ಲೋಕಸಭಾ ಚುನಾವಣೆ | ಕರ್ನಾಟಕ ಸೇರಿ 9 ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Date:

ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸಿರುವ ಕಾಂಗ್ರೆಸ್, ಇಂದು (ಮಾ.8) ಕರ್ನಾಟಕ ಸೇರಿದಂತೆ ಒಟ್ಟು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

- Advertisement -

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್ ಹಾಗೂ ಪವನ್ ಖೇರಾ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಹೈವೋಲ್ಟೇಜ್​ ಮೀಟಿಂಗ್​ನಲ್ಲಿ ಛತ್ತೀಸ್‌ಗಢ, ಕೇರಳ ಸೇರಿದಂತೆ ಒಟ್ಟು 9 ರಾಜ್ಯಗಳ ಸುಮಾರು 39 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿ, ಬಿಡುಗಡೆಗೊಳಿಸಿದೆ.

39 ಜನರ ಪೈಕಿ ಪಟ್ಟಿಯಲ್ಲಿ 15 ಜನರಲ್, 24 ಎಸ್‌ಸಿ ಎಸ್‌ಟಿ ಹಾಗೂ ಅಲ್ಪಸಂಖ್ಯಾತರು ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಅವರು ಈ ಬಾರಿ ಕೂಡ ಕೇರಳದ ವಯನಾಡ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ.

ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ರಾಜನಂದಗಾಂವ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ತಾಮ್ರಧ್ವಜ್ ಸಾಹು ಮಹಾಸಮುಂಡ್‌ ಅಭ್ಯರ್ಥಿಯಾಗಿದ್ದಾರೆ. ದೆಹಲಿ, ಛತ್ತೀಸ್‌ಗಢ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪರಿಗಣಿಸಲಾಗಿದೆ.

ಕರ್ನಾಟಕದಿಂದ ಸ್ಪರ್ಧಿಸಲಿರುವವರ ಪಟ್ಟಿ ಹೀಗಿದೆ:

ಲೋಕಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳು: 7 ಕ್ಷೇತ್ರಗಳು

  1. ವಿಜಯಪುರ: ಹೆಚ್ ಆರ್ ಅಲಗೂರು
  2. ಶಿವಮೊಗ್ಗ: ಗೀತಾ ಶಿವರಾಜ್‌ ಕುಮಾರ್
  3. ಹಾಸನ: ಶ್ರೇಯಸ್ ಪಟೇಲ್
  4. ಮಂಡ್ಯ: ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
  5. ತುಮಕೂರು: ಎಸ್‌ಪಿ ಮುದ್ದಹನುಮೇಗೌಡ
  6. ಬೆಂಗಳೂರು ಗ್ರಾಮಾಂತರ: ಡಿ ಕೆ ಸುರೇಶ್
  7. ಹಾವೇರಿ: ಆನಂದಸ್ವಾಮಿ ಗಡ್ಡದೇವ್ರು ಮಠ

ತೆಲಂಗಾಣ: 4 ಕ್ಷೇತ್ರ

  1. ಝಾಹಿರಾ ಬಾದ್: ಸುರೇಶ್ ಕುಮಾರ್ ಶೆಟ್ಕಾರ್
  2. ನಳಗುಂದಾ: ರಘುವೀರ್ ಕುಂದುರು
  3. ಮೆಹಬೂಬ್‌ ನಗರ: ಚಲ್ಲವಂಶಿ ಚಾಂದ್ ರೆಡ್ಡಿ
  4. ಮೆಹಬೂಬಾ ಬಾದ್: ಬಾಲರಾಮ್ ನಾಯ್ಕ್ ಪೊರಿಕಾ

ಕೇರಳ: ಲೋಕಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳು; 16 ಕ್ಷೇತ್ರ

  1. ಕಾಸರಗೋಡು: ರಾಜ್‌ಮೋಹನ್ ಉನ್ನಿತ್ತಾನ್
  2. ಕಣ್ಣೂರು: ಕೆ ಸುರೇಂದ್ರನ್
  3. ವಡಗರ: ಶಫಿ ಪರಂಬಿಲ್
  4. ವಯನಾಡ್: ರಾಹುಲ್ ಗಾಂಧಿ
  5. ಕೋಝಿಕ್ಕೋಡ್: ಎಂ ಕೆ ರಾಘವನ್
  6. ಪಾಲಕ್ಕಾಡ್ : ವಿ ಕೆ  ಶ್ರೀಕಂಠನ್
  7. ಅಲತ್ತೂರು: ರಮ್ಯಾ ಹರಿದಾಸ್
  8. ತ್ರಿಶ್ಶೂರ್: ಕೆ ಮುರಳೀಧರನ್
  9. ಚಾಲಕ್ಕುಡಿ: ಬೆನ್ನಿ ಬೆಹಾನನ್
  10. ಎರ್ನಾಕುಲಂ: ಹಿಬಿ ಇಡೆನ್
  11. ಇಡುಕ್ಕಿ: ಡೀನ್ ಕುರಿಯಾಕೋಸ್
  12. ಆಲಪ್ಪುಝ: ಕೆ ಸಿ ವೇಣುಗೋಪಾಲ್
  13. ಮಾವೇಲಿಕ್ಕರ: ಕೋಡಿಕುನ್ನಿಲ್ ಸುರೇಶ್
  14. ಪಟ್ಟಣಂತಿಟ್ಟ: ಆ್ಯಂಟೋ ಆ್ಯಂಟನಿ
  15. ಅಟ್ಟಿಂಗಲ್: ಅಡೂರ್ ಪ್ರಕಾಶ್
  16. ತಿರುವನಂತಪುರಂ: ಶಶಿ ತರೂರ್

ಛತ್ತೀಸ್‌ಗಢ: 6 ಕ್ಷೇತ್ರ

  1. ಜಂಗೀರ್-ಚಂಪಾ: ಡಾ. ಶಿವಕುಮಾರ್ ದಹಾರಿಯಾ
  2. ಕೋರ್ಬಾ: ಜೋತ್ಸಾನ ಮಹಂತ್
  3. ರಾಜ್‌ನಂದಗಾವ್: ಭೂಪೇಶ್ ಭಘೇಲ್
  4. ದುರ್ಗ್: ರಾಜೇಂದ್ರ ಸಾಹು
  5. ರಾಯ್‌ಪುರ: ವಿಕಾಸ್ ಉಪಾಧ್ಯಾಯ್
  6. ಮಹಾಸಮುಂದ್: ತಾಮರಾಧ್ವಜ್ ಸಾಹು

ಲಕ್ಷದ್ವೀಪ: 1 ಕ್ಷೇತ್ರ

  1. ಮೊಹಮ್ಮದ್ ಹಮ್ದುಲ್ಲಾ ಸಯೀದ್

ಮೇಘಾಲಯ: 2 ಕ್ಷೇತ್ರ

  1. ಶಿಲ್ಲಾಂಗ್: ವಿನ್ಸೆಂಟ್ ಹೆಚ್ ಪಾಲ
  2. ತುರಾ: ಸಾಲೆಂಗ್ ಎ ಸಂಗ್ಮಾ

ತ್ರಿಪುರಾ: 1 ಕ್ಷೇತ್ರ

ತ್ರಿಪುರಾ ವೆಸ್ಟ್: ಅಶೀಶ್ ಕುಮಾರ್ ಸಾಹಾ

ನಾಗಾಲ್ಯಾಂಡ್ : 1 ಕ್ಷೇತ್ರ

ನಾಗಾಲ್ಯಾಂಡ್: ಸುಪೊಂಗ್ ಮಿರೆನ್ ಜಮೀರ್

 

 

 

 

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಪ್‌ಗೆ ಇಬ್ಬರು ಶಾಸಕರ ರಾಜೀನಾಮೆ

2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನವೇ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ...

ಪ್ರತಿ ಅಂಗಡಿಯನ್ನೂ BJP ಬಲವಂತವಾಗಿ ಮುಚ್ಚಿಸಿದೆ, ಕನ್ನಾಟ್ ಪ್ಲೇಸ್ ವ್ಯಾಪಾರಿಗಳ ನಷ್ಟಕ್ಕೆ ಬಿಜೆಪಿಯೇ ಕಾರಣ: ರಾಹುಲ್ ಗಾಂಧಿ ಕಿಡಿ

ದೆಹಲಿಯ ಕನ್ನಾಟ್ ಪ್ಲೇಸ್‌ನ ಪ್ರತಿಯೊಂದು ಅಂಗಡಿಯನ್ನೂ ಬಿಜೆಪಿ ಬಲವಂತವಾಗಿ ಮುಚ್ಚಿಸಲಾಗಿದೆ. ಸ್ಥಳೀಯ...