ಕವಿಗೋಷ್ಠಿಯಿಂದ ಭಗವಾನ್‌‌ ಅವರನ್ನು ದಸರಾ ಸಮಿತಿ ಹೊರಗಿಟ್ಟಿದೆಯೇ? ಟಿವಿ9 ತಿರುಚಿದ್ದೇನು?

Date:

”ಒಕ್ಕಲಿಗರ ಎಚ್ಚರಿಕೆಗೆ ಮಣಿದ ದಸರಾ ಸಮಿತಿ; ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ.ಭಗವಾನ್‌ಗೆ ಕೊಕ್‌” ಎಂಬ ಹೆಡ್‌ಲೈನ್‌ ನೀಡಿ ಕನ್ನಡದ ಮುಖ್ಯವಾಹಿನಿ ಮಾಧ್ಯಮವಾದ ’ಟಿವಿ9 ಕನ್ನಡ’ ಸುದ್ದಿ ಪ್ರಕಟಿಸಿದೆ. ಆದರೆ ಈ ಸುದ್ದಿ ತಿರುಚಿದ ಅಂಶಗಳನ್ನು ಒಳಗೊಂಡಿದೆ.

- Advertisement -

ಸುದ್ದಿಯ ಮೊದಲ ಪ್ಯಾರಾದಲ್ಲಿ “ಒಕ್ಕಲಿಗರು ಸಂಸ್ಕೃತಿಹೀನ ಪಶುಗಳು. ಪ್ರೊಫೆಸರ್ ಕೆ.ಎಸ್.ಭಗವಾನ್ ನೀಡಿದ ಈ ಹೇಳಿಕೆ ಇದೀಗ ರಾಜ್ಯದಲ್ಲಿ ಕಿಡಿ ಹೊತ್ತಿಸಿದೆ. ಈ ಹೇಳಿಕೆ ನೀಡಿ ಮಾತು ಮುಂದುವರಿಸಿದ ಭಗವಾನ್, ‘ನಂದಲ್ಲಪ್ಪ ಕುವೆಂಪು ಅವರು ಹೇಳಿದ್ದು’ ಅಂತಾನೂ ಹೇಳಿದ್ದಾರೆ. ಆದ್ರೆ, ಭಗವಾನ್ ಆಡಿದ ಈ ಮಾತಿಗೆ ಒಕ್ಕಲಿಗ ಸಮುದಾಯ ರೊಚ್ಚಿಗೆದ್ದಿದೆ. ಅಲ್ಲದೇ ರಾಜ್ಯ ಒಕ್ಕಲಿಗರ ಪಡೆಯ ಪ್ರತಿಭಟನೆ ಎಚ್ಚರಿಕೆಗೆ ದಸರಾ ಸಮಿತಿ ಮಣಿದಿದ್ದು, ದಸರಾ ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಪ್ರೊ.ಭಗವಾನ್‌ಗೆ ಕೊಕ್ ನೀಡಲಾಗಿದೆ’’ ಎಂದು ಬರೆಯಲಾಗಿದೆ. (ಅರ್ಕೈವ್‌ ಲಿಂಕ್‌ ನೋಡಲು ’ಇಲ್ಲಿ’ ಕ್ಲಿಕ್ ಮಾಡಿ)

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...
Sullu suddi
ಟಿ.ವಿ.9 ಪ್ರಕಟಿಸಿರುವ ಸುಳ್ಳು ಸುದ್ದಿ

ಮುಂದುವರಿದು, “ಭಗವಾನ್ ಬದಲು ಸಾಹಿತಿ ಡಿ.ಕೆ.ರಾಜೇಂದ್ರ ಅವರಿಂದ ಕವಿಗೋಷ್ಠಿ ಉದ್ಘಾಟಿಸಲಾಗುತ್ತಿದೆ” ಎಂದು ತಿಳಿಸಲಾಗಿದೆ.

ವಾಸ್ತವವೇನು?

’ಭಗವಾನ್ ಅವರಿಗೆ ಕೊಕ್ ನೀಡಿದ್ದು’ ನಿಜವೇ ಎಂದು ತಿಳಿಯಲು ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯದರ್ಶಿ ಎಂ.ಎಸ್.ಗಿರಿಧರ್‌ ಅವರನ್ನು ’ಈದಿನ.ಕಾಂ’ ಸಂಪರ್ಕಿಸಿತು. ಟಿವಿ9 ವರದಿಯನ್ನು ಸ್ಪಷ್ಟವಾಗಿ ಅಲ್ಲಗಳೆದ ಅವರು, “ಭಗವಾನ್ ಅವರು ಒಕ್ಕಲಿಗರಿಗೆ ಸಂಬಂಧಿಸಿದ ಹೇಳಿಕೆ ನೀಡಿರುವುದು ಮಹಿಷ ದಸರಾ ಕಾರ್ಯಕ್ರಮದಲ್ಲಿ. ಆದರೆ ಮಹಿಷ ದಸರಾ ನಡೆಯುವುದಕ್ಕಿಂತ ಒಂದು ವಾರ ಮೊದಲೇ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ. ದಸರಾ ಯುವ ಕವಿಗೋಷ್ಠಿಗಾಗಲೀ, ಮತ್ಯಾವುದೇ ದಸರಾ ಕವಿಗೋಷ್ಠಿಗಾಗಲೀ ಅವರನ್ನು ಆಹ್ವಾನಿಸಿಯೇ ಇರಲಿಲ್ಲ. ಹೀಗಿರುವಾಗ ಭಗವಾನ್ ಅವರಿಗೆ ಕೊಕ್ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ’ಒಕ್ಕಲಿಗರು ಸಂಸ್ಕೃತಿ ಹೀನರು’ ಹೇಳಿಕೆ; ಪ್ರೊ.ಭಗವಾನ್‌ ಸುತ್ತ ಕಾವೇರಿದ ಚರ್ಚೆ

ಗಿರಿಧರ್‌ ಅವರು ಹಂಚಿಕೊಂಡ ಆಮಂತ್ರಣ ಪತ್ರಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನೆಯನ್ನು ಸಾಹಿತಿ ಜಯಂತ ಕಾಯ್ಕಿಣಿ ಮಾಡಲಿದ್ದಾರೆ. ಜೊತೆಗೆ ಹಾಸ್ಯ-ಚುಟುಕು ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಯುವ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ- ಹೀಗೆ ವಿವಿಧ ಕವಿಗೋಷ್ಠಿಗಳನ್ನು ದಸರಾ ಕವಿಗೋಷ್ಠಿ ಉಪಸಮಿತಿ ಆಯೋಜಿಸಿದೆ. ಬೇರೆ ಬೇರೆ ಕವಿಗೋಷ್ಠಿಗಳಿಗೆ ಬೇರೆ ಬೇರೆ ಉದ್ಘಾಟಕರು, ಅಧ್ಯಕ್ಷತೆ ವಹಿಸುವವರು ಇದ್ದಾರೆ. ದಸರಾ ಯುವ ಕವಿಗೋಷ್ಠಿಗೆ ಯಾವುದೇ ಉದ್ಘಾಟಕರಿಲ್ಲ. ಆದರೆ ಕವಯತ್ರಿ ಡಾ.ವಿನಯಾ ಒಕ್ಕುಂದ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

dasara 111
ಮೈಸೂರು ದಸರಾ ಯುವ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆ

ಉತ್ಪ್ರೇಕ್ಷಿತ ವರದಿಯ ಮೂಲವನ್ನು ತಿಳಿಯಲು ಟಿವಿ9 ಕನ್ನಡದ ಮೈಸೂರು ವರದಿಗಾರನನ್ನು ಸಂಪರ್ಕಿಸಿದಾಗ ಅವರು ಹೇಳಿದ್ದೇ ಬೇರೆ. “ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಯುವ ಕವಿಗೋಷ್ಠಿಗೆ ಉದ್ಘಾಟಕರಾಗಿ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಆಹ್ವಾನಿಸಲಾಗಿತ್ತು. ಆ ಕಾರ್ಯಕ್ರಮದಿಂದ ಕೈಬಿಡಲಾಗಿದೆ” ಎಂದರು. ಆದರೆ ಸುದ್ದಿಯಲ್ಲಿ ಎಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್‌ ಹೆಸರಿನ ಉಲ್ಲೇಖವಿಲ್ಲ. ಹೀಗಾಗಿ ಓದುಗರು ಗೊಂದಲಗೊಳ್ಳುವಂತಾಗಿದೆ. ಸರ್ಕಾರ ಆಯೋಜಿಸಿರುವ ಮೈಸೂರು ದಸರಾ ಕವಿಗೋಷ್ಠಿಯಿಂದಲೇ ಭಗವಾನ್ ಅವರನ್ನು ಕೈಬಿಡಲಾಗಿದೆ ಎಂಬಂತೆ ಭಾಸವಾಗುತ್ತದೆ. ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳುವಂತೆ ವರದಿಯನ್ನು ಬರೆಯಲಾಗಿದೆ.

May be an image of text
ಮೈಸೂರು ಜಿಲ್ಲಾ ಕಸಾಪ, ಸ್ಪಂದನ ಸಾಂಸ್ಕೃತಿಕ ಪರಿಷತ್ ಆಯೋಜಿಸಿರುವ ದಸರಾ ಕವಿಗೋಷ್ಠಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ
yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಡಾಖ್ ನಾಯಕರ ಜೊತೆ ಕೇಂದ್ರದ ಮಾತುಕತೆ ಅಪೂರ್ಣ: ಅಕ್ಟೋಬರ್ 22ಕ್ಕೆ ಮುಂದಿನ ಸಭೆ

ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್‌ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್‌ನಲ್ಲಿ...

SIR ಬದಲು SSR! ಪ್ರತಿಭಟನೆ, ಉಳಿದಿಬ್ಬರು ಚುನಾವಣಾ ಆಯುಕ್ತರ ತಕರಾರುಗಳಿಗೆ ಕಡೆಗೂ ಮಣಿಯಿತೇ ಗ್ಯಾನೇಶ್- ಮೋದಿ- ಶಾ ತ್ರಿವಳಿ?

ತೀವ್ರ ವಿರೋಧ, ಪ್ರತಿಭಟನೆ, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾದ ಬಳಿಕ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...