2019ರಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳ ಕತೆ ಏನಾಯಿತು?

Date:

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರ ಮುಖ ಹೊತ್ತ ಬಿಜೆಪಿ ಪ್ರಣಾಳಿಕೆ ಸಾಲು ಸಾಲು ಆಶ್ವಾಸನೆಗಳನ್ನು ನೀಡಿತ್ತು. ಅವುಗಳೆಲ್ಲವನ್ನು ಬಿಜೆಪಿ ಮೂಸಿಯೂ ಸಹ ನೋಡುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ ಮಾಯದ ಮಾತಿಗೆ ನಂಬಿ ಮತ್ತೆ ಜನರು ಬಹುಮತ ನೀಡಿದ್ದರು. ಈಗ 2024 ರ ಲೋಕಸಭಾ ಚುನಾವಣೆ ಬಂದಿದೆ. ಈ ನಿಟ್ಟಿನಲ್ಲಿ ಮೋದಿ ಗ್ಯಾರಂಟಿ ಸಂಕಲ್ಪ ಪತ್ರ ಅಂದರೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ. ಮತ್ತದೇ ತೌಡು ಕುಟ್ಟಲಾಗಿದೆ. ಇದರ ಸತ್ಯಾಸತ್ಯತೆ ತಿಳಿಯಲು 2019ರ ಬಿಜೆಪಿ ಪ್ರಣಾಳಿಕೆಯ ಪೋಸ್ಟ್ ಮಾರ್ಟಂ ಮಾಡುವುದು ಬಹುಮುಖ್ಯ.

ಇತ್ತೀಚೆಗೆ ಒಂದು ರ್ಯಾಲಿಯಲ್ಲಿ ಮೋದಿಯವರು ಮಾತನಾಡುತ್ತ ʼಮೀನು ತಿನ್ನುವವರನ್ನುʼ ಅಣಕಿಸಿದ್ದರು. ದುರದೃಷ್ಟವೆಂದರೆ 2019ರ ಬಿಜೆಪಿ ಪ್ರಣಾಳಿಕೆಯಲ್ಲಿ ಇದೇ ಮೋದಿಜಿ ನೀಲಿ ಕ್ರಾಂತಿ – ಮತ್ಸ್ಯ ಸಂಪದ ಯೋಜನೆಯ ಮೂಲಕ ಮೀನುಗಾರರಿಗೆ 10,000 ಕೋಟಿ ಅನುದಾನ ನೀಡಲಾಗುವುದೆಂದು ಪುಂಗಿ ಬಿಟ್ಟಿದ್ದರು. ಮೀನು ತಿನ್ನುವವರನ್ನು ಆಡಿಕೊಳ್ಳುವ ಈ ಮೋದಿಜಿ ಮತ್ತೊಂದು ಕಡೆ ಮೀನುಗಾರರಿಗೆ ಸಹಾಯ ಮಾಡಲು ಸಾಧ್ಯವೇ? ಇದೇ ಓ ಬಿಜೆಪಿ-ಮೋದಿಯ ಎರಡು ನಾಲಿಗೆಗಳ ಅವಾಂತರ. 2019ರಲ್ಲಿ ಮೋದಿ-ಬಿಜೆಪಿಯ ಮತ್ತಷ್ಟು ಆಶ್ವಾಸನೆಗಳನ್ನು ಹಾಗೂ ಅವುಗಳನ್ನು ಜಾರಿಗೊಳಿಸದೇ ಕೇವಲ ಟ್ರಿಪಲ್ ತಲಾಖ್, 370, ಸಮಾನ ನಾಗರಿಕ ಸಂಹಿತೆ, CAA-NRC ಮುಂತಾದ ಭಾವನಾತ್ಮಕ ಅಂಶಗಳನ್ನು ಜಾರಿಗೊಳಿಸಿ ಜನರಿಗೆ ನಯಾಪೈಸೆ ಲಾಭವಿಲ್ಲದ ಕಾರ್ಯಕ್ರಮಗಳನ್ನು ನೀಡಿ ಹಿಂಬದಿಯಲ್ಲಿ ಚುನಾವಣಾ ಬಾಂಡ್ ಭ್ರಷ್ಟಾಚಾರ ಮಾಡಿಕೊಂಡ ಮೋದಿಜಿ 2019ರ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆಗಳಲ್ಲಿ 1% ಆಶ್ವಾಸನೆಯನ್ನೂ ಸಹ ಜಾರಿಗೊಳಿಸಿಲ್ಲ.
2019ರ ಬಿಜೆಪಿ ಪ್ರಣಾಳಿಕೆ ಆಶ್ವಾಸನೆಗಳು: ಜನರಿಗೆ ಮೂರು ನಾಮ.

ರೈತರ ಆದಾಯವನ್ನು 2022 ರೊಳಗಾಗಿ ದುಪ್ಪಟ್ಟು ಮಾಡುತ್ತೇವೆ. ಎರಡು ಎಕರೆವರೆಗೆ ಭೂಮಿ ಹೊಂದಿರುವ ಭಾರತದ ಎಲ್ಲಾ ರೈತರಿಗೆ ಧನಸಹಾಯ ಮಾಡುತ್ತೇವೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಪಿಂಚಣಿ ನೀಡುತ್ತೇವೆ. ಬಡ್ಡಿ ಇಲ್ಲದೆ ರೈತರಿಗೆ 1 ಲಕ್ಷ ಸಾಲ ನೀಡುತ್ತೇವೆ. ರಫ್ತು ಹೆಚ್ಚು ಮಾಡಿ ಆಮದು ಕಡಿಮೆ ಮಾಡುತ್ತೇವೆ. ಮುಂದಿನ 5 ವರ್ಷಗಳಲ್ಲಿ ಸಾವಯವ ಕೃಷಿಗಾಗಿ 20 ಲಕ್ಷ ಹೆಕ್ಟೇರ್ ಭೂಮಿಗೆ ಪ್ರೋತ್ಸಾಹ ನೀಡುತ್ತೇವೆ. ಇದಕ್ಕಾಗಿ ಗೋಶಾಲೆಗಳೊಂದಿಗೆ ಸಾವಯವ ಕೃಷಿಯನ್ನು ಬೆಸೆಯುತ್ತೇವೆ. 2019 ರೊಳಗಾಗಿ 68 ನೀರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸುತ್ತೇವೆ. 2022 ರಷ್ಟೊತ್ತಿಗೆ 10,000 ರೈತ ಉತ್ಪಾದನಾ ಸಂಘಗಳನ್ನು ಸ್ಥಾಪಿಸುತ್ತೇವೆ. ರೈತರಿಗಾಗಿ ಮೊಬೈಲ್ ಆಪ್ ತಯಾರಿಸುತ್ತೇವೆ. ಯುವ ಕೃಷಿ ವಿಜ್ಞಾನಿಗಳು ಕೃಷಿ ಅಭಿವೃದ್ಧಿಗಾಗಿ AI, MACHINE LEARNING ಮುಂತಾದ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವಂತೆ ಮಾಡುತ್ತೇವೆ. ಈ ಮೂಲಕ ರೈತರಿಗೆ ಬಲ ತುಂಬುತ್ತೇವೆ ಎಂದು ಪುಂಗಿ ಬಿಟ್ಟಿದ್ದ ಮೋದಿಜಿಯವರು ಇದರಲ್ಲಿ ಒಂದನ್ನಾದರೂ ನೇರವೇರಿಸಿದ್ದಾರೆಯೇ? ಇಲ್ಲವೇ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬದಲಾಗಿ ರೈತರು ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಡಿದ್ದಕ್ಕೆ ಮೋದಿಜಿಯವರ ಪಟಾಲಂ ರೈತರನ್ನು ಭಯೋತ್ಪಾದಕರು, ದೇಶದ್ರೋಹಿಗಳು ಎಂದಿತು. ಅಷ್ಟೇ ಅಲ್ಲ ಪ್ರತಿಭಟನೆ ಮಾಡುವವರ ವಿರುದ್ಧ ಕಿರುಕುಳ ನೀಡಲಾಯಿತು. ಪ್ರತಿಭಟನೆ ಮಾಡುತ್ತಲೇ 200 ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು. ಆದರೆ ಮೋದಿ ಹೃದಯ ಕರಗಲೇ ಇಲ್ಲ. ರೈತರಿಗೆ 2019ರ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ.

2022 ರಷ್ಟೊತ್ತಿಗೆ ಭಾರತದ ಎಲ್ಲ ಕುಟುಂಬಗಳಿಗೂ ಸಾಶ್ರಯ ಯೋಜನೆ ಮೂಲಕ ವಸತಿ ಕಲ್ಪಿಸಲಾಗುವುದು. 2024 ರೊಳಗೆ ಎಲ್ಲಾ ಗ್ರಾಮದ ಮನೆಗಳಿಗೂ ನಲ್ಲಿ ಮೂಲಕ ನೀರು ಒದಗಿಸಲಾಗುವುದು (ಸುಜಲ್). 2022 ರೊಳಗೆ ಎಲ್ಲಾ ಗ್ರಾಮಪಂಚಾಯಿತಿಗಳು ಹೈಸ್ಪೀಡ್ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಕನೆಕ್ಷನ್ ಕೊಡಲಾಗುವುದು. ಬೃಹತ್ ಮಟ್ಟದಲ್ಲಿ ಗ್ರಾಮೀಣ ರಸ್ತೆಗಳನ್ನು ಮೇಲ್ಮಟ್ಟಕ್ಕೇರಿಸಲಾಗುವುದು. ಹಳ್ಳಿಗಳ 100% ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವ ಹಾಗೂ ಆ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದೂ ಸಹ ಪುಂಗಿ ಊದಲಾಗಿತ್ತು. ನಗೆಪಾಟಲೆಂದರೆ 2024ರ ಪ್ರಣಾಲಿಕೆಯಲ್ಲಿಯೂ ಇವೇ ಪುಂಗಿಯನ್ನು ಊದಲಾಗಿದೆ. ಅಂದರೆ ಈ ಆಶ್ವಾಸನೆಗಳನ್ನು ಮೋದಿಜಿ ಮೂಸಿಯೂ ನೋಡಿಲ್ಲ.

ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಎಕಾನಮಿವರೆಗೆ ಏರಿಸಲಾಗುವುದು ಎಂದಿದ್ದ ಮೋದಿಜಿ ಸರ್ಕಾರಕ್ಕೆ 5 ಟ್ರಿಲಿಯನ್ ನಲ್ಲಿ ಎಷ್ಟು ಸೊನ್ನೆಗಳಿವೆ ಎಂಬುದೇ ತಿಳಿದಿರಲಿಲ್ಲ. ಅಮಿತ್ ಶಾಗೆ ಟ್ರಿಲಿಯನ್ ಪದವೇ ತಿಳಿದಿರಲಿಲ್ಲ. ಟ್ರಿಲಿಯನ್ ಬದಲು ಟನ್ ಟನ್ ಎನ್ನುತ್ತಿದ್ದರು.

ತೆರಿಗೆ ದರವನ್ನು ಕಡಿಮೆ ಮಾಡಲಾಗುವುದು ಎಂದಿದ್ದ ಮೋದಿಜಿ ಮಾತಿಗೆ ಎಲ್ಲಿಂದ ನಗುವುದೋ ತಿಳಿಯುತ್ತಿಲ್ಲ. ಲಂಗೋಟಿಗೂ ತೆರಿಗೆ ಹಾಕುವ ಮೋದಿಜಿಯವರು ಜಿಎಸ್ಟಿ ತಂದು ದೇಶದ ಜನರ ಲೂಟಿ ಹೊಡೆದಿದ್ದಾರೆ. ಜೊತೆಗೆ ವ್ಯಾಪಾರಿಗಳಿಗೆ ಜಿಎಸ್ ಟಿ ತೆರಿಗೆ ಪದ್ಧತಿಯನ್ನು ಸರಳೀಕರಿಸಲಾಗುವುದು ಎಂದಿದ್ದರು. ಇದೆಲ್ಲವೂ ಡೋಂಗಿ ಎನ್ನುವುದಕ್ಕೆ ನಮ್ಮ ಮನೆಯ ಖರ್ಚುಗಳೇ ಸಾಕ್ಷಿ. ಕೋವಿಡ್ ಮಾರಣಾಂತಿಕ ಸಂದರ್ಭದಲ್ಲಿಯೂ ಸಹ ಈ ಮೋದಿಜಿ ಪೆಟ್ರೋಲ್ ಡೀಸಲ್ ಕಡಿಮೆ ಮಾಡದೆ ಜನರ ರಕ್ತ ಕುಡಿದಿದ್ದರು.

ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ 2024 ರಷ್ಟೊತ್ತಿಗೆ 100 ಲಕ್ಷಕೋಟಿ ಹೂಡಿಕೆ ಮಾಡಲಾಗುವುದು. 2024 ರೊಳಗೆ MSME ಗಳಿಗೆ 1 ಲಕ್ಷ ಕೋಟಿ ಸಾಲ ನೀಡಲಾಗುವುದು. ಸಣ್ಣ ವ್ಯಾಪಾರಿಗಳಿಗೆ 10 ಲಕ್ಷ ಅವಘಡ ವಿಮೆ ನೀಡಲಾಗುವುದು. ವ್ಯಾಪಾರಿ ಕ್ರೆಡಿಟ್ ಕಾರ್ಡ್ ನೀಡಲಾಗುವುದು ಎಂದಿದ್ದ ಮೋದಿಜಿಗೆ ಲಕ್ಷ ಕೋಟಿ ಲೆಕ್ಕಕ್ಕಿಲ್ಲ ಬಿಡಿ. ಅದಕ್ಕಾಗಿಯೇ 150 ಲಕ್ಷ ಕೋಟಿ ಸಾಲ ಮಾಡಿ ಶ್ರೀಮಂತ ಸ್ನೇಹಿತರಿಗೆ ಹಂಚಿದ್ದಾರೆ ಇಲ್ಲವೇ ಬೇರೆ ಪಕ್ಷದವರನ್ನು ಬಿಜೆಪಿಗೆ ಕರೆ ತರಲು ಖರ್ಚು ಮಾಡಿದ್ದಾರೆ. ದೇಶಕ್ಕಂತು ನಯಾಪೈಸೆ ಲಾಭ ಮಾಡಿ ಕೊಡಲಿಲ್ಲ ಈ ಮನುಷ್ಯ. ಇದ್ದ ಸರ್ಕಾರಿ ಕಂಪೆನಿಗಳನ್ನೂ ಸಹ ನುಂಗಿ ನೀರು ಕುಡಿದುಕೊಂಡರು.

ಎಸ್ಸಿ/ಎಸ್ಟಿ/ಒಬಿಸಿ/EWS ಉದ್ಯಮಿಗಳಿಗೆ ಬೆಂಬಲ ನೀಡಲಾಗುವುದು. ಈಶಾನ್ಯ ಭಾರತಕ್ಕಾಗಿ ಪ್ರತ್ಯೇಕ ʼಉದ್ಯಮಶೀಲತೆ ಕಾರ್ಯಕ್ರಮʼ ಹಮ್ಮಿಕೊಳ್ಳಲಾಗುವುದು ಎಂದಿದ್ದ ಮೋದಿಜಿಗೆ scsp/tsp ಕಾಯ್ದೆ ಮಾಡೋಕೆ ಮಾತ್ರ ಕಷ್ಟ. ಪಾಪ ಮಣಿಪುರಕ್ಕೆ ಬೆಂಕಿ ಬಿದ್ದಿದೆ. ಬಾಯಿ ಬಿಡೋಕೆ ಕಷ್ಟ ಪಡುವ ಮೋದಿಜಿ ಪ್ರತ್ಯೇಕ ಉದ್ಯಮಶೀಲತೆ ಕಾರ್ಯಕ್ರಮ ಕೊಡ್ತಾರಂತೆ. 5 ವರ್ಷ ಆಗೊಯ್ತು. ಬೆಂಕಿ ಹಚ್ಚುವ ಕಾರ್ಯಕ್ರಮ ಚಾಲ್ತಿಯಲ್ಲಿದೆ.

ಬೇನಾಮಿ ಆಸ್ತಿ ಹೊಂದಿರುವ ಹಾಗೂ ಅಕ್ರಮ ವಿದೇಶಿ ಖಾತೆಗಳನ್ನು ಹೊಂದಿರುವವರ ವಿರುದ್ಧ ಕಠಿಣ ಕ್ರಮವನ್ನು ಮುಂದುವರೆಸುತ್ತೇವೆ. ಭಾರತೀಯ ಬ್ಯಾಂಕುಗಳಿಗೆ ಮೋಸಗೈದು ದೇಶ ಬಿಟ್ಟು ಪಲಾಯನಗೈದ ಅಪರಾಧಿಗಳನ್ನು ಭಾರತಕ್ಕೆ ಮರಳಿ ಕರೆತಂದು ವಿಚಾರಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಎಂಬ ಈ ಆಶ್ವಾಸನೆಗೆ ಎಲ್ಲಿಂದ ನಗ್ತೀರೋ ನೀವೆ ನಗಿ.

2019ರಲ್ಲಿ ಮೋದಿ ಕೊಟ್ಟಿದ್ದ ಮತ್ತಷ್ಟು ಸುಳ್ಳು ಆಶ್ವಾಸನೆ ಇಲ್ಲಿವೆ;

 • 2024 ರೊಳಗೆ 50 ನಗರಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆ ಮಾಡಲಾಗುವುದು.
 • 2024 ರೊಳಗೆ 60,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುವುದು.
 • ಎಲ್ಲಾ ರೈಲು ಹಳಿಗಳನ್ನು 2022 ರಷ್ಟೊತ್ತಿಗೆ ಬ್ರಾಡ್ ಗೇಜ್ ಮಾಡಲಾಗುವುದು. ಎಲ್ಲಾ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ 2022 ರೊಳಗೆ ವೈ-ಫೈ ವ್ಯವಸ್ಥೆ ಮಾಡಲಾಗುವುದು.
 • 2022 ರೊಳಗೆ 1,50,000 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 2022 ರೊಳಗೆ 75 ಮೆಡಿಕಲ್ ಕಾಲೇಜು ಸ್ಥಾಪಿಸಲಾಗುವುದು. 2025 ರಷ್ಟೊತ್ತಿಗೆ ಕ್ಷಯ ರೋಗವನ್ನು ನಿರ್ಮೂಲನ ಮಾಡಲಾಗುವುದು. (ಕ್ಷಯ ರೋಗ ಮಾತ್ರೆಗಳೇ ಖಾಲಿಯಾಗಿವೆ)
 • 2024 ರೊಳಗೆ ಎಲ್ಲಾ ನಗರಗಳಲ್ಲಿ 35% ರಷ್ಟು ಮಾಲಿನ್ಯವನ್ನು ಕಡಿಮೆ ಮಾಡಲಾಗುವುದು.
 • 22 ಪ್ರಮುಖ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲಾಗುವುದು.
 • ವಿದೇಶಿಯರು ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು study in india ಯೋಜನೆ ಜಾರಿ ಮಾಡಲಾಗುವುದು.
 • EWS 10% ಕಾಯ್ದೆಯನ್ನು SC/ST/OBC ಗಳಿಗು ವಿಸ್ತರಿಸಲಾಗುವುದು.
 • 50,000 ವನ ಧನ ವಿಕಾಸ ಕೇಂದ್ರಗಳ ಮೂಲಕ ಆದಿವಾಸಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.
 • ಸಫಾಯಿ ಕರ್ಮಚಾರಿಗಳ ಹಿತದೃಷ್ಟಿಯಿಂದ ಯಾಂತ್ರೀಕರಣ ಕೈಗೊಳ್ಳಲಾಗುವುದು.
 • 2024 ರೊಳಗೆ ಬಡಕುಟುಂಬಗಳ ಪ್ರಮಾಣ ಕಡಿಮೆ ಮಾಡಿ ಪ್ರತಿಶತ ಏಕಾಂಕಕ್ಕೆ ತರಲಾಗುವುದು.
 • ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ತೆರಿಗೆ ವಿನಾಯಿತಿ ಪ್ರಮಾಣವನ್ನು ಹೆಚ್ಚಿಸಲಾಗುವುದು.
 • ಗಂಗೆಯನ್ನು ಸ್ವಚ್ಚಗೊಳಿಸುತ್ತೇವೆ.
 • ರೈತರ ಬೆಳೆಗೆ MSP ನೀಡಲು ಯೋಜನೆ ರೂಪಿಸಲಾಗುವುದು.

ಉಫ್ 2019 ರಲ್ಲಿ ಮೋದಿಜಿ ಆಶ್ವಾಸನೆಗಳಿಗೆ ಬೆಲೆ ಕೊಟ್ಟು ಮೂರು ನಾಮ ಹಾಕಿಕೊಂಡಿರುವವರು ನಿಮ್ಮ ಹಣೆಯನ್ನು ಮುಟ್ಟಿಕೊಳ್ಳಿ. ಮತ್ತದೇ ತಪ್ಪನ್ನು 2024ರಲ್ಲಿ ಮಾಡದಿರಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೆಮಲ್ ಚಂಡಮಾರುತ| ಬಂಗಾಳದಲ್ಲಿ ಭೂಕುಸಿತ ಸಾಧ್ಯತೆ; ವಿಮಾನ, ರೈಲುಗಳು ರದ್ದು

ರೆಮಲ್ ಚಂಡಮಾರುತ ಇಂದು (ಮೇ 26) ರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದ್ದು,...

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ: ಮುಖ್ಯ ಚುನಾವಣಾ ಆಯುಕ್ತ

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್...

ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ

ಉತ್ತರ ಪ್ರದೇಶ ಶಹಜಹಾನ್‌ಪುರದಲ್ಲಿ ಬಸ್‌ ಹಾಗೂ ಟ್ರಕ್ ನಡುವೆ  ಸಂಭವಿಸಿದ ಭೀಕರ...

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...