ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

Date:

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ

- Advertisement -

ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ ಯುದ್ಧ ಗಳ ನಡುವಿನ ದಶಕ ಗಳಲ್ಲಿ ಜನಿಸಿದ ಅವರು 1992 ರಲ್ಲಿ ತೀರಿ ಹೋದರು. ತಮ್ಮ ಏಳು ದಶಕಗಳಲ್ಲಿ 25,000 ಕ್ಕೂ ಹೆಚ್ಚು ಲೇಖನ, ಕತೆ, ಕಾದಂಬರಿ, ಹಾಗೂ ವಿಜ್ಞಾನ ಲೇಖನ ಗಳನ್ನು ರಚಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಅವರ ಸಣ್ಣ ಕತೆ, ಕಾದಂಬರಿ ಹಾಗೂ ಇತರ ಲೇಖನಗಳು ಸಾಹಿತ್ಯದ ಪರಿಭಾಷೆಯನ್ನಲ್ಲದೇ ವಿಜ್ಞಾನದ ಪರಿಭಾಷೆಯ‍ನ್ನೂ ಬದಲಿಸಿದವು. ವಿಜ್ಞಾನದ ಸಿದ್ಧಾಂತ ಗಳನ್ನು ಮಿಥಿಕ ಗಳನ್ನಾಗಿ ಬರೆಯಲು ಹೊರಟ ಆಸೀಮೋವ ಅವರು ಸಕಲ ಮನುಕುಲದ ಜ್ಯೋತಿಷಿ ಗಳಂತೆ ಕೆಲಸ ಮಾಡಿದರು. ಅವರು 50- 60 ರ ದಶಕ ಗಳಲ್ಲಿ ಊಹಿಸಿ, ಕಲ್ಪಿಸಿ, ಅಭ್ಯಾಸ ಮಾಡಿ ಬರೆದ ಕತೆಗಳಲ್ಲಿ ಬರುವ ತಂತ್ರಜ್ಞಾನ, ಯಂತ್ರೋಪಕರಣ , ವೈಜ್ಞಾನಿಕ ಮನೋಭಾವದ ಲಹರಿ ಎಲ್ಲವೂ ನಂತರದ ದಶಕ ಗಳಲ್ಲಿ ನಿಜವಾಗಿ ಹೋದವು.

ಆಸೀಮೋವ ಅವರ ಅನೇಕ ಕೃತಿಗಳು ವಿಶ್ವಖ್ಯಾತಿ ಪಡೆದವು. ಯುರೋಪಿಯನ್ ಯಹೂದೀ ಕುಟುಂಬದಲ್ಲಿ ಜನಿಸಿದ್ದ ಆಸೀಮೋವ ಅವರು ಬರೆದ ದ ಲಾಸ್ಟ್ ಕ್ವಶ್ಚನ್ ಎನ್ನುವ ಕತೆ ಎಷ್ಟು ಜನಪ್ರಿಯ ವಾಯಿತು ಎಂದರೆ, ಬೈಬಲ್ ಅನ್ನು ಮತ್ತೆ ಮತ್ತೆ ಓದಿ ಅದರಲ್ಲಿ ಹೊಸ ಅರ್ಥ ಹುಡುಕುತ್ತಿದ್ದ ಧರ್ಮನಿಷ್ಟ ಕ್ರಿಶ್ಚಿಯನ್ ರಿಗೆ ಅದು ದಾರಿದೀಪ ವಾಯಿತು.

ಆದರೆ ಅವರ ಪ್ರಭಾವ ಅಷ್ಟಕ್ಕೇ ನಿಲ್ಲಲಿಲ್ಲ. ಅವರು ತಮ್ಮ ಕೃತಿ ಗಳಲ್ಲಿ ಅನೇಕ ಮೌಲಿಕ ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಶ್ನೆ ಗಳನ್ನು ಎತ್ತಿದರು. ಅವರು ಒಬ್ಬ ಆಕೆಡೆಮಿಕ್ ಸಮಾಜ ಶಾಸ್ತ್ರಜ್ಞ ರಂತೆ ಯೋಚಿಸುತ್ತಿದ್ದರು ಎನ್ನುವುದನ್ನು ಪುರಾವೆ ಗಳ ಮೂಲಕ ಸಿದ್ಧ ಪಡಿಸಿದವವು.

ಇವು ಅನೇಕ ವಿದ್ವಾಂಸ ರು ಅವರ ಕೃತಿಗಳ ಮರು ಅಧ್ಯಯನ ಮಾಡಲಿಕ್ಕೆ, ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಕ್ಕೆ ಪ್ರೇರೇಪಿಸಿದವು. ನಮ್ಮ ನಾಳೆಯ ಸಮಾಜದ ಬಗ್ಗೆ ಕೇವಲ ಮಾನವಿಕ ಅಧ್ಯಯನ ಕಾರರು ಅಷ್ಟೇ ಅಲ್ಲ, ವಿಜ್ಞಾನ ಬರಹಗಾರರು ಸಹ ಕರಾರುವಾಕ್ಕಾದ ಮುನ್ಸೂಚನೆ ನೀಡಬಹುದು ಎನ್ನುವದನ್ನು ತೋರಿದವು.

ಕಳೆದ ವರ್ಷವಷ್ಟೇ 250 ವರ್ಷದ ಸ್ವಾತಂತ್ರ್ಯ ಉತ್ಸವ ಆಚರಿಸಿದ ಅಮೆರಿಕದಲ್ಲಿ ಚುನಾವಣೆ ವ್ಯವಸ್ಥೆ ಭಾರತದಲ್ಲಿನ ಗಿಂತ ಭಿನ್ನವಾಗಿ, ಸ್ವಲ್ಪ ಮಟ್ಟಿಗೆ ಕ್ಲಿಷ್ಟ ವಾಗಿ ಇದೆ. ನಾನು ರೋಟರಿ ಇಂಟರ್ನ್ಯಾಷನಲ್ ಸಂಸ್ಥೆಯ ಗುಂಪು ವಿನಿಮಯ ಕಾರ್ಯಕ್ರಮ ದಲ್ಲಿ 2006 ರಲ್ಲಿ ಫ್ಲೊರಿಡ ಹಾಗೂ ಅಟ್ಲಾಂಟಾ ರಾಜ್ಯಗಳಿಗೆ ಹೋದಾಗ ಅಲ್ಲಿ ಕಾನೂನು ಕಾಲೇಜು ಪ್ರಾಧ್ಯಾಪಕರಾಗಿದ್ದ ಬರಾಕ್ ಒಬಾಮಾ 2008 ರ ಚುನಾವಣೆ ಪ್ರಚಾರ ಆರಂಭಿಸಿದ್ದರು. ನಾನು “ನಮ್ಮಲ್ಲಿ ಎರಡೆರಡು ವರ್ಷ ಎಲ್ಲಾ ಪ್ರಚಾರಕ್ಕೆ ಸಮಯ ಇಲ್ಲ. ಕೇವಲ ಆರು ವಾರ ಗಳಷ್ಟೇ’’, ಎಂದು ಹೇಳಿದಾಗ ಅಲ್ಲಿನ ಸ್ನೇಹಿತರು ನಂಬಲಿಲ್ಲ.

ಅಲ್ಲಿನ ಚುನಾವಣೆ ಗಳು ನಿಖರ ವೇಳಾಪಟ್ಟಿಯಂತೆ ನಡೆಯುತ್ತವೆ. ಉದಾಹರಣೆಗೆ ಪ್ರತಿ ನಾಲ್ಕು ವರ್ಷ ನವಂಬರ್ ಎರಡನೇ ಮಂಗಳವಾರ ಅಧ್ಯಕ್ಷರ ಚುನಾವಣೆ ನಡೆಯುತ್ತದೆ, ಮತದಾನಕ್ಕೆ ಅವರು ಮತಪತ್ರ ಬಳಸುತ್ತಾರೆ. ಕೇಂದ್ರ ಹಾಗೂ ರಾಜ್ಯದ ಚುನಾವಣೆ ಗಳು ಪ್ರತ್ಯೇಕ, ಇತ್ಯಾದಿ.

ಸನ್ 1775 ರಲ್ಲಿ ರಚಿತವಾದ ಅಮೆರಿಕದ ಮೂಲ ಸಂವಿಧಾನ ದಲ್ಲಿ ಮಹಿಳೆಯಾರಿಗೆ ಮತದಾನದ ಹಕ್ಕು ಇರಲಿಲ್ಲ. ಅದು ಅವರಿಗೆ 1920ರ ತಿದ್ದುಪಡಿಯಲ್ಲಿ ದೊರಕಿತು. ಅಶ್ವೇತರು ಮತ ಚಲಾಯಿಸುವಂತೆ ಇರಲಿಲ್ಲ. ಆ ನಾಗರಿಕತ್ವದ ಹಕ್ಕು ಅವರಿಗೆ 1965ರಲ್ಲಿ ದೊರಕಿತು. ಭಾರತದ ಮೂಲ ಸಂವಿಧಾನದಲ್ಲಿ ಈ ಯಾವ ಬೇಧಗಳೂ ಇಲ್ಲ. ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ.

ಅಲ್ಲಿ ಪ್ರತಿ ನಾಗರಿಕ ನಾನು ಈ ಪಕ್ಷದ ಮತದಾರ ಎಂದು ನೋಂದಣಿ ಮಾಡಿಸಿಕೊಳ್ಳಬೇಕು. ನಮ್ಮಲ್ಲಿ ಹಾಗಿರಲಿಕ್ಕೆ ಸಾಧ್ಯ ಇಲ್ಲ. ಒಂದು ಪಕ್ಷ ದಿಂದ ಆಯ್ಕೆ ಯಾದವರೇ ಆ ಪಕ್ಷ ದಲ್ಲಿ ಬಹಳ ದಿನ ನಿಲ್ಲುವುದಿಲ್ಲ. ಇನ್ನು ಮತದಾರರದು ಯಾವ ಲೆಕ್ಕ?

ಅಮೆರಿಕದ ಪಕ್ಷದ ಹೈ ಕಮಾಂಡ್ ಟಿಕೆಟ್ ಕೊಡುವುದಿಲ್ಲ. ಅಲ್ಲಿ ಪ್ರೈಮರಿಸ ಎನ್ನುವ ಪ್ರಾಥಮಿಕ ಹಂತದ ಚುನಾವಣೆ ನಡೆಯುತ್ತದೆ. ಅದರಲ್ಲಿ ನೋಂದಾಯಿತ ಮತದಾರರು ನನ್ನ ಪಕ್ಷದ ಅಭ್ಯರ್ಥಿ ಇವರು ಆಗಿರಬೇಕು, ಇವರು ಬೇಡ ಅಂತ ಹೇಳಬೇಕು. ಆ ಸ್ವಾತಂತ್ರ್ಯ ಭಾರತದ ಬಡಪಾಯಿ ಮತದಾರರಿಗೆ ಇಲ್ಲ. ನಾಯಕರ ಮಕ್ಕಳು, ಮರಿ ಮಕ್ಕಳನ್ನು ಭವಿಷ್ಯದ ನಾಯಕರು ಎಂದು ಒಪ್ಪಿಕೊಳ್ಳುವ ಅನಿವಾರ್ಯತೆ ನಮಗೆ ಇದೆ.

ಆದರೆ ನಮ್ಮಲ್ಲಿ ಹಾಗೂ ಅವರಲ್ಲಿ ಕೆಲವು ಸಾಮ್ಯತೆ ಗಳೂ ಇವೆ. ಅವುಗಳಲ್ಲಿ ಮುಖ್ಯವಾದವು ಅವರು ರಿ -ಡಿಸ್ಟ್ರಿಕ್ಟಿಂಗ್ ಎಂದು ಕರೆಯುವ ಹಾಗೂ ನಾವು ಡಿ ಲಿಮಿಟೆಶನ್ ಅಥವಾ ಸೀಮಾ ಮರು ನಿರ್ಣಯ ಎಂದು ಕರೆಯುವ ಪ್ರಕ್ರಿಯೆ, ಅಥವಾ ಮತದಾನ ಕ್ಷೇತ್ರಗಳ ಗಡಿಗಳನ್ನು ಗುರುತಿಸುವ ಕೆಲಸ. ಅದನ್ನು ಆಳುವ ಪಕ್ಷ ಋಣಾತ್ಮಕ ವಾಗಿ ಬಳಸಿ, ತನಗೆ ಬೇಕಾದ ಮತದಾರರನ್ನು ಮಾತ್ರ ಇಟ್ಟುಕೊಂಡು ಉಳಿದವರನ್ನು ಇನ್ನೊಂದು ಕ್ಷೇತ್ರಕ್ಕೆ ಸಾಗ ಹಾಕುವ ಕೆಲಸಕ್ಕೆ ಜರ್ರಿ ಮ್ಯಾಂಡರಿಂಗ ಎಂದು ಹೆಸರು.

ಇನ್ನೊಂದು ಮತದಾರರ ಪಟ್ಟಿ ಪರಿಷ್ಕರಣೆ. ಅದಕ್ಕೂ ವಿವಿಧ ಆಯಾಮಗಳು ಇವೆ. ಅದು ಸರಿಯಾದ ರೀತಿಯಲ್ಲಿ ನಡೆದು, ನಿಧನ ರಾದವರ, ಊರು ಬಿಟ್ಟು ಹೋದವರ, ಬೇರೆ ದೇಶದ ನಾಗರಿಕತೆ ಪಡೆದವರ ಹೆಸರು ತೆಗೆದು ಹಾಕಿ, ಹೊಸದಾಗಿ ಮತದಾನದ ವಯಸ್ಸಿಗೆ ಬಂದವರ ಹೆಸರು ಸೇರಿಸುವುದು, ಒಂದು ಪ್ರಜಾಸತ್ತಾತ್ಮಕ ಸರ್ವಭೌಮತ್ವದ ಸಾಧಾರಣ ಪ್ರಕ್ರಿಯೆ.

ಆದರೆ ರಿಪಬ್ಲಿಕನ್ ಪಕ್ಷ ದ ನಾಯಕರಾದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪರವಾದ ಮತದಾರರು ಮಾತ್ರ ಚುನಾವಣೆ ಯಲ್ಲಿ ಮತ ಚಲಾಯಿಸುವಂತೆ ಚುನಾವಣೆ ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದಾರೆ ಎನ್ನುವ ಆರೋಪಗಳು ಡೆಮೋಕ್ರೆಟಿಕ್ ಪಕ್ಷದ ಕಡೆಯಿಂದ ಕೇಳಿ ಬರುತ್ತಿವೆ.

ಈ ರೀತಿಯ ಚುನಾವಣಾ ಅವ್ಯವಹಾರಗಳ ಬಗ್ಗೆ – ಜರ್ರಿ ಮ್ಯಾಂಡರಿಂಗ ಅಥವಾ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅನ್ಯಾಯ ಮಾಡುವುದು – ಇದರ ಬಗ್ಗೆ ಆಸೀಮೋವ ಅವರು 1955ರಲ್ಲಿ ಬರೆದ ನೀಳ್ಗತೆ – `ಫ್ರಾಂಛೈಸ್’.

ಅದನ್ನು ಹಿಂದೆ ಭಾಷಾಂತರ ಮಾಡಲು ನಾನು ಶುರು ಮಾಡಿದ್ದೆ. ನಡುವೆ ನಿಲ್ಲಿಸಿದ್ದೆ. ಆದರೆ ಈಗ ಭಾರತದಲ್ಲಿ ನಡೆಯುತ್ತಿರುವ, ಸಾಂವಿಧಾನಿಕ ರಕ್ಷಣೆ ಇರುವ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ನೋಡಿದಾಗ ಹಾಗೂ ಸೀಮಾ ಮರು ನಿರ್ಣಯ ಆಯೋಗ 2027ರ ಜನಗಣತಿಯ ಫಲಿತಾಂಶಕ್ಕೆ ಕಾಯದೇ

ಆರಂಭಿಸಿರುವ ಗಡಿ ನಿರ್ಣಯದ ಕೆಲಸ ಗಳನ್ನು ನೋಡಿದಾಗ ಈ ಭಾಷಾಂತರವನ್ನು ಮುಗಿಸಬೇಕು ಎನ್ನಿಸಿತು.

ಆಳುವ ಪಕ್ಷ, ಜನರಿಂದ ಚುನಾಯಿತವಾದ ಪ್ರಜಾತಂತ್ರದ ಮೂಲ ತತ್ವ ಗಳನ್ನು, ಕಡೆಗಣಿಸಿ ತನ್ನ ಅಧಿಕಾರವನ್ನು ಸದಾಕಾಲ ಇರಿಸಿಕೊಳ್ಳಲು ಸಂವಿಧಾನಕ್ಕೆ ವಿರುದ್ಧವಾದ ಕುಕೃತ್ಯಗಳಿಗೆ ಇಳಿದಾಗ ಯಾವ ಅವಘಡ ಗಳು ಘಟಿಸ ಬಹುದು ಎನ್ನುವುದನ್ನು ಎಪ್ಪತ್ತು ವರ್ಷಗಳ ಹಿಂದೆ ತಿಳಿಸಿದ ಕತೆ ಇದು.

ಅಮೆರಿಕದಲ್ಲಿ ತಮ್ಮ ಸರ್ಕಾರದ, ನಾಯಕರ ಬಗ್ಗೆ ಮುಕ್ತ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಹೋಲಿಸಿದರೆ, ಸಾವಿರಾರು ವರ್ಷಗಳ ಮುಕ್ತ ಚರ್ಚೆಯ ಇತಿಹಾಸ ಇರುವ ಭವ್ಯ ಭಾರತದಲ್ಲಿ ಅವು ಕಮ್ಮಿ. ನಮ್ಮ ದೇಶದ ಆ ಅವಿಸ್ಮರಣೀಯ ಪರಂಪರೆಗೆ ಸ್ವಲ್ಪ ಮಟ್ಟಿಗಿನ ದತ್ತಾಂಶ ಪೂರೈಸುವುದಷ್ಟೇ ಇಲ್ಲಿನ ಉದ್ದೇಶ.

****

ನಿಮಗೆ ಲಿಂಡಾ ಗೊತ್ತಲ್ಲಾ? ಅವಳು ಇಲ್ಲೇ ನಮ್ಮ ಪಕ್ಕದ ಮನೆಯ ಹುಡುಗಿ. ಅಂದರೆ ಹತ್ತು- ಹನ್ನೊಂದು ವರ್ಷ ಇರಬಹುದೇನೋ.

ನನ್ನ ಗೆಳೆಯ ನಾರ್ಮನ್ ಮುಲ್ಲರ್‌ ನ ಒಬ್ಬಳೇ ಮಗಳು. ಆದರೆ ನಮ್ಮ ಮನೆಯ ಮಗಳೇ ಎನ್ನುವಷ್ಟು ನಾವು ಅವಳನ್ನು ಹಚ್ಚಿಕೊಂಡು ಬಿಟ್ಟಿದ್ದೇವೆ. ಅವರ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೂ ಎಚ್ಚರವಾಗಿದ್ದು ಜೋರು ಗಲಾಟೆ ಮಾಡುವವಳು ಅವಳೇ. ಎಲ್ಲರೂ ಸುಸ್ತಾಗಿ ಮಲಗಿದರೂ ಕೂಡ ಅವಳ ಆಟ ಮುಗಿದಿರುವುದಿಲ್ಲ. ಬೆಳಿಗ್ಗೆ ಏಳುವಾಗಲೂ ಅಷ್ಟೇ. ಅವಳು ಎಲ್ಲರಿಗಿಂತ ಬೇಗ ಎದ್ದು ಏನಾದರೂ ಆಟ ಆಡಿಕೊಂಡಿರುತ್ತಾಳೆ.

ಆದರೆ, ಅವತ್ತು ಒಂದು ದಿನ ಭಾರಿ ವಿಚಿತ್ರ ಘಟನೆ ನಡೀತು. ಅದೊಂದು ಚಳಿಗಾಲದ ಮುಂಜಾನೆ, ಕೆಟ್ಟ ಥಂಡಿ. `ಇದು ಯಾವತ್ತಾದರೂ ಸರಿಯುತ್ತದೋ ಇಲ್ಲವೋ, ಬೆಳಕು ಹರಿಯುತ್ತದೋ ಇಲ್ಲವೋ ’ ಅನ್ನುವಷ್ಟು ಕತ್ತಲೆ. ಕೊನೆಗೂ ಸಣ್ಣಗೆ ಕತ್ತಲೆ ಕರಗುತ್ತಿತ್ತು, ನಿಧಾನವಾಗಿ ಹೊತ್ತು ಮೂಡುತ್ತಿತ್ತು.

ಕಿಟಕಿಯ ಹೊರಗಿನ ಬೂದು ಬಣ್ಣದ ಬಾನು ನಾರ್ಮನ್ ಗೆ ದಟ್ಟ ದರಿದ್ರದ ಬಣ್ಣವಾಗಿ ಕಾಣತೊಡಗಿತ್ತು. ಕಿಟಕಿಯಿಂದ ಹೊರಗೆ ನೋಡುತ್ತಿದ್ದ ಲಿಂಡಾ ಮಾತ್ರ ಗಾಬರಿಯಿಂದ ಓಡೋಡಿ ಬಂದಳು. ಅವರಪ್ಪನನ್ನು ಎಬ್ಬಿಸಲು ಪ್ರಯತ್ನ ಮಾಡಿದಳು.

ಅವನಿಗೆ ಪಾಪ ಮೈ ಸರಿ ಇರಲಿಲ್ಲ. ತಲೆ ನೋವು – ಜ್ವರಕ್ಕೆ ಮಾತ್ರೆ ತೆಗೆದುಕೊಂಡು ಮಲಗಿದ್ದ. ಅವನಿಗೆ ಸರಿಯಾಗಿ ನಿದ್ದೆ ಆಗಿರಲಿಲ್ಲ. ಆಗಷ್ಟೇ ಕಣ್ಣಿಗೆ ಕಣ್ಣು ಹತ್ತಿದಂತಿತ್ತು. ಅಷ್ಟರಾಗಲೇ ಮಗಳು ಬಂದು ಎಬ್ಬಿಸಿದಳು.

ನಿದ್ದೆ- ಔಷಧಿಯ ಮಂಪರಿನಲ್ಲಿ ಅವಳು ಕೂಗುವುದು ಕೇಳಿದರೂ ಕೂಡ ಆತ ಮಿಸುಕಾಡಲಿಲ್ಲ. ಹಂಗೇ ಮಲಗಿದ. ʻʻಏಯ್‌ ಅಪ್ಪಾ, ಅಪ್ಪಾ, ಏಳಪ್ಪಾ, ಅಲ್ಲಿ ನೋಡು ಅಲ್ಲಿ. ನೋಡಪ್ಪಾʼʼ.

ʻʻಅಯ್ಯೋ ಏನಮ್ಮಾ ಅದು,ʼʼ ಅನ್ನುತ್ತಾ ಹಾಸಿಗೆಯ ಮೇಲೆ ಮಣಕೈಯ್ಯೂರಿ ಅರ್ಧ ಎದ್ದು ಕಿಡಕಿಯಿಂದ ನೋಡಿದ. ʻʻಅಲ್ಲಿ ನೋಡಲ್ಲಿ ಎಷ್ಟು ಪೊಲೀಸರು ಬಂದಿದ್ದಾರೆ. ಯಾವತ್ತೂ ಇಷ್ಟು ಜನಾ ಬಂದಿರಲಿಕ್ಕಿಲ್ಲ. ಎಲ್ಲಾ ಕಡೆ ಪೊಲೀಸರೂ, ಅವರ ವ್ಯಾನಗಳೂ. ನಮ್‌ ಏರಿಯಾ ಎಲ್ಲಾ ತುಂಬಿಹೋಗಿದೆ ಅನ್ಸತ್ತೆ ನೋಡು,ʼʼ ಅಂದಳು.

ಮಬ್ಬು ಹರಿದ ನಾರ್ಮನ್‌ ಥಟ್ಟನೇ ಎದ್ದು ಕೂತ. ಮಳೆ, ಥಂಡಿ, ಕುಳಿರ್ಗಾಳಿ, ಮಬ್ಬುಗತ್ತಲು ಸೇರಿದ ಮುಂಜಾವು ಅದು. ಆ ಬೆಳಗಿನ ಹೊತ್ತು ಅವನ ಮನಸ್ಸಿನೊಳಗಿನ ಕತ್ತಲೆಯನ್ನೇ ಪ್ರತಿನಿಧಿಸುವಂತಿತ್ತು.

ಅಡುಗೆ ಮನೆಯಲ್ಲಿ ಅವನ ಹೆಂಡತಿ ಸಾರಾ, ಬೆಳಗಿನ ತಿಂಡಿಯ ತಯಾರಿಯಲ್ಲಿದ್ದಳು. ಸಂಡಾಸಿಗೆ ಹೋಗಿದ್ದ ಅವನ ಮಾವ ಮ್ಯಾಥ್ಯೂ ತನ್ನ ಮಲಬದ್ಧತೆಯ ಸಂಕಟಗಳನ್ನು ಎಲ್ಲರಿಗೂ ಕೇಳುವಷ್ಟು ಜೋರಾಗಿ ವ್ಯಕ್ತಪಡಿಸುತ್ತಿದ್ದ.

ತಮ್ಮ ಮನೆಯ ಹೊರಗೆ ಸೀಕ್ರೆಟ್‌ ಏಜೆಂಟ್‌ ಹ್ಯಾಂಡ್ಲೀ ಇವನಿಗಾಗಿ ಕಾಯುತ್ತಿದ್ದುದು ನಾರ್ಮನ್‌ಗೆ ಗೊತ್ತಿತ್ತು. ಯಾಕೆಂದರೆ, ಆ ದಿನ ಅತ್ಯಂತ ವಿಶೇಷವಾದದ್ದು. ಅದು ಮತದಾನದ ದಿನ!

ಇದೆಲ್ಲಾ ಶುರುವಾಗಿದ್ದು ಹೇಗೆ ? ಇಲ್ಲಿಯವರೆಗೆ ಬಂದಿದ್ದು ಹೇಗೆ ? ಅಂತ ನೋಡಿದರೆ ಅದೊಂಥರಾ ಮಜಾ ಕತೆನೇ.

ಕೆಲವು ತಿಂಗಳುಗಳ ಹಿಂದಿನ ಮಾತು: ಪ್ರತಿ ವರ್ಷದಂತೆ ಈ ವರ್ಷವೂ ನಮ್ಮೆಲ್ಲರ ಬದುಕು ಎಂದಿನಂತೆ ಸಾಧಾರಣವಾಗಿ ನಡೆದುಕೊಂಡು ಬರುತ್ತಿತ್ತು. ಅದೇನೋ ಅಂತಾರಲ್ಲಾ ʻʻಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲʼʼ ಅಂತ, ಹಂಗೆ.

ಆದರೆ ಈ ವರ್ಷ ರಾಷ್ಟ್ರಾಧ್ಯಕ್ಷರ ಚುನಾವಣೆ ಇದ್ದುದ್ದಕ್ಕೆ ಇದು ಬೇರೆ ವರ್ಷಗಳಿಗಿಂತ ಕೆಟ್ಟದಾಗಿತ್ತು.

ನಮ್ಮ ಅಮೆರಿಕೆಯಲ್ಲಿ ಮಹಾ ಚುನಾವಣೆ ನಾಲ್ಕು ವರ್ಷಗಳಿಗೊಮ್ಮೆ ಬರುತ್ತೆ. ಆ ವರ್ಷವನ್ನು ನಾವು ಅಮೆರಿಕನ್ನರು ಮಹಾ ಚುನಾವಣಾ ಪರ್ವ ಅಂತ ಕರೆಯೋದು. ಆದ್ರೆ ಇದು ನಾರ್ಮನ್ನನಂತಹ ಕೆಲವರಿಗೆ ಇಷ್ಟ ಆಗೋದಿಲ್ಲ. ಹಾಗೇಂತ, ಇತರ ಚುನಾವಣೆ ವರ್ಷಗಳಿಗೆ ಹೋಲಿಸಿದರೆ ಈ ವರ್ಷವೇನೂ ಅಷ್ಟೊಂದು ಕೆಟ್ಟದಾಗಿ ಇರಲಿಲ್ಲ, ಬಿಡಿ. ಹೆಚ್ಚೂ ಕಮ್ಮಿ ಅಷ್ಟೇ ಕೆಟ್ಟದಾಗಿತ್ತು.

ನಮ್ಮ ರಾಜಕಾರಣಿಗಳು ಊರೂರು ಅಡ್ಡಾಡಿ ಪ್ರಚಾರ ನಡೆಸಿದ್ದರು. ಅವರೆಲ್ಲಾ `ಗಣತಂತ್ರದ ನಿಜವಾದ ಮಹಾರಾಜನಾದ ಮತದಾರನ’ ಬಗ್ಗೆ,` ಮತದಾರ ಮಹಾಪ್ರಭುವಿನ ಅಡಿಯಾಳಾದ ಅತ್ಯಾಧುನಿಕ ತಂತ್ರಜ್ಞಾನದ’ ಬಗ್ಗೆ, ಅವುಗಳ ಬುದ್ಧಿಮತ್ತೆಯ ಬಗ್ಗೆ, ಚುನಾವಣೆಗಳನ್ನು ಸರಳವಾಗಿ ನಡೆಸಲು ಅನುವು ಮಾಡಿಕೊಡುತ್ತಿರುವ ಈ ಅತ್ಯಾಧುನಿಕ ತಂತ್ರಜ್ಞಾನದ ಅನುಕೂಲತೆಗಳ ಬಗ್ಗೆ, ಗಂಟಲು ಹರಿಯುವಂತೆ ಭಾಷಣ ಬಿಗಿಯುತ್ತಿದ್ದರು.

FRANCHISE

ಪತ್ರಿಕೆಗಳಲ್ಲಿ ಸಹ ತಂತ್ರಜ್ಞಾನದ ಬಳಕೆ ಸಾಮಾನ್ಯವಾಗಿತ್ತು. ಆದ್ರೆ , ಪತ್ರಿಕೆಗಳಲ್ಲಿ ಹಿಂದಿನಂತೆ ಮಾನವ ರೂಪಿ ಸಂಪಾದಕರು, ಸುದ್ದಿ ವಿಶ್ಲೇಷಕರೂ ಇರಲಿಲ್ಲ. ಸುದ್ದಿಗಳನ್ನು ಬೃಹತ್‌ ವಾರ್ತಾ ಗಣಕಗಳು (ಔದ್ಯೋಗಿಕ ಕಂಪ್ಯೂಟರುಗಳು) ವಿಶ್ಲೇಷಿಸುತ್ತಿದ್ದವು. ದೊಡ್ಡ ಸುದ್ದಿ ಸಂಸ್ಠೆಗಳಾದ ನ್ಯೂಯಾರ್ಕ್‌ ಟೈಮ್ಸ್‌, ಸೇಂಟ್‌ ಲೂಯಿ ಪೋಸ್ಟ್‌ ಡಿಸ್‌ಪ್ಯಾಚ್ ನಂತಹ ಪತ್ರಿಕೆಗಳ ಬಳಿ ಸ್ವಂತ ಗಣಕಗಳಿದ್ದವು. ಅಷ್ಟು ಬಂಡವಾಳ ಹೂಡಲಾರದ ಸಣ್ಣ ಪತ್ರಿಕೆಗಳ ಮಾಲಿಕರು ನಾಲ್ಕಾರು ಜನ ಸೇರಿ ಒಂದೇ ಗಣಕವನ್ನು ಬಾಡಿಗೆ ಪಡೆಯುತ್ತಿದ್ದರು. ಅದರ ಮಾಲಿಕರಿಗೆ ವಿಶ್ಲೇಷಣೆಯ ಹೊರಗುತ್ತಿಗೆ ಕೊಡುತ್ತಿದ್ದರು.

ಅನೇಕ ವರ್ಷಗಳ ಹಿಂದೆ ಪತ್ರಿಕೆಗಳು ಇನ್ನೂ ಕಾಗದದ ಮೇಲೆ ಮುದ್ರಿತವಾಗುತ್ತಿದ್ದಾಗ ಎಲ್ಲ ಸೇರಿ ಒಂದೇ ಮುದ್ರಣಾಲಯದಲ್ಲಿ ಛಾಪಿಸುತ್ತಿದ್ದರಲ್ಲ, ಹಾಗೆ.

ಮುಲ್ಲರ್ ಹಾಗೂ ಅವರ ಮತದ ಮೌಲ್ಯ ದಿನಪತ್ರಿಕೆಗಳಲ್ಲಿ ರಾಜಕೀಯ ವ್ಯಾಖ್ಯಾನಕಾರರು ಈ ಚುನಾವಣೆಯಲ್ಲಿ ಕೀ ಸ್ಟೇಟ್ ಯಾವುದು ಎಂದು ಹೇಳುತ್ತಿದ್ದರು. ಆದರೆ ಅವರಲ್ಲಿ ಪ್ರಮುಖ ರಾಜ್ಯದ ಬಗ್ಗೆ ಒಮ್ಮತ ಇರಲಿಲ್ಲ. ಅವರೆಲ್ಲರೂ ಬೇರೆ ಬೇರೆ ರಾಜ್ಯಗಳ ಹೆಸರು ಹೇಳುತ್ತಿದ್ದರು.

ಇಡೀ ರಾಷ್ಟ್ರದ ಗಮನ ಸೆಳೆದ ಈ ಚುನಾವಣೆಯ ಬಗೆಗಿನ ಮೊದಲ ಸುಳಿವು ಅಕ್ಟೋಬರ್ ೪ ರಂದು ಹೊರ ಬಂತು. ಸಾರಾ ಮುಲ್ಲರ್ ತನ್ನ ಗಂಡನಿಗೆ ಹೇಳಿದಳು, “ಕ್ಯಾಂಟ್ವೆಲ್ ಜಾನ್ಸನ್ ಹೇಳುತ್ತಾ ಇದ್ದಾನೆ, ಈ ವರ್ಷ ಇಂಡಿಯಾನಾ ನೇ ಕೀ ಸ್ಟೇಟ್. ಈ ರೀತಿ ಹೇಳಿದವರಲ್ಲಿ ಅವನು ನಾಲ್ಕನೆಯವನು. ಒಮ್ಮೆ ಯೋಚಿಸಿ ನೋಡಿ, ಈ ಬಾರಿ ಕೀ ಸ್ಟೆಟ್ ನಮ್ಮ ರಾಜ್ಯ!”

ಪತ್ರಿಕೆಯ ಪುಟಗಳಲ್ಲಿ ಮುಳುಗಿ ಹೋಗಿದ್ದ ನಾರ್ಮ್ನನ್ ನ ಮಾವ ಮ್ಯಾಥ್ಯೂ ಹಾರ್ಟನ್ವೀಲರ್ ತನ್ನ ಮುಖವನ್ನು ಪತ್ರಿಕೆಯ ಹಿಂದಿನಿಂದ ಎತ್ತಿದ. ತನ್ನ ಮಗಳ ಕಡೆ ಕೋಪದಿಂದ ನೋಡಿ. “ಈ ಪತ್ರಕರ್ತರು ಹೇಳೋದೆಲ್ಲಾ ಸುಳ್ಳು, ಈ ರೀತಿ ಹೇಳಿ ಪ್ರಜೆಗಳ ಮನಸ್ಸನ್ನು ಪ್ರಭಾವಿಸಲು ಅವರು ರಾಜಕಾರಣಿಗಳಿಂದ ದುಡ್ಡು ಇಸಗೊಂಡಿರ್ತಾರೆ. ಅವೆಲ್ಲ ಲಂಚ ತಿಂದವರ ಅಭಿಪ್ರಾಯ. ಅಂಥವರ ಮಾತೆಲ್ಲಾ ಕೇಳೋಕ್ ಹೋಗಬೇಡ.”

`ಅಯ್ಯೋ ಅಪ್ಪ, ಇವನೊಬ್ಬನೇ ಅಲ್ಲ. ಇನ್ನೂ ಮೂರು- ನಾಲ್ಕು ಜನ ರಾಜಕೀಯ ಪಂಡಿತರು ಅದನ್ನೇ ಹೇಳುತ್ತಾ ಇದ್ದಾರೆ,” ಸಾರಾ ಹೇಳಿದಳು. “ಎಲ್ಲರೂ ಇಂಡಿಯಾನಾ ಅಂತಾ ಇದ್ದಾರೆ. ಅವರೆಲ್ಲಾರೂ ಸುಳ್ಳು ಹೇಳಕ್ ಸಾಧ್ಯನಾ?’’

“ಈ ಬಾರಿ ಇಂಡಿಯಾನಾನೇ ಪ್ರಮುಖ ರಾಜ್ಯ ಆಗಲಿಕ್ಕೆ ಕಾರಣ ಯಾಕೆ ಅಂದರೆ, ಆ ಹಾಕಿನ್ಸ್-ಸ್ಮಿತ್ ಕಾಯ್ದೆ. ಅಲ್ಲದೇ ಇಂಡಿಯಾನಾ ಪೋಲಿಸ್‌ನಲ್ಲಿ ಗೊಂದಲ ಇದೆ,’’ ನಾರ್ಮನ್ ಹೇಳಿದ ಮ್ಯಾಥ್ಯೂ ತನ್ನ ಮುಖ ಕಿವುಚಿದ: “ಯಾರೂ ಬ್ಲೂಮಿಂಗ್ಟನ್ ಬಗ್ಗೆ ಹೇಳುವುದಿಲ್ಲವೇ? ಅಥವಾ ಮೊನ್ರೋ ಕೌಂಟಿ ಬಗ್ಗೆ?”

“ಸರಿ…” ಎನ್ನುತ್ತಾ ನಾರ್ಮನ್ ಎದ್ದೇಳಲು ಹೊರಟ. ಲಿಂಡಾ ತನ್ನ ಪುಟ್ಟ ಮುಖವನ್ನು ಎಲ್ಲರ ಕಡೆಗೂ ತಿರುಗಿಸುತ್ತಾ ಎಲ್ಲರ ಮಾತು ಕೇಳಿಸಿಕೊಳ್ಳುತ್ತಿದ್ದಳು.

“ಅಪ್ಪ, ಈ ವರ್ಷ ನೀವು ಮತ ಚಲಾಯಿಸುತ್ತೀರಾ?” ಅಂತ ಕೇಳಿದಳು.

ನಾರ್ಮನ್ ನಸುನಕ್ಕ. “ಇಲ್ಲ, ಮಗಳೇ,’’ ಅಂದ. ಇಷ್ಟೆಲ್ಲಾ ನಡೆದಿದ್ದೂ ಮಹಾ ಚುನಾವಣಾ ಪರ್ವದ ಅಕ್ಟೋಬರ್ ಒಂದರಲ್ಲಿ. ಅಧ್ಯಕ್ಷೀಯ ಚುನಾವಣೆ ಸರಿಯಾಗಿ ಒಂದು ತಿಂಗಳು ಇತ್ತು. ಸಾರಾಳಿಗೆ ಚುನಾವಣೆಯ ಬಗ್ಗೆ ಉತ್ಸಾಹ ಹೆಚ್ಚಲು ಸುರು ಆಯಿತು. ತನ್ನ ನಿರಮ್ಮಳ ಶಾಂತ ಜೀವನದಲ್ಲಿ ಸುಖಿಯಾಗಿದ್ದ ಅವಳಿಗೆ ಒಮ್ಮೊಮ್ಮೆಅವಳ ಕನಸುಗಳೇ ಒಡನಾಡಿಗಳು. ಒಮ್ಮೆ ನಾರ್ಮನ್ ಎದುರು ಅಂದಳು : ” ಈ ಬಾರಿ ನೀನೇ ಮತ ಹಾಕುವುದಾದರೆ ಎಷ್ಟು ಚೆನ್ನಾಗಿರುತ್ತಿತ್ತು!!

ನಮ್ಮ ನಾಯಕ ನಾರ್ಮನ್ ಮುಲ್ಲರ್‌ಗೆ ಚಿಕ್ಕ ಗಡ್ಡ ಇತ್ತು. ಒಂದಾನೊಂದು ಕಾಲದಲ್ಲಿ ಅದು ಅವನಿಗೆ ಒಂಥರಾ ಸೊಬಗನ್ನು ಕೊಟ್ಟಿತ್ತು. ಆದರೆ ಈಗ ಅದು ಬೂದು ಬಣ್ಣಕ್ಕೆ ತಿರುಗುತ್ತಿತ್ತು. ಹಣೆಯಲ್ಲಿ ಸುಕ್ಕುಗಳು ಕಾಣಲು ಸುರು ಆಗಿದ್ದವು.

`ನಾನು ಸಾಮಾನ್ಯರಲ್ಲಿ ಸಾಮಾನ್ಯ’ ಅಂತ ತಿಳಿದುಕೊಂಡಿದ್ದ ಅವನು ಎಂದಿಗೂ ಮಹಾನ್ ವ್ಯಕ್ತಿಯಾಗುವ ಕನಸು ಕಂಡಿರಲಿಲ್ಲ. ತನ್ನ ಹೆಂಡತಿ, ಉದ್ಯೋಗ ಮತ್ತು ಮಗಳು ಮಾತ್ರವೇ ಅವನ ಜಗತ್ತು. ಅದನ್ನು ಮೀರಿ ಯೋಚಿಸಿದವನೇ ಅಲ್ಲ.

ಸಾರಾಳ ಮೆಲು ಮಾತು ಕೇಳಿಸಿಕೊಂಡ ಅವನಿಗೆ ಒಂಥರಾ ಕಿರಿಕಿರಿ ಆಯಿತು. “ಈ ದೇಶದಲ್ಲಿ ಇನ್ನೂರು ಮಿಲಿಯನ್ ಜನರಿದ್ದಾರೆ ಪ್ರಿಯೇ. ಅಂತಹ ಅವಕಾಶಗಳ ಬಗ್ಗೆ ನಮ್ಮಂಥವರು ವಿಚಾರ ಮಾಡುವುದೂ ವ್ಯರ್ಥ,’’ ಅಂತ ಅಂದ.

ಸಾರಾ ಥಟ್ಟನೇ ಉತ್ತರ ಕೊಟ್ಟಳು. ” ಅರೇ, ಇನ್ನೂರು ಮಿಲಿಯನ್ ಎಲ್ಲ ಅಲ್ಲ. ಮತದಾನಕ್ಕೆ ಇಪ್ಪತ್ತರಿಂದ ಅರವತ್ತರ ವಯಸ್ಸಿನವರು ಮಾತ್ರ ಅರ್ಹರು. ಅದೂ ಪುರುಷರು ಮಾತ್ರ . ಅಲ್ಲಿಗೆ ಸುಮಾರು ಐವತ್ತು ಮಿಲಿಯನ್ ಆದೀತು. ಆದರೂ ಈ ಬಾರಿಯ ಕೀ ಸ್ಟೇಟ್ ನಿಜವಾಗಿಯೂ ಇಂಡಿಯಾನಾ ಆಗಿಬಿಟ್ಟರೆ…”

ಅಲ್ಲಿಗೆ ಸುಮಾರು ಹದಿನಾಲ್ಕು ಲಕ್ಷಕ್ಕೆ ಒಂದು ಅಂತ ಲೆಕ್ಕ. ಅದು ಲಾಟರಿ. ಅಂತಹ ದಕ್ಕೆಲ್ಲ ನಾನು ಕುದುರೆ ಪಂದ್ಯದಲ್ಲಿ ಬಾಜಿ ಕಟ್ಟೋನಲ್ಲ. ಬಾ ಊಟ ಮಾಡೋಣ.”

ಮ್ಯಾಥ್ಯೂ ತನ್ನ ಪತ್ರಿಕೆಯ ಹಿಂದಿನಿಂದ ಗೊಣಗಿದ: ” ಇದೆಲ್ಲಾ ಮೂರ್ಖತನ.”

ಲಿಂಡಾ ಮತ್ತೆ ಕೇಳಿದಳು, “ಅಪ್ಪ, ಈ ವರ್ಷ ನೀವು ಮತ ಚಲಾಯಿಸುತ್ತೀರಾ?”

ನಾರ್ಮನ್ ಅಡ್ಡ ತಲೆಯಾಡಿಸಿದ. ಎಲ್ಲರೂ ಊಟಕ್ಕೆ ಹೋದರು.

ಅಕ್ಟೋಬರ್ ೨೦ ರ ವೇಳೆಗೆ ಸಾರಾಳ ಉತ್ಸಾಹ ಹೆಚ್ಚುತ್ತಿತ್ತು. ಕಾಫಿ ಕುಡಿಯುವಾಗ ಹೇಳಿದಳು, “ಆ ಶುಲ್ಟ್ಜ್ ಇದ್ದಾರಲ್ಲಾ, ಅವರಿಗೆ ಒಬ್ಬ ದೂರದ ಸಂಬಂಧಿ ರಾಜಧಾನಿಯಲ್ಲಿ ಇದ್ದಾರೆ. ಅವರು ಅಲ್ಲಿನ ಶಾಸಕರ ಆಪ್ತ ಸಹಾಯಕರಂತೆ. ಅವರಿಗೆ ಒಳಗಿನ ಹಕಿಕತ್ತು ಎಲ್ಲಾ ಗೊತ್ತು. ಈ ಬಾರಿಯ ‘ಸ್ಮಾರ್ಟ್ ಮನಿ’ ಇಂಡಿಯಾನಾದಲ್ಲಿದೆ ಎಂದು ಅವರು ಹೇಳಿದರಂತೆ. ಅಂದರೆ ಚುನಾವಣಾ ಫಲಿತಾಂಶದ ಬಗ್ಗೆ ಬಾಜಿ ಕಟ್ಟುವವರೆಲ್ಲಾ ಇಲ್ಲಿಗೇ ಕಣ್ಣು ಹಾಕಿದ್ದಾರಂತೆ.. ಅಲ್ಲದೇ ಅಧ್ಯಕ್ಷ ಜಾನ್ ವಿಲ್ಲರ್ಸ್ ಇಂಡಿಯಾನಾಪೋಲಿಸ್‌ನಲ್ಲಿ ಭಾಷಣ ಬೇರೆ ಮಾಡಲಿದ್ದಾರಂತೆ.”

ಅವತ್ತು ನಾರ್ಮನ್ ಗೆ ಅಂಗಡಿಯಲ್ಲಿ ಏನೋ ಕಿರಿಕಿರಿಯಾಗಿತ್ತು. ಹೆಂಡತಿಯ ಮಾತಿಗೆ ಆತ ಪ್ರತಿಕ್ರಿಯಿಸಲಿಲ್ಲ. ಕೂತಲ್ಲೇ ಹುಬ್ಬು ಏರಿಸಿದ. ಅಷ್ಟೇ.

ಮಾವ ಮ್ಯಾಥ್ಯೂ ಗೆ ಯಾವಾಗಲೂ ವಾಷಿಂಗ್ಟನ್ ಅಂದರೆ ಅಲರ್ಜಿ. “ಆ ವಿಲ್ಲರ್ಸ್ ಇಂಡಿಯಾನಾದಲ್ಲಿ ಭಾಷಣ ಮಾಡ್ತಾನೆ ಅಂದರೆ, ಮಲ್ಟಿವ್ಯಾಕ್ ಆರಿಸೋದು ಅರಿಜೋನಾವನ್ನು ಅಂತ ಅರ್ಥ. ಇಲ್ಲಿಗೆ ಬರೋ ಧೈರ್ಯವಿಲ್ಲ ಅವನಿಗೆ, ಶತಮೂರ್ಖ’’, ಅಂತಂದ.

ಯಾವಾಗ್ಯಾವಾಗ ತಮ್ಮ ಅಪ್ಪನ ಮಾತನ್ನು ಸಭ್ಯವಾಗಿ ಅಲಕ್ಷ ಮಾಡಬಹುದೋ, ಆಗಾಗ ಸಾರಾ ಹಾಗೆ ಮಾಡುತ್ತಿದ್ದಳು. “ಈ ಕೀ ಸ್ಟೇಟ್ ಗಳನ್ನು ಮುಂಚಿತವಾಗಿ ಏಕೆ ಘೋಷಿಸುವುದಿಲ್ಲವೋ ಅಪ್ಪ. ಮೊದಲು ರಾಜ್ಯ ಆಮೇಲೆ ಜಿಲ್ಲೆ, ನಗರ, ಹೀಗೆ ಹೇಳ್ತಾ ಹೋದರೆ, ಆ ಪ್ರಕ್ರಿಯೆಯಿಂದ ಹೊರಗಾದ ಜನರು ಸುಮ್ಮನಾಗಬಹುದು, ಅಲ್ಲವೇ”.

“ಹಾಗೆ ಮಾಡಿದರೆ,” ನಾರ್ಮನ್ ಹೇಳಿದ, “ಈ ರಾಜಕಾರಣಿಗಳು ಹದ್ದುಗಳಂತೆ ನಮ್ಮ ಮೈಮೇಲೆ ಬೀಳ್ತಾರೆ. ಅದು ಕೊನೆಗೆ ಒಂದು ಯವುದೋ ನಗರಕ್ಕೆ ಸೀಮಿತವಾದಾಗ, ಪ್ರತಿ ಮೂಲೆಯಲ್ಲೂ ಒಬ್ಬೊಬ್ಬ ಪುಢಾರಿ ಇರ್ತಾನೆ, ನೋಡೋವಂತೆ.”

ಮ್ಯಾಥ್ಯೂ ಕಣ್ಣು ಕಿರಿದು ಮಾಡಿದ. ತನ್ನ ಕೋಪದಿಂದ ತಲೆ ಸವರಿಕೊಂಡ. “ಅವರೆಲ್ಲಾ ಹದ್ದುಗಳೇ ಸರಿ. ಇಲ್ಲಿ ಕೇಳು…”

ಸಾರಾ ಮೆಲ್ಲನೆ ಹೇಳಿದಳು, “ಅಪ್ಪಾ…”

ಮ್ಯಾಥ್ಯೂನ ಧ್ವನಿ ಜೋರಾಯಿತು. “ಈ ಪುಣ್ಯಾತ್ಮರೆಲ್ಲಾ ಸೇರಿ ಮಲ್ಟಿವ್ಯಾಕ್ ಅನ್ನು ಸ್ಥಾಪಿಸಿದಾಗ ನಾನಿದ್ದೆ. ಅವರೆಲ್ಲಾ ಅದರ ಬಗ್ಗೆ ಭಾಳಾ ಒಳ್ಳೇ ಮಾತು ಆಡಿದರು. `ಈ ವ್ಯವಸ್ಥೆ ಪಕ್ಷಪಾತಿ ರಾಜಕೀಯವನ್ನು ಕೊನೆಗೊಳಿಸುತ್ತದೆ’ಎಂದರು. `ತೆರಿಗೆದಾರರ ಹಣ ವ್ಯರ್ಥವಾಗುವುದಿಲ್ಲ’ಎಂದರು. ನಗು ಮುಖದ ಅಜ್ಞಾತ ಮೋಸಗಾರರೆಲ್ಲಾ ಸಂಸತ್ತಿಗೆ ಆಯ್ಕೆಯಾಗುವುದಿಲ್ಲ, ಎಂದರು.

ಆದರೆ ಏನಾಯಿತು? ಪ್ರಚಾರ ಇನ್ನೂ ಹೆಚ್ಚು ಆಯಿತು. ಅದೂ ಕುರುಡು -ಕುರುಡಾಗಿ. ಈ ಹಾಕಿನ್ಸ್-ಸ್ಮಿತ್ ಕಾಯ್ದೆಯ ಕಾರಣ ಕೆಲವು ರಾಜಕಾರಣಿಗಳು ಇಂಡಿಯಾನಾಕ್ಕೆ ಹೋಗುತ್ತಾರೆ. ಇನ್ನು ಕೆಲವರು ಕ್ಯಾಲಿಫೋರ್ನಿಯಾಕ್ಕೆ. ಈ ಎಲ್ಲಾ ಅವಿವೇಕವನ್ನು ತೊಡೆದುಹಾಕಬೇಕು. ಹಳೆಯ ಒಳ್ಳೆಯ ದಿನಗಳಿಗೆ ಹಿಂತಿರುಗಬೇಕು. ಆ ದಿನಗಳು ಎಷ್ಟು ಚೆನ್ನಾಗಿತ್ತು!…”

ಲಿಂಡಾ ಇದ್ದಕ್ಕಿದ್ದಂತೆ ಕೇಳಿದಳು, “ಅಂದರೆ ಅಜ್ಜಾ, ಈ ವರ್ಷ ಅಪ್ಪ ಮತ ಚಲಾಯಿಸಬಾರದು ಅಂತಾ ಹೇಳ್ತಾ ಇದ್ದೀರಾ?’’ . ಮ್ಯಾಥ್ಯೂ ಆ ಹುಡುಗಿಯ ಕಡೆ ನೋಡಿ ಹೇಳಿದ: “ಅದೆಲ್ಲಾ ನಿನಗೆ ಬೇಡವಾದ್ದಮ್ಮ.”

ನಾರ್ಮನ್ ಮತ್ತು ಸಾರಾಳ ಕಡೆಗೆ ತಿರುಗಿ ಹೇಳಿದ : “ಒಂದು ಕಾಲದಲ್ಲಿ ನಾನೂ ಮತ ಚಲಾಯಿಸುತ್ತಿದ್ದೆ. ಮತಗಟ್ಟೆಗೆ ಹೋಗುತ್ತಿದ್ದೆ. ಸರದಿಯಲ್ಲಿ ನಿಲ್ಲುತ್ತಿದ್ದೆ. ಮತಪತ್ರ ದ ಮೇಲೆ ಗುರುತುಹಾಕಿ, ಮತ ಪೆಟ್ಟಿಗೆಯಲ್ಲಿ ಅದನ್ನು ಸಿಕ್ಕಿಸಿ, ಗರ್ವದಿಂದ ಹೇಳುತ್ತಿದ್ದೆ. “ ಇವರು ನಮ್ಮ ನಾಯಕರು. ಇವರೇ ಗೆಲ್ಲೋದು!’ ಅಂತ. ಅವಾಗೆಲ್ಲಾ ವ್ಯವಸ್ಥೆ ಬಹಳ ಸರಳವಾಗಿತ್ತು. ಈಗಿನಂತಲ್ಲ’’.

ಲಿಂಡಾ ಅತಿ ಉತ್ಸಾಹ ದಿಂದ ಕೇಳಿದಳು: “ನಿಜವಾಗಿಯೂ, ಅಜ್ಜಾ!, ನೀವೂ ಮತ ಚಲಾಯಿಸಿದ್ದೀರಾ?’’

ಇದೆಲ್ಲೋ ಹೋಗ್ತಾ ಇದೆ ಅಂತ ಅಂದುಕೊಂಡ ಸಾರಾ ಥಟ್ಟನೇ ಹೇಳಿದಳು:

“ಹೌದು ಪುಟ್ಟಾ. ಅದರೆ ಅದರಲ್ಲಿ ಏನೂ ವಿಶೇಷ ಇರಲಿಲ್ಲ. ಬರೀ ನಿಮ್ಮ ಅಜ್ಜ ಮಾತ್ರ ಅಲ್ಲ. ಎಲ್ಲರೂ ಹಾಗೇ ಮಾಡ್ತಾ ಇದ್ದರು. ಹಂಗಂತ ಅದೇನೂ ನೈಜ ಮತದಾನ ಆಗಿರಲಿಲ್ಲ’’.

ಮ್ಯಾಥ್ಯೂ ಗುಡುಗಿದ : “ನಾನು ಚಿಕ್ಕ ಹುಡುಗನಾಗಿದ್ದಾಗ ಅದು ನೈಜ ಮತದಾನವೇ ಆಗಿತ್ತು. ನನಗೆ ಚೆನ್ನಾಗಿ ನೆನಪಿದೆ. ನನಗಾಗ ೨೨ ವರ್ಷ. ನಾನು ಲ್ಯಾಂಗ್ಲೇಗೆ ಮತ ಚಲಾಯಿಸಿದೆ. ಅದು ನಿಜವಾದ ಮತವೇ.

ಆಗ ಗೆದ್ದವರು ಬೇರೆಯವರು ಅಂತ ನನ್ನ ಮತಕ್ಕೆ ಬಹುಶಃ ಬೆಲೆ ಇರಲಿಲ್ಲ ಅಂದುಕೊಳ್ಳಬಹುದೇನೋ. ಆದರೆ ಅದೇ ಮಾತನ್ನು ಬೇರೆಯವರ ಬಗ್ಗೆ ಹೇಳಬಹುದಾಗಿತ್ತೇನೋ. ಎಲ್ಲಕ್ಕಿಂತ ಮುಖ್ಯವಾಗಿ ಈ ಮಲ್ಟಿವ್ಯಾಕ್, ಮಣ್ಣು, ಮಸಿ ಎಲ್ಲಾ ಇರಲಿಲ್ಲ…”

ನಾರ್ಮನ್ ಸಟ್ಟನೇ ಮಧ್ಯಪ್ರವೇಶಿಸಿದ, “ಸರಿ, ಲಿಂಡಾ, ಈಗ ಮಲಗುವ ಸಮಯ. ಈ ರಿತಿಯ ಪ್ರಶ್ನೆಗಳನ್ನು ಎಲ್ಲಾ ನಿಲ್ಲಿಸು. ದೊಡ್ಡವಳಾದಾಗ ನಿನಗೇ ಎಲ್ಲಾ ಅರ್ಥವಾಗ್ತದೆ,’’ ಎನ್ನುತ್ತಾ ಅವಳ ಕೆನ್ನೆಗೆ ಒಂದು ಮುದ್ದು ಕೊಟ್ಟ. ತಾಯಿಯ ಒತ್ತಾಯದಿಂದ ಎದ್ದು ಹೋದಳು. ನಾಳೆ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡೋದಾದರೆ ಈ ರಾತ್ರಿ ೯:೧೫ ರವರೆಗೆ ವೀಡಿಯೋ ನೋಡಬಹುದು ಅಂತ ಅವಳಿಗೆ ಅನುಮತಿ ಸಿಕ್ಕಿತು.

****

ಅವತ್ತು ಶುಕ್ರವಾರ, ಅಕ್ಟೋಬರ್ ೩೧. ಹಾಲಿನಲ್ಲಿ ಕೂತಿದ್ದ ಮ್ಯಾಥ್ಯೂನ ಕಡೆ ಬಂದ ಲಿಂಡಾ ಹೇಳಿದಳು: ಅಜ್ಜಾ’’

ತಾನು ಓದುತ್ತಿದ್ದ ಪತ್ರಿಕೆ ಯನ್ನು ಆತ ಕೆಳಗೆ ಇಟ್ಟು ಅವಳ ಕಡೆ ನೋಡೋವರೆಗೂ ಅವಳು ಬೆನ್ನ ಹಿಂದೆ ಕೈ ಕಟ್ಟಿ ನಿಂತಿದ್ದಳು. ಕೊನೆಗೂ ಆತ ತನ್ನ ಪತ್ರಿಕೆ ಕೆಳಗೆ ಇಳಿಸಿ ಇವಳ ಕಡೆ ನೋಡಿದ. ಅವಳಿಗೆ ಅವನ ದಟ್ಟ ಹುಬ್ಬುಗಳು ಮತ್ತು ಕಣ್ಣುಗಳು ಅಷ್ಟೇ ಕಾಣಿಸಿದವು.

“ಏನು?”

ಲಿಂಡಾ ಹತ್ತಿರ ಬಂದಳು. ತನ್ನ ಮುಂದೋಳುಗಳನ್ನು ಆ ಮುದುಕನ ಮೊಣಕಾಲಿನ ಮೇಲೆ ಇಟ್ಟಳು. “ನೀವು ನಿಜವಾಗಿಯೂ ಒಮ್ಮೆ ಮತ ಚಲಾವಣೆ ಮಾಡಿದ್ದೀರಾ?’’

“ ಅಲ್ಲವೇ ಮತ್ತೆ. ನಾನು ಹೇಳಿದ್ದು ಕೇಳಿದೆಯಲ್ಲವೇ? ನಾನು ಸುಳ್ಳು ಹೇಳುತ್ತೇನೆ ಅಂತ ಅಂದುಕೊಂಡಿದ್ದೀಯಾ?’’

ಹಾಗಲ್ಲ, ಆದರೆ ಅಮ್ಮ ಆಗ ಎಲ್ಲರೂ ಮತ ಚಲಾಯಿಸುತ್ತಿದ್ದರು ಅಂತ ಅಂದಳಲ್ಲಾ, ಅದಕ್ಕೇ ಕೇಳಿದೆ’’

“ಹೌದು, ಎಲ್ಲರೂ.”

“ಅದು ಹೆಂಗೆ? ಎಲ್ಲರೂ ಮತ ಚಲಾಯಿಸಬಹುದು ಅಂದರೆ ಏನು? ಅದು ಹೇಗೆ?”

ಮ್ಯಾಥ್ಯೂ ಅವಳನ್ನು ಎತ್ತಿ ತನ್ನ ಮೊಣಕಾಲಿನ ಮೇಲೆ ಕೂರಿಸಿ ಕೊಂಡ. ತನ್ನ ಧ್ವನಿಯನ್ನು ಮೆಲ್ಲಗೆ ಮಾಡಿದ. “ಹೌದಮ್ಮ ಲಿಂಡಾ. ಸುಮಾರು ನಲವತ್ತು ವರ್ಷಗಳ ಹಿಂದೆ ನಾವು ಎಲ್ಲರೂ ಮತ ಚಲಾಯಿಸುತ್ತಿದ್ದೆವು. ಉದಾಹರಣೆಗೆ ನಾವು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದುಕೊಳ್ಳೋಣ. ಆಗ ಡೆಮೋಕ್ರಾಟ್ಗಳು ಮತ್ತು ರಿಪಬ್ಲಿಕನ್ನರು ತಮ್ಮ ತಮ್ಮ ಅಭ್ಯರ್ಥಿಗಳನ್ನು ನೇಮಿಸುತ್ತಿದ್ದರು. ಎಲ್ಲರೂ ತಮಗೆ ಇವರು ಬೇಕು, ಇವರು ಬೇಡ ಅಂತ ಹೇಳುತ್ತಿದ್ದರು. ಚುನಾವಣಾ ದಿನದಂದು, ಎಷ್ಟು ಜನ ಡೆಮೋಕ್ರಾಟ್ಗೆ ಮತ್ತು ಎಷ್ಟು ಜನ ರಿಪಬ್ಲಿಕನ್ಗೆ ಮತ ಹಾಕಿದ್ದಾರೆಂದು ಎಣಿಕೆ ಆಗ್ತಾ ಇತ್ತು. ಯಾರಿಗೆ ಹೆಚ್ಚು ಮತ ಬಂದಿತೋ ಅವರು ಗೆಲ್ಲುತ್ತಿದ್ದರು. ಅರ್ಥವಾಯಿತೇ?”

“ಸರಿ,’’ ಲಿಂಡಾ ತಲೆಯಾಡಿಸಿದಳು. “ಎಲ್ಲಾ ಜನರಿಗೆ ಯಾರಿಗೆ ಮತ ಹಾಕಬೇಕೆಂದು ಹೇಗೆ ಗೊತ್ತಾಗ್ತಾ ಇತ್ತು? ಮಲ್ಟಿವ್ಯಾಕ್ ಅವರಿಗೆ ಹೇಳಿ ಕೊಡುತ್ತಿತ್ತೇ?’’

ಮ್ಯಾಥ್ಯೂನ ಹುಬ್ಬುಗಳು ಕೆಳಗಿಳಿದವು. ಕಠಿಣವಾದ ದನಿಯಲ್ಲಿ ಹೇಳಿದ: “ ಅವರು ಎಲ್ಲಾ ತಮ್ಮ -ತಮ್ಮ ಸ್ವಂತ ಬುದ್ಧಿ ಉಪಯೋಗ ಮಾಡ್ತಾ ಇದ್ದರು.

ಸಾರಾಸಾರ ವಿಚಾರ ಮಾಡಿ ತೀರ್ಪು ಕೊಡುತ್ತಾ ಇದ್ದರು, ಪುಟ್ಟಿ’’.

ಅವಳು ಕೊಂಚ ದೂರ ಸರಿದಳು. ಅವನು ತನ್ನ ಧ್ವನಿಯನ್ನು ಮತ್ತೆ ಸ್ವಲ್ಪ ಮೆಲ್ಲಗೆ ಮಾಡಿದ. ” ನೀನು ಹೀಗೆ ಎಲ್ಲಾ ಕೇಳ್ತಾ ಇದ್ದಿಯಾ ಅಂತ ನಾನು ಕೋಪ ಮಾಡಿಕೊಂಡಿಲ್ಲ, ಲಿಂಡಾ. ಆದರೆ, ಅದರಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಒಮ್ಮೊಮ್ಮೆ ಎಲ್ಲರ ಮತಗಳನ್ನು ಎಣಿಸಲು ರಾತ್ರಿಯಿಡೀ ತೆಗೆದುಕೊಳ್ಳುತ್ತಿತ್ತು.

ಜನರಿಗೆ ತಾಳ್ಮೆ ಇರಲಿಲ್ಲ. ಆದ್ದರಿಂದ ಅವರು ಕೆಲ ವಿಶೇಷ ಯಂತ್ರಗಳನ್ನು ಕಂಡುಹಿಡಿದರು. ಆ ಯಂತ್ರಗಳು ಮೊದಲ ಕೆಲವು ಮತಗಳನ್ನು ನೋಡುತ್ತಿದ್ದವು. ಹಿಂದಿನ ವರ್ಷಗಳ ಅದೇ ಸ್ಥಳಗಳ ಮತಗಳೊಂದಿಗೆ ಹೋಲಿಸುತ್ತಿದ್ದವು. ಹಾಗೆ ಆ ಯಂತ್ರವು ಒಟ್ಟು ಮತ ಎಷ್ಟು ಎಂದು ಲೆಕ್ಕ ಹಾಕುತ್ತಿತ್ತು. ಆ ಮೂಲಕ ಯಾರು ಗೆಲ್ಲುತ್ತಾರೆಂದು ಅಂದಾಜು ಮಾಡುತ್ತಿತ್ತು, . ಅರ್ಥವಾಯಿತೇ?”

ಲಿಂಡಾ ತಲೆಯಾಡಿಸಿದಳು. “ಮಲ್ಟಿವ್ಯಾಕ್ನಂತೆ.”

“ಮೊದಲ ಮೊದಲಿನ ಕಂಪ್ಯೂಟರ್‌ಗಳು ಮಲ್ಟಿವ್ಯಾಕ್ಗಿಂತ ತುಂಬಾ ಚಿಕ್ಕದಾಗಿದ್ದವು. ಆದರೆ ಬರ್ತಾ ಬರ್ತಾ ಆ ಚುನಾವಣಾ ಯಂತ್ರಗಳು ದೊಡ್ಡವಾದವು. ಅತಿ ಕಡಿಮೆ ಮತಗಳಿಂದ ಚುನಾವಣೆಯ ಫಲಿತಾಂಶ ಹೇಳಬಲ್ಲ ಶಕ್ತಿ ಪಡೆದವು. ಕೊನೆಗೆ ಅವರು ಮಲ್ಟಿವ್ಯಾಕ್ ಅನ್ನು ನಿರ್ಮಿಸಿದರು.

ಅದು ಎಷ್ಟು ಶಕ್ತಿ ವಂತ ಎಂದರೆ, ಈಗ ಕೇವಲ ಒಬ್ಬ ಮತದಾರನ ಮನಸ್ಸು ಅರಿತು ಅಂದಿನ ಚುನಾವಣಾ ಫಲಿತಾಂಶವನ್ನು ಕರಾರುವಾಕ್ಕಾಗಿ ಹೇಳಬಲ್ಲದು.”

ತಮ್ಮ ಅಜ್ಜನ ಕಾಲದ ಕತೆ ಕೊನೆಗೆ ತನ್ನ ಕಾಲಕ್ಕೆ ಬಂದು ಕೊನೆಗೆ ತನಗೆ ಅರ್ಥವಾಗುವಂತೆ ಮುಗಿದಿದ್ದರಿಂದ ಲಿಂಡಾ ನಸು ನಕ್ಕಳು. “ಇದು ಚೆನ್ನಾಗಿದೆ.”

ಮ್ಯಾಥ್ಯೂ ಹುಬ್ಬು ಗಂಟಿಕ್ಕಿದನು. “ಇಲ್ಲ, ಅದು ಚೆನ್ನಾಗಿಲ್ಲ. ನಾನು ಯಾರಿಗೆ, ಯಾಕೆ ಮತ ಹಾಕಬೇಕು ಅಂತ ಯಾವುದೋ ಒಂದು ಯಂತ್ರ ನನಗೆ ಹೇಳಿಕೊಡಬೇಕಾಗಿಲ್ಲ. ನಾನು ಅದನ್ನು ಒಪ್ಪೋದಿಲ್ಲ.

ಅಲ್ಲಿ ಆ ಮಿಲ್ವಾಕಿ ನಗರದಲ್ಲಿ ಯಾವನೋ ಜೋಕರ್ ಈ ದೇಶದ ತೆರಿಗೆ ಪದ್ಧತಿ ವಿರುದ್ಧ ಮಾತಾಡ್ತಾನೆ ಅಂತ ನಾನು ಅವನ ವಿರೋಧಿಗೆ ಮತ ಹಾಕೋದಿಲ್ಲ. ನಾನು ಇತರರಿಗೆ ವಿಲಕ್ಷಣವಾಗಿ ಕಾಣಬಹುದು. ನನಗೆ ಹೇಗೆ ಬೇಕೋ ಹಾಗೆ ನಾನು ಮತ ಚಲಾಯಿಸಲು ಬಯಸ್ತೇನೆ. ಬೇಡಾ ಅಂದರೆ ಬಿಡತೇನೆ. ಬಹುಶಃ…”

ಲಿಂಡಾ ಅವನ ಮೊಣಕಾಲಿನಿಂದ ಜಾರಿಕೊಂಡು ಓಡಿಹೋದಳು.

ಬಾಗಿಲಲ್ಲಿ ಅವಳ ತಾಯಿಗೆ ಡಿಕ್ಕಿ ಹೊಡೆದಳು.

ಹೊರಗಿನಿಂದ ಬರುತ್ತಿದ್ದ ಸಾರಾ ಇನ್ನೂ ಕೋಟ್ ಹಾಕಿಕೊಂಡೇ ಇದ್ದಳು. ಅವಳಿಗೆ ತನ್ನ ಟೋಪಿ ತೆಗೆಯಲೂ ಪುರುಸೊತ್ತು ಸಿಕ್ಕಿರಲಿಲ್ಲ: “ಹೋಗು, ಲಿಂಡಾ. ತಾಯಿಗೆ ಅಡ್ಡ ಬೇಡ,’’ ಎಂದಳು.

ಆಮೇಲೆ ಮ್ಯಾಥ್ಯೂನ ಕಡೆಗೆ ಹೋಗಿ, “ಇಷ್ಟು ಹೊತ್ತು ಅಗಾಥಾ ಬಳಿ ಕೂತಿದ್ದ.” ಟೋಪಿ ತೆಗೆದು ಕೂದಲನ್ನು ಸರಿಪಡಿಸಿಕೊಳ್ಳುತ್ತಾ ಹೇಳಿದಳು.

ಮ್ಯಾಥ್ಯೂ ಅಸಹನೆಯಿಂದ ನೋಡಿದ.

ಸಾರಾ ತನ್ನ ಕೋಟ್ ಬಿಚ್ಚುತ್ತಾ ಹೇಳಿದಳು, “ಅವಳು ಏನು ಅಂದಳು ಗೊತ್ತಾ?”

ಮ್ಯಾಥ್ಯೂ ಪತ್ರಿಕೆಯಿಂದ ಕಣ್ಣು ಕೀಳದೇ ಹೇಳಿದ: “ನನಗೇನ್ ಆಸಕ್ತಿ ಇಲ್ಲ’’

ಇಂಥದ್ದಕ್ಕೆಲ್ಲ ಕೋಪ ಮಾಡಿಕೊಳ್ಳಲಿಕ್ಕೆ ಸಾರಾಗೆ ಸಮಯವಿರಲಿಲ್ಲ. ಅವಳ್ಗೆ ಯಾರಿಗಾದರೂ ಒಂದು ಮುಖ್ಯವಾದ ಸುದ್ದಿ ಹೇಳಬೇಕಿತ್ತು. ಅಲ್ಲಿ ಮ್ಯಾಥ್ಯೂ ಮಾತ್ರ ಇದ್ದ. ಅವನಿಗೇ ಹೇಳಲಿಕ್ಕೆ ಸುರು ಮಾಡಿದಳು :’’

, “ಅಗಾಥಾಳ ಗಂಡ ಪೊಲೀಸ್ ಗೊತ್ತಲ್ವಾ? ಅವನು ಹೇಳಿದನಂತೆ, ನಿನ್ನೆ ರಾತ್ರಿನೇ ನಮ್ಮ್ ಬ್ಲೂಮಿಂಗ್ಟನ್ಗೆ ಸೀಕ್ರೆಟ್ ಸರ್ವಿಸ್ ಪೋಲಿಸರ ಟ್ರಕ್ ಗಳು ಹಿಂಡುಗಟ್ಟಲೇ ಬಂದು ನಿಂತಿವೆಯಂತೆ’’.

“ಅವರು ನನ್ನ ಹಿಡಕೊಂಡು ಹೋಗಕ್ಕೆ ಬರ್ತಾ ಇಲ್ಲವಲ್ಲ, ಸಾಕು!,’’ ಮ್ಯಾಥ್ಯೂ ಉಡಾಫೆ ಮಾಡಿದ.

“ಅಯ್ಯೋ ಅಪ್ಪಾ, ನಿಮಗೆ ಅರ್ಥನೇ ಆಗ್ತಾ ಇಲ್ವೇ? ಅಷ್ಟೊಂದು ಜನಾ ಸೀಕ್ರೆಟ್ ಸರ್ವಿಸ್ ಏಜೆಂಟ್ಗಳು. ಅದೂ ಚುನಾವಣಾ ಸಮಯದಲ್ಲಿ. ಬ್ಲೂಮಿಂಗ್ಟನ್ನಲ್ಲಿ.”

“ಯಾರೋ ಬ್ಯಾಂಕ್ ದರೋಡೆಕೋರರನ್ನ ಬೆನ್ನಟ್ಟಿ ಬಂದಿರ ಬಹುದೇನೋ.”

“ಇಲ್ಲಿ ಅನೇಕ್ ವರ್ಷಗಳಿಂದ ಬ್ಯಾಂಕ್ ದರೋಡೆಯೇ ಆಗಿಲ್ವಲ್ಲಾ.. ಅಯ್ಯೋ … ಅಪ್ಪ, ನಿಮ್ಮ ಹತ್ರಾ ಮಾತ್ ಆಡೋಕೆ ಆಗಲ್ಲ’’.

ಸಿಟ್ಟಿನಿಂದ ಹೊರಟುಹೋದಳು. ನಾರ್ಮನ್ ಕೂಡ ಈ ಸುದ್ದಿಯನ್ನು ಹೆಚ್ಚು ಉತ್ಸಾಹದಿಂದ ಸ್ವೀಕರಿಸಲಿಲ್ಲ.

“ಸಾರಾ, ಅಗಾಥಾಳ ಗಂಡನಿಗೆ ಅವರು ಎಲ್ಲಾ ಸೀಕ್ರೆಟ್ ಸರ್ವಿಸ್ ಏಜೆಂಟ್ಗಳು ಅಂತಾ ಹೇಗೆ ಗೊತ್ತಾಯಿತು?” ಶಾಂತವಾಗಿ ಕೇಳಿದ. “ಅವರು ಏನು ತಮ್ಮ ಗುರುತಿನ ಚೀಟಿ ಹಣೆಯ ಮೇಲೆ ಅಂಟಿಸಿಕೊಂಡು ತಿರುಗಾಡತಾರಾ?”

ಅಂತ ಅಂದ. ಇವಳು ಸುಮ್ಮನಾದಳು.

ಮರುದಿನ ಸಂಜೆ, ನವೆಂಬರ್ ಒಂದು.

ಸಾರಾ ವಿಜಯೋತ್ಸಾಹದಿಂದ ಘೋಷಿಸಿದಳು : “ಬ್ಲೂಮಿಂಗ್ಟನ್ನಲ್ಲಿ ಪ್ರತಿಯೊಬ್ಬರಿಗೂ ಗೊತ್ತಾಗ್ ಬಿಟ್ಟಿದೆ. ಇದೇ ಕೀ ಸ್ಟೇಟ್. ಇದರಲ್ಲಿಯವ್ರೋ ಯಾರೋ ಒಬ್ರು ಮತದಾರ ರಾಗಿ ಆಯ್ಕೆ ಆಗ್ತಾರೆ, ಅಂತ. .

“ಇಲ್ಲೆ ಎಲ್ಲರೂ ನಮ್ಮಲ್ಲೇ ಯಾರಾದರೂ ಒಬ್ರು ಮತದಾರರರು ಆಗಲಿ ಅಂತ ಕಾಯ್ತಾ ಇದ್ದಾರೆ. ಬ್ಲೂಮಿಂಗ್ಟನ್ ನ್ಯೂಸ್ ವೀಡಿಯೋದಲ್ಲಿ ಆ ಆಂಕರ್ ಕೂಡ ಹಾಗೇ ಹೇಳ್ತಾ ಇದ್ದಾರೆ’’.

ನಾರ್ಮನ್ ಒಮ್ಮೆಗೇ ಅಸ್ವಸ್ಥನಾದ. ಅವನ ಹೃದಯ ಕುಸಿಯ ತೊಡಗಿತು . ಬ್ಲೂಮಿಂಗ್ಟನ್‌ನಲ್ಲಿ ಮಲ್ಟಿವ್ಯಾಕ್‌ನ ಏಟು ಬಿದ್ದರೆ, ಇಲ್ಲಿಗೆ ಹಿಂಡುಗಟ್ಟಲೇ ಪತ್ರಕರ್ತರು, ವೀಡಿಯೋ ಶೋಗಳು, ಪ್ರವಾಸಿಗರು ಬಂದು ಬಿಡ್ತಾರೆ ಅಂತ ಅರ್ಥ. ಆ ಗೌಜು, ಗದ್ದಲ , ಅವನಿಗೆ ಹಿಡಸೋದಿಲ್ಲ. ನಾರ್ಮನ್ ಇಷ್ಟಪಡೋದು ಗದ್ದಲ ಇಲ್ಲದ ಶಾಂತ ಜೀವನ.

ಅವನು ಹೇಳಿದ: “ಅದೆಲ್ಲಾ ವದಂತಿ ಇರಬಹುದು. ಅಷ್ಟೇ.” ಸಾರಾ ಹೇಳಿದಳು: “ನೀವೇ ನೋಡಿ. ಸ್ವಲ್ಪ ಕಾಯಿರಿ”

ಆದರೆ ಕಾಯಲು ಬಹಳ ಸಮಯ ಇರಲೇ ಇಲ್ಲ. ಅವರ ಮನೆ ಕರೆ ಗಂಟೆ ಜೋರಾಗಿ ಬಾರಿಸಿತು. ನಾರ್ಮನ್ ಬಾಗಿಲು ತೆರೆದ. “ಹೇಳಿ” ಎಂದ. .

ಅವನ ಎದುರು ಎತ್ತರದ, ಗಂಭೀರ ಚಹರೆ ಯ ವ್ಯಕ್ತಿಯೊಬ್ಬರು ನಿಂತಿದ್ದರು. “ನೀವು ನಾರ್ಮನ್ ಮುಲ್ಲರ್ ಅಲ್ಲವೇ?”, ಅಂದರು.

“ಹೌದು” ಎಂದ. ಆದರೆ ಅವನ ಧ್ವನಿ ಸಣ್ಣಗಾಗಿತ್ತು. ಆ ಅಪರಿಚಿತನ ಭಂಗಿಯಿಂದ ಅವನು ಯಾವುದೋ ದೊಡ್ಡ ಹುದ್ದೆಯ ಸರಕಾರಿ ಅಧಿಕಾರಿ, ಅಂತ ಅನ್ನಿಸಿತು. ತನ್ನ ಮನೆಗೆ ಅವನ ಆಗಮನದ ಉದ್ದೇಶ ಇದ್ದಕ್ಕಿದ್ದಂತೆ ಸ್ಪಷ್ಟವಾಯಿತು.

ಇರಲಿಕ್ಕಿಲ್ಲ ಅಂತ ಅನ್ನಿಸಿದರೂ, ಕೊನೆಗೆ ಅದು ದಿಟವೇ ಆಯಿತು.

ಆ ವ್ಯಕ್ತಿ ತನ್ನ ಗುರುತಿನ ಚೀಟಿ ತೋರಿಸಿದ. ಮನೆಯೊಳಗೆ ಬಂದು ಬಾಗಿಲು ಮುಚ್ಚಿದ. ಥೇಟ್ ಸರಕಾರಿ ಶೈಲಿಯಲ್ಲಿ, ವಿಧಿವತ್ತಾಗಿ ತನ್ನ ಮಾತು ಆರಂಭಿಸಿದ.

“ಶ್ರೀಮಾನ್ ನಾರ್ಮನ್ ಮುಲ್ಲರ್ ಅವರೇ, ನಿಮ್ಮನ್ನು ಈ ಬಾರಿಯ ಪೌರಶ್ರೀ ಎಂದು ಘೋಷಿಸಲಾಗಿದೆ. ಇವತ್ತು, ನವೆಂಬರ್ ೪, ೨೦೦೮ ರ ಮಂಗಳವಾರದಂದು ಸಕಲ ಅಮೆರಿಕನ್ ಮತದಾರರನ್ನು ಪ್ರತಿನಿಧಿಸಲು ನೀವು ಆಯ್ಕೆಯಾಗಿರುವಿರಿ ಎಂದು ಅಮೆರಿಕದ ಅಧ್ಯಕ್ಷರ ಪರವಾಗಿ ನಿಮಗೆ ತಿಳಿಸಲು ನನಗೆ ಸಂತೋಷವಾಗುತ್ತದೆ’’.

ನಾರ್ಮನ್ ಮುಲ್ಲರ್ ನ ಮುಖ ಬಿಳಿಚಿ ಹೋಯಿತು. ಕಷ್ಟಪಟ್ಟು ತನ್ನ ಕುರ್ಚಿಯವರೆಗೆ ನಡೆದ. ಪ್ರಜ್ಞೆತಪ್ಪಿ ಹೊಯಿತೋ ಏನೋ ಎನ್ನುವಂತೆ ಕುಳಿತ. ಸಾರಾ ನೀರು ತಂದಳು. ತನ್ನ ಗಂಡನ ಕೈಗಳನ್ನು ತಿಕ್ಕಿದಳು. ಅವನು ಹಲ್ಲು ಕಟಕಟ ಮಾಡಿದಂತೆ ಅನ್ನಿಸಿದಾಗ ಹೇಳಿದಳು, ” ಗಾಬರಿ ಆಗಬೇಡ , ನಾರ್ಮನ್, ಅಸ್ವಸ್ಥನಾಗಬೇಡ ಅವರು ಬೇರೆ ಯಾರನ್ನಾದ್ರೂ ಆರಿಸುತ್ತಾರೆ.”

ನಾರ್ಮನ್ ಗೆ ಅಲ್ಪ ಶಕ್ತಿ ಬಂತು. ತಾನು ಮಾತನಾಡಲು ಶಕ್ತನಾದಾಗ, ಪಿಸುಗುಟ್ಟಿದ, “ನನ್ನನ್ನು ಕ್ಷಮಿಸಿ, ಸರ್. ನನ್ನ ಕೈಲಿ ಇದು ಆಗಲಿಕ್ಕಿಲ್ಲ”.

ಸೀಕ್ರೆಟ್ ಸರ್ವಿಸ್ ಏಜೆಂಟ್ ತನ್ನ ಕೋಟ್ ತೆಗೆದಿದ್ದ. ಒಳಗಿನ ಜಾಕೆಟ್ ಬಿಚ್ಚಿ ಮಂಚದ ಮೇಲೆ ಆರಾಮವಾಗಿ ಕುಳಿತ.

“ಪರವಾಗಿಲ್ಲ,” ಅವನು ಹೇಳಿದನು. ತಾನು ಒಬ್ಬ ಅಧಿಕಾರಿ ಎನ್ನುವುದನ್ನು ಮರೆತು, ಕುಟುಂಬದ ಮಿತ್ರನಂತೆ, ಅನೌಪಚಾರಿಕ ವಾಗಿ ಮಾತಾಡಲು ಆರಂಭಿಸಿದ. “ ನೋಡಿ, ನಾನು ಈ ರೀತಿಯ ಘೋಷಣೆ ಮಾಡ್ತಾ ಇರೋದು ಆರನೇ ಬಾರಿ. ಅದಕ್ಕೆ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನೂ ನಾನು ನೋಡಿದ್ದೇನೆ. ನಮಗೆ ಇದೇನೂ ಹೊಸದಲ್ಲ. ಅರ್ಥವಾಯಿತೇ? ಟಿವಿಯಲ್ಲಿ ತೋರಿಸ್ತಾರಲ್ಲ, ಇದು ಈ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ನನ್ನ ಅಳಿಲು ಸೇವೆ, ಇತ್ಯಾದಿ, ಅಂತ ಎಲ್ಲ ಹೇಳ್ತಾರಲ್ಲ, ಎಲ್ಲರೂ ಆ ರೀತಿ ಇರೋದಿಲ್ಲ, ಗೊತ್ತಾಯ್ತೇ?’’ ಏಜೆಂಟ್ ನಕ್ಕ.

ಸಾರಾ ಕೂಡ ನಕ್ಕಳು. ಆದ್ರೆ ಅದು ಹೇಗಿತ್ತು ಎಂದ್ರೆ, ಸ್ವಲ್ಪ ಹಿಸ್ಟೀರಿಯಾ ಅಂಟಿದವರ ಥರಾ ಇತ್ತು.

ಏಜೆಂಟ್ ಹೇಳಿದ, “ಈಗ ನಾನು ಕೆಲ ಕಾಲ ನಿಮ್ಮ ಮನೆಯಲ್ಲಿ, ನಿಮ್ಮೊಂದಿಗಿರುತ್ತೇನೆ. ನನ್ನ ಹೆಸರು ಫಿಲ್ ಹ್ಯಾಂಡ್ಲಿ. ನೀವೆಲ್ಲಾ ದಯವಿಟ್ಟು ನನ್ನನ್ನು ಫಿಲ್ ಅಂತ ಕರೆಯಿರಿ. ಚುನಾವಣಾ ದಿನದವರೆಗೆ ಶ್ರೀ ಮುಲ್ಲರ್ ಮನೆಯಿಂದ ಹೊರಗೆ ಹೋಗಬಾರದು. ಅವರು ಅಸ್ವಸ್ಥರಾಗಿದ್ದಾರೆಂದು ನೀವು ಅವರ ಕಚೇರಿಗೆ ತಿಳಿಸಬೇಕು, ಶ್ರೀಮತಿ ಮುಲ್ಲರ್, ನೀವು ಸ್ವಲ್ಪ ಕಾಲ ನಿಮ್ಮ ಕೆಲಸ ಮಾಡಬಹುದು. ಆದರೆ ಇದರ ಬಗ್ಗೆ ಯಾರಿಗೂ ಒಂದು ಮಾತನ್ನೂ ಹೇಳಬಾರದು ಸರಿಯೇ, ?”

ಸಾರಾ ತಲೆಯಾಡಿಸಿದಳು. “ಇಲ್ಲ, ಸರ್. ಒಂದು ಮಾತೂ ಇಲ್ಲ.”

“ಸರಿ. ಆದರೆ, ಶ್ರೀಮತಿ ಮುಲ್ಲರ್,” ಈಗ ಹ್ಯಾಂಡ್ಲಿ ಗಂಭೀರನಾದ, “ನಾವು ಈಗ ಜೊಕ್ ಮಾಡುತ್ತಿಲ್ಲ. ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಬೇಕು. ಆದರೆ ನೀವು ಹೊರಗೆ ಹೋದಾಗ ನಿಮ್ಮನ್ನು ನಮ್ಮವ್ರು ಯಾರಾದರೂ ಫಾಲೋ ಮಾಡ್ತಾರೆ. . ಕ್ಷಮಿಸಿ, ನಮ್ಮ ಕೆಲಸ ನಾವು ಮಾಡಬೇಕು.”

“ಫಾಲೋ ಮಾಡ್ತಾರಾ?’’

“ಹೌದು, ಅದ್ರೆ ಅದು ಎಲ್ಲರಿಗೂ ಕಾಣೋ ಥರಾ ಇರೋದಿಲ್ಲ. ಚಿಂತೆ ಮಾಡಬೇಡಿ. ನಾರ್ಮನ್ ಆಯ್ಕೆ ಆಗಿದ್ದಾರೆ ಅಂತ ನಿಮಗೆ ಮಾತ್ರ ಗೊತ್ತಾಗಿದೆ. ರಾಷ್ಟ್ರ ಮಟ್ಟದ ಔಪಚಾರಿಕ ಘೋಷಣೆಗೆ ಕೇವಲ ಎರಡು ದಿನ ಬಾಕಿ ಇದೆ. ನಿಮ್ಮ ಮಗಳು…”

“ಮಲಗಿದ್ದಾಳೆ,” ಸಾರಾ ಆತುರದಿಂದ ಹೇಳಿದಳು.

“ಒಳ್ಳೆಯದು. ಥಟ್ಟನೇ ನನ್ನನ್ನು ನೋಡಿ ಅವಳಿಗೆ ಅವಳಿಗೆ ಗಾಬರಿ ಆಗಬಾರದು . ನಾನು ನಿಮ್ಮ ದೂರದ ಸಂಬಂಧಿ ಅಥವಾ ನಾರ್ಮನ್ ಅವರ ಸ್ನೇಹಿತ ಅಂತ ಅವಳಿಗೆ ಹೇಳಿ . ಒಂದು ವೇಳೆ ಅವಳಿಗೆ ನಿಜ ಗೊತ್ತಾದರೆ ಅವಳನ್ನು ಕೂಡ ಹೊರಗಡೆ ಕಳಿಸಲಾರದೇ, ಮನೆಯಲ್ಲೇ ಇಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ತಂದೆ ಮಾತ್ರ ಯಾವುದೇ ಸಂದರ್ಭದಲ್ಲಿ ಮನೆಯಲ್ಲೇ ಇರುವುದು ಉತ್ತಮ.”

“ಅವರಿಗೆ ಅದು ಇಷ್ಟ ಇಲ್ಲ,” ಸಾರಾ ಹೇಳಿದಳು. “ಬೇರೆ ದಾರಿ ಇಲ್ಲ. ಹೇಗೂ ಈಗ ನಿಮ್ಮ ಮನೆಯಲ್ಲಿ ಬೇರೆ ಯಾರೂ ಇಲ್ಲ, ಅಲ್ಲವೇ…”

“ನಿಮಗೆ ನಮ್ಮ ಬಗ್ಗೆ ಎಲ್ಲಾ ಗೊತ್ತಿದೆಯೇ?” ನಾರ್ಮನ್ ಪಿಸುಗುಟ್ಟಿದ. .

“ಜಾಸ್ತಿ ಏನಿಲ್ಲ, ಸ್ವಲ್ಪ ಸ್ವಲ್ಪ ಅಷ್ಟೇ,” ಹ್ಯಾಂಡ್ಲಿ ಒಪ್ಪಿದ.

“ಯಾವುದೇ ಸಂದರ್ಭದಲ್ಲಿ ಎಷ್ಟು ಬೇಕಾದೀತೋ ಅಷ್ಟು. ಈ ಕ್ಷಣಕ್ಕೆ ನಾನು ನಿಮಗೆ ಕೊಡುವ ನನ್ನ ಎಲ್ಲಾ ಸೂಚನೆಗಳು ಇಷ್ಟೇ. ನಾನು ಸಾಧ್ಯವಾದಷ್ಟು ನಿಮ್ಮೊಂದಿಗೆ ಸಹಕರಿಸುತ್ತೇನೆ. ನಿಮಗೆ ಸಾಧ್ಯವಾದಷ್ಟು ಕಡಿಮೆ ತೊಂದರೆ ಕೊಡುತ್ತೇನೆ. ಸರ್ಕಾರ ನನ್ನ ಖರ್ಚು ನೋಡಿಕೊಳ್ಳುತ್ತದೆ.

ನಾನು ನಿಮಗೇನೂ ಹೊರೆಯಾಗುವುದಿಲ್ಲ. ರಾತ್ರಿಯಲ್ಲಿ ನಮ್ಮ ಪಾಳಿ ಬದಲಾಗುತ್ತದೆ.

ಬೇರೆಯವರು ಈ ಕೋಣೆಯಲ್ಲಿ ಕುಳಿತುಕೊಳ್ಳುತ್ತಾರೆ. ನಮಗಂತೂ ಮಲಗುವ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಇರಲಿ. ಈಗ, ಮಿ. ಮುಲ್ಲರ್…”

“ಸರ್?”

“ನೀವು ನನ್ನನ್ನು ಫಿಲ್ ಅಂತ ಕರೆಯಬಹುದು,” ಏಜೆಂಟ್ ಮತ್ತೆ ಹೇಳಿದ. ” ಸರಕಾರದಿಂದ ಔಪಚಾರಿಕ ಘೋಷಣೆಯ ಎರಡು ದಿನ ಮೊದಲು ನಿಮಗೆ ತಿಳಿಸಿದ್ದೇವೆ. ಈ ಅವಧಿಯ ಉದ್ದೇಶವೆಂದರೆ ನೀವು ಹೊಸ ಸುದ್ದಿಯನ್ನು ಸ್ವೀಕರಿಸಿ, ನಿಮ್ಮ ಪೌರಶ್ರೀ ಸಮ್ಮಾನ ವನ್ನು ನೀವು ಒಪ್ಪಿಕೊಂಡು, ಆ ಜವಾಬುದಾರಿಯ ಸ್ಥಾನಕ್ಕೆ ನೀವು ಒಗ್ಗಿಕೊಳ್ಳಲು ಅವಕಾಶ ಸಿಗುತ್ತದೆ.

ಪ್ರತಿಬಾರಿಯ ಪೌರಶ್ರೀ ಗಳು ಸಾಧ್ಯವಾದಷ್ಟು ಸಾಮಾನ್ಯ ಮನಸ್ಥಿತಿಯಲ್ಲಿ ಮಲ್ಟಿವ್ಯಾಕ್ ಎದುರಿಸಬೇಕು ಅಂತ ನಾವು ಬಯಸುತ್ತೇವೆ. ಆರಾಮವಾಗಿರಿ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಇದು ನಿಮ್ಮ ದೈನಂದಿನ ಕೆಲಸದ ಭಾಗವೆಂದು ಭಾವಿಸಿ. ಸರಿಯೇ?”

“ಸರಿ,” ಎಂದ ನಾರ್ಮನ್ . ಆಮೇಲೆ ತಲೆ ಅಲ್ಲಾಡಿಸಿದ. “ಆದರೆ ಸಾರ್, ನನಗೆ ಈ ಜವಾಬ್ದಾರಿ ಬೇಡಾಗಿತ್ತು ಅಂತ ಅನ್ನಿಸುತ್ತದೆ. ಇಷ್ಟು ಪ್ರಮುಖವಾದ ಕೆಲಸಕ್ಕೆ ನಾನೇ ಏಕೆ?”

“ಸರಿ,” ಹ್ಯಾಂಡ್ಲಿ ಸುರು ಮಾಡಿದ. “ಅದನ್ನು ಮೊದಲೇ ಸ್ಪಷ್ಟಪಡಿಸೋಣ. ಮಲ್ಟಿವ್ಯಾಕ್ ಎಲ್ಲಾ ಜನರ ಬಗ್ಗೆ ಎಲ್ಲಾ ರೀತಿಯ ಅಂಶಗಳನ್ನು ಸಂಗ್ರಹಿಸುತ್ತದೆ. ಈ ರೀತಿ ಸಂಗ್ರಹಿಸಿದ ಶತಕೋಟಿಗಟ್ಟಲೆ ಮಾಹಿತಿ ಗುಚ್ಛ ಗಳನ್ನು ತೂಗಿ ನೋಡುತ್ತದೆ. ಅದಕ್ಕೆ ವಿಶ್ವದ ಎಲ್ಲಾ ಮಾಹಿತಿ ತಿಳಿದಿದೆ. ಆದರೆ ಒಂದು ಅಂಶ ಅದಕ್ಕೆ ಗೊತ್ತಿಲ್ಲ- ಅದು ಏನು ಎಂದರೆ, ಮಾನವನ ಮನಸ್ಸು. ತಮ್ಮ ಸುತ್ತ ಮುತ್ತಲಿನ ಆಗುಹೋಗುಗಳಿಗೆ ಮನಸ್ಸು ಪ್ರತಿಕ್ರಿಯೆ ನೀಡುವ ರೀತಿ. ಅದನ್ನು ಪ್ರತಿಬಾರಿ ಪರೀಕ್ಷೆ ಮಾಡಬೇಕಾಗುತ್ತದೆ. ಆದರೆ ಅದು ಸುಲಭ. ಬೇರೆಯವರು ಅಂದುಕೊಂಡಷ್ಟು ಕಷ್ಟವೇನೂ ಅಲ್ಲ. ಅರ್ಥ ಮಾಡಿಕೊಳ್ಳೋಕೆ ತುಂಬಾ ಸಿಂಪಲ್.

ಎಲ್ಲಾ ಅಮೇರಿಕನ್ನರು ತಮ್ಮ ಸುತ್ತಲಿನ ಇತರ ಅಮೇರಿಕನ್ನರು ಹೇಗೆ ವಿಚಾರ ಮಾಡುತ್ತಾರೆ, ಏನು ಮಾಡುತ್ತಾರೆ ಮತ್ತು ಯಾವ ಸಮಯದಲ್ಲಿ ಯಾವ ಮಾತಾಡುತ್ತಾರೆ ಎಂಬುದನ್ನು ಗಮನಿಸುತ್ತಾ ಇರುತ್ತಾರೆ. ತಾವೂ ಇತರರಂತೆಯೇ ಇರಬೇಕು. ಇದೇ ಟ್ರೆಂಡ್!, ಹೀಗೆ ಇರದಿದ್ದರೆ ನಾವು ಹೊರಗಿನವರು ಅನ್ನಿಸಿಕೊಳ್ಳುತ್ತೇವೆ ಎನ್ನುವ ಒತ್ತಡಕ್ಕೆ ಒಳಗಾಗುತ್ತಾರೆ.

ಈ ಹಿನ್ನೆಲೆಯಲ್ಲಿ, ಯಾವುದೇ ಅಮೇರಿಕನ್ ಅನ್ನು ಮಲ್ಟಿವ್ಯಾಕ್‌ಗೆ ಕರೆತಂದು ಅವನ ಮನಸ್ಸಿನ ಒಲವನ್ನು ನಾವು ಪರೀಕ್ಷಿಸಬಹುದು. ಅದರಿಂದ ದೇಶದಲ್ಲಿನ ಇತರ ಎಲ್ಲಾ ಮನಸ್ಸುಗಳ ಒಲವನ್ನು- ದ್ವೇಷಗಳನ್ನು ಅಂದಾಜು ಮಾಡಬಹುದು. ಆ ಕೆಲವು ಅಮೇರಿಕನ್ನರು ಇಡೀ ದೇಶವನ್ನು ಅಳೆಯಲು ನಮಗೆ ಸಹಾಯ ಮಾಡುತ್ತಾರೆ. ಈ ಉದ್ದೇಶಕ್ಕಾಗಿ ಯಾರು ಉತ್ತಮರು ಎನ್ನುವುದು ಆ ವರ್ಷದ ಕೆಲ ಘಟನೆಗಳನ್ನು ಅವಲಂಬಿಸಿರುತ್ತದೆ. ಹೀಗೇ ಮಲ್ಟಿವ್ಯಾಕ್ ನಿಮ್ಮನ್ನು ಈ ವರ್ಷದ ಅತ್ಯಂತ ಸೂಕ್ತ ಪ್ರತಿನಿಧಿಯಾಗಿ ಆರಿಸಿದೆ. ನೀವು ಎಲ್ಲರಿಗಿಂತ ದೊಡ್ಡವರು ಅಂತೇನೂ ಇಲ್ಲ. ಇತರರಿಗಿಂತ ಬುದ್ಧಿವಂತನಲ್ಲ, ಬಲಶಾಲಿಯಲ್ಲ, ಅದೃಷ್ಟಶಾಲಿಯಲ್ಲ. ಕೇವಲ ಅತ್ಯಂತ ಸೂಕ್ತ ಪ್ರತಿನಿಧಿ. ಈ ರೀತಿಯ ಆಯ್ಕೆಗಳನ್ನು ಮಾಡಿದ ಮಲ್ಟಿವ್ಯಾಕ್ ಅನ್ನು ನೀವೇ ಪ್ರಶ್ನಿಸುವುದಿಲ್ಲ, ಸರಿಯೇ?”

” ಆದರೆ, ಆ ಮಹಾ ಕಂಪ್ಯೂಟರ್ ತಪ್ಪು ಮಾಡಲಾರದೇ?” ನಾರ್ಮನ್ ಕೇಳಿದನು.

ಸುಮ್ಮನೆ ಕೇಳುತ್ತಿದ್ದ ಸಾರಾ ಅಸಹನೆಯಿಂದ ಚಡಪಡಿಸಿದಳು. ಇವರ ಮಾತನ್ನು ಅಡ್ಡಿಪಡಿಸಿ: ” ಅಯ್ಯೋ ಅವರ ಮಾತು ಎಲ್ಲ ಕೇಳಬೇಡಿ, ಸರ್. ಅವರು ಟೆನ್ಷನ್ ಆಗಿದೆ. ಅವರು ಸ್ವಭಾವದಿಂದ ಸೂಕ್ಷ್ಮ. ಅವರು ಬಹಳಷ್ಟು ಓದಿಕೊಂಡವರು. ಅಲ್ಲದೇ ಅವರು ಯಾವಾಗಲೂ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಇರುತ್ತಾರೆ.

ಹ್ಯಾಂಡ್ಲಿ ಹೇಳಿದ ” ಈ ರೀತಿಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಲ್ಟಿವ್ಯಾಕ್, ಶ್ರೀಮತಿ ಮುಲ್ಲರ್. ಅದು ನಿಮ್ಮ ಗಂಡನನ್ನು ತನ್ನದೇ ಆದ ಪ್ರಕ್ರಿಯೆಯ ಮೂಲಕ ಅರಿಸಿದೆ. ನಾವು ಒಪ್ಪಿಕೊಳ್ಳಬೇಕು, ಅಷ್ಟೇ’’.

ನಾರ್ಮನ್ ಹುಚ್ಚನಂತೆ ಮಾತಾಡತೊಡಗಿದ : `ಆದರೆ, ಆದರೆ ಅದು ಎಲ್ಲಾ ವಿಷಯ ತಿಳಿದುಕೊಂಡಿರುತ್ತದೆಯೇ? ಅದು ಕಾಲಜ್ಞಾನಿಯೇ? ತಪ್ಪು ಮಾಡೋದೇ ಇಲ್ಲವೇ?’’

“ ಊಹೂಂ. ಹಾಗೇನು ಇಲ್ಲ. ಅದು ತಪ್ಪು ಮಾಡಬಹುದು. ಒಮ್ಮೊಮ್ಮೆ ಹಾಗಾಗಿದೆ. ಒಮ್ಮೆ, ೧೯೯೩ ರಲ್ಲಿ, ಪೌರಶ್ರೀ ಅಂತ ಆಯ್ಕೆಯಾದ ಮತದಾರನಿಗೆ ಆ ವಿಷಯ ತಿಳಿಸುವ ಎರಡು ಗಂಟೆಗಳ ಮೊದಲು ತೀವ್ರ ಪಾರ್ಶ್ವವಾಯು ಆಘಾತವಾಗಿ ಸತ್ತು ಹೋದ. ಆ ವ್ಯಕ್ತಿಯ ಮೃತ್ಯು ಆಗಬಹುದು ಅಂತ ಮಲ್ಟಿವ್ಯಾಕ್ ಊಹಿಸಲಿಲ್ಲ; ಅದಕ್ಕೆ ಸಾಧ್ಯವಾಗಲಿಲ್ಲ ಅಂದುಕೊಳ್ಳಿ. ಅದು ಅದರ ಮಿತಿ. ಒಮ್ಮೊಮ್ಮೆ ಚುನಾಯಿತ ಮತದಾರ ಮಾನಸಿಕವಾಗಿ ಅಸ್ಥಿರನಾಗಿರಬಹುದು, ನೈತಿಕವಾಗಿ ಸೂಕ್ತನಲ್ಲದಿರಬಹುದು, ಅಥವಾ ದೇಶದ್ರೋಹಿಯೂ ಆಗಿರಬಹುದು.

ಮಲ್ಟಿವ್ಯಾಕ್ ಗೆ ಎಲ್ಲರ ಬಗ್ಗೆ ಎಲ್ಲಾ ತಿಳಿದಿರುವುದಿಲ್ಲ. ನಾವು ಎಲ್ಲಾ ರೀತಿಯ ಮಾಹಿತಿಯನ್ನು ತಿನ್ನಿಸಬೇಕಾಗುತ್ತದೆ. ಹಾಗೆ ಅಂತ ನಾವು ಪರಿಪೂರ್ಣವಾಗಿ ಅದರ ಮೇಲೆ ಅವಲಂಬನ ಆಗಿರುವುದಿಲ್ಲ. ಪೌರಶ್ರೀ ಆಯ್ಕೆ ಅಥವಾ ಇತರ ಕೆಲಸಗಳಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಇರಲಿ ಅಂತ ನಾವು ಪರ್ಯಾಯ ಆಯ್ಕೆಗಳನ್ನು ಯಾವಾಗಲೂ ಸಿದ್ಧ ಮಾಡಿ ಇಟ್ಟುಕೊಂಡಿರುತ್ತೇವೆ.

ಈ ಬಾರಿ ನಾವು ಅದನ್ನು ಬಳಸುವ ಪ್ರಸಂಗ ಬರೋದಿಲ್ಲ. ನಿಮ್ಮ ಆರೋಗ್ಯ ಸ್ಥಿತಿ ಚೆನ್ನಾಗಿಯೇ ಇದೆ. ಶ್ರೀ ಮುಲ್ಲರ್, ನಿಮ್ಮನ್ನು ಎಚ್ಚರಿಕೆಯಿಂದ ತನಿಖೆ ಮಾಡಲಾಗಿದೆ. ನಿಮಗೆ ನೀಡಲಾಗುತ್ತಿರುವ ಈ ಗುರುತರ ಜವಾಬುದಾರಿಗೆ ನೀವು ಸಂಪೂರ್ಣವಾಗಿ ಅರ್ಹರು.”

ತನ್ನ ಮುಖವನ್ನು ಕೈಗಳಲ್ಲಿ ಮುಚ್ಚಿಕೊಂಡು ನಾರ್ಮನ್ ಸುಮ್ಮನೇ ಕೂತ . ಮಾತಿಲ್ಲದೇ .

“ಏನೂ ಪ್ರಾಬ್ಲಂ ಇಲ್ಲ ಬಿಡಿ ಸರ್,” ಸಾರಾ ಹೇಳಿದಳು, “ನಾಳೆ ಈ ಹೊತ್ತಿಗೆ, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಸ್ವಲ್ಪ ಈ ಹೊಸ ಸವಾಲಿಗೆ ಅವರು ಒಗ್ಗಿಕೊಳ್ಳಬೇಕು, ಅಷ್ಟೇ.”

“ಖಂಡಿತ,” ಹ್ಯಾಂಡ್ಲಿ ನಸು ನಗುತ್ತಾ ಹೇಳಿದ.

ರಾತ್ರಿ ಬೆಡ್ ರೂಂ ನಲ್ಲಿ ಸಾರಾ ತನಗೆ ಅನ್ನಿಸಿದ್ದನ್ನು ಹೇಳಿದಳು. ಒಂದು ದೊಡ್ಡ ಲೆಕ್ಚರ್ ಆಯ್ತು ಅಂದುಕೊಳ್ಳಿ. ಅದರ ಉಪನ್ಯಾಸದ ಸಾರಾಂಶ ಹೀಗಿತ್ತು : ” ನೋಡು ನಾರ್ಮನ್, ಟೆನ್ಷನ್ ಮಾಡಿಕೊಳ್ಳಬೇಡ. ನಿನ್ನ ಜೀವನದಲ್ಲಿ ಒಂದು ಅಪರೂಪದ ಸುವರ್ಣ ಅವಕಾಶ ಒದಗಿ ಬಂದಿದೆ. ಅದನ್ನು ಸರಿಯಾಗಿ ಉಪಯೋಗಿಸು. ಕಸದ ಬುಟ್ಟಿಗೆ ಎಸೆಯಬೇಡ’’.

ನಾರ್ಮನ್ ಹತಾಶೆಯಿಂದ ಪಿಸುಗುಟ್ಟಿದ: “ಅದೇ ಹೆದರಿಕೆ ಆಗುತ್ತಿದೆ. ಸಾರಾ. ಆ ಇಡೀ ವಿಷಯವೇ ಅತೀವ ಅಂಜಿಕೆ ಹುಟ್ಟಿಸುತ್ತಿದೆ. ನಾನೇ ಏಕೆ? ’’ ಅಂತ ಅನ್ನಿಸುತ್ತದೆ.

“ಅಯ್ಯೋ ದೇವರೇ? ಅದರಲ್ಲಿ ಏನು ಮಹಾ? ಅಲ್ಲಿ ಹೋಗಿ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟು ಏನು ಮಹಾ ಇದೆ ಅದರಲ್ಲಿ ?”

” ಈ ಜವಾಬ್ದಾರಿ ತುಂಬಾ ದೊಡ್ಡದು. ನಾನು ಅದನ್ನು ಎದುರಿಸಲು ಸಾಧ್ಯವೇ ಇಲ್ಲ ಅಂತ ಅನಿಸ್ತಾ ಇದೆ. ’’

“ಅಯ್ಯೋ ಅದೇನು ಅಂಥಾ ಜವಾಬ್ದಾರಿ? ಇಷ್ಟು ಕೋಟಿ ಜನರಲ್ಲಿ ಮಲ್ಟಿವ್ಯಾಕ್ ನಿನ್ನನ್ನು ಆರಿಸಿದೆ. ನಿನ್ನನ್ನೇ ನೀನು ಆರಿಸಿಕೊಂಡಿಲ್ಲವಲ್ಲ! ನಿನ್ನ ಆಯ್ಕೆ ಮಲ್ಟಿವ್ಯಾಕ್ನ ಜವಾಬ್ದಾರಿ. ಅದು ಎಲ್ಲರಿಗೂ ಗೊತ್ತು.”

ನಾರ್ಮನ್ ಹಾಸಿಗೆಯಲ್ಲಿ ಎದ್ದು ಕುಳಿತುಕೊಂಡ. ತುಂಬಾ ನರಳುತ್ತಿರುವವನಂತೆ , ಮೆಲ್ಲಗೆ ಹೇಳಿದ. “ಅಲ್ಲಾ, ಮಲ್ಟಿವ್ಯಾಕ್ ನನ್ನನ್ನು ಆಯ್ಕೆ ಮಾಡಿದೆ ಅನ್ನುವುದು, ಅಥವಾ ಅದರಲ್ಲಿ ನಾನು ಏನೂ ಚೌಕಾಶಿ ಮಾಡಿಲ್ಲ ಎನ್ನುವುದು ನನಗೆ ಗೊತ್ತು, ನಿನಗೆ ಗೊತ್ತು. ಆದರೆ ಇತರ ಎಲ್ಲರಿಗೂ ಗೊತ್ತಿರಬೇಕಲ್ಲ ?’’

“ಅಯ್ಯೋ, ಮೆಲ್ಲನೆ ಮಾತಾಡು. ಯಾರಾದರೂ ಕೇಳಿಸಿಕೊಂಡಾರು’’

ನಾರ್ಮನ್ ಪಿಸುಮಾತಿಗೆ ಇಳಿದ.

“೧೯೮೮ ರಲ್ಲಿ ಅಂದಿನ ಅಧ್ಯಕ್ಷ ರಿಡಲಿ ಅವರ ಚುನಾವಣೆ ಬಗ್ಗೆ ನಾವೆಲ್ಲ ಮಾತನಾಡುವಾಗ, ಏನು ಹೇಳುತ್ತೇವೆ? ಅವರು `ಜನಾಂಗೀಯ ದ್ವೇಷ ಹರಡಿದರು. ಅದಕ್ಕೆ ಗೆದ್ದರು’, ಅಂತಲೋ ಅಥವಾ `ತಮ್ಮ ಪ್ರಣಾಳಿಕೆ ಯಲ್ಲಿ ಅಸಾಧ್ಯ ಎನ್ನುವಂತಹ ಭರವಸೆಗಳನ್ನು ಮತದಾರರಿಗೆ ಕೊಟ್ಟರು, ಆಕಾಶದಿಂದ ಸೂರ್ಯ ಚಂದ್ರರನ್ನು ತಂದು ಕೊಡುತ್ತೇವೆ ಅಂತ ಹೇಳಿದರು’, ಅದಕ್ಕೇ ಗೆದ್ದರು ಅಂತ ಹೇಳುತ್ತೇವೆಯೇ? ಇಲ್ಲ’’.

“ಎಲ್ಲರೂ `ಆ ಸುಡುಗಾಡು ಮ್ಯಾಕ್ ಅಂಬರ್’ ನೀಡಿದ ಏಕೈಕ ಮತದ ಬಗ್ಗೆ ಮಾತಾಡುತ್ತಾರೆ. ಅಂದಿನ ಏಕಮೇವ ಮತದಾರ ಪೌರಶ್ರೀ ಹಂಫ್ರೀ ಮ್ಯಾಕ್ ಅಂಬರ್ ರಿಡಲಿ ಪರವಾಗಿ ಮತ ಚಲಾಯಿಸಿದ, ಅದಕ್ಕೇ ಅವನು ಗೆದ್ದ’’ ಅಂತ ಹೇಳುತ್ತಾರೆ. ಅದರಲ್ಲಿ ಯಾರ ತಪ್ಪು ಅಂತ ಆಯಿತು- ಅಭ್ಯರ್ಥಿಯದೋ ಅಥವಾ ಮತದಾರನದೋ ?’ ಎಲ್ಲರೂ ಮತದಾರನ ತಪ್ಪು ಅನ್ನೋ ತರ ಮಾತಾಡುತ್ತಾರೆ. ಪಾಪ ಆ ಹಂಫ್ರಿ ಒಬ್ಬ ಬಡ ಟ್ಟ್ರ್ಯಾಕ್ಟರ್ ಡ್ರೈವರ್. ಅವನನ್ನು ಮಲ್ಟಿವ್ಯಾಕ್ ಮತದಾರನಾಗಿ ಆಯ್ಕೆ ಮಾಡಿತು. ಅದು ಅವನ ತಪ್ಪೇ? ಅವನು ಮಲ್ಟಿವ್ಯಾಕ್ ನ ಪ್ರಶ್ನೆ ಗಳನ್ನು ಎದುರಿಸಿದ, ಅವನ ಒಂದೇ ಮತದಿಂದ ಆ ಸೂಪರ್ ಕಂಪ್ಯೂಟರ್ ಅಂದಿನ ಅಧ್ಯಕ್ಷನನ್ನು ಚುನಾಯಿಸಿತು. ಅದಕ್ಕೆ ರಿಡಲಿ ಗೆದ್ದರು. ನನ್ನನ್ನೇ ಮತದಾರ ಎಂದು ಆಯ್ಕೆ ಮಾಡು ಅಂತ ಅವನೇನೂ ಕೇಳಿಕೊಂಡಿರಲಿಲ್ಲ. ಅದು ಹಂಫ್ರಿ ತಪ್ಪೇ? ನಾನೂ ಈಗ ಅದನ್ನೇ ಹೇಳುತ್ತಿದ್ದೇನೆ. ಈಗ ಎಲ್ಲರೂ ಹಂಫ್ರಿಯದೇ ತಪ್ಪು. ಅವನಿಂದಾಗಿ ಒಬ್ಬ ಕೆಟ್ಟ ಅಧ್ಯಕ್ಷ ಚುನಾಯಿತನಾದ ಅಂತಾರೆ. ಹಂಫ್ರಿ ಎನ್ನುವ ಹೆಸರೇ ಈಗ ಒಂದು ಬೈಗುಳವಾಗಿ, ಶಾಪವಾಗಿ ಹೋಗಿದೆ’’.

” ತುಂಬ ಬಾಲಿಶವಾಗಿ ಮಾತಾಡುತ್ತಿದ್ದೀಯಾ !,” ಅಂದಳು ಸಾರಾ.

“ಇಲ್ಲ ಸಾರಾ. ಎಲ್ಲಾ ರೀತಿಯ ಸಾರಾಸಾರ ವಿಚಾರ ಮಾಡಿ ಹೇಳುತ್ತಿದ್ದೇನೆ. ನಾನು ನಾಳೆ ಬೆಳಿಗ್ಗೆ ಎದ್ದು ಆ ಸೀಕ್ರೆಟ್ ಏಜೆಂಟ್ ಗೆ ಹೇಳಿ ಬಿಡ್ತೇನೆ. ` ಈ ಜವಾಬ್ದಾರಿ ಒಪ್ಪಿಕೊಳ್ಳಲಿಕ್ಕೆ ಆಗೋದಿಲ್ಲ’ ಅಂತ. ನನ್ನ ಒಪ್ಪಿಗೆ ಇಲ್ಲದೆ ಅವರು ನನ್ನಿಂದ ಮತ ಹೇಗೆ ಪಡೆದು ಕೊಳ್ಳುತ್ತಾರೆ ? ಅದು ಸಾಧ್ಯವೇ ಇಲ್ಲ. ನನಗೆ ಹುಷಾರು ಇಲ್ಲ ಅಂತನೋ, ಏನೋ ಒಂದು ಹೇಳಿ ಬಿಡುತ್ತೇನೆ’’

ಅಷ್ಟು ಹೊತ್ತಿಗೆ ಸಾರಾಗೆ ಸಾಕಾಗಿ ಹೋಯಿತು. “ಈಗ ನನ್ನ ಮಾತು ಕೇಳು,” ತಣ್ಣನೆಯ ಕೋಪದಿಂದ ಪಿಸುಗುಟ್ಟಿದಳು. ” ತುಂಬಾ ಸ್ವಾರ್ಥಿಯಾಗಿ ವಿಚಾರ ಮಾಡ್ತಾ ಇದ್ದೀಯಾ. ಈ ಪರಿಸ್ಥಿತಿ ಯಲ್ಲಿ ನೀನು ಕೇವಲ ನಿನ್ನ ಬಗ್ಗೆ ಮಾತ್ರ ವಿಚಾರ ಮಾಡಬಾರದು.

ಇಡೀ ರಾಷ್ಟ್ರದ ಏಕೈಕ ಮತದಾರ ಆಗುವುದು ಎಂದರೆ ಏನು ಗೊತ್ತಾ? ಎಷ್ಟು ಪ್ರತಿಷ್ಠೆಯ ವಿಷಯ, ಏನು ಕತೆ? ಅದೂ ಅಧ್ಯಕ್ಷೀಯ ಚುನಾವಣೆ ವರ್ಷದಲ್ಲಿ ? ಭಾರಿ ಪ್ರಚಾರ ಮತ್ತು ಸಖತ್ ಖ್ಯಾತಿ. ಸಿಕ್ಕಾಪಟ್ಟೆ ಹಣನೂ ಸಿಗಬಹುದು…”

“ಅವೆಲ್ಲಾ ಬೇಡ. ಸುಮ್ಮನೆ ವಾಪಸ್ ನನ್ನ ಅಂಗಡಿಗೆ ಹೋಗಿ ಕೆಲಸ ಶುರು ಮಾಡುತ್ತೇನೆ”

“ನೋ. ನೋ. ಪೌರಶ್ರೀ ಆದ ನಂತರ, ಕನಿಷ್ಠ ನೀನು ಬ್ರಾಂಚ್ ಮ್ಯಾನೇಜರ್ ಆಗಲೇ ಬೇಕು. ಅಷ್ಟು ಬುದ್ದಿವಂತಿಕೆ ನಿನ್ನಲ್ಲಿ ಇದೆ. ಈಗ ನನ್ನ ಮಾತು ಕೇಳು. ಈಗ ನಮಗೆ ಬಯಸದೇ ಬಂದ ಪ್ರಚಾರವನ್ನು ನೀನು ಸರಿಯಾಗಿ ಬಳಸಿ ಕೊಂಡರೆ ನೀನು ಆ ಇನ್ನೂ ದೊಡ್ಡ ಹುದ್ದೆಗೆ ಹೋಗಬಹುದು. ನಿಮ್ಮ ಕೆನ್ನೆಲ್ ಸ್ಟೋರ್ಸ್ ಕಂಪನಿ ಮಾಲೀಕರ ಹತ್ತಿರ ಚೌಕಾಸಿ ಮಾಡಬಹುದು. ಹೆಚ್ಚಿನ ಹುದ್ದೆ, ಸಂಬಳ, ಸಾರಿಗೆ, ಹಾಗೂ ನಿವೃತ್ತಿ ನಂತರ ಉತ್ತಮ ಪಿಂಚಣಿ ಯೋಜನೆ ಎಲ್ಲವನ್ನೂ ಪಡೆದು ಕೊಳ್ಳಬಹುದು”.

” ಪೌರಶ್ರೀ ಆಗುವ ಉದ್ದೇಶ ಅದಲ್ಲ, ಸಾರಾ.”

“ಮತ್ತೇನು? ಹಾಗೇಕೆ ಅಂದುಕೊಳ್ಳುತ್ತೀಯಾ? ಇದರಲ್ಲಿ ನಮಗೆ ಏನು ಸಿಗಲಿದೆ? ನಿನ್ನ ಮೇಲೆ ಗಂಭೀರ ಜವಾಬ್ದಾರಿ ಇದೆ. ನಾನು- ಲಿಂಡಾ, ಈ ಮನೆ, ಈ ಕುಟುಂಬ, ಇದೆಲ್ಲ ನಿನ್ನ ಮೇಲೆ ಇದೆ . ಇದೆಲ್ಲ ಋಣವಿಲ್ಲದಿದ್ದರೆ – ನಾನು ಈ ಮಾತು ಹೇಳ್ತಾ ಇರಲಿಲ್ಲ’’.

” ಹೌದೋ, ಇಲ್ಲೋ ?’’ ಸಾರಾ ಗಟ್ಟಿಯಾಗಿ ಕೇಳಿದಳು. “ಹೌದು, ಪ್ರಿಯೇ,” ನಾರ್ಮನ್ ಮೆಲ್ಲಗೆ ಉತ್ತರಿಸಿದ.

`ಈ ಅಖಂಡ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ದ ಏಕಮೇವ ಅದ್ವಿತೀಯ ಮತದಾರನಾಗಿ ಪೌರಶ್ರೀ ನಾರ್ಮನ್ ಮುಲ್ಲರ’ ಎಂದು ನವೆಂಬರ್ ೩ ರಂದು ಔಪಚಾರಿಕ ಘೋಷಣೆಯಾಯಿತು.

ಈಗ ಹಿಂದೆ ಸರಿಯಲು ತುಂಬಾ ತಡವಾಗಿತ್ತು. ನಾರ್ಮನ್ ಎಷ್ಟು ಪ್ರಯತ್ನ ಪಟ್ಟರೂ ತನ್ನ ಜವಾಬ್ದಾರಿ ಯಿಂದ ಹಿಂದೆ ಸರಿಯಲು ಧೈರ್ಯ ಸಾಲಲಿಲ್ಲ. ಸೀಕ್ರೆಟ್ ಏಜೆಂಟ್ ಗಳು ಅವರ ಮನೆಯ ದಾರಿಯನ್ನು ಬಂದ್ ಮಾಡಿದರು. ಬಾಗಿಲಿಗೆ ಬೀಗ ಹಾಕಿ ಯಾರೂ ಹೊರಗೆ ಹೋಗಲಾರದಂಗೆ , ಒಳಗೆ ಬಾರಲಾರದಂತೆ ನೋಡಿಕೊಂಡರು. ಸೀಕ್ರೆಟ್ ಏಜೆಂಟ್ಗಳು ಮಾತ್ರ ಬಹಿರಂಗವಾಗಿ ಕಾಣಿಸಿಕೊಂಡರು.

ಮನೆ ಫೋನು ನಿರಂತರವಾಗಿ ರಿಂಗಣಿಸಿತು. ಎಲ್ಲಾ ಫೋನು ಗಳನ್ನು ಫಿಲಿಪ್ ಹ್ಯಾಂಡ್ಲಿ ಹ್ಯಾಂಡಲ್ ಮಾಡುತ್ತಿದ್ದ. ಎಲ್ಲರ ಹತ್ತಿರ “ಸಾರಿ, ನಾರ್ಮನ್ ಅವರು ಈಗ ಲಭ್ಯ ಇಲ್ಲ,’’ ಎಂದು ಹೇಳುತ್ತಾ, ನಗುತ್ತಿದ್ದ. ಕೊನೆಗೆ ಎಲ್ಲಾ ಕರೆಗಳನ್ನು ನೇರವಾಗಿ ಪೊಲೀಸ್ ಠಾಣೆಗೆ ಡೈವರ್ಟ್ ಮಾಡಲಾಯಿತು.

ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಅಂತ ಅನ್ನಿಸಿತು ನಾರ್ಮನ್ ಗೆ.

ತನ್ನ ಸ್ನೇಹಿತರ, ಪರಿಚಯಸ್ಥರ, ತನ್ನ ಮೇಲೆ ಅಸೂಯೆ ಪಡುವವರ, ಅಪರಿಚಿತರ , ಹೀಗೆ ಎಲ್ಲಾ ರೀತಿಯ ಜನರ ಅಭಿನಂದನೆಗಳಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲದೆ, ಪತ್ರಕರ್ತರ, ಟೆಲಿಮಾರ್ಕೆಟಿಂಗ್ ಮಾರಾಟಗಾರರ ಒತ್ತಡದಿಂದ, ರಾಜಕಾರಣಿಗಳ ಅನೂಹ್ಯ ಯೋಜನೆಗಳಿಂದಲೂ ತಪ್ಪಿಸಿಕೊಂಡ… ಬಹುಶಃ ಗೂಂಡಾಗಳ ಸಾವಿನ ಬೆದರಿಕೆಗಳಿಂದಲೂ ಬಚಾವು ಆಗಿರಬಹುದು.

ಈಗ ಅವರ ಮನೆಗೆ ಪತ್ರಿಕೆಗಳನ್ನು ನಿಷೇಧಿಸಲಾಗಿತ್ತು. `ಇಡೀ ದೇಶದ ಭವಿಷ್ಯ ನಿರ್ಧರಿಸಲಿರುವ ಪೌರಶ್ರೀ ನಾರ್ಮನ್ ಅವರ ಮನಸ್ಸಿನ ಮೇಲೆ ಒತ್ತಡ ಬೀಳಬಾರದು’, ಅಂತ. ಟಿವಿ ನೋಡುವುದನ್ನೂ ನಿಧಾನವಾಗಿ ಕಡಿತಗೊಳಿಸಲಾಯಿತು. ಇದಕ್ಕೆ ಎಲ್ಲಕ್ಕಿಂತ ಜೋರಾಗಿ ಪ್ರತಿಭಟನೆ ಬಂದದ್ದು ಲಿಂಡಾ ಳಿಂದ .

ಮೊದಮೊದಲು ಮ್ಯಾಥ್ಯೂ ಗೊಣಗುತ್ತಾ ತನ್ನ ಕೋಣೆಯಲ್ಲೇ ಇದ್ದ. ಈ ಗದ್ದಲದ ನಡುವೆ ಲಿಂಡಾ ಮೊದಲ ಹಾಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯ ಇಲ್ಲವಲ್ಲ, ಅಂತ ಮುನಿಸಿಕೊಂಡಳು. ಸಾರಾ ತನ್ನ ಸಮಯವನ್ನು ಅಡುಗೆ ಮನೆ ಕೆಲಸ ಹಾಗೂ ಪೌರಶ್ರೀ ನಂತರದ ತಮ್ಮ ಕುಟುಂಬದ ಭವಿಷ್ಯದ ಯೋಜನೆಗಳ ತಯಾರಿಯ ನಡುವೆ ವಿಂಗಡಿಸಿದಳು. ನಾರ್ಮನ್ನ ನ ಖಿನ್ನತೆ ಮಾತ್ರ ಬೆಳೆಯುತ್ತಲೇ ಇತ್ತು.

ಕೊನೆಗೂ ಆ ವಿಶೇಷ ಮಂಗಳವಾರದ ದಿನ ಬಂತು. ನವೆಂಬರ್ ೪, ೨೦೦೮ ರ ಬೆಳಿಗ್ಗೆ. ಅದು ಮತದಾನದ ದಿನ. ಹವಾಮಾನ ಮುನ್ಸೂಚನೆ ಪ್ರಕಾರ ಅದು ಮೋಡ ಕವಿದ ದಿನ, ಮಧ್ಯಾಹ್ನದ ಮೊದಲು ಮಳೆಯ ಸಾಧ್ಯತೆ ಇತ್ತು. ಎಲ್ಲರೂ ಬೇಗ ಎದ್ದು ತಯಾರಾದರು. ನಾರ್ಮನ್ ಮುಲ್ಲರ್ ತಿಂಡಿ ತಿಂದ. ಅದೂ ಒಲ್ಲದ ಮನಸ್ಸಿನಿಂದ, ಯಾಂತ್ರಿಕವಾಗಿ. ಶೇವು ಮಾಡಿಕೊಂಡರೂ ಫ್ರೆಷ್ ಅನ್ನಿಸಲಿಲ್ಲ. ಚಳಿಗಾಲದ ಮುಂಜಾವಿನ ಬಿಸಿ ನೀರಿನ ಸ್ನಾನವೂ ಅವನನ್ನು ವಾಸ್ತವಕ್ಕೆ ಹಿಂದಿರುಗಿಸಲಿಲ್ಲ. `ನಾನು ಹೊರಗಿನಿಂದ ಮಾತ್ರ ಸ್ವಚ್ಛ, ಒಳಗಿನಿಂದ ಕೊಳಕು’ ಅಂತ ಅವನಿಗೆ ಅನ್ನಿಸ ಲಿಕ್ಕೆ ಶುರು ಆಯಿತು. ಒಮ್ಮೊಮ್ಮೆ ಹೊರಗಿನಿಂದಲೂ ಕೊಳಕು ಅನ್ನಿಸಿತು.

ಆಗ ಹ್ಯಾಂಡ್ಲಿ ಜೋರು ದನಿಯಲ್ಲಿ ಮಾತಾಡಲು ಆರಂಭಿಸಿದ. ಅವನ ಸ್ನೇಹಪರ ಧ್ವನಿ ಮಾತ್ರ , ಆ ಬೂದುಗಟ್ಟಿದ, ಜಡ್ಡು ಗಟ್ಟಿದ ಮುಂಜಾನೆಗೆ ಸ್ವಲ್ಪ ಮಟ್ಟಿಗೆ ಸಾಮಾನ್ಯತೆ ತರಲು ಪ್ರಯತ್ನಿಸಿತು.

ಅಧಿಕಾರಯುತ ದನಿಯಲ್ಲಿ ಹ್ಯಾಂಡ್ಲಿ ಹೇಳಿದ: “ಮಿಸ್ಟರ್ ಮುಲ್ಲರ್ ಹಿಂತಿರುಗುವವರೆಗೆ ನಾವು ಈ ಮನೆಯಲ್ಲಿ ಇರುತ್ತೇವೆ. ಇತರರ ಸಂಪರ್ಕ ತಪ್ಪಿಸಿ ಪ್ರತ್ಯೇಕವಾಗಿಡುತ್ತೇವೆ. ಆ ನಂತರ ನಾವು ಹೊರಟು ಹೋಗುತ್ತೇವೆ. ನೀವು ನಿರಾಳವಾಗುತ್ತೀರಿ. ಡೋಂಟ್ ವರ್ರೀ” .

ಎಲ್ಲಾ ಸೀಕ್ರೆಟ್ ಸರ್ವಿಸ್ ಏಜೆಂಟ್ ಗಳು ಈಗ ಪೂರ್ಣ ಸಮವಸ್ತ್ರದಲ್ಲಿ ಇದ್ದರು. ಅವರ ಬ್ಯಾಜ್ ಗಳು, ಗನ್ ಗಳು ಎಲ್ಲರಿಗೂ ಕಾಣುವಂತೆ ಹೊರಗೆ ಇದ್ದವು.

“ಇಲ್ಲ ಇಲ್ಲ. ಹ್ಯಾಂಡ್ಲಿ ಅವರೇ, ನೀವು ನಮಗೆ ಯಾವುದೇ ತೊಂದರೆ ಕೊಟ್ಟಿಲ್ಲ,” ಸಾರಾ ದೇಶಾವರಿ ಮಾತು ಹೇಳಿದಳು.

ನಾರ್ಮನ್ ಎರಡು ಬಟ್ಟಲು ಕಪ್ಪು ಕಾಫಿ ಕುಡಿದ. ತನ್ನ ತುಟಿ ಒರೆಸಿಕೊಂಡು. ಎದ್ದು ನಿಂತು. ತುಂಬಾ ದಣಿದವನಂತೆ

ಹೇಳಿದ: “ನಾನು ರೆಡಿ.’’

ಹ್ಯಾಂಡ್ಲಿಯೂ ಎದ್ದು ನಿಂತ. “ಸರಿ, ಸರ್. ಶ್ರೀಮತಿ ಮುಲ್ಲರ್, ಇಷ್ಟು ದಿನದ ನಮ್ಮೆಲ್ಲರಿಗೆ ಆತಿಥ್ಯ ನೀಡಿದ ನಿಮಗೆ ಧನ್ಯವಾದಗಳು.”

ಅವರ ಸಶಸ್ತ್ರ ವಾಹನ ನಗರದ ಖಾಲಿ ಬೀದಿಗಳಲ್ಲಿ ನಿಧಾನವಾಗಿ ಚಲಿಸಿತು. ಹ್ಯಾಂಡ್ಲಿ ಹೇಳಿದ “೧೯೯೨ ರ ಲೆವೆರೆಟ್ ಚುನಾವಣೆಯ ದಿವಸ ಕೆಲವು ಭಯೋತ್ಪಾದಕರು ಅಂದಿನ ಪೌರಶ್ರೀ ಅವರು ಹೋಗುತ್ತಿದ್ದ ಗಾಡಿ ಮೇಲೆ ಬಾಂಬ್ ಹಾಕಿದರು. ಆದರೂ ಅವರು ಬದುಕಿ ಉಳಿದರು. ಆ ರೀತಿಯಲ್ಲಿ ಚುನಾವಣೆ ಹಾಳಾಗಬಾರದು ಅಂತ ಈ ರೀತಿ ಮಾಡುತ್ತೇವೆ. ರಸ್ತೆ ಗಳನ್ನು ಸಂಚಾರ ಮುಕ್ತ ಮಾಡಿ ಕೇವಲ ಪೌರಶ್ರೀ ಅವರ ಗಾಡಿ ಮಾತ್ರ ಹೋಗುವಂತೆ ನೋಡಿಕೊಳ್ಳುತ್ತೇವೆ.

ಕೊನೆಗೂ ವಾಹನ ನಿಂತಿತು. ಗಾಬರಿಯಿಂದಲೇ ಇದ್ದ ನಾರ್ಮನ್ಗೆ ಕೈ ಹಿಡಿದು ಏಜೆಂಟ್ ಕೆಳಗೆ ಇಳಿಸಿದ. ಒಂದು ದೊಡ್ಡ ಕಟ್ಟಡದ ಕೆಳಗಿನ ಅವನನ್ನು ಕರೆದುಕೊಂಡು ಹೋದರು. ಗೋಡೆಗೆ ಸಾಲಾಗಿ ಸೈನಿಕರು ನಿಂತಿದ್ದರು. ಕತ್ತಲೆಯ ಸುರಂಗ ದೊಳಗೆ ಹೋದ ನಂತರ ಝಗ್ಗನೆ ಬೆಳಕು ಬಂತು. ಒಂದು ಪ್ರಕಾಶಮಾನವಾದ ಕೋಣೆಗೆ ಹೋದರು. ಅಲ್ಲಿಗೆ ಅವನನ್ನು ಮೂವರು ವಿಚಿತ್ರ ಸಮವಸ್ತ್ರದ ವ್ಯಕ್ತಿಗಳು ನಗುತ್ತಾ ಸ್ವಾಗತಿಸಿದರು.

ನಾರ್ಮನ್ ಕೇಳಿದ , “ಅರೆ, ಇದು ಆಸ್ಪತ್ರೆ, ಅಲ್ಲವೇ, ಮಲ್ಟಿವ್ಯಾಕ್ ಕೇಂದ್ರ ಅಲ್ಲ.”

“ಅದೆಲ್ಲ ತಲೆ ಕೆಡಿಸಿ ಕೊಳ್ಳಬೇಡಿ. ಅದು ಮಹತ್ವದ ವಿಷಯ ಅಲ್ಲ,’’ ಹ್ಯಾಂಡ್ಲಿ ಹೇಳಿದ. ” ಈ ಆಸ್ಪತ್ರೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿದೆ.”

“ಸರಿ, ಈಗ ನಾನು ಏನು ಮಾಡಲಿ ಹೇಳಿ ?”

ಹ್ಯಾಂಡ್ಲಿ ತಲೆಯಾಡಿಸಿ ಸನ್ನೆ ಮಾಡಿದ . ಬಿಳಿ ಸಮವಸ್ತ್ರದಲ್ಲಿದ್ದ ಮೂವರಲ್ಲಿ ಒಬ್ಬ ಮುಂದೆ ಬಂದ. ” ಇನ್ನು ಮುಂದೆ ನಾನು ಜವಾಬ್ದಾರಿ ವಹಿಸಿಕೊಳ್ಳುತ್ತೇನೆ, ಏಜೆಂಟ್ . ನೀವು ಹೊರಗಡೆ ಕಾಯಬಹುದು. ಹ್ಯಾಂಡ್ಲಿ ಅನೌಪಚಾರಿಕವಾಗಿ ಸೆಲ್ಯೂಟ್ ಮಾಡಿ ಕೋಣೆಯಿಂದ ಹೊರಟುಹೋದ.

ಆ ಬಿಳಿ ಆಂಗಿಯ ವ್ಯಕ್ತಿ ಹೇಳಿದ, “ದಯವಿಟ್ಟು ಕುಳಿತುಕೊಳ್ಳಿ, ಮಿಸ್ಟರ್ ಮುಲ್ಲರ್ . ನಾನು ಜಾನ್ ಪಾಲ್ಸನ್, ಸೀನಿಯರ್ ಕಂಪ್ಯೂಟರ್ ಅಧಿಕಾರಿ. ಇವರು ಇಬ್ಬರೂ -ಸೇನ್ ಲೆವಿನ್ ಮತ್ತು ಪೀಟರ್ ಡೊರೊಗೊಬುಜ್ -ನನ್ನ ಸಹಾಯಕರು.”

ನಾರ್ಮನ್ ಎಲ್ಲರೊಂದಿಗೂ ಕೈಕುಲುಕಿದ. ಅವನ ಕೈ ಮರಗಟ್ಟಿ ದಂತೆ ಇತ್ತು. ಪಾಲ್ಸನ್ ಸಾಧಾರಣ ಎತ್ತರದ ವ್ಯಕ್ತಿ . ಅವನ ನಗು ಮುಖ ಮೆತ್ತಗೆ, ಮೃದುವಾಗಿತ್ತು, ವಿಗ್ ಹಾಕಿಕೊಂಡಿದ್ದ. ಹಳೆಯ ಶೈಲಿಯ ಪ್ಲಾಸ್ಟಿಕ್ ಅಂಚಿನ ಕನ್ನಡಕ ಧರಿಸಿದ್ದ. ಮಾತನಾಡುತ್ತಾ ಸಿಗರೇಟ್ ಹಚ್ಚಿದ. ನಿಮಗೆ ಸಿಗರೇಟ್ ಬೇಕಾ ಅಂತ ಕೇಳಿದಾಗ ನಾರ್ಮನ್ ನಯವಾಗಿ ನಿರಾಕರಿಸಿದ.

ಪಾಲ್ಸನ್ ಮಾತಾಡಲಿಕ್ಕೆ ಶುರು ಮಾಡಿದ : “ಮೊಟ್ಟ ಮೊದಲಿಗೆ, ಮಿಸ್ಟರ್ ಮುಲ್ಲರ್ , ನಮಗೆ ಯಾವುದೇ ಆತುರ- ಗಡಿಬಿಡಿ ಇಲ್ಲ. ಅಗತ್ಯವಿದ್ದರೆ ಇಡೀ ದಿನ ನಿಮ್ಮೊಂದಿಗೆ ಇರಲು ನಾವು ತಯಾರು. ನಾವು ಒಬ್ಬರಿಗೊಬ್ಬರು ಸರಿಯಾಗಿ ಪರಿಚಯ ಮಾಡಿಕೊಳ್ಳೋಣ. ಅನೌಪಚಾರಿಕವಾಗಿ ಇರೋಣ. ನಿಮಗೆ ಯಾವುದೇ ಕಿರಿಕಿರಿ, ಆರೋಗ್ಯದ ವಿಷಯವಾಗಿ ಏನಾದರೂ ತೊಂದರೆ ಇದ್ದರೆ, ಹೇಳಿ. ಅರ್ಥವಾಯಿತೇ?”

“ಪರವಾಗಿಲ್ಲ,” ನಾರ್ಮನ್ ಹೇಳಿದನು. “ಇದೆಲ್ಲಾ ಬೇಗ ಮುಗಿದರೆ ಒಳ್ಳೆಯದು. ಅಷ್ಟೇ ಸಾಕು. “

“ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತವೆ. ಆದರೂ, ಇಲ್ಲಿ ನಿಖರವಾಗಿ ಏನು ನಡೆಯುತ್ತಿದೆ ಅಂತ ನೀವು ತಿಳಕೋ ಬೇಕು. ಮೊದಲಿಗೆ, ಮಲ್ಟಿವ್ಯಾಕ್ ಇಲ್ಲಿಲ್ಲ.”

“ಹಾಂ! ಇಲ್ಲಿ ಇಲ್ಲವೇ?” ಅಷ್ಟೆಲ್ಲಾ ಖಿನ್ನತೆ ಇದ್ದರೂ ಕೂಡ, ಮಲ್ಟಿವ್ಯಾಕ್ ಅನ್ನು ನೋಡಬೇಕು ಅಂತ ಅವನಿಗೆ ಆಸೆ ಇತ್ತು. “ಅದು ವಿಶ್ವದ ಅದ್ಭುತಗಳಲ್ಲಿ ಒಂದು, ಅದು ಅರ್ಧ ಮೈಲಿ ಉದ್ದದ, ಮೂರು ಅಂತಸ್ತು ಎತ್ತರದ ಯಂತ್ರ,’’ ಅಂತೆಲ್ಲಾ ಬೇರೆಯವರು ಹೇಳುವುದನ್ನು ಕೇಳಿದ್ದ. ಅದರ ಒಳಗೆ ಐವತ್ತು ತಂತ್ರಜ್ಞರು ನಿರಂತರವಾಗಿ ಕೆಲಸ ಮಾಡುತ್ತಾ ಇರುತ್ತಾರೆ, ಅನ್ನುವ ಗಾಳಿ ಮಾತುಗಳನ್ನು ಕೇಳಿದ್ದ.

ಪಾಲ್ಸನ್ ನಕ್ಕ. “ಇಲ್ಲ. ಅದು ಇಲ್ಲಿಲ್ಲ. ಇಂತಹ ಕಡೆ ಎಲ್ಲಾ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯ ಇಲ್ಲ. ಅದು ನೆಲದಡಿಯಲ್ಲಿದೆ. ಕೆಲವೇ ಕೆಲವು ಜನರಿಗೆ ಅದರ ನಿಖರವಾದ ಸ್ಥಳ ಗೊತ್ತು. ಒಂದು ರೀತಿಯಲ್ಲಿ ಅದು ನಮ್ಮ ಶ್ರೇಷ್ಠ ನೈಸರ್ಗಿಕ ಸಂಪನ್ಮೂಲ. ಅದನ್ನು ನಾವು ಕೇವಲ ಚುನಾವಣೆಗೆ ಮಾತ್ರ ಅದನ್ನು ಬಳಸುವುದಿಲ್ಲ , ನೋಡಿ’’.

`ಇವನು ಸುಮ್ಮನೇ ಏನೇನೋ ಮಾತಾಡ್ತಾ ಇದ್ದಾನೆ’, ಅಂತ ಅನ್ನಿಸಿತು ನಾರ್ಮನ್ ಗೆ. “ ಆದರೆ ಅದು ನೋಡಕ್ಕೆ ಸಿಗತ್ತೆ ಅಂದುಕೊಂಡು ಇಲ್ಲಿಗೆ ಬಂದಿದ್ದೆ. ಆ ಅವಕಾಶ ಸಿಗಬಹುದೇ “

“ಖಂಡಿತ ನೋಡಬಹುದು. ಆದರೆ ಅದಕ್ಕೆ ಅಧ್ಯಕ್ಷೀಯ ಆದೇಶ ಬೇಕು. ಸೆಕ್ಯುರಿಟಿ ವಿಭಾಗದವರ ಒಪ್ಪಿಗೆ ಬೇಕು. ಆದರೆ, ನಾವು ಇಲ್ಲಿಂದ ಕಿರಣ ಪ್ರಸರಣದ ಮೂಲಕ ಮಲ್ಟಿವ್ಯಾಕ್ಗೆ ಸತತ ಸಂಪರ್ಕ ಹೊಂದಿದ್ದೇವೆ. ನಾವು ಏನು ಹೇಳುತ್ತೇವೆಂಬುದು ನೇರವಾಗಿ ಮಲ್ಟಿವ್ಯಾಕ್ಗೆ ಪ್ರಸಾರವಾಗುತ್ತದೆ. ಅದು ಏನು ಹೇಳುತ್ತದೆಂಬುದನ್ನು ಇಲ್ಲಿ ವ್ಯಾಖ್ಯಾನಿಸಬಹುದು. ಆದ್ದರಿಂದ ಒಂದು ಅರ್ಥದಲ್ಲಿ ನಾವು ಅದರ ಉಪಸ್ಥಿತಿಯಲ್ಲಿದ್ದೇವೆ, ಅದು ನಮ್ಮ ಕಣ್ಣಿಗೆ ಕಾಣದೇ ಇದ್ದರೂ,’’ ಅದು ಇಲ್ಲಿದೆ.

ನಾರ್ಮನ್ ಸುತ್ತಲೂ ನೋಡಿದ. ಆ ಕೋಣೆಯೊಳಗಿನ ಯಂತ್ರಗಳು ಯಾವವೂ ಅವನಿಗೆ ಅರ್ಥವಾಗಲಿಲ್ಲ.

“ಈಗ ನನಗೆ ಸ್ವಲ್ಪ ಮಾಹಿತಿ ನೀಡಲು ಅವಕಾಶ ಮಾಡಿಕೊಡಿ, ಮಿಸ್ಟರ್ ಮುಲ್ಲರ್ ,” ಪಾಲ್ಸನ್ ಮುಂದುವರಿದ.

“ಮಲ್ಟಿವ್ಯಾಕ್ ನ ಹತ್ತಿರ ಈಗಾಗಲೇ ಎಲ್ಲಾ ಚುನಾವಣೆಗಳನ್ನು ನಿರ್ಧರಿಸಲು ಅಗತ್ಯವಿರುವ ಎಲ್ಲಾ ರೀತಿಯ ಮಾಹಿತಿ ಇದೆ . ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಚುನಾವಣೆ ಗಳನ್ನು ಅದು ಒಂದೇ ನಡೆಸಬಹುದು.

ಆದರೆ ಇವತ್ತು ನಾವು ಸಕಲ ಜನಗಣದ ಮನದ ಆಳದ ಒಲವುಗಳನ್ನು ಪರಿಶೀಲಿಸಬೇಕಾಗಿದೆ. ಅದಕ್ಕಾಗಿ ಅದು ನಿಮ್ಮ ಮನಸ್ಸನ್ನು ಬಳಸುತ್ತದೆ. ಅದು ಯಾವ ಪ್ರಶ್ನೆಗಳನ್ನು ಕೇಳುತ್ತದೆಂದು ನಾವು ಊಹಿಸಲು ಸಾಧ್ಯವಿಲ್ಲ. ಅವು ನಿಮಗೆ, ಅಥವಾ ನಮಗೂ ಅರ್ಥವಾಗದಿರಬಹುದು.

ಉದಾಹರಣೆ ಗೆ ನಿಮ್ಮ ಊರಿನಲ್ಲಿ ಕಸ ವಿಲೇವಾರಿ ವ್ಯವಸ್ಥೆ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಬಹುದು. `ದೊಡ್ಡ ದೊಡ್ಡ ಕಸ ಸುಡುವ ಯಂತ್ರಗಳನ್ನು ನಿಮ್ಮ ಊರಿನಲ್ಲಿ ಇಟ್ಟುಕೊಳ್ಳುವುದನ್ನು ನೀವು ಬೆಂಬಲಿಸುತ್ತೀರಾ?’’ ಎಂದು ಕೇಳಬಹುದು. ನಿಮಗೆ ಹುಷಾರು ಇಲ್ಲದಾಗ ನಿಮ್ಮ ಮನೆಯ ಹತ್ತಿರದ ಕುಟುಂಬದ ವೈದ್ಯರ ಹತ್ತಿರ ಹೋಗುತ್ತೀರೋ ಅಥವಾ ಅಂತರರಾಷ್ಟ್ರೀಯ ಕಂಪನಿಗಳು ನಡೆಸುವ ದೊಡ್ಡ ಆಸ್ಪತ್ರೆ ಗಳಿಗೆ ಹೋಗಿ ಅಡ್ಮಿಟ್ ಆಗ್ತಿರೋ ? ಅಂತಲೂ ಕೇಳಬಹುದು. ಅರ್ಥವಾಯಿತೇ?”

“ಆಯಿತು , ಸರ್.”

“ಅದು ಏನೇ ಕೇಳಲಿ, ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಮಾತ್ರ ಉತ್ತರಿಸಿ. ಹೆಚ್ಚು ವಿವರಣೆ ಕೊಡಬೇಕು ಅಂತ ಅನ್ನಿಸಿದರೆ, ಹಾಗೆಯೇ ಮಾಡಿ. ಬೇಕಾದರೆ ಒಂದು ಗಂಟೆ ಮಾತನಾಡಿ, ಆಯ್ತಾ .”

“ಓಕೆ, ಸರ್.”

“ಈಗ, ಇನ್ನೊಂದು ವಿಷಯ. ನೀವು ಮಾತನಾಡುವಾಗ ನಾವು ವಿವಿಧ ರೀತಿಯ ಯಂತ್ರ ಬಳಸಿ ನಿಮ್ಮನ್ನು ಚೆಕ್ ಮಾಡುತ್ತಾ ಇರುತ್ತೇವೆ.

ನಿಮ್ಮ ರಕ್ತದೊತ್ತಡ, ಹೃದಯ ಬಡಿತ, ಚರ್ಮದ ವಾಹಕತೆ ಮತ್ತು ಮಿದುಳಿನ ತರಂಗ ಮಾದರಿಯನ್ನು ಸ್ವಯಂಚಾಲಿತವಾಗಿ ದಾಖಲಿಸುವ ಸರಳ ಸಾಧನಗಳನ್ನು ನಾವು ಬಳಸಬೇಕಾಗುತ್ತದೆ. ನಿಮ್ಮ ಸುತ್ತ ಮುತ್ತ ದೊಡ್ಡ ದೊಡ್ಡ ಯಂತ್ರೋಪಕರಣಗಳು ಇರತವೆ . ಅವು ಭಾರೀ ಪ್ರಮಾಣದಲ್ಲಿ ಕೆಲಸ ಮಾಡುವುದು ನಿಮಗೆ ಕಾಣಿಸಬಹುದು. ಗಾಬರಿ ಆಗಬೇಡಿ. ನಿಮಗೆ ಯಾವುದೇ ತೊಂದರೆ, ನೋವು ಆಗುವುದಿಲ್ಲ. ಅವು ನಡೆಯುತ್ತಿವೆಯೆಂದು ನಿಮಗೆ ಗೊತ್ತೂ ಆಗುವುದಿಲ್ಲ.”

ಅವನಿಗೆ ಸುತ್ತ ಮುತ್ತ ಮೃದುವಾದ ಹೊಳಪಿನ ಉಪಕರಣಗಳು ಕಾಣುತ್ತಿದ್ದವು. ಇತರ ಇಬ್ಬರು ತಂತ್ರಜ್ಞರು ಈಗಾಗಲೇ ಎಣ್ಣೆ ಹಾಕಿದ ಚಕ್ರಗಳ ಪಕ್ಕ ದಲ್ಲಿ ನಿಂತುಕೊಂಡಿದ್ದರು. ಸಣ್ಣಗೆ ಕೆಲಸ ಶುರು ಮಾಡಿದ್ದರು.

“ಅದೆಲ್ಲಾ ಯಾಕೆ ? ನಾನು ಸುಳ್ಳು ಹೇಳುತ್ತಿದ್ದೇನೆಯೇ ಎಂದು ಪರಿಶೀಲನೆ ಮಾಡಲಿಕ್ಕೆ ಯೇ ?’’

“ನೋ ನೋ. , ಮಿಸ್ಟರ್ ಮುಲ್ಲರ್ . ಇಲ್ಲಿ ಸತ್ಯ- ಸುಳ್ಳಿನ ಪ್ರಶ್ನೆಯೇ ಇಲ್ಲ. ಅದು ಕೇವಲ ಭಾವನೆಗಳ ಹಾಗೂ ಅವುಗಳ ತೀವ್ರತೆಯ ವಿಷಯ. ಉದಾಹರಣೆಗೆ ಈ ಯಂತ್ರ ನಿಮ್ಮ ಮಗುವಿನ ಶಾಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೇಳಿತು ಅಂದುಕೊಳ್ಳಿ.

ಅಯ್ಯೋ ಅಲ್ಲಿ ತುಂಬ ರಶ್ ಇದೆ. ಸಿಕ್ಕಾಪಟ್ಟೆ ವಿದ್ಯಾರ್ಥಿಗಳು, ಆದರೆ ಶಾಲೆ ಯಲ್ಲಿ ಜಾಗ ಕಮ್ಮಿ ಅಂತ ನೀವು ಅನ್ನಬಹುದು. ಅವು ಕೇವಲ ಪದಗಳು ಮಾತ್ರ. ಅದರಲ್ಲಿ ಸರಿ – ತಪ್ಪು ಇಲ್ಲ. ನಿಮ್ಮ ಮಿದುಳು, ಹೃದಯ, ಹಾರ್ಮೋನುಗಳು ಮತ್ತು ಬೆವರು ಗ್ರಂಥಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರಿಂದ, ಮಲ್ಟಿವ್ಯಾಕ್ ನೀವು ಆ ವಿಷಯದ ಬಗ್ಗೆ ನಿಮ್ಮ ಭಾವನೆಗಳು ಏನು? ನೀವು ಆ ವಿಷಯದ ಬಗ್ಗೆ ಎಷ್ಟು ತೀವ್ರವಾಗಿ ವಿಚಾರ ಮಾಡುತ್ತೀರಿ ಅನ್ನುವುದನ್ನು ನಿರ್ಣಯಿಸಬಹುದು. ಮಜಾ ಏನು ಅಂದರೆ, ಅದು ನಿಮ್ಮ ಭಾವನೆಗಳನ್ನು ನಿಮಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ.”

” ಓಹೋ ಹೌದೇ ! ಇದೆಲ್ಲಾ ನನಗೆ ಗೊತ್ತೇ ಇರಲಿಲ್ಲ!’’ ಅಂದ ನಾರ್ಮನ್.

“ಇಲ್ಲ, ನಿಮಗೆ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ. ಮಲ್ಟಿವ್ಯಾಕ್ನ ಕೆಲಸದ ಹೆಚ್ಚಿನ ವಿವರಗಳನ್ನು ಅತ್ಯಂತ ಗುಪ್ತವಾಗಿ ಇಡಲಾಗಿದೆ. ಉದಾಹರಣೆಗೆ, ನೀವು ಇಲ್ಲಿಂದ ಹೊರಟುಹೋದ ಮೇಲೆ, ನಿಮ್ಮನ್ನು ಕೇಳಿದ ಪ್ರಶ್ನೆಗಳ ಸ್ವರೂಪ, ನಿಮ್ಮ ಉತ್ತರಗಳ ಸ್ವರೂಪ, ಇಲ್ಲಿ ಏನು ನಡೆಯಿತು, ಮತ್ತು ಹೇಗೆ ನಡೆಯಿತು ಎಂಬುದನ್ನು ಎಂದಿಗೂ ಬಹಿರಂಗಪಡಿಸುವುದಿಲ್ಲ. ಆ ರೀತಿಯ ಷರತ್ತಿಗೆ ನೀವು ಸಹಿ ಹಾಕಬೇಕಾಗುತ್ತದೆ. ನೋಡಿ, ಮಲ್ಟಿವ್ಯಾಕ್ ಬಗ್ಗೆ ನಾವೆಲ್ಲ ಕಡಿಮೆ ತಿಳಿದಿದ್ದರೆ, ಅದರ ಸುತ್ತ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಬಾಹ್ಯಶಕ್ತಿ ಗಳ ಒತ್ತಡ ಕಮ್ಮಿ. ಅವುಗಳ ಪ್ರಯತ್ನಕ್ಕೆ ಕಡಿಮೆ ಅವಕಾಶ, ಅಲ್ಲವೇ !,’’ ಪಾಲ್ಸನ್ ಕಿರುನಗೆ ನಕ್ಕ.

“ನಮ್ಮ ಜೀವನದಲ್ಲಿ ಈಗಾಗಲೇ ಬೇಕಾದಷ್ಟು ಸಮಸ್ಯೆಗಳಿವೆ,’’ ನಾರ್ಮನ್ ತಲೆಯಾಡಿಸಿದ. “ಅರ್ಥವಾಯಿತು ಬಿಡಿ’’.

“ಈಗ ಏನಾದರೂ ತಿಂತಿರಾ ಅಥವಾ ಕುಡಿಯಕ್ಕೆ ಏನಾದರೂ ಕೊಡ್ಲಾ?’’

“ಇಲ್ಲ. ಇಲ್ಲ. ಈಗ ಏನೂ ಬೇಡ.”

“ನಿಮಲ್ಲಿ ಬೇರೆ ಯಾವುದೇ ಪ್ರಶ್ನೆಗಳಿವೆಯೇ?”

ನಾರ್ಮನ್ ತಲೆಯಾಡಿಸಿದನು.

“ಆಗ ನೀವು ಸಿದ್ಧರಾದಾಗ ನಮಗೆ ಹೇಳಿ.”

“ಇಲ್ಲ. ನಾನು ರೆಡಿ’’

“ಓಕೆ, ಷೂರ್?’’

“ಓಕೆ’’

ಪಾಲ್ಸನ್ ತಲೆಯಾಡಿಸಿದ. ಇತರರಿಗೆ ತನ್ನ ಕೈ ಮಾಡಿ ಸನ್ನೆ ಮಾಡಿದ. ಅವರು ಆ ಭಯಾನಕ ಉಪಕರಣಗಳೊಂದಿಗೆ ಮುಂದೆ ಸರಿದು ಬಂದರು. ನಾರ್ಮನ್ ಮುಲ್ಲರ್ ನೋಡುತ್ತಿರುವಂತೆಯೇ ಅವನ ಉಸಿರು ಸ್ವಲ್ಪ ವೇಗವಾಯಿತು.

ಆ ಪರೀಕ್ಷೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತೋ ಏನೋ . ಮಧ್ಯದಲ್ಲಿ ಒಂದು ಸಣ್ಣ ಕಾಫಿ ಬ್ರೇಕ್ . ಮತ್ತು ಒಮ್ಮೆ ಟಾಯ್ಲೆಟ್ ಗೆ ಹೋಗೋಣವಾಯಿತು. ಈ ಸಮಯದಲ್ಲೆಲ್ಲಾ ನಾರ್ಮನ್ ಸುತ್ತ ಯಂತ್ರಗಳು ಇದ್ದವು. ಕೊನೆಯಲ್ಲಿ ಮಾತ್ರ ಅವನು ಬಹಳ ದಣಿದು ಬಿಟ್ಟಿದ್ದ.

“ಇಲ್ಲಿ ಏನು ನಡೆಯಿತು ಎನ್ನುವುದನ್ನು ನಾನು ಗೌಪ್ಯವಾಗಿ ಇಟ್ಟುಕೊಳ್ಳಬೇಕು ಎನ್ನುವ ಷರತ್ತು ಇದೆಯಲ್ಲಾ, ಅದನ್ನು ಪಾಲಿಸುವುದು ತುಂಬ ಸುಲಭ,’’ ಅಂತ ಅವನಿಗೆ ಅನ್ನಿಸಿ ನಗೆ ಬಂತು. ಅದು ಒಂದು ರೀತಿಯ ವ್ಯಂಗ್ಯ ಅಂತ ಅನ್ನಿಸಿತು. ಈ ಕೋಣೆಯಲ್ಲಿ ನಡೆದ ಘಟನೆ ಗಳ ಬಗ್ಗೆ ಈಗಾಗಲೇ ಅವನ ಮನಸ್ಸಿನಲ್ಲಿ ಅಸ್ಪಷ್ಟವಾದ ಗೊಂದಲಗಳು ಶುರು ಆಗಿದ್ದವು.

ಇಲ್ಲಿ ಬರುವ ಮುನ್ನ ಮಲ್ಟಿವ್ಯಾಕ್ ಸೂಪರ್ ಕಂಪ್ಯೂಟರ್ ಬಗ್ಗೆ ಅವನಿಗೆ ವಿಚಿತ್ರ ಕಲ್ಪನೆ ಗಳು ಇದ್ದವು. ಒಂದು ಸಮಾಧಿ ಯಿಂದ ಹೊರಗೆ ಬರುವ, ಅತಿಮಾನುಷ ಧ್ವನಿಯಲ್ಲಿ ಮಾತನಾಡುವ ಯಂತ್ರ ಅಂತ ಅವನಿಗೆ ಅನ್ನಿಸಿತ್ತು. ಅದು ಒಂದು ರೀತಿಯಲ್ಲಿ ಪ್ರತಿಧ್ವನಿಸುವ, ಅನುರಣಿಸುವ ಧ್ವನಿ.

ಆ ಕಲ್ಪನೆ ಅವನಿಗೆ ಬಂದದ್ದು ಸಿನಿಮಾ ಹಾಗೂ ಟೆಲಿವಿಷನ್ ಶೋಗಳನ್ನು ನೋಡಿದ್ದರಿಂದ. ತನ್ನ ಕಣ್ಣೆದುರಿಗೆ ಅನಾವರಣ ಗೊಂಡ ಸತ್ಯ ನಿರಾಶಾದಾಯಕವಾಗಿತ್ತು . ಅಲ್ಲದೇ ಅದು ನಾಟಕೀಯವಾಗಿಯೂ ಇರಲಿಲ್ಲ. ಅವನ ಮುಂದೆ ಇಡಲಾದ ಪ್ರಶ್ನೆಗಳು ನೀರಸ ವಾಗಿದ್ದವು. ಮಲ್ಟಿವ್ಯಾಕ್ ತನ್ನ ಪ್ರಶ್ನೆ ಗಳನ್ನು ಲೋಹದ ಹಾಳೆಯ ಮೇಲೆ ಸಣ್ಣ ಸಣ್ಣ ರಂಧ್ರ ಗಳ ಮೂಲಕ ಹೊರ ಹಾಕಿತ್ತು. ಅವನ್ನು ತೆಗೆದುಕೊಂಡ ಎರಡನೇ ಯಂತ್ರ ಅವನ್ನು ಪದಗಳನ್ನಾಗಿ ಪರಿವರ್ತಿಸಿತು. ಆ ಪದಗಳನ್ನು ಪಾಲ್ಸನ್ ಓದಿ ಹೇಳಿದ. ಅಲ್ಲದೇ ನಾರ್ಮನ್ ಗೆ ಆ ಪ್ರಶ್ನೆ ಗಳನ್ನು ಕೊಟ್ಟು ಸ್ವತಃ ಓದಲು ಅವಕಾಶ ಮಾಡಿಕೊಟ್ಟ.

ನಾರ್ಮನ್ ನೀಡಿದ ಉತ್ತರಗಳನ್ನು ರೆಕಾರ್ಡಿಂಗ್ ಯಂತ್ರ ದಾಖಲಿಸಿತು. ಅವನ ಮಾತುಗಳನ್ನು ಸರಿಯಾಗಿ ಮುದ್ರಣ ಮಾಡಿಕೊಳ್ಳಲಾಗಿದೆಯೋ ಇಲ್ಲವೋ ಅಂತ ಖಚಿತಪಡಿಸಲು ಅವುಗಳನ್ನು ನಾರ್ಮನ್ಗೆ ರಿ ಪ್ಲೇ ಮಾಡಲಾಯಿತು. ಕೆಲ ತಿದ್ದುಪಡಿಗಳು ಮತ್ತು ವಿಶೇಷ ಟಿಪ್ಪಣಿಗಳೂ ದಾಖಲಾದವು. ಅವೆಲ್ಲವುಗಳನ್ನು ಇನ್ನೊಂದು ಮಾದರಿ ನಿರ್ಮಾಣ ಸಾಧನಕ್ಕೆ ನೀಡಲಾಯಿತು. ಅದು ಎಲ್ಲವೂ ವಾಪಸ್ ಮಲ್ಟಿವ್ಯಾಕ್ಗೆ ವಿಕಿರಣ ಪ್ರಸಾರ ತಂತ್ರದ ಮೂಲಕ ಹೋದವು.

ಅನೇಕ ಪ್ರಶ್ನೆಗಳು ನಾರ್ಮನ್ ಗೆ ನೆನಪೇ ಇಲ್ಲದಷ್ಟು ಸಿಲ್ಲಿಯಾಗಿ, ಸಾಮಾನ್ಯವಾಗಿದ್ದವು. ಒಂದು ಪ್ರಶ್ನೆ ನೆನಪಾಗಿ ನಗೆ ಬಂತು. ಅದು ರಸ್ತೆ ಬದಿಯ ಚಹಾ ಅಂಗಡಿ ಯಲ್ಲಿ ಎಲ್ಲರೂ ಕುಳಿತು ಮಾತಾಡಿಕೊಳ್ಳುವ ಹಾಗಿತ್ತು : “ಮೊಟ್ಟೆಯ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?”

ಕೊನೆಗೂ ಆ ಕಿರಿಕಿರಿ ಮುಗಿಯಿತು. ಆ ಇಬ್ಬರೂ ಸಹಾಯಕರು ನಿಧಾನವಾಗಿ ಅವನ ದೇಹದ ವಿವಿಧ ಭಾಗಗಳಿಂದ ಎಲೆಕ್ಟ್ರೋಡ್ಗಳನ್ನು ತೆಗೆದರು. ಅವನ ತೋಳಿನಿಂದ ಬೀಪ್ ಬೀಪ್ ಎಂದು ಮಿಡಿಯುವ ಪಟ್ಟಿಯನ್ನೂ ಬಿಚ್ಚಿದರು. ಆ ಉಪಕರಣ ಗಳನ್ನು ದೂರ ಸರಿಸಿದರು.

ನಾರ್ಮನ್ ಎದ್ದು ನಿಂತು, ಆಳವಾದ ಉಸಿರು ತೆಗೆದುಕೊಂಡ. “ಅಷ್ಟೇನಾ? ಎಲ್ಲಾ ಮುಗೀತಾ’’

“ಇನ್ನೂ ಇಲ್ಲ .” ಪಾಲ್ಸನ್ ಅವನ ಬಳಿ ಬಂದು ಹೇಳಿದ. ಧೈರ್ಯ ಕೊಡುವಂತೆ ನಕ್ಕ. “ನಾವು ನಿಮ್ಮನ್ನು ಇನ್ನೂ ಒಂದು ಗಂಟೆ ಇಟ್ಟುಕೊಳ್ಳ ಬೇಕಾಗ ಬಹುದು’’.

“ಏಕೆ?” ನಾರ್ಮನ್ ಸಟ್ಟನೆ ಕೇಳಿದ.

” ಇಲ್ಲಿ ದಾಖಲಾದ ಹೊಸ ದತ್ತಾಂಶವನ್ನು ಕೋಟ್ಯಂತರ ಇತರ ವಿಷಯಗಳೊಂದಿಗೆ ಸೇರಸಿ, ಅದರ ಒಳಗೆ ಪೋಣಿಸಿ ನೋಡಲು ಮಲ್ಟಿವ್ಯಾಕ್ ಅಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಳೆಯ ಸಾವಿರಾರು ಚುನಾವಣೆಗಳ ದತ್ತಾಂಶಗಳನ್ನು ಈಗ ಇದಕ್ಕೆ ಜೋಡಿಸಬೇಕು. ನಿಮಗೆ ಗೊತ್ತಲ್ಲ, ಅದೆಲ್ಲ ಬಹಳ ಸಂಕೀರ್ಣವಾದ ವಿಷಯ.

ಹಾಗೂ, ಅಲ್ಲೊಂದು, ಇಲ್ಲೊಂದು ಬೇರೆ ಬೇರೆ ರೀತಿಯ ಚುನಾವಣೆಗಳು ಉಳಿದುಕೊಂಡಿರಬಹುದು. ಅಲ್ಲೆಲ್ಲೋ ಫೀನಿಕ್ಸ್, ಅರಿಜೋನಾದಲ್ಲಿ ಒಂದು ಖಜಾಂಚಿ ಹುದ್ದೆಯೋ. ಅಥವಾ ವಿಲ್ಕ್ಸ್ಬರೋ, ಉತ್ತರ ಕೆರೊಲಿನಾದಲ್ಲಿ ಕೆಲವು ಕೌನ್ಸಿಲ್ ಸ್ಥಾನಗಳೋ ಖಾಲಿ ಇರಬಹುದು. ಅವಕ್ಕೆಲ್ಲ ಪ್ರತ್ಯೇಕವಾಗಿ ಚುನಾವಣೆ ಮಾಡಲಿಕ್ಕೆ ಆಗೋದಿಲ್ಲ. ಈಗ ನೀವು ನೀಡಿದ ಮಾಹಿತಿಯಿಂದಲೇ ಅವು ನಿರ್ಧಾರವಾಗುತ್ತವೆ. ಅವುಗಳ ಬಗ್ಗೆ ಇನ್ನೂ ಏನಾದರೂ ಸಂದೇಹ ಇದ್ದರೆ, ಆಗ ಮಲ್ಟಿವ್ಯಾಕ್ ನಿಮಗೆ ಒಂದೆರಡು ಸಣ್ಣ ಪ್ರಶ್ನೆ ಕೇಳಬಹುದು. ಕೊನೆಯ ನಿರ್ಧಾರ ತೆಗೆದುಕೊಳ್ಳಲು, ಅಷ್ಟೇ !’’

“ಇಲ್ಲ ಇಲ್ಲ. ,” ನಾರ್ಮನ್ ಹೇಳಿದ. ” ಮತ್ತೆ ಮತ್ತೆ ಇದನ್ನೆಲ್ಲಾ ಮಾಡಲಿಕ್ಕೆ ಆಗೋದಿಲ್ಲ”

“ಬಹುಶಃ ಹಂಗೆ ಆಗಲಿಕ್ಕಿಲ್ಲ’’ , ಪಾಲ್ಸನ್ ಮೃದುವಾಗಿ ಹೇಳಿದ. “ಅದು ಅಪರೂಪ. ಯವಾಗೋ ಒಮ್ಮೆ ಅದು ಉಪಪ್ರಶ್ನೆ ಗಳನ್ನು, ಹೆಚ್ಚಿನ ಮಾಹಿತಿಯನ್ನ ಕೇಳುತ್ತದೆ. ಆದರೆ, ಅಂಥಾ ಸಂದರ್ಭದಲ್ಲಿ, ನೀವು ಇರಲೇ ಬೇಕು. ಅವನ ದನಿಯಲ್ಲಿ ಕಾಠಿಣ್ಯ ಇತ್ತು. “ನಿಮಗೆ ಬೇರೆ ಆಯ್ಕೆಯಿಲ್ಲ, ನಿಮಗೆ ಗೊತ್ತು. ನೀವು ಇರಲೇಬೇಕಾಗುತ್ತೆ’’.

ನಾರ್ಮನ್ ದಣಿದಂತೆ ಕುಳಿತುಕೊಂಡ. ಬೇಸರದಿಂದ ಕೈ ಝಾಡಿಸಿದ : “ಇಷ್ಟೆಲ್ಲಾ ಆಗಿದೆ, ಇನ್ನೇನು?’’ ಅನ್ನೋ ಥರಾ.

ಪಾಲ್ಸನ್ ಹೇಳಿದ, ” ನಿಮ್ಮಲ್ಲಿ ಸ್ವಲ್ಪ ಸಮಯ ಇದೆ ಆದರೆ ನೀವು ಪತ್ರಿಕೆ ಓದಲು ಅನುಮತಿ ಇಲ್ಲ. ಆದರೆ ಪತ್ತೇದಾರಿ ಕಾದಂಬರಿ , ಕಥೆ ಪುಸ್ತಕ ಏನಾದರೂ ಓದತಿರಾ ಅಂದರೆ ಕೊಡ್ತೇವೆ. ಅಥವಾ ಚೆಸ್ ಆಡಲು ಬಯಸಿದರೆ ಅದಕ್ಕೆ ಅವಕಾಶ ಇದೆ. ಅಥವಾ ಬೇರೆ ಯಾವುದೋ ರೀತಿಯಲ್ಲಿ ಸಮಯ ಕಳೆಯಲು ಏನು ಅನುಕೂಲ ಮಾಡಬಹುದೋ, ದಯವಿಟ್ಟು ಹೇಳಿ.”

“ಪರವಾಗಿಲ್ಲ. ನಾನು ಸುಮ್ಮನೆ ಕಾಯುತ್ತೇನೆ.”

ಅವರು ಅವನನ್ನು ಪಕ್ಕದ ಸಣ್ಣ ಕೋಣೆಗೆ ಕರೆದೊಯ್ದರು. ಅಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯಲ್ಲಿಯೇ ಕುಸಿದು ಕಣ್ಣು ಮುಚ್ಚಿದ. ಹೇಗಾದರೂ ಮಾಡಿ, ಅವನು ಆ ಕೊನೆಯ ಗಂಟೆಯನ್ನು ಕಳೆಯ ಬೇಕಾಗಿತ್ತು.

ಅವನು ಸಂಪೂರ್ಣವಾಗಿ ಸ್ಥಿರವಾಗಿ ಕುಳಿತ. ಆದರೆ ಅಷ್ಟು ಹೊತ್ತು ಅವನನ್ನು ಕಾಡಿದ್ದ ಒತ್ತಡ ನಿಧಾನವಾಗಿ ಅವನಿಂದ ದೂರವಾಯಿತು. ಅವನ ಉಸಿರಾಟ ಸ್ಥಿಮಿತ ಕ್ಕೆ ಬಂತು. ಕೈ ಬೆರಳು ಅಲುಗಾಡುವುದು ನಿಂತಿತ್ತು.

ಬಹುಶಃ ಇನ್ನು ಯಾವುದೇ ಪ್ರಶ್ನೆಗಳಿಲ್ಲ. ಬಹುಶಃ ಎಲ್ಲಾ ಮುಗಿದಿದೆ.

ಅದು ಮುಗಿದಿದ್ದರೆ, ಮುಂದೆ ಬರೀ ಮಜಾ. ದೊಡ್ಡ ಮೆರವಣಿಗೆಗಳು, ಭಾರಿ ಜನಸಂದಣಿ, ವಿ ಐ ಪಿ ಗಳು ಇರೋ ಕಾರ್ಯಕ್ರಮಗಳಲ್ಲಿ ಮಾತನಾಡಲು ಆಹ್ವಾನಗಳು. ವರ್ಷದ ಮತದಾರ, ಪೌರಶ್ರೀ ! ಇನ್ನೇನು ಬೇಕು !

ನಾರ್ಮನ್ ಮುಲ್ಲರ್, ಇಂಡಿಯಾನಾದ ಬ್ಲೂಮಿಂಗ್ಟನ್ನ ಒಂದು ಸಣ್ಣ ಅಂಗಡಿಯ ಸಾಮಾನ್ಯ ಗುಮಾಸ್ತ. ಅವನೇನೂ ಹುಟ್ಟಿನಿಂದಲೇ ಶ್ರೇಷ್ಠನಾಗಿರಲಿಲ್ಲ. ಶ್ರೇಷ್ಠ ವಾದದ್ದನ್ನು ಏನನ್ನೂ ಸಾಧಿಸಿರಲಿಲ್ಲ. ಆದರೆ, ಷೇಕ್ಸ್ ಪಿಯರ್ ಹೇಳಿದಂತೆ ಅವನ ಮೇಲೆ ಶ್ರೇಷ್ಠತೆ ಎನ್ನುವುದನ್ನು ಹೇರಲಾಗಿತ್ತು.

ಭವಿಷ್ಯ ದಲ್ಲಿ ಈ ಮಹಾನ್ ದೇಶದ ಶ್ರೇಷ್ಠ ಇತಿಹಾಸಕಾರರು ೨೦೦೮ ರ ಮುಲ್ಲರ್ ಚುನಾವಣೆಯ ಬಗ್ಗೆ ಗಂಭೀರ ಲೇಖನ ಬರೆಯುತ್ತಾರೆ. ಅತ್ಯಂತ ಗಂಭೀರವಾಗಿ ಮಾತಾಡುತ್ತಾರೆ.

“ಆವಾಗ ಒಂದೇ ಹೆಸರು, ನಾರ್ಮನ್ ಮುಲ್ಲರ್ . ಆ ಚುನಾವಣೆ ನಾರ್ಮನ್ ಮುಲ್ಲರ್ ಅವರ ಚುನಾವಣೆ ಆಗಿತ್ತು ಅಂತಾರೆ. ಅಭ್ಯರ್ಥಿಯ ಹೆಸರು ಯಾರಿಗೂ ನೆನಪೇ ಇರೋದಿಲ್ಲ. ಎಲ್ಲರಿಗೂ ನೆನಪಾಗುವುದು ನಾನು ಮಾತ್ರ,’’ ಅಂತ ಅನ್ನಿಸಿತು.

ಆದರೆ ಆ ಕ್ಷಣದಲ್ಲಿ, ಈ ಪ್ರಚಾರ, ಉತ್ತಮ ಉದ್ಯೋಗ, ನನ್ನ ಹೆಂಡತಿ ಸಾರಾ ಎದುರು ನೋಡುತ್ತಿರುವ ಹಣದ ಪ್ರವಾಹ, ಇವೆಲ್ಲ ಅವನ ಮನಸ್ಸಿನಲ್ಲಿ ಹಿಂದಕ್ಕೆ ಹೋದವು. ಅವೆಲ್ಲಾ ಅವನ ಮನಸ್ಸಿನ ಒಂದು ಮೂಲೆಯನ್ನು ಮಾತ್ರ ಆಕ್ರಮಿಸಿಕೊಂಡವು. ಅದೆಲ್ಲಾ ಬರಲಿ. ಖಂಡಿತ.

ಅದನ್ನೆಲ್ಲಾ ಬೇಡಾ ಅನ್ನೋದಿಲ್ಲ , ಅಂತ ಅನ್ನಿಸಿತು. ಆದರೆ ಆ ಕ್ಷಣದಲ್ಲಿ ಅವನ ಮನಸ್ಸಿನಲ್ಲಿ ಬೇರೆಯದೇ ಭಾವನೆ ತುಂಬಿ ಬರುತ್ತಿತ್ತು.

ಸುಪ್ತ ದೇಶಭಕ್ತಿ ಮೇಲೇಳುತ್ತಿತ್ತು. ಏನೇ ಆಗಲಿ, ಅವನು ಇಡೀ ದೇಶದ ಎಲ್ಲಾ ಮತದಾರರನ್ನು ಪ್ರತಿನಿಧಿಸಿದ್ದ. ಅವರೆಲ್ಲರಿಗೆ ಕೇಂದ್ರಬಿಂದುವಾಗಿ ಬಿಟ್ಟ.

ಈ ಒಂದು ದಿನದ ಮಟ್ಟಿಗಾದರೂ ಅವನೇ ಇಡೀ ಅಮೇರಿಕವಾಗಿದ್ದ! ಅವನ ಈ ವ್ಯಕ್ತಿತ್ವ ಸಕಲ ಜನ ಗಣ ಮನ ವಾಗಿ ಮೂರ್ತೀಭವಿಸಿತ್ತು ! ಇದಕ್ಕಿಂತ ಧಾನ್ಯತಾ ಭಾವದ ವಿಷಯ ಏನು ಬೇಕು?

ಕೋಣೆಯ ಬಾಗಿಲು ತೆರೆಯಿತು. ನಾರ್ಮನ್ ತನ್ನ ಹಗಲು ಗನಸಿನಿಂದ ಎಚ್ಚರ ಗೊಂಡು ಕಣ್ಣು ತೆರೆದ. ಒಂದು ಕ್ಷಣ, ಅವನ ಹೊಟ್ಟೆ ತೊಳಸಿದಂತೆ ಆಗಿ ಟೆನ್ಷನ್ ಆಯಿತು.

“ಎಲ್ಲಾ ಆಯಿತು, ಮಿಸ್ಟರ್ ಮುಲ್ಲರ್, ಇನ್ನೇನೂ ಪ್ರಶ್ನೆಗಳಿಲ್ಲ!’’ ಪಾಲ್ಸನ್ ನಗುತ್ತಿದ್ದ. “ಅಷ್ಟೇ,’’

“ಯಾವುದೇ ಪ್ರಶ್ನೆಗಳಿಲ್ಲವೇ, ಸರ್?”

“ಯಾವುದೂ ಅಗತ್ಯವಿಲ್ಲ. ನಿಮ್ಮ ಮಾತುಗಳು ಸಂಪೂರ್ಣವಾಗಿ ಸ್ಪಷ್ಟವಾಗಿದ್ದವು. ಈಗ ನಿಮ್ಮನ್ನು ನಿಮ್ಮ ಮನೆಗೆ ಏಜೆಂಟ್ ಗಳು ಕರೆದೊಯ್ಯುತ್ತಾರೆ. ನಾಳೆಯಿಂದ ನೀವು ಮತ್ತೆ ಮೊದಲು ಹೇಗೆ ಇದ್ದೀರೋ ಹಾಗೆ ಒಬ್ಬ ಸಾಮಾನ್ಯ ನಾಗರಿಕರಾಗುತ್ತೀರಿ. ಆಫ್ ಕೋರ್ಸ್, ಜನ ನಿಮ್ಮನ್ನು ನಿಮ್ಮ ಪಾಡಿಗೆ ಬಿಟ್ಟರೆ!’’ ಮತ್ತೆ ನಕ್ಕ.

“ಥ್ಯಾಂಕ್ಸ್ . ನಿಮಗೆಲ್ಲರಿಗೂ ಧನ್ಯವಾದಗಳು ” ನಾರ್ಮನ್ ಮುಖ ತುಸು ಕೆಂಪಾಯಿತು. ಅವನು ಹೇಳಿದನು,

ಇದೆಲ್ಲಾ ತುಂಬಾ ಆಶ್ಚರ್ಯ. ಅಂದ ಹಾಗೆ, ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾದರು?”

ಪಾಲ್ಸನ್ ತಲೆಯಾಡಿಸಿದ. “ಅದು ಔಪಚಾರಿಕ ಘೋಷಣೆ ಅದಾಗಲೇ ಗೊತ್ತಾಗುವುದು. ಅದಕ್ಕೆ ಸುಮಾರು ಕಾಯಬೇಕಾಗುತ್ತದೆ. ನಮಗೆ ತುಂಬ ಕಟ್ಟುನಿಟ್ಟಾದ ನಿಯಮಗಳು ಇವೆ. ನಾವು ನಿಮಗೂ ಹೇಳಲು ಸಾಧ್ಯವಿಲ್ಲ. ಅರ್ಥ ಮಾಡಿಕೊಳ್ಳಿ’’.

” ಹೌದು, ಖಂಡಿತ.” ನಾರ್ಮನ್ ಮುಜುಗರಪಟ್ಟವನಂತೆ ಹೇಳಿದ.

“ನೀವು ಸಹಿ ಮಾಡಲು ಅಗತ್ಯವಾದ ಕಾಗದಗಳನ್ನು ಸೀಕ್ರೆಟ್ ಸರ್ವಿಸ್ ನವರು ಕೊಡುತ್ತಾರೆ “

“ಸರಿ .”

ಇದ್ದಕ್ಕಿದ್ದಂತೆ, ನಾರ್ಮನ್ ಮುಲ್ಲರ್ಗೆ ಅತೀವ ಹೆಮ್ಮೆ ಅನಿಸಿತು. ಅದು ಈಗ ತನ್ನ ಮೇಲೆ ತನಗೆ ಪೂರ್ಣ ಆತ್ಮ ವಿಶ್ವಾಸ ಬಂದಿತ್ತು. ಅವನು ತನ್ನ ಬಗ್ಗೆ ತಾನೇ ಹೆಮ್ಮೆಪಟ್ಟ.

ಈ ಅಪರಿಪೂರ್ಣ ಜಗತ್ತಿನಲ್ಲಿ, ವಿಶ್ವದ ಮೊದಲ ಮತ್ತು ಶ್ರೇಷ್ಠ ಎಲೆಕ್ಟ್ರಾನಿಕ್ ಪ್ರಜಾಪ್ರಭುತ್ವದ ಸಾರ್ವಭೌಮ ನಾಗರಿಕರೆಲ್ಲ ಸೇರಿ, ಒಮ್ಮತ ದಿಂದ, ಪೌರಶ್ರೀ ನಾರ್ಮನ್ ಮುಲ್ಲರ್ ಮೂಲಕ (ನನ್ನ ಮೂಲಕ! ನನ್ನ ಮೂಲಕ! ) ಮತ್ತೊಮ್ಮೆ, ತಮ್ಮ ಸರ್ವತಂತ್ರ ಸ್ವತಂತ್ರವಾದ ಮತದಾನದ ಹಕ್ಕನ್ನು ಬಳಸಿ, ಯಾವುದೇ ಅದೇ ತಡೆಗಳಿಲ್ಲದ, ತಮ್ಮ ಪವಿತ್ರ ಮತದಾನದ ಹಕ್ಕನ್ನು ಚಲಾಯಿಸಿದ್ದರು !!

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ ಕೆಫೆ’: 44 ಲಕ್ಷ ರೂ. ವಹಿವಾಟು!

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ; ಮೋದಿ ಸರ್ಕಾರಕ್ಕೆ ಕೇರಳದ ಪೆಟ್ಟು

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...