ಮೋದಿ ವೈಫಲ್ಯ-4 | ಭಾರತದಲ್ಲಿ ಶೇ.5ಕ್ಕೆ ಇಳಿದಿದೆಯಾ ಬಡತನ? ಅಸಲಿಯತ್ತೇನು ಗೊತ್ತೇ?

Date:

ಕಳೆದ 9 ವರ್ಷಗಳಲ್ಲಿ ಭಾರತದಲ್ಲಿನ ಬಡತನವು ತೀರಾ ಕಡಿಮೆಯಾಗಿದೆ. ದೇಶದ ಬಡತನದ ಪ್ರಮಾಣವು 5%ಗೆ ಇಳಿಕೆಯಾಗಿದೆ ಎಂದು ಗೃಹಬಳಕೆ ವೆಚ್ಚ ಸಮೀಕ್ಷೆ 2022-23 (ಎಚ್‌ಸಿಇಎಸ್‌) ಹೇಳುತ್ತದೆ ಎಂದು ನೀತಿ ಆಯೋಗದ ಮುಖ್ಯಸ್ಥ ಬಿವಿಆರ್‌ ಸುಬ್ರಹ್ಮಣ್ಯ ಹೇಳಿಕೊಂಡಿದ್ದಾರೆ. ಅಂತೆಯೇ, ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ವರದಿಯಂತೆ ಅಂದಾಜು 24.82 ಕೋಟಿ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಅಂತಲೂ ಇದೇ ನೀತಿ ಆಯೋಗ ಹೇಳುತ್ತಿದೆ. ಎಂಪಿಐ ವರದಿಯ ಪ್ರಕಾರ ದೇಶದಲ್ಲಿನ ಬಡತನ ಪ್ರಮಾಣವು 11.28% ಇದೆ. ಇನ್ನು, ದೇಶದ 80 ಕೋಟಿ ಜನರು ಪಡಿತರ ವ್ಯವಸ್ಥೆಯಡಿ ಅಕ್ಕಿ ಕೊಡುತ್ತಿದ್ದೇವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಭಾರತದಲ್ಲಿನ ಬಡತನದ ಅಸಲಿಯತ್ತು ಬೇರೆಯೇ ಇದೆ. ಇತರ ವರದಿಗಳು ಬೇರೆಯದ್ದೇ ಲೆಕ್ಕ ಕೊಡುತ್ತವೆ. ಅದೆಲ್ಲವನ್ನೂ ನೋಡುವುದಕ್ಕೂ ಮುನ್ನ, ಎಚ್‌ಸಿಇಎಸ್‌ ವರದಿಯ ಅಸಲಿಯತ್ತನ್ನು ನೋಡೋಣ…

ಹೇಗೂ, ಇದು ಚುನಾವಣೆಯ ಕಾಲ. ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ ಈ ಚುನಾವಣೆ ಆಡಳಿತಾರೂಢ ಬಿಜೆಪಿಗೂ, ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೂ, ಅಷ್ಟೇ ಏಕೆ, ಪ್ರಜಾಪ್ರಭುತ್ವ ಉಳಿವಿಗಾಗಿ ತುಡಿಯುತ್ತಿರುವ ಪ್ರತಿಯೊಬ್ಬ ಪ್ರಜೆಗೂ ಮಹತ್ವದ ಚುನಾವಣೆ. ಇಂತಹ ಸಂದರ್ಭದಲ್ಲಿ ಆಳುವ ಪಕ್ಷ ಜನರನ್ನು ಓಲೈಕೆ ಮಾಡಲು, ತನ್ನ ಯಶಸ್ಸಿನ ಕತೆ ಕಟ್ಟುವುದು ಸಾಮಾನ್ಯ. ಆಳುವ ಪಕ್ಷಕ್ಕೆ ಪ್ರಚಾರ ಕೊಡಲು ಸತ್ಯವನ್ನು ಮರೆಮಾಚಿ, ನೀತಿ ಆಯೋಗವು ಬಡತನವು 5%ಗಿಂತ ಕಡಿಮೆಯಾಗಿದೆ ಎಂದು ಹೇಳುತ್ತಿದೆ ಮತ್ತು ಸರ್ಕಾರವನ್ನು ಶ್ಲಾಘಿಸುತ್ತಿದೆ ಎಂಬ ಆರೋಪ ಕಳೆದೊಂದು ತಿಂಗಳಿನಿಂದ ಕೇಳಿಬರುತ್ತಿದೆ.

2011-12ಕ್ಕೆ ಹೋಲಿಸಿದರೆ 2022-23ರಲ್ಲಿ ಬಡತನ ಪ್ರಮಾಣವು ಭಾರೀ ಕುಸಿತಗೊಂಡಿದೆ ಎಂದು ಹೇಳುವ ಎಚ್‌ಸಿಇಎಸ್‌ 27 ಪುಟಗಳ ವರದಿ ನೀಡಿದೆ. ಆದರೆ, ಆ ವರದಿಯಲ್ಲಿ ಏನನ್ನೂ ವಿವರಿಸಿಲ್ಲ ಎಂಬುದು ಗಮನಾರ್ಹ. ಅಲ್ಲದೆ, 10 ವರ್ಷಗಳ ಹಿಂದಿನ ವರದಿಗೆ ಹೋಲಿಸಿದರೆ, ಪ್ರಸ್ತುತ ಎಚ್‌ಸಿಇಎಸ್‌ ಹಲವಾರು ವಿಧಾನಗಳನ್ನು ಬದಲಿಸಿಕೊಂಡಿದೆ. ಹೀಗಾಗಿ, ಹಿಂದಿನ ವರದಿ ಮತ್ತು ಪ್ರಸ್ತುತ ವರದಿಗಳನ್ನು ಒಂದಕ್ಕೊಂದು ಹೋಲಿಸಲು ಸಾಧ್ಯವೇ ಇಲ್ಲ. ಆದರೂ, ನೀತಿ ಆಯೋಗದ ಸಿಇಒ ಎರಡೂ ಸಮೀಕ್ಷೆಗಳನ್ನು ಹೋಲಿಸಿ, ಮೋದಿ ಸರ್ಕಾರವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಡತನ ಅಳೆಯಲು ಬಡತನ ರೇಖೆಯೇ ಇಲ್ಲ
ಅಂದಹಾಗೆ, ಬಡತನವನ್ನು ಅಳೆಯಲು ಹಿಂದಿನ ಯೋಜನಾ ಆಯೋಗದ ರೀತಿಯಲ್ಲಿ ನೀತಿ ಆಯೋಗ ನಿರ್ದಿಷ್ಟ ಬಡತನದ ರೇಖೆಯನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಇದೇ ಸಮಯದಲ್ಲಿ, ದುಡಿಮೆ, ವೇತನ ಕಡಿಮೆಯಾಗುತ್ತಿರುವ ವೇಳೆ, ಅಗತ್ಯ ವಸ್ತುಗಳ ಬೆಲೆ ಮತ್ತು ದಿನ ಬಳಕೆಯ ವೆಚ್ಚವು ಏರುತ್ತಿದೆ. ಇದರ ಬಗ್ಗೆ ಎಚ್‌ಸಿಇಎಸ್‌ ವರದಿ ಬೆಳಕು ಚೆಲ್ಲಿಲ್ಲ/ಬಹಿರಂಗ ಪಡಿಸಿಲ್ಲ.

ಇನ್ನು, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿರುವುದು ಹಾಗೂ ನಗರ ಪ್ರದೇಶಗಳಲ್ಲಿ ಕಾರನ್ನು ಹೊಂದಿರುವುದನ್ನು 2022-23ರ ಎಚ್‌ಸಿಇಎಸ್‌ ವರದಿಯು ಮಾನದಂಡ ಮಾಡಿಕೊಂಡಿದೆ. ಕೃಷಿ ಭೂಮಿ ಹೊಂದಿರುವುದರ ಹೊರತಾಗಿಯೂ ಕೃಷಿ ಕಾರ್ಮಿಕರೇ ಹೆಚ್ಚಿರುವ ದೇಶದಲ್ಲಿ ಆ ಶ್ರಮವನ್ನು ವರದಿ ನಗಣ್ಯ ಮಾಡಿದೆ.

The Truth Behind the Government’s Claim That Poverty Has Fallen to Just 5%

ಎಲ್ಲಕ್ಕಿಂತ ಮುಖ್ಯವಾಗಿ, ಎಚ್‌ಸಿಇಎಸ್‌, ಪ್ರಸ್ತುತ ದುಬಾರಿಯಾಗಿರುವ ಬೆಲೆ ಏರಿಕೆಯ ನಡುವೆಯೂ ಸರಾಸರಿ ಮಾಸಿಕ ತಲಾ ಬಳಕೆಯ ವೆಚ್ಚವನ್ನು (ಎಪಿಸಿಇ) ಗ್ರಾಮೀಣ ಭಾಗದ ಕುಟುಂಬಗಳಿಗೆ 3,773 ರೂ. ಮತ್ತು ನಗರ ಕುಟುಂಬಗಳಿಗೆ 6,459 ರೂ.ಗೆ ನಿಗದಿ ಮಾಡಿ, ಮಾನದಂಡವೆಂದು ಹೇಳಿಕೊಂಡಿದೆ. ಆ ಮೂಲಕ, ಭಾrತದಲ್ಲಿ ಬಡತನವು ಕೇವಲ 5% ಮಾತ್ರವೇ ಇದೆ ಎಂದು ವಾದಿಸುತ್ತಿದೆ. ಒಮ್ಮೆ ಯೋಚಿಸಿ; ಈ ದುಬಾರಿ ದುನಿಯಾದಲ್ಲಿ ಒಬ್ಬ ವ್ಯಕ್ತಿ 3,773 ರೂ.ಗಳಲ್ಲಿ ತಿಂಗಳು ಪೂರ್ತಿ ಬದುಕಲು ಸಾಧ್ಯವೇ. ಅಷ್ಟು ಹಣದಲ್ಲಿ ಜೀವನ ಮಾಡಿದರೂ, ಆತ ಬಡವನಲ್ಲವೇ? ಆತ ಬಡತನ ರೇಖೆಗಿಂತ ಮೇಲಿರಲು ಸಾಧ್ಯವೇ?

ಗಮನಿಸಬೇಕಾದ್ದು ಏನೆಂದರೆ, ಎಚ್‌ಸಿಎಎಸ್‌ ಬಡತನ ರೇಖೆಯನ್ನೇ ಗುರುತಿಸಿಲ್ಲ ಮತ್ತು ನೀಡಿಲ್ಲ. ಮಾತ್ರವಲ್ಲದೆ, ಬಡತನ ನಿರ್ಮೂಲನೆಗೆ ಕಾರಣವಾದ ಯೋಜನೆಗಳೇನು? ಯಾವ ಕ್ರಮಗಳಿಂದಾಗಿ ಬಡತನ ಪ್ರಮಾಣ ಕುಸಿದಿದೆ ಎಂಬುದನ್ನೂ ಹೇಳಿಲ್ಲ. ಅಂದಮೇಲೆ, ಬಡತನ ಕುಸಿದಿದೆ ಎಂದು ಹೇಗೆ ಹೇಳಲು ಸಾಧ್ಯವಾಯಿತು?

ನಿರುದ್ಯೋಗ ಹೆಚ್ಚಾದಾಗ ಬಡತನ ಕಡಿಮೆಯಾಗಲು ಹೇಗೆ ಸಾಧ್ಯ?
ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗಗಳು ಸಿಗದೇ ಇರುವ ಹಾಗೂ ವೇತನವೂ ಕಡಿಮೆಯಾಗಿರುವ ಪರಿಸ್ಥಿತಿಯಲ್ಲಿ ಬಡತನವು ಹೇಗೆ ಗಣನೀಯವಾಗಿ ಕಡಿಮೆಯಾಗಲು ಸಾಧ್ಯ? 2004-05 ರಿಂದ 2011-12 ರವರೆಗೆ ವೇತನದಲ್ಲಿ ನಿರಂತರ ಏರಿಕೆ ಕಂಡುಬಂದಿತ್ತು. ಆದರೆ, 2013 ಮತ್ತು 2017ರ ನಡುವೆ ವೇತನದಲ್ಲಿ ಹೆಚ್ಚಳವಾಗುವುದು ಸ್ಥಗಿತಗೊಂಡಿತ್ತು. ಅಲ್ಲದೆ, ನಿರುದ್ಯೋಗ ಪ್ರಮಾಣವು 2011-12ರಲ್ಲಿ 1 ಕೋಟಿ ಇದ್ದರೆ, ಇದೀಗ, 3.8 ಕೋಟಿಗೆ ಏರಿಕೆಯಾಗಿದೆ.

ಭಾರತದಲ್ಲಿ, 2021-22ನೇ ಆರ್ಥಿಕ ವರ್ಷದಲ್ಲಿ 19 ಕೋಟಿ ಕಾರ್ಮಿಕರು ದಿನಕ್ಕೆ ಕೇವಲ 100 ರೂಪಾಯಿಗಾಗಿ ದುಡಿಯುತ್ತಿದ್ದಾರೆ. ಇದು 2010ರಲ್ಲಿ ಕನಿಷ್ಠ ಕೂಲಿಯಾಗಿತ್ತು. ಅಂದಹಾಗೆ, 2021-12ರಲ್ಲಿ ಈ 100 ರೂ.ಗಾಗಿ 10.6 ಕೋಟಿ ಕಾರ್ಮಿಕರು ದುಡಿಯುತ್ತಿದ್ದರು. ಅಂದರೆ, ಈ 10 ವರ್ಷಗಳಲ್ಲಿ 100 ರೂ.ಗೆ ದುಡಿಯುವ ಕಾರ್ಮಿಕರ ಸಂಖ್ಯೆ 9 ಕೋಟಿಯಷ್ಟು ಹೆಚ್ಚಾಗಿದೆ.

ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಬಡ ಕಾರ್ಮಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 2021-22ರಲ್ಲಿ 100 ರೂ.ನಿಂದ 200 ರೂ. ನಡುವೆ ದುಡಿಯುತ್ತಿರುವ 14.4 ಕೋಟಿ ಕಾರ್ಮಿಕರು ದೇಶದಲ್ಲಿದ್ದಾರೆ ಎಂದು ಗುರುತಿಸಲಾಗಿದೆ. ಈ ಕಾರ್ಮಿಕರು ಮತ್ತು ಅವರ ಕುಟುಂಬವನ್ನು ಬಡ ಮತ್ತು ದುಬರ್ಲ ವರ್ಗವೆಂದು ವರ್ಗೀಕರಿಸಬಹುದು.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-2 | ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ? ಸುಳ್ಳಿನ ಸುಳಿಗೆ ನಿರುದ್ಯೋಗಿ ಯುವಜನರು ಬಲಿ!

ಹೆಚ್ಚುವರಿಯಾಗಿ, ಇನ್ನೂ 12.75 ಕೋಟಿ ಕಾರ್ಮಿಕರು ದಿನಕ್ಕೆ 200 ರೂ.ನಿಂದ 300 ರೂ.ಗಳನ್ನಷ್ಟೇ ದುಡಿಯುತ್ತಿದ್ದಾರೆ. ಅಂದರೆ, ಇವರ ಮಾಸಿಕ ಸರಾಸರಿ ಆದಾಯ 9,000 ರೂ. ಅಥವಾ ಅದಕ್ಕಿಂತ ಕಡಿಮೆ. ಇವರನ್ನು ಬಡವರು ಎನ್ನಲು ಸಾಧ್ಯವಿಲ್ಲವೇ?

INC Andhra Pradesh on X: "Unemployment rate at 45-year high in India #IndiasJobCrisis https://t.co/1mzWMETkW6" / X

ಕಾರ್ಮಿಕ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ಕಾರ್ಮಿಕರು ತಮ್ಮ ಕುಟುಂಬವನ್ನು ಸಲಹಲು ಮತ್ತು ಜೀವನ ಸಾಗಿಸಲು ತಿಂಗಳಿಗೆ ಕನಿಷ್ಠ 17,000 ರೂ. ವೇತನ ಬೇಕೆಂದು ಹೇಳುತ್ತದೆ. ಹೀಗಿರುವಾಗ 9,000 ರೂ. ಅಥವಾ ಅದಕ್ಕಿಂತ ಕಡಿಮೆ ದುಡಿಯುವ ಕಾರ್ಮಿಕರು ತಮ್ಮ ಕುಟುಂಬವನ್ನು ಹೇಗೆ ನಿರ್ವಹಿಸಬಹುದು. ಅವರು ಬಡವರಲ್ಲವೇ?

ರಂಗರಾಜನ್ ಸಮಿತಿ ಸೂಚಿಸುವ ಬಡತನ ರೇಖೆ ಹೇಳುವುದೇನು?
ಅಂದಹಾಗೆ, ತೆಂಡೂಲ್ಕರ್‌ ಸಮಿತಿಯು ಗ್ರಾಮೀಣ ಭಾಗದಲ್ಲಿ ಮಾಸಿಕ ತಲಾ ಬಳಕೆಯ ವೆಚ್ಚ 1,575 ರೂ.ಗಿಂತ ಕಡಿಮೆ ಇದ್ದರೆ, ಅವರನ್ನು ಬಡತನ ರೇಖೆಗಿಂತ ಕೆಳಗಿರುವವರೆಂದು ಗುರುತಿಸಬಹುದು ಎಂದು ಹೇಳಿತ್ತು. ಬಹುಶಃ, ಎಚ್‌ಸಿಇಎಸ್‌, ಇದೇ ಮಾನದಂಡದ ಮೇಲೆ ಅಳೆದು, ಬಡತನವು 5%ಗಿಂತ ಕಡಿಮೆಯಾಗಿದೆ ಎಂದು ಹೇಳಿಕೊಂಡಿದೆ.

ಅಂದಹಾಗೆ, ರಂಗರಾಜನ್ ಸಮಿತಿಯ ಸೂಚಿಸಿದ ಬಡತನ ರೇಖೆಯನ್ನು ನಾವು ಪರಿಗಣಿಸಿದರೆ 2022-23ರಲ್ಲಿ ಭಾರತದಲ್ಲಿ 20% ಬಡತನವಿದೆ ಎಂದು ಲೆಕ್ಕಹಾಕಬಹುದು. ಈ ಸಮಿತಿಯು, ಗ್ರಾಮೀಣ ಭಾಗದಲ್ಲಿ ಮಾಸಿಕ ತಲಾ ಬಳಕೆಯ ವೆಚ್ಚವನ್ನು 1,876ಕ್ಕೆ ನಿಗದಿ ಮಾಡಿದೆ.

ಈ ಮಾಸಿಕ ತಲಾ ಬಳಕೆಯ ವೆಚ್ಚವು ಕರ್ನಾಟಕದಲ್ಲಿ ಸರಾಸರಿ 4,397 ರೂ. ಇದ್ದರೆ, ಮೋದಿ ಅವರ ಗುಜರಾತ್ ಮಾದರಿಯ ಗುಜರಾತ್‌ನಲ್ಲಿ 3,798 ರೂ. ಇರುವುದು ಅಚ್ಚರಿ ಮೂಡಿಸುತ್ತದೆ.

ವಿಶ್ವಬ್ಯಾಂಕ್‌ ಹೇಳುವ ಬಡತನ ರೇಖೆ
ಅಂತಾರಾಷ್ಟ್ರೀಯ ಬಡತನ ರೇಖೆಯನ್ನು ಬಳಸಿಕೊಂಡು ಬಡತನವನ್ನು ವಿಶ್ವ ಬ್ಯಾಂಕ್ ವ್ಯಾಖ್ಯಾನಿಸಿದೆ. ಇದು ಪ್ರತಿ ವ್ಯಕ್ತಿಯ ದೈನಂದಿನ ಬಳಕೆಯ ವೆಚ್ಚಳವು ಕನಿಷ್ಠ 179.30 ರೂ. ಇರಬೇಕೆಂದು ಹೇಳುತ್ತದೆ. ಅಂದರೆ, ಮಾಸಿಕ ತಲಾ ಬಳಕೆಯ ವೆಚ್ಚವು 5,379 ರೂ. ಆಗಿರುತ್ತದೆ. ಈ ಮಾನದಂಡವನ್ನು ಅನುಸರಿಸಿದರೆ, ಭಾರತದ ಬಡತನ ಪ್ರಮಾಣವು 23.6%ನಿಂದ 24.1% ಆಗಿರುತ್ತದೆ.

ದೀಪ ಹಚ್ಚಿ – ಬಡತನ ನಿವಾರಣೆ ಆಗುತ್ತದೆ ಎಂದಿದ್ದ ಮೋದಿ
ಜನವರಿ 22ರಂದು ರಾಮ ಮಂದಿರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು, ”ಜನವರಿ 22ರಂದು ದೇಶದ ಎಲ್ಲ ಮನೆಗಳಲ್ಲಿ ದೀಪ ಹಚ್ಚುವುದರಿಂದ ಬಡತನ ನಿರ್ಮುಲನೆಗೆ ಪ್ರೇರಣೆ ದೊರೆಯುತ್ತದೆ. ಎಲ್ಲರೂ ರಾಮ ಜ್ಯೋತಿಯನ್ನು ಬೆಳಗಬೇಕು” ಎಂದು ಜನವರಿ 19ರಂದು ಕರೆಕೊಟ್ಟಿದ್ದರು.

ಬಡತನವನ್ನೇ ನಿರ್ಮೂಲನೆ ಮಾಡಿದ್ದೇವೆ. 5%ಗೆ ಇಳಿಸಿದ್ದೇವೆ ಎಂದು ಬಿಜೆಪಿ ಮತ್ತು ಬಿಜೆಪಿ ಸರ್ಕಾರದ ಅಧೀನದಲ್ಲಿರುವ ನೀತಿ ಆಯೋಗ ಬೊಬ್ಬೆ ಹೊಡೆಯುತ್ತಿರುವಾಗ, ಮೋದಿ ಸರ್ಕಾರವನ್ನು ಹೊಗಳಿ ಅಟ್ಟಕ್ಕೇರಿಸುವಾಗ, ಮೋದಿ ಅವರು ದೀಪ ಹಚ್ಚಿ, ಬಡತನ ನಿರ್ಮೂಲನೆ ಮಾಡುವ ಅಗತ್ಯವಾದರೂ ಏನಿದೆ?

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-1 | ಕೊರೊನಾಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್‌ ಎಲ್ಲೋಯ್ತು?

ಅಂದಹಾಗೆ, ಇದೇ ಮೋದಿ ಅವರು 2020ರಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದಾಗ, ತಟ್ಟೆ, ಗಂಟೆ, ಜಾಗಟೆ ಬಡಿಯಿರಿ, ದೀಪ ಉರಿಸಿ ಕೊರೋನ ಓಡಿಸಿ ಎಂದು ಕರೆಕೊಟ್ಟಿದ್ದರು. ಆದರೆ, ಕೊರೋನ 2ನೇ ಅಲೆಯಲ್ಲಿ ಇದೀಗ ದೇಶವೇ ಸ್ಮಶಾನವಾಗಿ ಮಾರ್ಪಟ್ಟಿತ್ತು.

ದುಡಿಯುವವರ ಸಂಖ್ಯೆಯಲ್ಲಿ ಕುಸಿತ, ನಿರುದ್ಯೋಗದಲ್ಲಿ ಹೆಚ್ಚಳ ಮತ್ತು ವೇತನದಲ್ಲಿನ ಕುಸಿತ ಹಾಗೂ ಅಗತ್ಯ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಸಮಯದಲ್ಲಿ ಭಾರತದ ಬಡತನವು ಕಡಿಮೆಯಾಗಿದೆ ಎಂಬುದು ಮೋದಿ ಅವರ ಮತ್ತೊಂದು ‘ಜುಮ್ಲಾ’. ನಾವು ಕಾರ್ಮಿಕರ ಮಾರುಕಟ್ಟೆ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕು. ಜನರ ಬದುಕಿನ ಸ್ಥಿತಿಗತಿ ಹೇಗಿದೆ ಎಂಬುದನ್ನು ಅರಿಯಬೇಕು. ಅದರ ಜೊತೆಗೆ, ಮೋದಿ ಮತ್ತು ಅವರ ಭಜನಾ ಮಂಡಳಿಯ ಸುಳ್ಳುಗಳನ್ನು ಬಹಿರಂಗಗೊಳಿಸಬೇಕು.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-3 | 100 ಸ್ಮಾರ್ಟ್‌ ಸಿಟಿಗಳು ಎಲ್ಲಿವೆ? ಇದು ಮೋದಿಯ ‘ಸ್ಮಾರ್ಟ್‌’ ಸುಳ್ಳು!

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶಕ್ಕೆ ಮಣಿದು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌...

ಜೈಲಿನಲ್ಲಿ ದೆಹಲಿ ಸಿಎಂ; ಎಎಪಿ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಪತ್ನಿಗೆ ಪ್ರಮುಖ ಪಾತ್ರ

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದು ಈಗ...

ತೆಲಂಗಾಣ | 4,568 ಕೋಟಿ ರೂ. ಒಡೆಯ ಕೆ.ವಿಶ್ವೇಶ್ವರ ರೆಡ್ಡಿ ರಾಜ್ಯದ ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ

ತೆಲಂಗಾಣದ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...