ರಾಜಕೀಯ ಅನುಭದಿಂದ ಹೇಳುವೆ, ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ್ದೇ ಸರ್ಕಾರ: ಸಿದ್ದರಾಮಯ್ಯ

Date:

  • ಮುಂದಿನ ಬಾರಿ ಕಾಂಗ್ರೆಸ್ ಪಕ್ಷಕ್ಕೇ ಪೂರ್ಣ ಬಹುಮತ ದೊರಕಲಿದೆ
  • ಅಂತಂತ್ರ ಫಲಿತಾಂಶ ಬಯಸುವ ಜೆಡಿಎಸ್ ನಿರೀಕ್ಷೆ ಸುಳ್ಳಾಗಲಿದೆ

ರಾಜ್ಯದಲ್ಲಿ ಮುಂದಿನ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದು ನನ್ನ 45ವರ್ಷಗಳ ರಾಜಕೀಯ ಅನುಭವದ ಮಾತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿನ ಅನ್ಯ ಪಕ್ಷದವರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನ ಬದಲಾವಣೆ ಬಯುಸುತ್ತಿದ್ದಾರೆ ಎಂದರು.

ಸದ್ಯ ರಾಜಕೀಯದ ದಿಕ್ಕು ಬದಲಾಗುತ್ತಿದೆ. ಮತದಾರರ ಮನಸಿನ ಯೋಚನೆಯಂತೆಯೇ ಕೆಲಸ ಮಾಡುತ್ತಿರುವ ನಮ್ಮ ಪಕ್ಷವನ್ನು ಜನತೆ ಬೆಂಬಲಿಸಲಿದೆ ಎಂದು ವಿಪಕ್ಷ ನಾಯಕರು ಹೇಳಿದರು.

ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬೆಲೆ ಏರಿಕೆ, ಆರ್ಥಿಕ ಹಣದುಬ್ಬರದ ಕಾರಣದಿಂದ ರೋಸಿ ಹೋಗಿದ್ದಾರೆ. ತಮ್ಮದೇ ಜನಾದೇಶ ಧಿಕ್ಕರಿಸಿ ಆಡಳಿತ ಚುಕ್ಕಾಣಿ ಹಿಡಿದ ಕೇಸರಿ ಪಕ್ಷದ ತಿರುಗಿ ಬೀಳಲಿದ್ದಾರೆ. ಜೊತೆಗೆ ಅವರೇ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸುದ್ದಿ ಓದಿದ್ದೀರಾ? : ವಾರದೊಳಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಿಎಸ್‌ವೈ

ಜೆಡಿಎಸ್ ವಿರುದ್ಧ ಕಿಡಿ

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಎಷ್ಟೇ ಬಾಯಿ ಬಡಿದುಕೊಂಡರೂ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.

ಆ ಪಕ್ಷದವರು ಅತಂತ್ರ ಫಲಿತಾಂಶ ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಈ ಬಾರಿ ಅವರ ನಿರೀಕ್ಷೆ ಹುಸಿಯಾಗಲಿದೆ ಎಂದವರು ಹೇಳಿದರು.

ರಾಜ್ಯಕ್ಕೆ ಎಚ್ ಡಿ ದೇವೇಗೌಡರು, ಹೆಚ್ ಡಿ ಕುಮಾರಸ್ವಾಮಿ ಹೊಸದಾಗಿ ಬಂದಿಲ್ಲ. ಕರ್ನಾಟಕ ಉಳಿಸಬೇಕು ಅಂದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಈ ಕಾರಣದಿಂದಲೇ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳಿಂದ ನಾಯಕರು, ಶಾಸಕರು, ಕಾರ್ಯಕರ್ತರುಗಳು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಸುಲಿಗೆ ಮಾಡುವ ಸರ್ಕಾರಕ್ಕಿಂತ ಜನರ ಆಶೋತ್ತರಗಳಿಗೆ ಬೆಲೆ ಕೊಡುವ ಆಡಳಿತವನ್ನು ನಾಗರಿಕರು ಬಯಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಈಗಿನ ವಾತಾವರಣ ನೋಡಿದರೆ ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ. ಅತ್ಯಧಿಕ ಸ್ಥಾನ ಗೆದ್ದು ಸರ್ಕಾರ ರಚಿಸುತ್ತೇವೆ ಎಂದರು.

ಯಾರಾದರೂ ಸ್ಪರ್ಧಿಸಲಿ

ವರುಣಾ ಕ್ಷೇತ್ರದಿಂದ ಯಾರೇ ನನ್ನ ಎದುರಾಳಿಯಾಗಿ ಕಣಕ್ಕಿಳಿದರೂ ನಾನು ಚಿಂತಿಸುವುದಿಲ್ಲ. ಅಲ್ಲಿ ಯಡಿಯೂರಪ್ಪ ಸ್ಪರ್ಧಿಸಿದರೂ ಸ್ವಾಗತಿಸುವೆ. ಪ್ರತಿಸ್ಪರ್ಧಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ ಟಿ ರವಿ ಆರೋಪ

ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ ...

ಜನತಾ ದರ್ಶನದ ಮೂಲಕ ರಾಜ್ಯದ ‘ಆಡಳಿತ’ ಸಿಎಂಗೆ ಮನವರಿಕೆಯಾಗಿರಬಹುದು: ಕುಮಾರಸ್ವಾಮಿ

ಎಲ್ಲದಕ್ಕೂ ಸರ್ಕಾರವನ್ನು ಟೀಕಿಸಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ನಮ್ಮ ಶಕ್ತಿ...