ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ.
ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ ಮಂಜುನಾಥ್ ಹಿರೇಚೌಟಿ ಅವರು ನಮ್ಮ ಈದಿನ ಮಾಧ್ಯಮಕ್ಕೆ ನೀಡಿರುವ ಮಾಹಿತಿ ಏನಂದರೆ ಈ ರೀತಿ ಶಿವಮೊಗ್ಗ ಜಿಲ್ಲೆಯಾದ್ಯಾಂತ ನಿರ್ಮಿತಿ ಕೇಂದ್ರದವರು ನೀಡುವ ಮಾಹಿತಿಯಲ್ಲಿ ದಾಖಲೆ ಬೇರೆ ಇರತ್ತೆ ವಾಸ್ತವ ಬೇರೆ ಇರತ್ತೆ ಎಂದಿದ್ದಾರೆ.
ಇದೆ ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ “ನಿರ್ಮಿತಿ ಕೇಂದ್ರ, ಶಿವಮೊಗ್ಗ” ಇವರು ನಿರ್ವಹಿಸಿರುವ ಕಾಮಗಾರಿ “ಶಿವಮೊಗ್ಗ ತಾಲ್ಲೂಕಿನ ಕಾಚಿನಕಟ್ಟೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಸ.ನಂ.೭೦/೩ ರಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣ ಕಾಮಗಾರಿ” ಮುಕ್ತಾಯವಾಗಿದೆ ಎಂದು ವರದಿ ಸಲ್ಲಿಸಿರುತ್ತಾರೆ.
ಆದರೆ ಸ್ಥಳದಲ್ಲಿ ಕಾಮಗಾರಿ ಪಾಳು ಬಿದ್ದಿದೆ. ಸ್ಥಳೀಯ ಗ್ರಾಮಸ್ಥರು ನಾಲ್ಕು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಮಾಹಿತಿ ಕೊಟ್ಟಿರುತ್ತಾರೆ ಎಂದು ದೂರಿದ್ದಾರೆ.

ಹಾಗೂ ಈ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ರಾಜ್ಯಾದ್ಯಾಂತ ನೀರಾವರಿ ಯೋಜನೆಗಳಿಗಾಗಿ ಮಿಸಲಿಟ್ಟ ಹಣವನ್ನು ಅನಧಿಕೃತವಾಗಿ ಮತ್ತು ಅಕ್ರಮವಾಗಿ ಮಠ ಮಾನ್ಯಗಳಿಗೆ, ಸಮುದಾಯ ಭವನಗಳಿಗೆ ಬಳಿಸಿರುತ್ತಾರೆ ಎಂದು ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರ ಅನ್ವಯ ಪ್ರಸ್ತುತವಿರುವ ವ್ಯವಸ್ಥಾಪಕ ನಿರ್ದೇಶಕರು ನೀಡಿರುವ ವರದಿ ಏನಂದರೆ ಶಿವಮೊಗ್ಗ ಮೇಲ್ದಂಡೆ ಯೋಜನೆಯ ವ್ಯವಸ್ಥಾಪಕ ಚೀಫ್ ಇಂಜಿನಿಯರ್ ನೀಡಿರುವ ವರದಿಯಲ್ಲಿ ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಸ.ನಂ.೭೦/೩ ರಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣ ಕಾಮಗಾರಿ” ಮುಕ್ತಾಯವಾಗಿದೆ ಅಂದಾಜು ಮೊತ್ತ 25 ಲಕ್ಷ ಈಗ ಪ್ರಸ್ತುತ ನಿರ್ಮಾಣ ಮುಕ್ತಾಯ ಎಂದು ವರದಿ ನೀಡಿದ್ದಾರೆ.

ಆದರೆ ವಾಸ್ತವ ಪರಿಶೀಲನೆ ಮಾಡಿದಾಗ ಪಾಳು ಬಿದ್ದಿದೆ. ಶಿವಮೊಗ್ಗ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ನಾಗರಾಜ್ ಅವರು ಈ ರೀತಿ ಶಿವಮೊಗ್ಗ ಜಿಲ್ಲೆಯಾದ್ಯಾಂತ ಮಾಡಿರುವ ಸಮುದಾಯ ಭವನಗಳು ಹಾಗೂ ನೈಜ ಪರಿಸ್ಥಿತಿಯ ಪಟ್ಟಿಯನ್ನು 10 ದಿನದ ಒಳಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕೆಂದು KRS ಪಕ್ಷವತಿಯಿಂದ ಆಗ್ರಹಿಸಿತ್ತುದ್ದೇವೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಹಾಗಾಗಿ ನಿರ್ಮಿತಿ ಕೇಂದ್ರದಿಂದ ಹಣ ಬಳಕೆ ದುರುಪಯೋಗವಾಗಿದ್ದೆಯೇ? ಯಾಕೆ ಹಣ ಬಳಕೆ ಪತ್ರದಲ್ಲಿ ಕಾಮಗಾರಿ ಮುಕ್ತಾಯವಾಗಿದೆ ಎಂದು ಪತ್ರ ಸಲ್ಲಿಸಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ನೀರಾವರಿ ನಿಗಮದವರು ನಿರ್ಮಿತಿ ಕೇಂದ್ರ ಮಾಡುವ ಯಾವದೇ ಕಾಮಗಾರಿಗಳನ್ನ ಮೇಲ್ವಿಚಾರಣೆ ಮಾಡುವುದಿಲ್ಲ ಎಂದು ದೂರಿದ್ದಾರೆ. ಕೊನೆಯದಾಗಿ ನಾವು ಸರ್ಕಾರಕ್ಕೆ ದೂರು ಕೊಟ್ಟ ಮೇಲೆ ಸರ್ಕಾರ ನೀರಾವರಿ ನಿಗಮದ ಹಣವನ್ನ ಸಮುದಾಯ ಭವನಗಳಿಗೆ ತಡೆಹಿಡಿದಿದೆ, ಆದರೆ ಈಗಾಗಲೇ ಅಪೂರ್ಣ ಕಾಮಗಾರಿ ಆಗಿರುವ ಕಾಮಗಾರಿಗಳ ಕಥೆ ಏನು ಇದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆ ಎದ್ದಿದೆ..!?





