಾರ ವಿವರ ಬಿಚ್ಚಿಟ್ಟ ಶೋಭಾ ಕರಂದ್ಲಾಜೆ

Date:

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೂ ಬಿಜೆಪಿ ನಡೆಸಿರುವ ಪ್ರಚಾರದ ವಿವರವನ್ನು ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ ನೀಡಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಮಾಹಿತಿ ಹಂಚಿಕೊಂಡಿರುವ ಅವರು, “ಚುನಾವಣೆ ಸಲುವಾಗಿ ರಾಜ್ಯಾದ್ಯಂತ ನಮ್ಮ ನಾಯಕರು 231 ಸಾರ್ವಜನಿಕ ಸಭೆಗಳನ್ನು, 48 ರೋಡ್ ಶೋಗಳನ್ನು ಮಾಡಿದ್ದಾರೆ” ಎಂದು ತಿಳಿಸಿದರು.

“ನಮ್ಮ ರಾಷ್ಟ್ರೀಯ ನಾಯಕರು 206 ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು 19 ಸಭೆ, 6 ರೋಡ್ ಶೋ ಮಾಡಿದ್ದಾರೆ. ಕೇಂದ್ರದಿಂದ ಬಂದ ನಾಯಕರು ಉತ್ತಮವಾಗಿ ಪ್ರಚಾರ ಮಾಡಿದ್ದು, ಭಾಷಾವಾರು ಸಮುದಾಯಗಳ ಜನರಿರುವ ಕಡೆ ಅದೇ ಭಾಷೆಗಳ ನಾಯಕರು ಪ್ರಚಾರ ಮಾಡಿದ್ದಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಏಪ್ರಿಲ್ 25, 26ರಂದು ಬಿಜೆಪಿಯಿಂದ ಮಹಾ ಪ್ರಚಾರ ಅಭಿಯಾನ ನಡೆಸಲಾಗಿದ್ದು, 3,116 ಕಡೆ ಬೂತ್ ಮಟ್ಟದ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. 9,125 ಚಿಕ್ಕಪುಟ್ಟ ಸಭೆಗಳನ್ನು ನಡೆಸಲಾಗಿದ್ದು, 1,137 ರೋಡ್ ಶೋ ಮಾಡಲಾಗಿದೆ. ಈ ಮೂಲಕ ಒಂದೂವರೆ ದಿನದಲ್ಲಿ 20 ಲಕ್ಷ ಜನರನ್ನು ತಲುಪಿದ್ದೆವು” ಎಂದು ವಿವರಿಸಿದರು.

ಬೇರೆ ರಾಜ್ಯಗಳ 31 ಜನ ನಾಯಕರು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದಾರೆ. ಅಮಿತ್ ಷಾ 16 ಸಭೆ, 17 ಕಡೆ ರೋಡ್ ಶೋ ಮಾಡಿದ್ದು, ಜೆ ಪಿ ನಡ್ಡಾ ಅವರು 10 ಸಾರ್ವಜನಿಕ ಸಭೆ ಮತ್ತು 16 ರೋಡ್‌ ಶೋ ಮಾಡಿದ್ದಾರೆ. ಕೇಂದ್ರದ ಅನೇಕ ಸಚಿವರು, ಅನ್ಯರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗೆಲ್ಲಲಿದೆ” ಎಂದು ಹೇಳಿದರು.

“ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ 44, ಕೆ ಎಸ್‌ ಈಶ್ವರಪ್ಪ 24, ಸಿ ಟಿ ರವಿ 16, ಬಸನಗೌಡ ಪಾಟೀಲ ಯತ್ನಾಳ್‌ 41, ನಳಿನ್‌ ಕುಮಾರ್‌ ಕಟೀಲ್‌ 24 ಹಾಗೂ ಎ ನಾರಾಯಣಸ್ವಾಮಿ 25 ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಈ ಶೋಭಕ್ಕ ಒಬ್ರೇ ಅಲ್ಲಾ ಎಲ್ರು ಅಷ್ಟೇ ಪಾಪ ರಾಜಕೀಯಕ್ಕೆ ಬಂದಮೇಲೆ ಒಂದು ನಿಮಿಷವೂ ಸಹ ವಿಶ್ರಾಂತಿ ಇಲ್ಲದೇ ದುಡಿಯುತ್ತಾರೆ ನೋಡಿ ಕಲಿಯಿರಿ,, ಹೇಗೆ ದುಡಿಯಬೇಕು ಎನ್ನುವುದನ್ನು 🙏

  2. ದಿಲ್ಲಿ ದೊರೆಗಳು ಕರ್ನಾಟಕದಲ್ಲಿ ಠಿಕಾಣಿ ಹೂಡಿರುವುದು ನೋಡಿದ್ರೆ,,ಯಾಕೋ ಅವರಿಗೆ ಡೌಟು ಹೊಡದಿರಬೇಕು,,, ಮೇಡಂ ಆ ಗುಟ್ಟನ್ನು ಹೇಗೆ ಮಾಧ್ಯಮಗಳ ಹೇಳ್ತಾರೆ,,, ಪ್ರಧಾನಿ ಮಂತ್ರಿಗಳು ಗೃಹ ಮಂತ್ರಿಗಳು ಗಲ್ಲಿ ಗಲ್ಲಿ ಸುತ್ತಿದರು,,,ಏನರ್ಥ ಒಂದು ರಾಜ್ಯದ ಪಕ್ಷದ ನಾಯಕರು ಜನರ ಮುಂದೆ ಹೋಗಿ ಮತಬೇಡುವ ನೈತಿಕತೆ ಉಳಿಸಿಕೊಂಡಿಲ್ಲ,, ಅಥವಾ 2024 ರೂಂ ಪಾರ್ಲಿಮೆಂಟ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಮ್ಮ ಕೈಗೊಂಬೆ ಸರಕಾರ ಇರಬೇಕು ಆಗ ಕಾರಣಕ್ಕೆ ತಮ್ಮ ಇಚ್ಛೆಯಂತೆ ಟಿಕೆಟ್ ಹಂಚಿಕೆ ತಮ್ಮ ಇಚ್ಛೆಯಂತೆ ಪ್ರಚಾರ,,, ಬಹುಶಃ ಇದು ಯಾವುದೂ ವರ್ಕೌಟ್ ಆಗದಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನದ ‘ಪೆನ್‌ಡ್ರೈವ್’ ನಮಗೂ ತಲುಪಿದೆ; ಎಸ್ಐಟಿ ರಚಿಸಲು ಸಿಎಂಗೆ ಮನವಿ: ಮಹಿಳಾ ಆಯೋಗ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ...

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ʼಈ ದಿನʼ ಸಮೀಕ್ಷೆ | ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್‌; ʼಗ್ಯಾರಂಟಿʼ ಎದುರು ಮಂಕಾದ ಮೋದಿ ಯೋಜನೆಗಳು

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪಂಚ ಗ್ಯಾರಂಟಿಯನ್ನು ವರ್ಷದೊಳಗೆ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....