ಹಿಂಡನ್‌ಬರ್ಗ್ ಅದಾನಿ ವರದಿ ಉಲ್ಲೇಖಿಸಿದ್ದ ಎರಡು ವಿದೇಶಿ ಕಂಪನಿಗಳ ಮೇಲೆ ಐಟಿ ತನಿಖೆ

Date:

ಆಗಸ್ಟ್ 2010ರ ದಾಖಲೆಗಳ ಪ್ರಕಾರ ಹಿಂಡನ್‌ಬರ್ಗ್ ಅದಾನಿ ವರದಿ ಉಲ್ಲೇಖಿಸಿದ್ದ ಲೋಟಸ್, ಮಾವಿ, ಕ್ರೆಸ್ಟಾ ಮೊದಲಾದ ಕಂಪನಿಗಳ ಹಣಕಾಸು ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಕ್ಕಾಗಿ ಮೊಂಟೆರೊಸಾ ಕಂಪನಿಗೆ ಆಪಲ್‌ಬೈ ಬಿಲ್ ಕಳುಹಿಸಿದೆ. ಈ ತಿದ್ದುಪಡಿಯಲ್ಲಿ ಸೆಬಿಗೆ ಆಸ್ತಿಗಳ ಒಂದೇ ವಿವರ ಸಿಗುವಂತೆ ಮಾಡಲಾಗಿತ್ತು.

ಹಿಂಡನ್‌ಬರ್ಗ್ ಅದಾನಿ ವರದಿ ಉಲ್ಲೇಖಿಸಿದ್ದ, ಕಳೆದೊಂದು ದಶಕದಲ್ಲಿ ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಕನಿಷ್ಠ ಎರಡು ಮಾರಿಷಸ್ ಕಂಪನಿಗಳ ಮೇಲೆ ಭಾರತೀಯ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಹತ್ತು ವರ್ಷಗಳಿಂದ ಕಣ್ಣಿಟ್ಟಿದ್ದರು ಎನ್ನುವುದು ಇದೀಗ ಬಹಿರಂಗವಾಗಿದೆ.

ಸುಪ್ರೀಂಕೋರ್ಟ್ ಸೆಬಿಗೆ ಅದಾನಿ ಸಮೂಹದ ಅವ್ಯವಹಾರದ ತನಿಖೆ ನಡೆಸಲು ಮತ್ತೂ ಮೂರು ತಿಂಗಳ ಕಾಲಾವಧಿ ನೀಡಿದೆ. ಇದೀಗ ಮಾಧ್ಯಮವೊಂದು ಪ್ರಕಟಿಸಿರುವ ತನಿಖಾ ವರದಿಯೊಂದರಲ್ಲಿ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವ ಮಾರಿಷಸ್ ಕಂಪನಿಗಳ ಮೇಲೆ ಐಟಿ ಇಲಾಖೆಯ ಕಣ್ಣು ಕಳೆದೊಂದು ದಶಕದಿಂದ ಇತ್ತು ಎನ್ನುವುದು ಪತ್ತೆಯಾಗಿದೆ.

2017ರ ಪ್ಯಾರಡೈಸ್ ಪೇಪರ್ಸ್ ತನಿಖೆಯಲ್ಲಿ ಕಂಡುಬಂದಿರುವ ಪ್ರಕಾರ ಮಾವಿ ಇನ್‌ವೆಸ್ಟ್‌ಮೆಂಟ್‌ ಫಂಡ್ ಲಿಮಿಟೆಡ್‌ (ಈಗ ಎಪಿಎಂಎಸ್ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌) ಮಾರಿಷಸ್ ಕಂದಾಯ ಪ್ರಾಧಿಕಾರದಿಂದ (ಎಂಆರ್‌ಎ) 2012 ಸೆಪ್ಟೆಂಬರ್‌ನಲ್ಲಿ ನೋಟಿಸ್ ಪಡೆದಿತ್ತು. ಈ ನೋಟಿಸ್‌ನಲ್ಲಿ ದ್ವಿತೆರಿಗೆ ತಪ್ಪಿಸುವ ಒಪ್ಪಂದದಡಿ ಭಾರತೀಯ ತೆರಿಗೆ ಅಧಿಕಾರಿಗಳಿಗೆ ಹೊರ ಹೋದ ಹಣ ವ್ಯವಹಾರದ ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಲಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮತ್ತೊಂದು ಕಂಪನಿ ಲೋಟಸ್ ಗ್ಲೋಬಲ್ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ 2005ರಿಂದ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲಾರಂಭಿಸಿತ್ತು. ಅದಕ್ಕೂ 2014ರಲ್ಲಿ ಎಂಆರ್‌ಎ ಇಂತಹುದೇ ತೆರಿಗೆ ವಿವರ ನೀಡುವಂತೆ ನೋಟಿಸ್ ಕಳುಹಿಸಿತ್ತು. ಈ ನೋಟಿಸ್‌ಗಳ ವಿವರವನ್ನು ವಿದೇಶಿ ಕಾನೂನು ವ್ಯವಹಾರ ಸಂಸ್ಥೆ ‘ಆಪಲ್‌ಬೈ’ ತನ್ನ ಆಂತರಿಕ ದಾಖಲೆಗಳಲ್ಲಿ ಇರಿಸಿಕೊಂಡಿದೆ.

ಹಿಂಡನ್‌ಬರ್ಗ್‌ ವರದಿ ಅದಾನಿ ವರದಿ ವಿವರಗಳಂತೆ, ಎಪಿಎಂಎಸ್ ಇನ್‌ವೆಸ್ಟ್‌ಮೆಂಟ್‌ ಫಂಡ್‌ (ಹಿಂದೆ ಮಾವಿ ಇನ್‌ವೆಸ್ಟ್‌ಮೆಂಟ್‌), ಅಲ್ಬುಲಾ ಇನ್‌ವೆಸ್ಟ್‌ಮೆಂಟ್‌ ಫಂಡ್, ಕ್ರೆಸ್ಟಾ ಫಂಡ್, ಎಲ್‌ಟಿಎಸ್ ಇನ್‌ವೆಸ್ಟ್‌ಮೆಂಟ್‌ ಫಂಡ್ ಹಾಗೂ ಲೋಟಸ್ ಗ್ಲೋಬಲ್ ಇನ್‌ವೆಸ್ಟ್‌ಮೆಂಟ್‌ ಫಂಡ್ ಕಂಪನಿಗಳು ಷೇರು ವ್ಯವಹಾರ ವಂಚಿಸುವ ಸಂಸ್ಥೆಯಾಗಿರುವ ಮೊಟೆರೊಸಾ ಇನ್‌ವೆಸ್ಟ್‌ಮೆಂಟ್‌ ಹೋಲ್ಡಿಂಗ್ಸ್ (ಬಿವಿಐ) ನಿಯಂತ್ರಣದಲ್ಲಿದೆ ಎಂದು ಆರೋಪಿಸಿತ್ತು. ಒಂದೂವರೆ ದಶಕದಲ್ಲಿ ಅದಾನಿ ಸಮೂಹದ ಕಂಪನಿಯಲ್ಲಿ ಮೊಂಟೆರೊಸಾ ಸಾಕಷ್ಟು ಷೇರುಗಳನ್ನು ಹೊಂದಿತ್ತು.

2020 ಅಕ್ಟೋಬರ್‌ನಿಂದ ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ತನಿಖೆ ನಡೆಸುತ್ತಿರುವ 13 ವಿದೇಶ ಕಂಪನಿಗಳಲ್ಲಿ ಈ ನಾಲ್ಕು ಕಂಪನಿಗಳೂ ಸೇರಿವೆ. ದಾಖಲೆಗಳು ತೋರಿಸಿರುವ ಪ್ರಕಾರ, 2010 ಆಗಸ್ಟ್‌ನಲ್ಲಿ ಆಪಲ್‌ಬೈ ಸಂಸ್ಥೆಯು ಲೋಟಸ್‌, ಮಾವಿ, ಕ್ರೆಸ್ಟಾ ಮತ್ತಿತರ ಕಂಪನಿಗಳ ದಾಖಲೆಗಳಿಗೆ ಸಂಬಂಧಿಸಿ ಮೊಂಟೆರೊಸಾಗೆ ಬಿಲ್ ಕಳುಹಿಸಿತ್ತು.

2010ರ ಮೇನಲ್ಲಿ ಸೆಬಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಾವಿ ರೂ 10 ಲಕ್ಷವನ್ನು ಪರಿಹಾರವಾಗಿ ನೀಡಿತ್ತು. ಅದಾನಿ ಟ್ರಾನ್ಸ್‌ಮಿಶನ್‌ನಲ್ಲಿ ಮಾಹಿ ಶೇ 1.86 ಷೇರು ಮತ್ತು ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಶೇ 2.72 ಷೇರುಗಳನ್ನು ಹೊಂದಿದೆ. 2021ರವರೆಗೂ ಅದಾನಿ ಗ್ರೀನ್ ಎನರ್ಜಿಯಲ್ಲೂ ಶೇ 1.19ರಷ್ಟು ಷೇರುಗಳನ್ನು ಹೂಡಿಕೆ ಮಾಡಿತ್ತು. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ (ಎಇಎಲ್‌) 2006ರಲ್ಲಿ ಹೂಡಿಕೆ ಮಾಡಿ ಕಳೆದ ವರ್ಷ ಹೊರಹೋಗಿತ್ತು. ಕಂಪನಿ ಸಂಪೂರ್ಣ ಅದಾನಿ ಪವರ್ ಲಿಮಿಟೆಡ್ (ಎಪಿಎಲ್‌) ಷೇರನ್ನು ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಅದಾನಿಗೆ 2013ರಲ್ಲಿ ಮೂರು ಒಪ್ಪಂದಗಳಲ್ಲಿ ಮಾರಾಟ ಮಾಡಿತ್ತು. ಲೋಟಸ್ ಗ್ಲೋಬಲ್ ತನ್ನ ಎಪಿಎಲ್‌ ಷೇರನ್ನು ಮೊಂಟೆರೊಸಾ ನಿಯಂತ್ರಣದೊಳಗೇ ಅಲ್ಬುಲಾಗೆ ಮಾರಿದೆ. ಎಇಎಲ್‌ನಲ್ಲಿ ಅದರ ಷೇರುಗಳನ್ನು 2008ರಲ್ಲಿದ್ದ ಅತ್ಯಧಿಕ ಶೇ 4.51ರಿಂದ 2010ರಲ್ಲಿ ಪೂರ್ಣ ಹೊರ ಹೋಗುವವರೆಗೂ ನಿಧಾನವಾಗಿ ಮಾರುತ್ತಾ ಹೋಗಿದೆ.

2014 ಜುಲೈನಲ್ಲಿ ಲೋಟಸ್ ಗ್ಲೋಬಲ್‌ಗೆ 2006ರಿಂದ 2012ರ ನಡುವಿನ ಅವಧಿಯ ಹಣಕಾಸು ಆಡಿಟ್ ವಿವರಗಳನ್ನು ಸಲ್ಲಿಸುವಂತೆ ಎಂಆರ್‌ಎ ನೋಟಿಸ್ ಕಳುಹಿಸಿತ್ತು. ಈ ಅವಧಿಯಲ್ಲಿ ಲೋಟಸ್ ಗ್ಲೋಬಲ್ ಕಂಪನಿಯು ಅದಾನಿ ಕಂಪನಿಗಳ ಷೇರುಗಳನ್ನು ಹೊಂದಿತ್ತು. ಎಂಆರ್‌ಎ ಕೇಳಿದ ವಿವರಗಳಲ್ಲಿ, ಷೇರುದಾರರು ಮತ್ತು ಲಾಭ ಪಡೆಯುವ ಮಾಲೀಕರು, ಉದ್ಯೋಗಿಗಳ ಸಂಖ್ಯೆ, 2000ದಿಂದ 2013ರ ನಡುವಿನ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳನ್ನು ನೀಡಲು ಸೂಚಿಸಿತ್ತು. ಬ್ಯಾಂಕ್ ಖಾತೆಗಳ ಜಮೆ ಮತ್ತು ಡೆಬಿಟ್ ಎರಡರ ವಿವರವನ್ನೂ ಕೇಳಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಹದಗೆಟ್ಟ ರಸ್ತೆ, ಜಡವಾದ ವ್ಯವಸ್ಥೆ; ತಿರುಗುತ್ತಲೇ ಇದೆ ಸಾವಿನ ಚಕ್ರ

ಬ್ಯಾಂಕ್‌ಗಳಿಂದ ನೇರವಾಗಿ ಎಂಆರ್‌ಎ ಮಾಹಿತಿ ಪಡೆದುಕೊಳ್ಳುವುದರ ವಿರುದ್ಧ ಮೊಂಟೆರೊಸಾ ವಕೀಲರು ಮತ್ತು ಅಧಿಕಾರಿಗಳು ಮಾರಿಷಸ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಡ್ಯುಷೆ ಬ್ಯಾಂಕ್, ಎಚ್‌ಎಸ್‌ಬಿಸಿ ಮತ್ತು ಮಾರಿಷಸ್ ಬ್ಯಾಂಕ್‌ಗಳನ್ನು ಉಲ್ಲೇಖಿಸಲಾಗಿತ್ತು. ಲೋಟಸ್ ಗ್ಲೋಬಲ್ ಇವೇ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿತ್ತು.

ಇದಕ್ಕೆ ಮೊದಲು 2012ರಲ್ಲಿ ಮಾವಿಗೂ ಮಾಲೀಕತ್ವ ವಿವರಗಳು, 2007 ಏಪ್ರಿಲ್‌ನಿಂದ 2010ರ ಮಾರ್ಚ್ ನಡುವಿನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನೀಡುವಂತೆ ಎಂಆರ್‌ಎ ನೋಟಿಸ್ ಕಳುಹಿಸಿತ್ತು. ಕಂಪನಿ ಡೆಲ್ಫಿ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದೆಯೇ ಎಂದು ದೃಢೀಕರಿಸಲು ಎಂಆರ್‌ಎ ತಿಳಿಸಿತ್ತು. ಉತ್ತರವಾಗಿ ಮಾವಿ ಐರ್ಲೆಂಡ್, ಕೇಮನ್ ಮತ್ತು ಬರ್ಮುಡಾದ 11 ಕಂಪನಿಗಳು ಲಾಭ ಪಡೆಯುತ್ತಿರುವುದಾಗಿ ತಿಳಿಸಿತ್ತು.

2013ರಲ್ಲಿ ಮಾವಿ ಸೆಬಿಗೂ ಉತ್ತರಿಸಲು ನಿರಾಕರಿಸಿದಾಗ ಇದೇ ರೀತಿಯ ವಿವರ ನೀಡಿತ್ತು. “ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ವ್ಯಾಪಕ ಪ್ರಮಾಣದ ಹೂಡಿಕೆದಾರರು ಕಂಪನಿಯ ಲಾಭ ಪಡೆಯುತ್ತಿದ್ದಾರೆ, ಮತ್ತು ಅವರು ನಿತ್ಯವೂ ಬದಲಾಗುತ್ತಿರುತ್ತಾರೆ” ಎಂದು ತಿಳಿಸಿತ್ತು.

ಷೇರು ಮಾರುಕಟ್ಟೆ ದುರ್ವ್ಯವಹಾರವನ್ನು ಸಾಬೀತುಪಡಿಸಲಾಗದೆ 2013 ಸೆಪ್ಟೆಂಬರ್‌ನಲ್ಲಿ ಸೆಬಿ 2011ರಲ್ಲಿ ಮಾವಿ ಮೇಲೆ ಹೇರಿದ್ದ ನಿಷೇಧವನ್ನು ತೆಗೆದು ಹಾಕಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವಡ್ ಯಾತ್ರೆ ವಿವಾದ | ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶಿಸುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಉತ್ತರ ಪ್ರದೇಶದ ಕಾವಡ್ ಯಾತ್ರೆಯ ಮಾರ್ಗದುದ್ದಕ್ಕೂ ಅಂಗಡಿಗಳ ಮಾಲೀಕರ ಮತ್ತು ನೌಕರರ...

ಮನೆ ಕಳೆದುಕೊಂಡವರಿಗೆ ಕಾಂಗ್ರೆಸ್ ಸರಕಾರ ಹೆಚ್ಚಿನ ಪರಿಹಾರ ಕೊಡಲಿ: ವಿಜಯೇಂದ್ರ ಆಗ್ರಹ

ನೆರೆಪೀಡಿತರು ಮತ್ತು ಮನೆ ಕಳೆದುಕೊಂಡವರಿಗೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿದ ಮಾದರಿಯಲ್ಲಿ...