ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭಾ ಸದಸ್ಯರಿಗೆ ನೀಡಿದ ಸಂಬಳ, ಭತ್ಯೆಗಳೆಷ್ಟು ಗೊತ್ತೆ?

Date:

ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭಾ ಸದಸ್ಯರ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳಿಗಾಗಿ ಸುಮಾರು ₹ 200 ಕೋಟಿ ಖರ್ಚು ಮಾಡಲಾಗಿದೆ ಮತ್ತು ಅವರ ಪ್ರಯಾಣಕ್ಕಾಗಿಯೇ ಸುಮಾರು ₹ 63 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಆಯೋಗದ (ಆರ್‌ಟಿಐ) ಕಾಯಿದೆಯಡಿ ನೀಡಿದ ಉತ್ತರದಲ್ಲಿ ಬಹಿರಂಗಗೊಂಡಿದೆ.

2021-22ರಲ್ಲಿ, ಕೋವಿಡ್ ಸಾಂಕ್ರಾಮಿಕದ ನಂತರ, ರಾಜ್ಯಸಭಾ ಸದಸ್ಯರಿಗಾಗಿ ₹ 97 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.

ಈ ವೆಚ್ಚವು ಸ್ವದೇಶಿ ಪ್ರಯಾಣಕ್ಕೆ ₹ 28.5 ಕೋಟಿ ಮತ್ತು ವಿದೇಶ ಪ್ರಯಾಣಕ್ಕಾಗಿ ₹ 1.28 ಕೋಟಿ ಒಳಗೊಂಡಿದೆ. ಸಂಬಳ ₹ 57.6 ಕೋಟಿ, ವೈದ್ಯಕೀಯ ವೆಚ್ಚ ₹ 17 ಲಕ್ಷ ಮತ್ತು ಕಚೇರಿ ವೆಚ್ಚ ₹ 7.5 ಕೋಟಿ. ಸಂಸದರಿಗೆ ಮಾಹಿತಿ ತಂತ್ರಜ್ಞಾನದ ನೆರವಿಗಾಗಿ ₹ 1.2 ಕೋಟಿ ಖರ್ಚು ಮಾಡಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2021-23ರಲ್ಲಿ ₹ 100 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ₹ 33 ಕೋಟಿ ಸ್ವದೇಶ ಮತ್ತು ವಿದೇಶ ಪ್ರಯಾಣ ವೆಚ್ಚ ಸೇರಿದೆ ಎಂದು ಮಧ್ಯಪ್ರದೇಶದ ಚಂದರ್ ಶೇಖರ್ ಗೌರ್ ಎಂಬುವವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ಸಲ್ಲಿಸಲಾದ ಪ್ರಶ್ನೆಗೆ ರಾಜ್ಯಸಭಾ ಸಚಿವಾಲಯದ ಉತ್ತರದಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತೃತೀಯ ರಂಗಕ್ಕೆ ಶಕ್ತಿ ತುಂಬಲಿದೆಯೇ ಕರ್ನಾಟಕದ ಗೆಲುವು?

2022-23ರಲ್ಲಿ ಸದಸ್ಯರ ವೇತನಕ್ಕೆ ₹ 58.5 ಕೋಟಿ, ಸ್ವದೇಶ ಪ್ರಯಾಣಕ್ಕೆ ₹ 30.9 ಕೋಟಿ ಮತ್ತು ವಿದೇಶ ಪ್ರಯಾಣಕ್ಕೆ ₹ 2.6 ಕೋಟಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.

ಇತರ ವೆಚ್ಚಗಳಲ್ಲಿ ವೈದ್ಯಕೀಯ ಚಿಕಿತ್ಸೆ (ರೂ. 65 ಲಕ್ಷ), ಕಚೇರಿ ವೆಚ್ಚದಲ್ಲಿ ₹7 ಕೋಟಿ ಮತ್ತು ಐಟಿ ಸೇವೆಗಳಿಗೆ ₹ 1.5 ಕೋಟಿ ಸೇರಿವೆ.

2021-22ರಲ್ಲಿ, ರಾಜ್ಯಸಭೆಯ ಮಾಜಿ ಸದಸ್ಯರಿಗೆ ಸ್ವದೇಶಿ ಪ್ರಯಾಣ ವೆಚ್ಚಕ್ಕಾಗಿ ಮಾಡಿದ ವೆಚ್ಚವು ₹ 1.7 ಕೋಟಿ ಮತ್ತು 2022-23ರಲ್ಲಿ ₹ 70 ಲಕ್ಷ ಎಂದು ಸಚಿವಾಲಯ ತಿಳಿಸಿದೆ.

2021ರ ದಾಖಲೆಗಳ ಪ್ರಕಾರ, ರಾಜ್ಯಸಭೆಯ ಸದಸ್ಯರ ಹಾಜರಾತಿ ಚಳಿಗಾಲದ ಅಧಿವೇಶನದಲ್ಲಿ ಶೇ 43, ಮುಂಗಾರು ಅಧಿವೇಶನದಲ್ಲಿ ಶೇ 29 ಮತ್ತು ಬಜೆಟ್ ಅಧಿವೇಶನದಲ್ಲಿ ಶೇ 90 ರಷ್ಟಿತ್ತು.

ಮರು ವರ್ಷ 2022ರಲ್ಲಿ, ಚಳಿಗಾಲದ ಅಧಿವೇಶನದಲ್ಲಿ ಶೇ 94, ಮುಂಗಾರು ಅಧಿವೇಶನದಲ್ಲಿ ಶೇ 42 ಮತ್ತು ಬಜೆಟ್ ಅಧಿವೇಶನದಲ್ಲಿ ಶೇಕಡಾ 90 ರಷ್ಟಿತ್ತು. ಈ ವರ್ಷದ ಮೇವರೆಗೆ, ಬಜೆಟ್ ಅಧಿವೇಶನದಲ್ಲಿ ಹಾಜರಾತಿಯು ಶೇ 24 ರಷ್ಟು ಕಡಿಮೆಯಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಸ್ಲಿಮರನ್ನು ಒಬಿಸಿಗೆ ಸೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌: ಮೋದಿಗೆ ದ್ವಾರಕಾನಾಥ್ ಇತಿಹಾಸ ಪಾಠ

"ಒಬಿಸಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ರೂಪಿಸಿದ್ದಾರೆ, ಮಂಡಲ್‌ ಆಯೋಗ...

ಹಾಸನದ ‘ಪೆನ್‌ಡ್ರೈವ್’ ನಮಗೂ ತಲುಪಿದೆ; ಎಸ್ಐಟಿ ರಚಿಸಲು ಸಿಎಂಗೆ ಮನವಿ: ಮಹಿಳಾ ಆಯೋಗ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ...

ʼಈ ದಿನʼ ಸಮೀಕ್ಷೆ | ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್‌; ʼಗ್ಯಾರಂಟಿʼ ಎದುರು ಮಂಕಾದ ಮೋದಿ ಯೋಜನೆಗಳು

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪಂಚ ಗ್ಯಾರಂಟಿಯನ್ನು ವರ್ಷದೊಳಗೆ...

ಭಾರತದ ಮುಸ್ಲಿಮರು ಎಷ್ಟು ಸಂಪತ್ತು ಹೊಂದಿದ್ದಾರೆ? ಇಲ್ಲಿದೆ ಅಧ್ಯಯನದ ವರದಿ

ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್...